twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ ನಿರ್ದೇಶನದಲ್ಲಿ ದುಡ್ಡು ಇಲ್ಲ: ಕಹಿ ಸತ್ಯ ಬಿಚ್ಚಿಟ್ಟ ಸಾಧು ಮಹಾರಾಜ್.!

    |

    ತೆರೆ ಮೇಲೆ ಕಿಲ ಕಿಲ ಅಂತ ನಗಿಸುವುದರಲ್ಲಿ ಮಾತ್ರ ಅಲ್ಲ. ಮನಸ್ಸಿಗೆ ಮುದ ನೀಡುವ ಸಂಗೀತ ಸಂಯೋಜಿಸುವಲ್ಲಿಯೂ ಸಾಧು ಕೋಕಿಲ ನಿಪುಣ. ಅಸಲಿಗೆ, ಸಾಧು ಕೋಕಿಲ ನಟನಾಗಿ ಗುರುತಿಸಿಕೊಳ್ಳುವುದಕ್ಕೂ ಮುನ್ನವೇ ಮ್ಯೂಸಿಷಿಯನ್ ಆಗಿದ್ದವರು.

    ಹಾಗ್ನೋಡಿದ್ರೆ, ಸಾಧು ಕೋಕಿಲ ತಂದೆ ಪಿಟೀಲು ವಾದಕ. ತಾಯಿ ಗಾಯಕಿ. ತಂದೆ-ತಾಯಿಯಿಂದ ಸಂಗೀತ ಕಲಿತ ಸಾಧು ಕೋಕಿಲ ಉತ್ತಮ ಮ್ಯೂಸಿಕಲ್ ಕೀಬೋರ್ಡ್ ಪ್ಲೇಯರ್ ಕೂಡ ಹೌದು.

    ಪ್ರತಿಭಾವಂತ ಸಂಗೀತಗಾರನಾದರೂ, ಚಲನಚಿತ್ರಗಳಿಗೆ ಸಂಗೀತ ನೀಡಲು ಸಾಧು ಕೋಕಿಲ ಕೊಂಚ ಹಿಂದೇಟು ಹಾಕುತ್ತಾರೆ. ಹಾಸ್ಯ ನಟನಾಗಿ ಕಾಣಿಸಿಕೊಳ್ಳುವುದರಲ್ಲಿ ಸದಾ ಮುಂದಿರುವ ಸಾಧು ಕೋಕಿಲ, ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಲು ಹಿಂದು ಮುಂದು ನೋಡುತ್ತಾರೆ. ಹೀಗ್ಯಾಕೆ ಅಂತ ಕೇಳಿದಾಗ, ಸಾಧು ಕೋಕಿಲ ಕೊಟ್ಟ ಉತ್ತರ ಹೀಗಿತ್ತು...

    ಸಂಗೀತ ನಿರ್ದೇಶನದಲ್ಲಿ ದುಡ್ಡು ಇಲ್ಲ.!

    ಸಂಗೀತ ನಿರ್ದೇಶನದಲ್ಲಿ ದುಡ್ಡು ಇಲ್ಲ.!

    ''ಸಂಗೀತ ನಿರ್ದೇಶನದಲ್ಲಿ ದುಡ್ಡು ಇಲ್ಲ ಕಣ್ರೀ. ಹೆಸರು ಮಾಡಬಹುದು, ಮನಸ್ಸಿಗೆ ತೃಪ್ತಿ ಸಿಗುತ್ತೆ ಅಷ್ಟೇ. ನಟಿಸಿದರೆ ಮಾತ್ರ ದುಡ್ಡು. ಹೀಗಾಗಿ ಜೀವನ ನಡೆಸಲು ನಟನೆ ಮಾಡುವೆ. ಮನಸ್ಸಿನ ತೃಪ್ತಿಗಾಗಿ ಆಗಾಗ ಮಾತ್ರ ಸಂಗೀತ ನಿರ್ದೇಶನ ಮಾಡುವೆ'' ಎಂದು ಹೇಳುತ್ತಾರೆ ಸಾಧು ಕೋಕಿಲ.

    ಮನ ಮುಟ್ಟುವ 'ರುದ್ರಿ' ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನಮನ ಮುಟ್ಟುವ 'ರುದ್ರಿ' ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನ

    ಕಹಿ ಸತ್ಯ ಹೇಳಿದ ಸಾಧು ಕೋಕಿಲ

    ಕಹಿ ಸತ್ಯ ಹೇಳಿದ ಸಾಧು ಕೋಕಿಲ

    ನಟನೆಯಲ್ಲಿ ಸಿಗುವಷ್ಟು ದುಡ್ಡು ಸಂಗೀತ ನಿರ್ದೇಶನದಲ್ಲಿ ಸಿಗುವುದಿಲ್ಲ ಎಂಬ ವಾಸ್ತವವನ್ನು ಸಾಧು ಕೋಕಿಲ ಈ ಮೂಲಕ ತಿಳಿಸಿದ್ದಾರೆ. ಹೀಗಾಗಿ, ಸಂಗೀತ ನಿರ್ದೇಶನದ ಅವಕಾಶಗಳಿಗಿಂತ ನಟನೆಯ ಆಫರ್ ಗಳಿಗೆ ಸಾಧು ಕೋಕಿಲ ಹೆಚ್ಚು ಮಾನ್ಯತೆ ಕೊಡುತ್ತಾರೆ.

    ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ಸಾಧು ಕೋಕಿಲ ಪುತ್ರ ಸುರಾಗ್ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ಸಾಧು ಕೋಕಿಲ ಪುತ್ರ ಸುರಾಗ್

    ರಾಜ್ಯ ಪ್ರಶಸ್ತಿ ಪುರಸ್ಕೃತ

    ರಾಜ್ಯ ಪ್ರಶಸ್ತಿ ಪುರಸ್ಕೃತ

    ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿರುವುದು ಕೆಲವೇ ಕೆಲವು ಸಿನಿಮಾಗಳಲ್ಲಾದರೂ, ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಎರಡು ಬಾರಿ ('ರಾಕ್ಷಸ' ಮತ್ತು 'ಇಂತಿ ನಿನ್ನ ಪ್ರೀತಿಯ' ಚಿತ್ರಗಳಿಗೆ) ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ.

    'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿದ ಹಾಸ್ಯ ನಟ ಸಾಧು ಕೋಕಿಲ'ಫಿಲ್ಮಿಬೀಟ್ ಕನ್ನಡ' ಪ್ರಶಸ್ತಿ ಸ್ವೀಕರಿಸಿದ ಹಾಸ್ಯ ನಟ ಸಾಧು ಕೋಕಿಲ

    ಸಾಧು ಕೋಕಿಲ ಸಂಗೀತ ನೀಡಿರುವ ಚಿತ್ರಗಳು

    ಸಾಧು ಕೋಕಿಲ ಸಂಗೀತ ನೀಡಿರುವ ಚಿತ್ರಗಳು

    ಶ್, ಸವ್ಯಸಾಚಿ, ಮೆಜೆಸ್ಟಿಕ್, H2O, ಲಾಲಿ ಹಾಡು, ರಕ್ತ ಕಣ್ಣೀರು, ರಾಕ್ಷಸ, ಡೆಡ್ಲಿ ಸೋಮ, ಸುಂಟರಗಾಳಿ, ಇಂತಿ ನಿನ್ನ ಪ್ರೀತಿಯ, ಎದೆಗಾರಿಕೆ, ರಥಾವರ, ಮಾಸ್ತಿ ಗುಡಿ ಸೇರಿದಂತೆ ಕೆಲ ಚಿತ್ರಗಳಿಗೆ ಸಾಧು ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ.

    ಬಹು ಬೇಡಿಕೆಯ ಹಾಸ್ಯ ನಟ

    ಬಹು ಬೇಡಿಕೆಯ ಹಾಸ್ಯ ನಟ

    ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿರುವ ಹಾಸ್ಯ ನಟರ ಪೈಕಿ ಸಾಧು ಕೋಕಿಲ ಕೂಡ ಒಬ್ಬರು. ಚಿತ್ರವೊಂದಕ್ಕೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುವ ಸಾಧು ಕೋಕಿಲ ನೂರಾರು ಚಿತ್ರಗಳಲ್ಲಿ ಅಭಿನಯಿಸಿ ವೀಕ್ಷಕರಿಗೆ ಕಾಮಿಡಿ ಇಂಜೆಕ್ಷನ್ ನೀಡಿದ್ದಾರೆ.

    ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಅಂದ್ರೆ..

    ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಅಂದ್ರೆ..

    ಸಂಗೀತ ಮತ್ತು ನಟನೆ.. ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿ ಅಂದ್ರೆ ಸಾಧು ಕೋಕಿಲ ಮೊದಲ ಆಯ್ಕೆ ನಟನೆಯೇ ಆಗಿರುತ್ತದೆ. ಜೀವನ ನಡೆಸಲು ಹಣದ ಅವಶ್ಯಕತೆ ಇರುವುದರಿಂದ ನಟನೆಯನ್ನೇ ಆಯ್ಕೆ ಮಾಡಿಕೊಳ್ಳುವೆ ಎನ್ನುವ ಸಾಧು ಕೋಕಿಲ, ಆತ್ಮ ತೃಪ್ತಿಗಾಗಿ ಅವಾಗವಾಗ ಸಂಗೀತ ಸಂಯೋಜಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮ್ಯೂಸಿಕಲ್ ಶೋಗಳಲ್ಲಿ ಜಡ್ಜ್ ಆಗಿಯೂ ಸಾಧು ಕೋಕಿಲ ಕಾಣಿಸಿಕೊಳ್ಳುತ್ತಿದ್ದಾರೆ.

    ಸಾಧು ಕೋಕಿಲ ಪುತ್ರ ಕೂಡ ಮ್ಯೂಸಿಷಿಯನ್

    ಸಾಧು ಕೋಕಿಲ ಪುತ್ರ ಕೂಡ ಮ್ಯೂಸಿಷಿಯನ್

    ಸಾಧು ಕೋಕಿಲ ಪುತ್ರ ಸುರಾಗ್ ಕೂಡ ಉತ್ತಮ ಮ್ಯೂಸಿಷಿಯನ್. ಚೇತನ್ ಅಭಿನಯದ 'ಅತಿರಥ' ಚಿತ್ರದ ಹಾಡುಗಳಿಗೆ ಸುರಾಗ್ ಸಂಗೀತ ಸಂಯೋಜಿಸಿದ್ದರು. ಜೊತೆಗೆ ಹಲವು ಸಿನಿಮಾಗಳಿಗೆ ಬ್ಯಾಕ್ ಗ್ರೌಂಡ್ ಸ್ಕೋರ್ ನೀಡಿದ್ದಾರೆ ಸುರಾಗ್.

    English summary
    No money in Music Direction says Kannada Actor Sadhu Kokila.
    Friday, January 24, 2020, 15:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X