300 ಪಟ್ಟು ಹೆಚ್ಚಾದ್ರು 'ಹೂವಿನ ಬಾಣದಂತೆ' ವೈರಲ್ ಹುಡುಗಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್

ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾ ತುಂಬೆಲ್ಲಾ 'ಹೂವಿನ ಬಾಣದಂತೆ' ಸಾಂಗ್ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಕೆ. ಆರ್‌ ಪೇಟೆಯ ನಿತ್ಯಶ್ರೀ ವಿಭಿನ್ನವಾಗಿ ಆ ಹಾಡನ್ನು ಹಾಡಿದ್ದ ವೀಡಿಯೋ ವೈರಲ್ ಆಗಿದ್ದು. ಸಾಕಷ್ಟು ಜನ ಅದನ್ನು ರೀಲ್ಸ್ ಮಾಡಿ ತಮ್ಮದೇ ಶೈಲಿಯಲ್ಲಿ ಮತ್ತಷ್ಟು ರೀಚ್ ಆಗುವಂತೆ ಮಾಡಿಬಿಟ್ಟರು.

ದಿಢೀರನೆ ನಿತ್ಯಶ್ರೀ ಹೆಸರು ಬಹಳ ಸದ್ದು ಮಾಡ್ತಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ಕೂಡ ನಡೀತಿದೆ. ಇಂತಹವರನ್ನು ವೈರಲ್ ಮಾಡಿ, ಫೇಮಸ್ ಮಾಡಿ ನಿಜವಾದ ಪ್ರತಿಭೆಗಳಿಗೆ ಬೆಲೆ ಇಲ್ಲದಂತಾಗಿದೆ ಎನ್ನುವವರು ಇದ್ದಾರೆ. ಸಾಕಷ್ಟು ಜನ ನಿತ್ಯಶ್ರೀ ಪರ ಬ್ಯಾಟ್ ಬೀಸುತ್ತಿದ್ದಾರೆ. ಆಕಾಶ್ ಚಿತ್ರದ ನೀನೆ ನೀನೆ ಹಾಡನ್ನು ಕೂಡ ಆಕೆ ಇದೇ ರೀತಿ ವಿಭಿನ್ನವಾಗಿ ಹಾಡಿರುವ ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿದೆ. ಆದರೆ ಅದು ವೈರಲ್ ಆಗ್ತಿಲ್ಲ. 'ಹೂವಿನ ಬಾಣದಂತೆ' ಹಾಡು ಮಾತ್ರವೇ ಸದ್ದು ಮಾಡ್ತಿದೆ.

Nithyasree s Hoovina Baanadante viral Song Boosts Her Instagram Following Overnight

ಇತ್ತೀಚೆಗೆ ಸ್ವತಃ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ವೇದಿಕೆಯೊಂದರಲ್ಲಿ ವೈರಲ್ ಹಾಡಿನ ಬಗ್ಗೆ ಮಾತನಾಡಿದ್ದಾರೆ. ನಿತ್ಯಶ್ರೀ ಹಾಡಿದ ಶೈಲಿಯಲ್ಲೇ ಹಾಡನ್ನು ಹಾಡಿದ್ದಾರೆ. ಆ ಹುಡುಗಿ ಬಹಳ ಕ್ಯೂಟ್ ಆಗಿ ಹಾಡನ್ನು ಹಾಡಿದ್ದಾಳೆ ಅಂತ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ನಿತ್ಯಶ್ರೀ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ನಟ ಯಶ್ ಅವರ ಅಭಿಮಾನಿ ನಾನು ಎಂದು ಹೇಳಿಕೊಂಡಿದ್ದಾರೆ. ಅವರೊಟ್ಟಿಗೆ ಸಿನಿಮಾದಲ್ಲಿ ನಟಿಸೋ ಆಸೆ ಇದೆ ಎಂದು ತಿಳಿಸಿದ್ದಾರೆ.

