ನಾನು ಮದುವೆಯಾದವರ ಹತ್ರ ದುಡ್ಡು ಇರಲಿಲ್ಲ ; 3 ಮದುವೆ, ವಿಚ್ಚೇದನ - ಕಣ್ಣೀರಾದ ಶಾಹಿದ್ ಕಪೂರ್ ತಾಯಿ ನೀಲಿಮಾ

ಪ್ರೀತಿ ವಿಷಯದಲ್ಲಿ ಕೆಲವೊಮ್ಮೆ ಕೆಲವರು ಸೋತು ಹೋಗುತ್ತಾರೆ. ಯಾವುದೋ ಕಾರಣಕ್ಕೆ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ. ಯಾರದು ಸರಿ ಯಾರದು ತಪ್ಪು ಅಂತ ಇನ್ನೊಬ್ಬರೊಂದಿಗೆ ಹಂಚಿಕೊಂಡು ಕೂರುವ ಕಾಲ ಅದಾಗಿರುವುದಿಲ್ಲ. ಹಾಗಂಥ ಸುಮ್ಮನೆ ಕೂರಲು ಕೂಡ ಆಗುವುದಿಲ್ಲ. ಯಾಕೆಂದರೆ ಜಗವೇ ಒಂದು ನಾಟಕರಂಗ. ಸರಳ ರೇಖೆಯಂತೆ ಬದುಕು ಸಾಗುತ್ತಿರಬೇಕು. ಯಾರ ಬಗ್ಗೆ ಆಲೋಚನೆ ಮಾಡದೇ ಮುನ್ನಡೆಯುತ್ತಿರಬೇಕು. ಇದಕ್ಕೆ ನೀಲಿಮಾ ಅಜೀಮ್ ಬದುಕು ಮತ್ತೊಂದು ಉದಾಹರಣೆ.

ಹೌದು, ನೀಲಿಮಾ ಅಜೀಮ್.. ಅಂದಕಾಲತ್ತಿಲ್‌ನ ಖ್ಯಾತ ನಟಿ. ''ಸಡಕ್''.. '' ಸಲೀಂ ಲಂಗ್ಡೆ ಪೆ ಮತ್ ರೋ''.. ''ಸೂರ್ಯವಂಶಂ''.. '' ದಿಲ್ ಅಪ್ನಾ ಪ್ರೀತ್ ಪರಾಯಿ''.. ''ಇತಿಹಾಸ್''.. ಹೀಗೆ ಹಲವು ಚಿತ್ರಗಳನ್ನು ಮಾಡಿರುವ ನೀಲಿಮಾ ಕಿರುತೆರೆಯಲ್ಲಿ ದಾಖಲೆ ಬರೆದ ಸಂಜಯ ಖಾನ್ ನಿರ್ದೇಶನದ ''ಟಿಪ್ಪು ಸುಲ್ತಾನ್‌''ನಲ್ಲಿಯೂ ಪ್ರಮುಖವಾದ ಪಾತ್ರ ನಿರ್ವಹಿಸಿದ್ದರು.

shahid-kapoor-s-mother-neelima-azeem-on-her-three-failed-marriages

ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಿರುವ ನೀಲಿಮಾ ಕಥಕ್ ನೃತ್ಯಗಾರ್ತಿ ಕೂಡ ಹೌದು. ಅಭಿನಯದಲ್ಲಿ 27 ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಇವರು. ಇನ್ನು ಇಂದು ಬಾಲಿವುಡ್ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾಗಿರುವ ಶಾಹಿದ್ ಕಪೂರ್ ಬೇರ ಯಾರು ಅಲ್ಲ ಬದಲಿಗೆ ಇದೇ ನೀಲಿಮಾ ಅಜೀಮ್ ಹೆತ್ತ ಮಗ.

ಇಂಥಾ ನೀಲಿಮಾ ಅಜೀಮ್ ತಾವು ನಡೆದು ಬಂದ ಹಾದಿಯನ್ನೊಮ್ಮೆ ಹಿಂದೆ ತಿರುಗಿ ನೋಡಿದ್ದಾರೆ. ಮೂರು ಮದುವೆಯಾದರು ಸಂಸಾರದ ಸುಖ ಯಾಕೆ ಸಿಗಲಿಲ್ಲ ಎಂದು ಹೇಳಿದ್ದಾರೆ. ಶಾಹಿದ್ ಕಪೂರ್ ಅವರ ಬಾಲ್ಯವನ್ನು ನೆನೆದು ಬಿಕ್ಕಿದ್ದಾರೆ.

