Porki Re-Release: ಅರೇ, ದರ್ಶನ್ ಬದ್ಲು 'ಪೊರ್ಕಿ' ಚಿತ್ರದಲ್ಲಿ ಆ ಹೀರೊ ನಟಿಸಬೇಕಿತ್ತು!

ನಟ ದರ್ಶನ್ ಜೈಲಿನಲ್ಲಿದ್ದಾರೆ. ಇತ್ತ 'ಪೊರ್ಕಿ' ಸಿನಿಮಾ ರೀ-ರಿಲೀಸ್ ಆಗಿದೆ. 14 ವರ್ಷಗಳ ಹಿಂದೆ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗೆ ಬಂದಿತ್ತು. ತೆಲುಗಿನ 'ಪೋಕಿರಿ' ರೀಮೆಕ್ ಆಗಿದ್ದ ಈ ಚಿತ್ರಕ್ಕೆ ಎಂ. ಡಿ ಶ್ರೀಧರ್ ಆಕ್ಷನ್ ಕಟ್ ಹೇಳಿದ್ದರು.

'ಯೋಧ' ಹಾಗೂ 'ಅಭಯ್' ಚಿತ್ರಗಳ ಬಳಿಕ ಮುಂದೆ ಯಾವ ಸಿನಿಮಾ ಮಾಡುವುದು ಎಂದು ದರ್ಶನ್ ಕಥೆಗಳನ್ನು ಕೇಳುತ್ತಿದ್ದರು. ಸಾಕಷ್ಟು ಕಥೆಗಳನ್ನು ಕೇಳಿದರೂ ಯಾವುದು ಇಷ್ಟವಾಗುತ್ತಿರಲಿಲ್ಲ. ಅದಾಗಲೇ ತೆಲುಗಿನ 'ಪೋಕಿರಿ' ಸಿನಿಮಾ ತಮಿಳು ಹಾಗೂ ಹಿಂದಿಯಲ್ಲಿ ರೀಮೆಕ್ ಆಗಿತ್ತು. ಮತ್ತೆ ನಾವು ಯಾಕೆ ಮಾಡಬೇಕು ಎಂದು ದರ್ಶನ್ ಅಂದುಕೊಂಡಿದ್ದರು. ಸಿನಿಮಾ ಬಗ್ಗೆ ಚರ್ಚೆ ನಡೆದಿದ್ದರು. ಪಕ್ಕಕ್ಕಿಟ್ಟು ಬೇರೆ ಕಥೆಗಳನ್ನು ಕೇಳಿದ್ದರು. ಯಾವುದು ಇಷ್ಟವಾಗದೇ ಇದ್ದಾಗ ಮತ್ತೆ 'ಪೊರ್ಕಿ' ಚಿತ್ರವನ್ನೇ ಫೈನಲ್ ಮಾಡಿದ್ದರು.

Not Darshan but this actor was first choice of makers for Porki

ದತ್ತು ಹಾಗೂ ಸೂರ್ಯ ನಾರಾಯಣ IPS ಹೀಗೆ ಎರಡು ಶೇಡ್‌ಗಳಿದ್ದ ಪಾತ್ರದಲ್ಲಿ ದರ್ಶನ್ ನಟಿಸಿ ಗೆದ್ದರು. ಪ್ರಣೀತಾ ನಾಯಕಿಯಾಗಿ ಸಾಥ್ ಕೊಟ್ಟಿದ್ದರು. ರೀಮೆಕ್ ಸಿನಿಮಾ ಆಗಿದ್ದರು ಒರಿಜಿನಲ್ ಸಾಂಗ್ಸ್ ಮಾಡಿ ವಿ. ಹರಿಕೃಷ್ಣ ಗೆದ್ದಿದ್ದರು. 'ಸಖತ್ತಾಗವ್ಳೆ' ಇವತ್ತಿಗೂ ದರ್ಶನ್ ಅಭಿಮಾನಿಗಳ ಫೇವರಿಟ್ ಸಾಂಗ್ ಎನಿಸಿಕೊಂಡಿದೆ. ಆಶಿಶ್ ವಿದ್ಯಾರ್ಥಿ, ದೇವರಾಜ್, ಶೋಭರಾಜ್, ಟೆನ್ನಿಸ್ ಕೃಷ್ಣ, ಸಾಧು ಕೋಕಿಲ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.

ಅಂದಾಜು 7 ಕೋಟಿ ರೂ. ಬಜೆಟ್ ಸಿನಿಮಾ ಬಾಕ್ಸಾಫೀಸ್‌ ಭರ್ಜರಿ ಗೆಲುವು ಕಂಡಿತ್ತು. ಶತದಿನೋತ್ಸವ ಆಚರಿಸಿತ್ತು. ದತ್ತ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎಲ್. ದತ್ತಾತ್ರೇಯ ಬಚ್ಚೇಗೌಡ, ಭಾನುಶ್ರೀ ದತ್ತ, ಪತ್ರಕರ್ತ ಗಣೇಶ್ ಕಾಸರಗೋಡು, ಸಂತೋಷ್ ಪಾಲ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಿನಿಮಾ ಹಿಂದಿ ಹಾಗೂ ಭೋಜ್‌ಪುರಿ ಭಾಷೆಗಳಿಗೂ ಡಬ್ ಆಗಿ ಕಿರುತೆರೆಯಲ್ಲಿ ಸದ್ದು ಮಾಡಿತ್ತು.