'ಹೂವಿನ ಬಾಣದಂತೆ' ಹಾಡಿಗೆ ಒಂದರ್ಥದಲ್ಲಿ ನಾನು ಅವಮಾನ ಮಾಡಿದ್ದೀನಿ, ಹಾಗಾಗಿ ಅರ್ಜುನ್ ಜನ್ಯಾ ಸರ್ ಹಾಗೂ ಶ್ರೇಯಾ ಘೋಷಾಲ್ ಅವರಿಗೆ ಕ್ಷಮೆ ಕೋರುತ್ತೇನೆ ಎಂದು ಕೂಡ ನಿತ್ಯಶ್ರೀ ಹೇಳಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇಷ್ಟೆಲ್ಲಾ ವೈರಲ್ ಆಗುತ್ತಿದ್ದಂತೆ ಆಕೆಯ ಇನ್‌ಸ್ಟಾಗ್ರಾಮ್ ಅಕೌಂಟ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ. ಆಕೆಯ 'ಅಮ್ಮು ಗೌಡ' ಹೆಸರಿನ ಇನ್‌ಸ್ಟಾಗ್ರಾಮ್ ಅಕೌಂಟ್‌ ಅನ್ನು ಬಂದು ನೋಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಈ ಸಾಂಗ್ ವೈರಲ್ ಆಗುವುದಕ್ಕೂ ಮುನ್ನ ನಿತ್ಯಶ್ರೀ ಇನ್‌ಸ್ಟಾಗ್ರಾಮ್‌ನಲ್ಲಿ ಅಷ್ಟೇನು ಆಕ್ಟೀವ್ ಆಗಿರಲಿಲ್ಲ. ಏಳೆಂಟು ಪೋಸ್ಟ್ ಮಾತ್ರ ಮಾಡಿದ್ದರು. ಇದೀಗ ಸಖತ್ ಆಕ್ಟೀವ್ ಆಗಿದ್ದು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ವೀಡಿಯೋ ಶೇರ್ ಮಾಡಿದ್ದಾರೆ. ವಾರದ ಹಿಂದೆ ಅಂದರೆ ಹೂವಿನ ಬಾಣದಂತೆ ಸಾಂಗ್ ವೀಡಿಯೋ ವೈರಲ್ ಆಗುವ ಮುನ್ನ 150 ಜನ ಇನ್‌ಸ್ಟಾ ಫಾಲೋವರ್ಸ್ ಹೊಂದಿದ್ದರು. ಈ ವಿಚಾರವನ್ನು ಆಕೆ ಹೇಳಿಕೊಂಡಿದ್ದರು. ಇದೀಗ ಹೆಚ್ಚು ಕಮ್ಮಿ 45 ಸಾವಿರ ಫಾಲೋವರ್ಸ್ ಹೆಚ್ಚಾಗಿದ್ದಾರೆ. ಆಕೆಯ ಹೆಸರಿನಲ್ಲಿ ಕೆಲವರು ಫೇಕ್ ಇನ್‌ಸ್ಟಾಗ್ರಾಮ್ ಅಕೌಂಟ್ ಕೂಡ ಕ್ರಿಯೇಟ್ ಮಾಡುತ್ತಿದ್ದಾರೆ.

ಕೇವಲ 150 ಫಾಲೋವರ್ಸ್‌ ಇಂದ 45 ಸಾವಿರ.. ಅಂದರೆ ಹೆಚ್ಚು ಕಮ್ಮಿ 4 ದಿನಗಳಲ್ಲಿ ಬರೋಬ್ಬರಿ 300 ಪಟ್ಟು ಫಾಲೋವರ್ಸ್ ಸಂಖ್ಯೆ ಹೆಚ್ಚಾದಂತೆ ಆಗಿದೆ. ಹೀಗೆ ದಿಢೀರನೆ ವೈರಲ್ ಆಗಿ ಫೇಮಸ್ ಆಗುವವವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುವುದು ಹೊಸದೇನು ಅಲ್ಲ. ಐಪಿಎಲ್ ಟೂರ್ನಿ ವೇಳೆ ಧೋನಿ ಔಟ್ ಆಗಿದ್ದಾಗ ಯುವತಿಯೊಬ್ಬಳ ರಿಯಾಕ್ಷನ್ ವೀಡಿಯೋ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಆಕೆಯ ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ ನೂರಾರು ಪಟ್ಟು ಜಾಸ್ತಿ ಆಗಿ ಈಗ ಫೇಮಸ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿಬಿಟ್ಟಿದ್ದಾಳೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಿ ಯಾರು ಯಾವಾಗ ಫೇಮಸ್ ಆಗ್ತಾರೋ ಹೇಳೋದೆ ಕಷ್ಟ ಎನ್ನುವಂತಾಗಿದೆ.

More from Filmibeat

English summary
Viral Fame: Nithyasree’s Following Skyrockets with ‘Hoovina Baanadante’ Song
Read more about: social media kannada sanalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X