twitter
    For Quick Alerts
    ALLOW NOTIFICATIONS  
    For Daily Alerts

    'ನಾನು, ನನ್ನ ಥಿಯೇಟರ್': ಚಿತ್ರಮಂದಿರಗಳು ಹೇಳುವ ಕತೆ ಕೇಳಿ

    |

    ಶ್ರೀಮಂತ, ಬಡವ, ಮೇಲ್ಜಾತಿ, ಕೀಳು ಎಂಬೆಲ್ಲ ಸಾಮಾಜಿಕ ಅನಿಷ್ಟಗಳನ್ನೆಲ್ಲ ಮರೆತು, ದೈನಂದಿನ ತೊಂದರೆ ತಾಪತ್ರೆಯಗಳನ್ನೆಲ್ಲ ಬದಿಗಿಟ್ಟು, ಕತ್ತಲ ಕೋಣೆಯಲ್ಲಿ ಕಣ್ಣ ಮುಂದೆ ಬಿಚ್ಚಿಕೊಳ್ಳುವ ಕತೆಗಳನ್ನು ಬೆರಗಿನಿಂದ ನೋಡುತ್ತಾ ತಾನೂ ಅದರೊಳಗೆ ಒಂದಾಗಿಬಿಡುವ ಮಾಂತ್ರಿಕ ಕ್ಷಣ ಸೃಷ್ಟಿಸುವ ಜಾಗ ಚಿತ್ರಮಂದಿರ. ಕನ್ನಡದ ಖ್ಯಾತ ಕವಿ ಜಯಂತ್ ಕಾಯ್ಕಿಣಿ ತಮ್ಮ ಪುಸ್ತಕವೊಂದನ್ನು ಚಿತ್ರಮಂದಿರದ ಕತ್ತಲಿಗೆ ಅರ್ಪಿಸಿರುವುದು ಚಿತ್ರಮಂದಿರಗಳು ಸೃಷ್ಟಿಸುವ ಆ ಮಾಂತ್ರಿಕತೆಗೆ ಸಾಕ್ಷಿ.

    ನಗಿಸುವ, ಅಳಿಸುವ, ಆಕ್ರೋಶ ಹುಟ್ಟಿಸುವ, ಪ್ರೀತಿ ಉಕ್ಕಿಸುವ, ಜೀವನ ಪಾಠ ತಿಳಿಸುವ ಎಲ್ಲ ಕಾರ್ಯಗಳು ನಡೆಯುವುದು ಚಿತ್ರಮಂದಿರದ ಆ ಕತ್ತಲೆಯಲ್ಲಿಯೇ. ಹಾಗಾಗಿಯೇ ಎಷ್ಟೋ ಜನರ ನೆನಪಿನ ಕೋಶದಲ್ಲಿ ಚಿತ್ರಮಂದಿರಗಳ ನೆನಪುಗಳು ಭದ್ರವಾಗಿವೆ. ಮೊದಲು ನೋಡಿದ ಸಿನಿಮಾ, ಗೆಳೆಯರೊಟ್ಟಿಗೆ ನೋಡಿದ ಸಿನಿಮಾ, ಜೀವನ ಪಾಠ ಕಲಿಸಿದ ಸಿನಿಮಾ, ಇಷ್ಟದ ಹುಡುಗಿಗೆ ಪ್ರೇಮ ನಿವೇದನೆ ಮಾಡಲು ಧೈರ್ಯ ಕೊಟ್ಟ ಸಿನಿಮಾ, ಹೀಗೆ ವ್ಯಕ್ತಿಯೊಬ್ಬ ತಾನು ಸವೆಸಿದ ಹಾದಿ ನೆನಪಿಸಿಕೊಂಡಾಗ ಸಿನಿಮಾಗಳ ಜೊತೆಗೆ ಅದನ್ನು ನೋಡಿದ ಚಿತ್ರಮಂದಿರಗಳ ಉಲ್ಲೇಖವಿರದೆ ನೆನಪು ಪೂರ್ತಿಯಾಗುವುದಿಲ್ಲ.

    ಸಾಮಾನ್ಯ ನಟನೊಬ್ಬ ಸ್ಟಾರ್ ಆಗುವುದು, ಸಿನಿಮಾ ವೀಕ್ಷಕನೊಬ್ಬ ಸಿನಿಮಾ ಪ್ರೇಮಿಯಾಗುವುದು, ಸಾಮಾನ್ಯ ವ್ಯಕ್ತಿಯೊಬ್ಬ ಅಭಿಮಾನಿಯಾಗುವುದು ಎಲ್ಲವೂ ನಡೆಯುವುದು ಚಿತ್ರಮಂದಿರದಲ್ಲಿಯೇ. ಇಂಥ ಹಲವು ಅದ್ಭುತಗಳಿಗೆ ಕಾರಣವಾಗಿರುವ ಚಿತ್ರಮಂದಿರಗಳು ನಿಧಾನಕ್ಕೆ ಕಣ್ಮರೆಯಾಗುತ್ತಿವೆ. ಮಲ್ಟಿಫ್ಲೆಕ್ಸ್‌ಗಳ ಕಾರ್ಪೊರೇಟ್ ಹೊಡೆತದಿಂದ ಈಗಾಗಲೇ ಜರ್ಜರಿತವಾಗಿದ್ದ ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ಸಿಲುಕಿ ಇನ್ನಷ್ಟು ಬಡವಾಗಿವೆ. ಯಾವುದೇ ಊರಿನ ಗುರುತಾದ, ಆ ಊರಿನ, ನಗರದ ಇತಿಹಾಸದ ಭಾಗವಾದ ಚಿತ್ರಮಂದಿರಗಳಿಗೂ ತಮ್ಮದೇ ಆದ ಇತಿಹಾಸಗಳಿರುತ್ತವೆ. ದಾಖಲಾಗದ ಈ ಇತಿಹಾಸವನ್ನು ಜನರೆದುರು ತರುವ ಪ್ರಯತ್ನವನ್ನು 'ಫಿಲ್ಮೀಬೀಟ್ ಕನ್ನಡ' ಮಾಡಲು ಆರಂಭಿಸಿದೆ.