ಹೌದು, ಅಸಲಿಗೆ 1975ರಲ್ಲಿ ನೀಲಿಮಾ ಬಾಲಿವುಡ್‌ನ ಖ್ಯಾತ ನಟ ಪಂಕಜ್ ಕಪೂರ್ ಜೊತೆ ಮದುವೆಯಾಗಿದ್ದರು. ಇವರ ಪ್ರೇಮದ ಸಂಕೇತವೇ ಶಾಹಿದ್ ಕಪೂರ್. ಆದರೆ.. ಇವರ ದಾಂಪತ್ಯದಲ್ಲಿ 09 ವರ್ಷದ ನಂತರ ಬಿರುಕು ಮೂಡಿತು. 1984ರಲ್ಲಿ ಇವರು ಪಂಕಜಲ್ ಕಪೂರ್ ಮನೆಯಿಂದ ಹೊರ ಬಂದರು. ಶಾಹಿದ್ ಕಪೂರ್ ಆಗಿನ್ನೂ ಚಿಕ್ಕ ಬಾಲಕ. ಈ ಸಮಯದಲ್ಲಿ ಇವರ ಬಳಿ ಇದ್ದಿದ್ದು ಕೇವಲ 4,500 ರೂಪಾಯಿ ಮಾತ್ರ.

ಇನ್ನು ನೀಲಿಮಾ ಮೊದಲಿಂದ ಸ್ವತಂತ್ಯ್ರ ಮಹಿಳೆ. ಹೀಗಾಗಿ ಅಪ್ಪ-ಅಮ್ಮನ ಬಳಿ ಕೈಚಾಚದ ನೀಲಿಮಾ, ಶಾಹಿದ್ ಕಪೂರ್ ನ ಅವರ ಬಳಿ ಬಿಟ್ಟರು. ಬದುಕಿನ ಹೋರಾಟ ಶುರು ಮಾಡಿದರು. ಶಾಹಿದ್ ಕಪೂರ್ ಮತ್ತೆ ತಾಯಿಯ ಮಡಿಲು ಸೇರಿದ್ದು 9ರ ಹರೆಯದಲ್ಲಿ. ''ಜೂಮ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ನೀಲಿಮಾ ಖುದ್ದು ಈ ವಿಚಾರ ಹೇಳಿದ್ಧಾರೆ.

shahid-kapoor-s-mother-neelima-azeem-on-her-three-failed-marriages

ಪಂಕಜ್ ಕಪೂರ್ ಅವರಿಂದ ದೂರ ಆದ ನೀಲಿಮಾ 1990ರಲ್ಲಿ ರಾಜೇಶ್ ಕಟ್ಟರ್ ಅವರನ್ನು ಮದುವೆಯಾದರು. ಸದ್ಯ ಬಾಲಿವುಡ್‌ನಲ್ಲಿ ನೆಲೆಯೂರುವ ಪ್ರಯತ್ನ ಮಾಡುತ್ತಿರುವ ಇಶಾನ್ ಕಟ್ಟರ್ ಇವರ ಮಗ. ಆದರೆ ಈ ಸಂಬಂಧ ಕೂಡ ಹನ್ನೊಂದು ವರ್ಷದ ಮೇಲೆ ಉಳಿಯಲಿಲ್ಲ. 2001ರಲ್ಲಿ ದಾಂಪತ್ಯ ಜೀವನ ಮುರಿದು ಬಿತ್ತು. ಇದಾದ ನಂತರ 2004ಲ್ಲಿ ನೀಲಿಮಾ ಗಾಯಕ ರಜಾ ಅಲಿ ಖಾನ್ ಅವರನ್ನು ಮದುವೆಯಾದರು. ಐದು ವರ್ಷದಲ್ಲಿ ಈ ಸಂಬಂಧ ಕೂಡ ಮುರಿದು ಬಿತ್ತು.


ನೀಲಿಮಾ ಅಜೀಮ್ ಅವರ ವೈವಾಹಿಕ ಜೀವನದ ವಿವರ ಈ ಕೆಳಗಿನಂತೆ ಇದೆ

ಪತಿಯ ಹೆಸರು ಮದುವೆಯ ವರ್ಷ ವಿಚ್ಛೇದನದ ವರ್ಷ ಮಕ್ಕಳು
ಪಂಕಜ್ ಕಪೂರ್ (ನಟ) 1975 1984 ಶಾಹಿದ್ ಕಪೂರ್
ರಾಜೇಶ್ ಖಟ್ಟರ್ (ನಟ) 1990 2001 ಇಶಾನ್ ಖಟ್ಟರ್
ರಜಾ ಅಲಿ ಖಾನ್ (ಗಾಯಕ) 2004 2009 -

ಹೀಗೆ ಪ್ರೀತಿಯಲ್ಲಿ ಸೋತ ನೀಲಿಮಾ ''ಜೂಮ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ನೀಲಿಮಾ, ದುರದೃಷ್ಟಕರವಾಗಿ ನನ್ನ ಮೂರು ಮದುವೆ ಕೂಡ ಯಶಸ್ವಿಯಾಗಲಿಲ್ಲ, ಹೆಚ್ಚಿನ ದಿನ ಉಳಿಯಲಿಲ್ಲ ಎಂದಿದ್ದಾರೆ.

