'ಹೂವಿನ ಬಾಣದಂತೆ' ನಿತ್ಯಶ್ರೀ ಪಕ್ಕ ನಿಂತಿದ್ದ ಈ ಹುಡುಗಿ ಕೂಡ ಫುಲ್ ಫೇಮಸ್; ಯಾರು ಈಕೆ?
ಸೋಶಿಯಲ್ ಮೀಡಿಯಾದಲ್ಲಿ ಯಾರು, ಯಾವ ಕಾರಣಕ್ಕೆ ವೈರಲ್ ಆಗಿ ಫೇಮಸ್ ಆಗ್ತಾರೆ ಎಂದು ಹೇಳುವುದೇ ಕಷ್ಟ. 'ಹೂವಿನ ಬಾಣದಂತೆ' ಹಾಡನ್ನು ತಮಾಷೆಗೆಂದು ಸ್ನೇಹಿತರ ಮುಂದೆ ಹಾಡುತ್ತಿದ್ದ ನಿತ್ಯಶ್ರೀ ವೀಡಿಯೋ ವೈರಲ್ ಆಗಿ ಫೇಮಸ್ ಆಗಿದ್ದು ಗೊತ್ತೇಯಿದೆ. ಆದರೆ ಆಕೆಯ ಪಕ್ಕ ನಿಂತಿದ್ದ ಹುಡುಗಿ ಕೂಡ ಈಗ ಕಮಾಲ್ ಮಾಡುತ್ತಿದ್ದಾರೆ.
ಕಳೆದೊಂದು ವಾರದಿಂದ 'ಹೂವಿನ ಬಾಣದಂತೆ' ಸಾಂಗ್ ಹವಾ ಜೋರಾಗಿದೆ. 'ಬಿರುಗಾಳಿ' ಚಿತ್ರದ ಈ ಮೆಲೋಡಿ ಸಾಂಗ್ ಅನ್ನು ಕೆ. ಆರ್ ಪೇಟೆಯ ಹುಡುಗಿ ನಿತ್ಯಶ್ರೀ ತನ್ನದೇ ಶೈಲಿಯಲ್ಲಿ ವಿಭಿನ್ನವಾಗಿ ಹಾಡಿ ಗಮನ ಸೆಳೆದಿದ್ದರು. ನೋಡ ನೋಡುತ್ತಲೇ ಈ ವೀಡಿಯೋ ರೀಲ್ಸ್ ಆಗಿ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಇದನ್ನು ವಿಭಿನ್ನವಾಗಿ ರೀಲಸ್ ಮಾಡಿ ಮತ್ತಷ್ಟು ಟ್ರೆಂಡ್ ಆಗುವಂತೆ ಮಾಡಿಬಿಟ್ಟರು.

'ಬಿರುಗಾಳಿ' ಚಿತ್ರಕ್ಕಾಗಿ ಅರ್ಜುನ್ ಜನ್ಯಾ ಕಂಪೋಸ್ ಮಾಡಿದ್ದ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದರು. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರು. ನಿತ್ಯಶ್ರೀ ಹಾಡಿದ ಬಳಿಕ ಈ ಹಾಡು ಮತ್ತೊಮ್ಮೆ ಟ್ರೆಂಡಿಂಗ್‌ನಲ್ಲಿದೆ. ಅರ್ಜುನ್ ಜನ್ಯಾ ಕೂಡ ಇತ್ತೀಚೆಗೆ ವೇದಿಕೆಯೊಂದರಲ್ಲಿ ನಿತ್ಯಶ್ರೀ ರೀತಿಯಲ್ಲೇ ಹಾಡಿದ್ದು ವಿಶೇಷ. ಇನ್ನು ಅವತ್ತು ನಿತ್ಯಶ್ರೀ ಹಾಡು ಹಾಡುವಾಗ ಪಕ್ಕದಲ್ಲಿ ಆಕೆಯ ಸ್ನೇಹಿತರು ಇದ್ದರು. ಅದರಲ್ಲಿ ಈ ಹುಡುಗಿ ಫುಲ್ ಫೇಮಸ್ ಆಗಿಬಿಟ್ಟಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಗೌತಮ ಟ್ರಸ್ಟ್ ಶಿಬಿರದಲ್ಲಿ ಸ್ನೇಹಿತರ ಜೊತೆ ನಿತ್ಯಶ್ರೀ ಪಾಲ್ಗೊಂಡಿದ್ದಾರೆ. ಅದೇ ತಂಡದಲ್ಲಿ ಈ ಹುಡುಗಿ ಕೂಡ ಇದ್ದು ಸದ್ಯ ಆಕೆಗೂ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ನಾಲ್ಕು ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಯನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಕೆಯ ಹೆಸರು ಐಶ್ವರ್ಯ ಎನ್ನಲಾಗ್ತಿದ್ದು ಐಶೂ ಹೆಸರಿನಲ್ಲಿ ಆಕೆಯ ಇನ್‌ಸ್ಟಾಗ್ರಾ ಅಕೌಂಟ್‌ಗೆ ವಿಸಿಟ್ ಕೊಡುವವರ ಸಂಖ್ಯೆ ಹೆಚ್ಚುತ್ತಿದ್ದಾರೆ.
