ಐಶ್ವರ್ಯಾ ರೈ ಮಗಳಿಗೂ ನಟಿ ಸೌಂದರ್ಯಾಗೂ ಎಷ್ಟೆಲ್ಲಾ ಹೋಲಿಕೆ ಇದೆ ನೋಡಿದ್ದೀರಾ?
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಈಗ ಸಂಪೂರ್ಣ ಬದಲಾಗಿದ್ದಾರೆ. ಸೌಂದರ್ಯ ಅಂದರೆ ಐಶ್ವರ್ಯಾ ರೈ ಅನ್ನುವಂತಹ ಕಾಲ ಈಗಿಲ್ಲ. ಆದರೂ, ಅವರ ಜನಪ್ರಿಯತೆ ಏನು ಕಮ್ಮಿ ಆಗಿಲ್ಲ. ಐಶ್ವರ್ಯಾ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸದೇ ಹೋದರೂ, ಆಗಾಗ ದೊಡ್ಡ ದೊಡ್ಡ ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.
ಇನ್ನು ಐಶ್ವರ್ಯಾ ರೈ ಜೊತೆ ಸದಾ ಅವರ ಪುತ್ರಿ ಆರಾಧ್ಯ ಬಚ್ಚನ್ ಕೂಡ ಕಾಣಿಸಿಕೊಳ್ಳುತ್ತಾರೆ. ಐಶ್ವರ್ಯಾ ಯಾವುದೇ ಸಮಾರಂಭದಲ್ಲಿ ಭಾಗಿಯಾದರೂ, ಆರಾಧ್ಯ ಬಚ್ಚನ್ ಅವರ ಪಕ್ಕದಲ್ಲಿ ಇರುತ್ತಾರೆ. ಹೀಗಾಗಿ ಸಿನಿಮಾಗಳಲ್ಲಿ ಇನ್ನೂ ನಟಿಸದೇ ಇದ್ದರೂ, ಅಮ್ಮನಷ್ಟೇ ಜನಪ್ರಿಯರಾಗಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಪ್ರತಿ ದಿನ ಆರಾಧ್ಯ ಬಚ್ಚನ್ ಹೆಸರು ಚರ್ಚೆಯಾಗುತ್ತಲೇ ಇರುತ್ತೆ.

ಐಶ್ವರ್ಯಾ ರೈ ಬಚ್ಚನ್ ಮಗಳ ಬಗ್ಗೆ ನೆಟ್ಟಿಗರಿಗೆ ಕುತೂಹಲ ಹೆಚ್ಚು. ಹೀಗಾಗಿ ಆಕೆಯ ಪ್ರತಿಯೊಂದು ಹೆಜ್ಜೆಯನ್ನು ಗಮನಿಸುತ್ತಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಾರೆ. ಇತ್ತೀಚೆಗೆ ಐಶ್ವರ್ಯಾ ರೈ ಜೊತೆ ಕಾನ್ ಫಿಲ್ಮ್ ಫೆಸ್ಟಿವಲ್‌ಗಳಲ್ಲೂ ಕಾಣಿಸಿಕೊಂಡಿದ್ದರು. ಹೀಗಾಗಿ ಅಮ್ಮನೊಂದು ಹೆಚ್ಚು ಪ್ರಯಾಣ ಮಾಡುವ ಆರಾಧ್ಯ ಶಿಕ್ಷಣದ ಬಗ್ಗೆ ಪ್ರಶ್ನೆ ಮಾಡಿದ್ದರು. ಇದೇ ರೀತಿ ಆರಾಧ್ಯ ಬಚ್ಚನ್ ಕೆಲವು ಫೋಟೊಗಳನ್ನು ಕನ್ನಡದ ದಿವಂಗತ ನಟಿ ಸೌಂದರ್ಯಾ ಜೊತೆ ಹೋಲಿಕೆಯನ್ನು ಮಾಡಿದ್ದರು.
ಕೆಲವು ದಿನಗಳ ಹಿಂದಷ್ಟೇ ಆರಾಧ್ಯ ಬಚ್ಚನ್ ಹಾಗೂ ದಿವಂಗತ ನಟಿ ಸೌಂದರ್ಯಾ ಜೊತೆ ಹೋಲಿಕೆ ಮಾಡುತ್ತಿದ್ದರು. ಇಬ್ಬರು ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿ ಹೋಲಿಕೆಗಳ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು. ಕೆಲವು ಲುಕ್‌ಗಳಲ್ಲಿ ಆರಾಧ್ಯ ಹಾಗೂ ಸೌಂದರ್ಯಾ ಇಬ್ಬರಿಗೂ ತೀರ ಹತ್ತಿರದ ಸಾಮ್ಯತೆಯಿದೆ ಅಂತ ಅನಿಸಿದ್ದೂ ಉಂಟು. ಆ ಫೋಟೊಗಳು ವೈರಲ್ ಕೂಡ ಆಗಿದ್ದವು.