    Nanu Nanna Theater: Video Series About Theaters In Bengaluru

    ಬೆಂಗಳೂರಿನ ಚಿತ್ರಮಂದಿರಗಳ ಕತೆಯನ್ನು 'ನಾನು, ನನ್ನ ಥಿಯೇಟರ್' ಮಾಲಿಕೆ ರೂಪದಲ್ಲಿ ಜನರ ಮುಂದಿಡಲಿದೆ ' ಫಿಲ್ಮೀಬೀಟ್ ಕನ್ನಡ'. ಚಿತ್ರಮಂದಿರದ ಸ್ಥಾಪನೆ, ಬೆಳೆದು ಬಂದ ಹಾದಿ, ನೋಡಿದ ಸುವರ್ಣಯುಗ, ಹಿರಿಯ ನಟರೊಂದಿಗೆ ಚಿತ್ರಮಂದಿರಕ್ಕೆ ಇರುವ ನಂಟು, ಈಗ ಎದುರಿಸುತ್ತಿರುವ ಸಮಸ್ಯೆಗಳು ಹೀಗೆ ಇನ್ನೂ ಹಲವು ವಿಷಯಗಳು ವಿಡಿಯೋ ರೂಪದಲ್ಲಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.

    ಚಿತ್ರಮಂದಿರದ ಮಾಲೀಕರುಗಳೇ ತಮ್ಮ ಚಿತ್ರಮಂದಿರಗಳ ಮಾಹಿತಿಯನ್ನು ಪ್ರೇಕ್ಷಕರ ಮುಂದೆ ಹೇಳಲಿದ್ದಾರೆ. ಚಿತ್ರಮಂದಿರ ಕಟ್ಟಲು ಎದುರಿಸಿದ ಸವಾಲುಗಳು, ಚಿತ್ರಮಂದಿರ ಬೆಳೆದು ಬಂದ ಪಯಣ, ಓಡಿದ ಸಿನಿಮಾಗಳು, ಸೂಪರ್ ಹಿಟ್ ಆದವು, ಜನರ ಪ್ರತಿಕ್ರಿಯೆ ಆಗ ಹೇಗಿತ್ತು, ಈಗ ಹೇಗಿದೆ, ಚಿತ್ರಮಂದಿರ ಉದ್ಯಮ ಬದಾದದ್ದು ಹೇಗೆ? ಉದ್ಯಮದ ಒಳಗು ಹೊರಗು ಕನ್ನಡದ ಮಟ್ಟಿಗೆ ಎಲ್ಲಿಯೂ ದಾಖಲಾಗದ ಈ ಮಾಹಿತಿಗಳು 'ನಾನು, ನನ್ನ ಥಿಯೇಟರ್' ವಿಡಿಯೋ ಮಾಲಿಕೆ ಮೂಲಕ ದಾಖಲಾಗಲಿವೆ.

    'ಫಿಲ್ಮೀಬೀಟ್ ಕನ್ನಡ ' ಕಟ್ಟಿ ಕೊಡುತ್ತಿರುವ ಈ ಸರಣಿ, ಚಿತ್ರಮಂದಿರಗಳ ಮಾಹಿತಿ ಮಾಲಿಕೆ ಆಗುವ ಜೊತೆಗೆ ಬೆಂಗಳೂರಿನ ಇತಿಹಾಸದ ಒಂದು ಮಜಲಿನ ಅನಾವರಣ ಸಹ ಆಗಿರುತ್ತದೆ. ಕನ್ನಡ ಚಿತ್ರರಂಗ ಬೆಳೆದು ಬಂದ ಹಾದಿಯನ್ನು ಚಿತ್ರಮಂದಿರಗಳ ದೃಷ್ಟಿಕೋನದಿಂದ ನೋಡುವ ಯತ್ನವೂ ಇದಾಗಿರಲಿದೆ. ಇನ್ನು ಮುಂದೆ ಸೋಮವಾರದಿಂದ (ಆಗಸ್ಟ್ 02) ಪ್ರತಿದಿನ 'ಕನ್ನಡ ಫಿಲ್ಮೀಬೀಟ್'' ಯೂಟ್ಯೂಬ್ ಚಾನೆಲ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ 'ನಾನು, ನನ್ನ ಥಿಯೇಟರ್' ಸರಣಿಯ ವಿಡಿಯೋಗಳು ವೀಕ್ಷಣೆಗೆ ಲಭ್ಯವಿರುತ್ತದೆ.

    English summary
    Nanu Nanna Theater video series about theaters in Bengaluru. Theaters owners will share stories behind their theaters.
    Monday, August 2, 2021, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X