ಕಳೆದ ನಾಲ್ಕೈದು ಸಿನಿಮಾಗಳಲ್ಲಿ ಏಳೆಂಟು ಪೋಸ್ಟ್‌ಗಳನ್ನು ಆಕೆ ಹಂಚಿಕೊಂಡಿದ್ದಾರೆ. ಆಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಿತ್ಯಶ್ರೀ ಸ್ನೇಹಿತೆ ಎಂದು ಹೇಳಲಾಗುತ್ತಿದೆ. ನಾಲ್ಕು ದಿನದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಆಕೆಗೆ 300- 400 ಮಂದಿ ಫಾಲೋವರ್ಸ್ ಇದ್ದರು. ಆದರೆ ಈಗ 22 ಸಾವಿರ ಮಂದಿ ಫಾಲೋ ಮಾಡಲು ಶುರು ಮಾಡಿದ್ದಾರೆ. ಬಹಳ ಕ್ಯೂಟ್ ಆಗಿ ಇದ್ದೀರಾ ಮೇಡಂ, ನೀವು ಹೊಸ ಕ್ರಶ್ ಅಂತೆಲ್ಲಾ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಆಕಾಶ್' ಚಿತ್ರದ 'ನೀನೆ ನೀನೆ' ಹಾಡನ್ನು ಕೂಡ ನಿತ್ಯಶ್ರೀ ಹಾಡಿರುವ ವೀಡಿಯೋ ವೈರಲ್ ಆಗ್ತಿದ್ದು ಅದರಲ್ಲಿ ಕೂಡ ಆ ಹುಡುಗಿಯನ್ನು ನೋಡಬಹುದು.
ಇನ್ನು ನಿತ್ಯಶ್ರೀಗೆ ಸಿನಿಮಾ ಅವಕಾಶಗಳು ಬರೋಕೆ ಶುರುವಾಗಿದೆಯಂತೆ. ಇನ್ನು ಆಕೆ ಹೋದಲ್ಲಿ ಬಂದಲ್ಲಿ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳು ಮುಂದಾಗಿದ್ದಾರೆ. ಒಳ್ಲೆ ಹಾಡನ್ನು ಅಪಸ್ವರದಲ್ಲಿ ಹಾಡಿ ತಪ್ಪ ಮಾಡಿದೆ ಎನ್ನುವ ಗಿಲ್ಟ್ ಕೂಡ ಕಾಡಲು ಆರಂಭಿಸಿದೆ. ಈ ಬಗ್ಗೆ ಆಕೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಗಾಯಕಿ ಶ್ರೇಯಾ ಘೋಷಾಲ್ ಕ್ಷಮೆ ಕೂಡ ಕೇಳಿದ್ದಾರೆ.
ಆಕೆಯ ಹಾಡು ಕೇಳಿ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿ ಬೈಯಲು ಪ್ರಾರಂಭಿಸಿದ್ದಾರೆ. ಅದಕ್ಕೆ ನಿತ್ಯಶ್ರೀ ಬೇಸರ ವ್ಯಕ್ತಪಡಿಸಿದ್ದು ನಾನು ನನ್ನ ಖುಷಿಗೆ ಹಾಡಿದ್ದು, ಅದು ವೈರಲ್ ಆಗುತ್ತದೆ ಎನ್ನುವುದು ಗೊತ್ತಿರಲಿಲ್ಲ, ಯಾರು ಬೈಯಬೇಡಿ ಎಂದು ಮನವಿ ಮಾಡಿದ್ದಾರೆ. ವಾರದ ಹಿಂದೆ ನಿತ್ಯಶ್ರೀ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಕೇವಲ 150 ಮಂದಿ ಇದ್ದರು. ಈಗ 48 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ.


Click it and Unblock the Notifications