ಆರಾಧ್ಯ ಹಾಗೂ ಸೌಂದರ್ಯಾ ಇಬ್ಬರಲ್ಲೂ ಕೆಲವು ಹೋಲಿಕೆಗಳನ್ನು ನೆಟ್ಟಿಗರೇ ಮಾಡಿದ್ದರು. ಸೌಂದರ್ಯಾ ಹಾಗೂ ಆರಾಧ್ಯ ಬಚ್ಚನ್ ಮುಖಚರ್ಯೆ ಹೆಚ್ಚು ಕಡಿಮೆ ಹೋಲಿಕೆ ಆಗಿತ್ತು. ಇಬ್ಬರದ್ದೂ ಸಿಲ್ಕ್‌ನಂತೆ ಹೊಳೆಯವ ತಲೆ ಕೂದಲು, ಹೇರ್ ಸ್ಟೈಲ್, ಇನ್ನೂ ಹಲವು ಸಂಗತಿಗಳನ್ನು ಆರಾಧ್ಯ ಹಾಗೂ ಸೌಂದರ್ಯಾ ಇಬ್ಬರಲ್ಲೂ ಕಂಡುಕೊಂಡಿದ್ದರು. ಹೀಗಾಗಿ ಆರಾಧ್ಯ ಕೂಡ ಸಿನಿಮಾರಂಗದಲ್ಲಿ ಮಿಂಚಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ದಿವಂಗತ ನಟಿ ಸೌಂದರ್ಯಾ ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದಾರೆ. 'ಸೂರ್ಯವಂಶ' ಸಿನಿಮಾದ ರೀಮೇಕ್‌ನಲ್ಲಿ ಆರಾಧ್ಯ ತಾತ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಜೊತೆ ನಟಿಸಿದ್ದರು. ಈ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ದ್ವಿಪಾತ್ರದಲ್ಲಿ ನಟಿಸಿದ್ದರು. ಇನ್ನು ತಂದೆ ತಾಯಿ ಕೂಡ ನಟರಾಗಿರುವುದರಿಂದ ಆರಾಧ್ಯ ಕೂಡ ಚಿತ್ರರಂಗಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇವೆ.
ಹಾಗಂತ ಕೇವಲ ಸೌಂದರ್ಯಾ ಜೊತೆ ಅಷ್ಟೇ ಅಲ್ಲ. ತಾಯಿ ಐಶ್ವರ್ಯಾ ರೈ ಜೊತೆನೂ ಹೋಲಿಕೆ ಮಾಡಿದ್ದರು. ಐಶ್ವರ್ಯಾ ರೈ ಹಳೆಯ ಫೋಟೊಗಳನ್ನು ಪುತ್ರಿ ಆರಾಧ್ಯ ಜೊತೆ ಹೋಲಿಕೆ ಮಾಡಿದ್ದರು. ಓಟ್ನಲ್ಲಿ ಐಶ್ವರ್ಯಾ ರೈ ಪುತ್ರಿ ಸಿನಿಮಾರಂಗಕ್ಕೆ ಕಾಲಿಡುವ ಮೊದಲೇ ಸ್ಟಾರ್ ಆಗಿರೋದಂತೂ ನಿಜ. ಮುಂದಿನ ದಿನಗಳಲ್ಲಿ ಸಿನಿಮಾಗೆ ಕಾಲಿಟ್ಟರೆ, ತಾಯಿಯಂತೆ ಸೂಪರ್‌ಸ್ಟಾರ್ ಆಗಬಹುದೆಂಬ ಅಂತಿದ್ದಾರೆ


Click it and Unblock the Notifications