Not Darshan but this actor was first choice of makers for Porki

ಅದಾಗಲೇ ಮೂರು ಭಾಷೆಗಳಲ್ಲಿ ಗೆದ್ದಿದ್ದ ಚಿತ್ರವನ್ನು ರೀಮೆಕ್ ಮಾಡಿ ಗೆಲ್ಲುವುದು ಅಷ್ಟು ಸುಲಭವಿರಲಿಲ್ಲ. ಆದರೆ ಈ ಪ್ರಯತ್ನದಲ್ಲಿ ಎಂ. ಡಿ ಶ್ರೀಧರ್ ಅಂಡ್ ಟೀಂ ಗೆದ್ದಿತ್ತು. ಅಂದಹಾಗೆ 'ಪೋಕಿರಿ' ಚಿತ್ರದ ಕನ್ನಡ ರೀಮೆಕ್‌ನಲ್ಲಿ ದುನಿಯಾ ವಿಜಯ್ ನಟಿಸಬೇಕಿತ್ತು. ಅವರೊಟ್ಟಿಗೆ ಮಾತುಕತೆ ಸಹ ನಡೆದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ದರ್ಶನ್ ಹೀರೊ ಆಗಿ ನಟಿಸಿದ್ದರು. ಸ್ಟೈಲಿಶ್ ಲುಕ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು.

ಅಷ್ಟಕ್ಕೂ ದುನಿಯಾ ವಿಜಯ್ ಯಾಕೆ 'ಪೊರ್ಕಿ' ಚಿತ್ರದಲ್ಲಿ ನಟಿಸೋಕೆ ಸಾಧ್ಯವಾಗಲಿಲ್ಲ ಎನ್ನುವ ವಿಚಾರವನ್ನು ಹಿಂದೆ ಪತ್ರಕರ್ತ ಗಣೇಶ್ ಕಾಸರಗೋಡು ಫಿಲ್ಮಿಬೀಟ್‌ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. 'ಪೊರ್ಕಿ' ಚಿತ್ರದಲ್ಲಿ ನಟಿಸೋಕೆ ದುನಿಯಾ ವಿಜಯ್ ಅವರನ್ನು ಸಂಪರ್ಕಿಸಿದ್ದೆವು. ಅವರು ನಟಿಸೋಕೆ ಒಪ್ಪಿದ್ದರು. ಆದರೆ ಡೇಟ್ಸ್ ಹೊಂದಾಣಿಕೆ ಆಗಿರಲಿಲ್ಲ. ಹಾಗಾಗಿ ವಿಜಯ್ ನಟಿಸಲು ಸಾಧ್ಯವಾಗಲಿಲ್ಲ ಎಂದಿದ್ದರು.

ದತ್ತಾತ್ರೇಯ ಎಂಬುವವರು ತಮಗೆ ಒಂದು ಸಿನಿಮಾ ಮಾಡಲು ಕೇಳಿದ್ದರು. ಅವರ ಬಳಿ 'ಪೋಕಿರಿ' ರೀಮೆಕ್ ರೈಟ್ಸ್ ಇತ್ತು. ದುನಿಯಾ ವಿಜಯ್ ಅವರನ್ನು ಕೇಳಿದ್ದಾಗ ಡೇಟ್ಸ್ ಇರಲಿಲ್ಲ. ಆಗ ದರ್ಶನ್ ಚಿತ್ರದಲ್ಲಿ ನಟಿಸಲು ಒಪ್ಪಿದರು. ಕೇವಲ 2 ತಿಂಗಳಲ್ಲಿ ಚಿತ್ರೀಕರಣ ಮುಗಿಸಿದ ಸಿನಿಮಾ ಇದು. ಇಷ್ಟು ಬೇಗ ಶೂಟಿಂಗ್ ಮುಗಿಸಿದ ದರ್ಶನ್ ಸಿನಿಮಾ ಇದೇ ಇರಬೇಕು ಎಂದು ಗಣೇಶ್ ಕಾಸರಗೋಡು ವಿವರಿಸಿದ್ದರು.

ಇತ್ತೀಚೆಗೆ ಕನ್ನಡದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳು ರೀ-ರಿಲೀಸ್ ಆಗ್ತಿವೆ. ಸ್ವತಃ ದರ್ಶನ್ ನಟನೆಯ 'ಶಾಸ್ತ್ರಿ' ಹಾಗೂ 'ಕರಿಯ' ಚಿತ್ರಗಳು ಇತ್ತೀಚೆಗೆ ಹೊಸ ರೂಪದಲ್ಲಿ ತೆರೆಗಪ್ಪಳಿಸಿತ್ತು. ಸದ್ಯ ರಾಜ್ಯದ ಆಯ್ದ ಕೆಲ ಚಿತ್ರಮಂದಿರಗಳಲ್ಲಿ 'ಪೊರ್ಕಿ' ಸಿನಿಮಾ ಮತ್ತೆ ಬಿಡುಗಡೆಯಾಗಿದೆ. 'ನವಗ್ರಹ' ಚಿತ್ರ ರೀ-ರಿಲೀಸ್ ಪ್ರಯತ್ನಗಳು ಆರಂಭವಾಗಿದೆ.

More from Filmibeat

English summary
Porki Re-Release: Darshan Not The First Choice For Pokiri remake in kannada.
Read more about: filmibeat original darshan vijay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X