ಸೇನಾಧಿಕಾರಿಯಾಗಿದ್ದ ಈ ನಟಿಯ ತಂದೆಯನ್ನು,ಕಾಶ್ಮೀರದಲ್ಲಿ ಅಪಹರಿಸಿ ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದರು ಭಯೋತ್ಪಾದಕರು.

ಮೊದಲೆಲ್ಲಾ ಚಿತ್ರರಂಗ ಅಂದರೆ ಅರೇ.. ಅಲ್ಲಿ ನಮ್ಮಂತೋರು ಎಲ್ಲಿ ಬದುಕೋಕಾಗುತ್ತೆ. ಬರೀ ದುಡ್ಡಿದ್ದವರಿಗೆ ಅದು ಹೇಳಿ ಮಾಡಿಸಿದ ಪ್ರೊಫೆಷನ್. ಅಂತಹ ಹುಚ್ಚು ಆಲೋಚನೆಗಳನ್ನು ತೆಗೆದು ಬಿಸಾಕು ಅಂತ ಸಾಮಾನ್ಯವಾಗಿ ತಮ್ಮ ಮಕ್ಕಳಿಗೆ ಹಿರಿಯರು ಹೇಳುತ್ತಿದ್ದರು. ಆದರೆ ಈಗ ಹಾಗಲ್ಲ. ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕೇವಲ ಸ್ಟಾರ್‌ಗಳ ಮಕ್ಕಳೇ ಚಿತ್ರರಂಗದಲ್ಲಿ ಇವತ್ತು ಮಿಂಚುತ್ತಿಲ್ಲ.

ಚಿತ್ರರಂಗದ ಯಾವ ಹಿನ್ನೆಲೆ ಇಲ್ಲದವರು ಕೂಡ ಚಿತ್ರರಂಗಕ್ಕೆ ಬಂದು ಮಿಂಚುತ್ತಿದ್ದಾರೆ. ಬದುಕು ರೂಪಿಸಿಕೊಂಡಿದ್ದಾರೆ. ಅದರಲ್ಲಿಯೂ ಸೈನ್ಯದ ಹಿನ್ನೆಲೆಯಿಂದ ಇಲ್ಲಿ ಅನೇಕರು ಬಂದಿದ್ದಾರೆ. ಆ ಪೈಕಿ ನಿಮ್ರತ್ ಕೌರ್ ಕೂಡ ಒಬ್ಬರು.

Nimrat Kaur s Father Was Abducted from Work and Killed by Terrorists in Kashmir in 1994

ಹೌದು, ನಿಮ್ರತ್ ಕೌರ್.. ಬಾಲಿವುಡ್‌ನ ಚೆಲುವೆ. 'ದಿ ಲಂಚ್ ಬಾಕ್ಸ್' ಚಿತ್ರದ ಮೂಲಕ ಅನೇಕರ ಹೃದಯ ಗೆದ್ದ ನಿಮ್ರತ್ ಕೌರ್ ಕಳೆದ ಕೆಲ ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಅವರ ವ್ಯೆಯಕ್ತಿಕ ಜೀವನದ ವಿಚಾರದಿಂದ ಸುದ್ದಿಯಾಗಿದ್ದರು. ನಿಮ್ರತ್ ಕೌರ್ ಮತ್ತು ಅಭಿಷೇಕ್ ಬಚ್ಚನ್ ಪ್ರೀತಿಯಲ್ಲಿ ಬಿದ್ದಿದ್ದಾರೆ, ನಿಮ್ರತ್ ಕೌರ್‌ಗೋಸ್ಕರ ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂದು ಬಾಲಿವುಡ್‌ನವರು ಮಾತನಾಡಿಕೊಂಡಿದ್ದರು.

ಇಂಥಾ ನಿಮ್ರತ್ ಕೌರ್ ಅವರ ತಂದೆ ಸೇನಾಧಿಕಾರಿಯಾಗಿದ್ದರು. ಭಯೋತ್ಫಾದಕರು ಇವರ ತಂದೆಯನ್ನು ಕಿಡ್ನ್ಯಾಪ್ ಮಾಡಿ ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿದ್ದರು. ಈ ಕುರಿತು ನಿಮ್ರತ್ ಹಿಂದೊಮ್ಮೆ ಸಂದರ್ಶನದಲ್ಲಿ ಮಾತನಾಡಿದ್ದರು. ಅವರ ಈ ಸಂದರ್ಶನ ಈಗ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹಿನ್ನೆಲೆ ಮತ್ತೆ ಮುನ್ನೆಲೆಗೆ ಬಂದಿದೆ.

Eಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ನಿಮ್ರತ್ ಕೌರ್ ನನ್ನ ತಂದೆ { ಮೇಜರ್ ಭೂಪೇಂದರ್ ಸಿಂಗ್ } ಸೇನಾಧಿಕಾರಿಯಾಗಿದ್ದರು ಎಂದು ಹೇಳಿದ್ದರು. ವೆರಿಗಾನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಹೇಳಿದ್ದರು. ಆಗ ನಮ್ಮ ತಂದೆ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರೆ ನಾವು ಪಟಿಯಾಲಾದಲ್ಲಿ ವಾಸ ಮಾಡುತ್ತಿದ್ದೇವು ಎಂದಿದ್ದ ನಿಮ್ರತ್ ಕೌರ್, 1994ರ ಜನವರಿಯಲ್ಲಿ ಚಳಿಗಾಲದ ರಜೆಯಲ್ಲಿ ನಾವು ನಮ್ಮ ತಂದೆಯನ್ನು ನೋಡಲು ಕಾಶ್ಮೀರಕ್ಕೆ ಹೋಗಿದ್ದೇವು ಎಂದು ಹೇಳಿದ್ದರು.

ಮುಂದುವರೆದು ಇದೇ ಸಮಯದಲ್ಲಿ ಅವರ ಕೆಲಸದ ಸ್ಥಳದಿಂದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯವರು ಅಪಹರಿಸಿದ್ದರು 07 ದಿನಗಳ ಕಾಲ ಬಂಧನದಲ್ಲಿರಿಸಿ ಅವರ ಬೇಡಿಕೆಗೆ ಒಪ್ಪದಿದ್ದಾಗ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದರು ಎಂದು ಹೇಳಿದ್ದ ನಿಮ್ರತ್ ಕೆಲ ವ್ಯಕ್ತಿಗಳ ಬಿಡುಗಡೆಗೆ ಅವರು ಬೇಡಿಕೆ ಇಟ್ಟಿದ್ದರು. ಆದರೆ ನನ್ನ ತಂದೆ ಕರ್ತವ್ಯಕ್ಕೆ ಬದ್ದರಾಗಿ ಅವರ ಕೆಲಸ ಮಾಡಲು ನಿರಾಕರಿಸಿದರು ಎಂದು ನಿಮ್ರತ್ ಕೌರ್ ತಮ್ಮ ಸಂದರ್ಶನದಲ್ಲಿ ಹೇಳಿದ್ದರು.

ನಿಮ್ರತ್ ಕೌರ್ ತಂದೆ ಮೇಜರ್ ಭೂಪೇಂದರ್ ಸಿಂಗ್ ನಿಧನರಾದಾಗ ಅವರಿಗೆ ಕೇವಲ 44 ವರ್ಷ ವಯಸ್ಸಾಗಿತ್ತು. ನಿಮ್ರತ್ ಕೌರ್‌ಗೆ ಆಗ ಹನ್ನೆರಡು ವರ್ಷವಾಗಿತ್ತು. ತಂದೆಯ ನಿಧನದ ನಂತರ ಅಜ್ಜ ಅಜ್ಜಿಯ ಜೊತೆ ನೋಯ್ಡಾದಲ್ಲಿ ಕೆಲ ಕಾಲ ವಾಸ ಮಾಡಿದ್ದ ನಿಮ್ರತ್ ಕೌರ್ ಕೆಲ ದಿನಗಳ ನಂತರ ತಮ್ಮ ತಾಯಿಯ ಜೊತೆ ಸ್ವಂತ ಮನೆಗೆ ಹೋದರು.

ಮೇಜರ್ ಭೂಪೇಂದರ್ ಸಿಂಗ್ ಅವರಿಗೆ ಮರಣೋತ್ತರವಾಗಿ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಗಳಲ್ಲಿ ಒಂದಾದ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಯಿತು. ಸರ್ಕಾರ ರಾಜಸ್ಥಾನದಲ್ಲಿ ಭೂಮಿಯನ್ನು ಕೂಡ ಮಂಜೂರು ಮಾಡಿತ್ತು. ಸದ್ಯ ನಿಮ್ರತ್ ಕೌರ್ ಸೆಕ್ಷನ್ 84 ಎಂಬ ಚಿತ್ರದಲ್ಲಿ ಅಭಿನಯಿಸಿದ್ದು ಈ ಚಿತ್ರ ಇನ್ನು ಬಿಡುಗಡೆಯಾಗಬೇಕಿದೆ.

More from Filmibeat

English summary
Nimrat Kaur is the daughter of the late Major Bhupender Singh, who was kidnapped and killed by terrorists in Kashmir in 1994. He was martyred for bravely refusing to comply with their demands.
Read more about: feature army
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X