'ಪುಷ್ಪ'-2 ಕಾಲ್ತುಳಿತ ಘಟನೆ 25 ವರ್ಷದ ಹಿಂದೆ ಊಹಿಸಿದ್ರಾ ಉಪೇಂದ್ರ? ವೀಡಿಯೋ ವೈರಲ್

ಇತ್ತೀಚೆಗೆ ತೆಲುಗು ನಟ ಅಲ್ಲು ಅರ್ಜುನ್ ಬಂಧನ ವಿಚಾರ ದೊಡ್ಡದಾಗಿ ಸದ್ದು ಮಾಡಿದ್ದು ಗೊತ್ತೇಯಿದೆ. 'ಪುಷ್ಪ'-2 ಸಿನಿಮಾ ಪ್ರೀಮಿಯರ್ ಶೋ ವೇಳೆ ಚಿತ್ರಮಂದಿರದಲ್ಲಿ ಕಾಲ್ತುಳಿತ ನಡೆದಿತ್ತು. ಘಟನೆಯಲ್ಲಿ ಮಹಿಳೆಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಆಕೆಯ ಪುತ್ರ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ನಟ ಅಲ್ಲು ಅರ್ಜುನ್ ಅಂದು ಪ್ರೇಕ್ಷಕರ ಜೊತೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದರು. ರೇವತಿ ಎಂಬ ಮಹಿಳೆ ಮಕ್ಕಳ ಜೊತೆ ಸಿನಿಮಾ ವೀಕ್ಷಿಸಲು ತೆರಳಿದ್ದರು. ಶೋ ಮುಗಿನ ಬಳಿಕ ಅಲ್ಲು ಅರ್ಜುನ್ ಕಾರ್ ಏರಿ ಅಭಿಮಾನಿಗಳ ಕಡೆ ಕೈ ಬೀಸಿದ್ದರು. ಈ ವೇಳೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಾಗ ಕಾಲ್ತುಳಿತ ಘಟನೆ ನಡೆದಿತ್ತು.

Netizen linked Upendra Movie scene with Allu arjun s Pushpa 2 Stampede Case

ಘಟನೆ ಸಂಬಂಧ ಮೃತ ಮಹಿಳೆ ಪತಿ ದೂರು ದಾಖಲಿಸಿದ್ದಾರೆ. ಅದನ್ನು ಆಧರಿಸಿ ಚಿತ್ರಮಂದಿರದ ಮಾಲೀಕರು, ಅಲ್ಲು ಅರ್ಜುನ್ ಭದ್ರತಾ ಸಿಬ್ಬಂದಿ ಹಾಗೂ ಅಲ್ಲು ಅರ್ಜುನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲು ಅರ್ಜುನ್ ವಿಚಾರಣೆ ಹಾಜರಾಗದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ ಠಾಣೆಗೆ ಕೊರೆದೊಯ್ದಿದ್ದರು.

ಡಿಸೆಂಬರ್ 13ರಂದು ಅಲ್ಲು ಅರ್ಜುನ್ ನಿವಾಸಕ್ಕೆ ಹೋಗಿ ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು. ವಕೀಲರ ಮೂಲಕ ಅಲ್ಲು ಅರ್ಜುನ್ ಮಧ್ಯಂತರ ಜಾಮೀನು ಪಡೆದರು. ಆದರೂ ಒಂದು ರಾತ್ರಿ ಜೈಲಿನಲ್ಲಿ ಇರುವಂತಾಯಿತು. ಶನಿವಾರ ಬೆಳಗ್ಗೆ ಅಲ್ಲು ಅರ್ಜುನ್ ಜೈಲಿನಿಂದ ಹೊರಬಂದರು.