ನಾನು ಯಾವಾಗಲೂ ಸಾಮಾನ್ಯ ಪುರುಷರನ್ನೇ ಮದುವೆಯಾದೆ ಹೊರತು ಶ್ರೀಮಂತರನ್ನಲ್ಲ ಎಂದು ಹೇಳಿರುವ ನೀಲಿಮಾ ನಾನು ಮದುವೆಯಾದವರಲ್ಲಿ ಆಗಾಧವಾದ ಪ್ರತಿಭೆ ಇತ್ತು ಆದರೆ ಹಣ ಇರಲಿಲ್ಲ ಎಂದು ಹೇಳಿದ್ದಾರೆ. ನಾನ್ಯಾವತ್ತು ಹಣಕ್ಕಾಗಿ ಯಾರನ್ನೂ ಮದುವೆಯಾಗಿಲ್ಲ, ಅವಕಾಶದ ಆಸೆಯಲ್ಲಿ ಯಾರ ಜೊತೆ ಸಂಬಂಧ ಕೂಡ ಬೆಳೆಸಿಲ್ಲ ಎಂದಿದ್ದಾರೆ.

ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಾನು ಯಾವತ್ತು ಬಯಸಿರಲಿಲ್ಲ ಎಂದು ಹೇಳಿರುವ ನೀಲಿಮಾ, ಕೆಲ ಒಮ್ಮೆ ಕೆಲ ಘಟನೆಗಳು ನಡೆದು ಬಿಡುತ್ತವೆ, ಆಗ ನಿರ್ಧಾರ ತೆಗೆದುಕೊಳ್ಳದೇ ಬೇರೆ ವಿಧಿ ಇರುವುದಿಲ್ಲ ಎಂದಿದ್ಧಾರೆ. ಮುಂದುವರೆದು ಸಮಾಜ ನೋಡುವ ದೃಷ್ಟಿಕೋನ ಮತ್ತು ಇಂದಿನ ಟ್ರೋಲ್‌ ಕಾಲದ ಕುರಿತು ಕೂಡ ಮಾತನಾಡಿರುವ ನೀಲಿಮಾ ನಿಮ್ಮ ಜೀವನದ ಸತ್ಯವನ್ನು ನೀವು ಹೇಳದಿದ್ದರೆ ಈ ಸಾಮಾಜಿಕ ಜಾಲತಾಣ ನಿಮ್ಮ ಮಾನಹರಣ ಮಾಡುತ್ತೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಅಷ್ಟೇ ಯಾರೋ ಒಬ್ಬರು ನೋಡಿ ಕುಡಿದು ಕುಡಿದು ಹೇಗಾಗಿದ್ದಾಳೆ ಎಂದು ಕಾಮೆಂಟ್ ಮಾಡಿದ್ದರು ಎಂದು ಹೇಳಿರುವ ನೀಲಿಮಾ ನಾನು ನಿಜ ಜೀವನದಲ್ಲಿ ಕುಡಿಯುವುದೇ ಇಲ್ಲ, ಆದರೂ ಜನ ಒಂದು ನಿರ್ಧಾರಕ್ಕೆ ಬಂದು ಬಿಡುತ್ತಾರೆ ಎಂದು ಹೇಳಿದ್ದಾರೆ.

ನಮ್ಮ ವೈಯಕ್ತಿಕ ಬದುಕು, ಕಷ್ಟ, ನಷ್ಟ ಇದ್ಯಾವುದು ಯಾರಿಗೂ ಗೊತ್ತಿರುವುದಿಲ್ಲ, ಸುಮ್ ಸುಮ್ಮನೆ ಬಂದು ಕಾಮೆಂಟ್ ಮಾಡ್ತಾರೆ, ಟ್ರೋಲ್ ಮಾಡ್ತಾರೆ, ಇಲ್ಲಸಲ್ಲದ ಚರ್ಚೆಗಳನ್ನು ಮಾಡುತ್ತಾರೆ ಎಂದು ತಮ್ಮ ಬೇಸರವನ್ನು ಹೊರ ಹಾಕಿರುವ ನೀಲಿಮಾ, ಸದ್ಯ ಜೀವನದಲ್ಲಿ ತುಂಬಾ ಮುಂದೆ ಬಂದಾಗಿದೆ ನನ್ನ ಇಬ್ಬರು ಮಕ್ಕಳು ಶಾಹಿದ್ ಮತ್ತು ಇಶಾನ್ ನನಗೆ ಪ್ರೇರಣೆ ಅವರ ಪ್ರೀತಿ ಸಾಕು ಎಂದು ಹೇಳಿದ್ದಾರೆ.

English summary
Neelima Azeem breaks her silence on her marriages to "penniless geniuses." Discover the emotional story behind Shahid Kapoor’s mother's past relationships here.
Read more about: shahid kapoor divorce bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X