ಕೆಲವೊಮ್ಮೆ ಕಾಕತಾಳೀಯ ಎನ್ನುವಂತೆ ಚಿತ್ರಗಳಲ್ಲಿ ತೋರಿಸುವ ಸನ್ನಿವೇಶ ನಿಜ ಜೀವನದಲ್ಲಿ ನಡೆಯುತ್ತದೆ. ಸದ್ಯ ಈ ಹೈದರಾಬಾದ್ ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣದ ನಡುವೆ 'ಉಪೇಂದ್ರ' ಚಿತ್ರದ ಸಣ್ಣ ತುಣುಕು ವೈರಲ್ ಆಗುತ್ತಿದೆ. ಅದನ್ನು ನೋಡಿ ಈ ಘಟನೆಯನ್ನು ಉಪ್ಪಿ 25 ವರ್ಷಗಳ ಹಿಂದೆಯೇ ಊಹಿಸಿದ್ದರು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಚಿತ್ರಮಂದಿರಕ್ಕೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬರುವುದು. ಕೆಲವೊಮ್ಮೆ ಕಾಲ್ತುಳಿತ ಸಂಭವಿಸುವುದು ಹೊಸದೇನು ಅಲ್ಲ. ಈ ಹಿಂದೆ ಕೂಡ ಅಂತಹ ಘಟನೆಗಳು ನಡೆದಿದೆ. ಅದನ್ನೇ ಆಧಾರವಾಗಿಟ್ಟುಕೊಂಡು 'ಉಪೇಂದ್ರ' ಆರಂಭದ ಸನ್ನಿವೇಶವೊಂದರಲ್ಲಿ ವಿಕ್ರಮನ ಜೊತೆ ಬೇತಾಳ ಮಾತನಾಡುವ ಸಂಭಾಷಣೆಯನ್ನು ಉಪ್ಪಿ ಬರೆದಿದ್ದರು.

1999ರಲ್ಲಿ ಬಂದಿದ್ದ 'ಉಪೇಂದ್ರ' ಚಿತ್ರ ಹಿಟ್ ಆಗಿತ್ತು. ಚಿತ್ರದ ನಿರೂಪಣೆಯೇ ವಿಭಿನ್ನವಾಗಿತ್ತು. ಜನಪ್ರಿಯ ವಿಕ್ರಂ ಬೇತಾಳ ಕತೆಯಿಂದ ಸ್ಫೂರ್ತಿಗೊಂಡು ಉಪ್ಪಿ ಆ ಸನ್ನಿವೇಶ ಕಟ್ಟಿದ್ದರು. ಅದರಲ್ಲಿ ವಿಕ್ರಮನ ಜೊತೆ ಬೇತಾಳ ಮಾತನಾಡುವ ಸನ್ನಿವೇಶ ಇದೆ. "ಸಂಧ್ಯಾ ಟಾಕೀಸ್‌ನಲ್ಲಿ ಟಿಕೆಟ್ ತಗೋಳಕ್ಕೆ ಹೋದಾಗ ಎಲ್ಲರೂ ತುಳಿದು ಸಾಯಿಸಿಬಿಟ್ಟರು" ಎನ್ನುವ ಡೈಲಾಗ್ ಇದೆ. ಇದನ್ನೇ ಈಗ ಹೈದರಾಬಾದ್ ಥಿಯೇಟರ್ ಕಾಲ್ತುಳಿತ ಪ್ರಕರಣದ ಜೊತೆ ಹೋಲಿಕೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಈಗ ಕಾಲ್ತುಳಿತ ಘಟನೆ ನಡೆದಿದೆ. ಆದರೆ 25 ವರ್ಷಗಳ ಹಿಂದೆ ಸಂಧ್ಯಾ ಥಿಯೇಟರ್ ಕಾಲ್ತುಳಿತ ಸಾವು ಎಂದು ಹೇಳಿರುವುದನ್ನು ಕೆಲವರು ಲಿಂಕ್ ಮಾಡಿ ನೋಡುತ್ತಿದ್ದಾರೆ. ಇದು ಅಂತಹ ವಿಶೇಷ ಇಲ್ಲದೇ ಇದ್ದರೂ ಸಂಧ್ಯಾ ಟಾಕೀಸ್ ಹಾಗೂ ಕಾಲ್ತುಳಿತ ಎನ್ನುವುದು ಹೈಲೆಟ್ ಆಗ್ತಿದೆ.

ಸದ್ಯ ಬಹಳ ವರ್ಷಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಶುಕ್ರವಾರ 2 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ.

More from Filmibeat

English summary
Did Upendra guess 'Pushpa 2' Stampede issue 25 years ago?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X