ದುನಿಯಾ ವಿಜಯ್‌ಗೆ ಅಂದುಕೊಂಡಿದ್ದ ಸಿನಿಮಾ ದರ್ಶನ್ ರೀಮೆಕ್ ಮಾಡಿ ಗೆದ್ರು!
ಕನ್ನಡ ಚಿತ್ರರಂಗದಲ್ಲಿ ಕೆಲ ವರ್ಷಗಳ ಹಿಂದೆ ರೀಮೆಕ್ ಸಿನಿಮಾಗಳ ಆರ್ಭಟ ಜೋರಾಗಿತ್ತು. ಸೇಫ್ ಜೋನ್ ಎನ್ನುವ ಲೆಕ್ಕಚಾರದಲ್ಲಿ ಸ್ಟಾರ್ ನಟರೇ ರೀಮೆಕ್ ಚಿತ್ರಗಳನ್ನು ಮಾಡುತ್ತಿದ್ದರು. ಹಿಂದೆ ಕೊಂಡುತಂದಿರುವ ಕೆಲ ಪರಭಾಷಾ ಸಿನಿಮಾಗಳ ರೀಮೆಕ್ ರೈಟ್ಸ್ ಇನ್ನು ನಿರ್ಮಾಪಕರ ಬಳಿಯಿದೆ. ಆ ಕಥೆಗಳು ಸಿನಿಮಾ ಆಗುವುದೇ ಅನುಮಾನ.
ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ರೀಮೆಕ್ ಸಿನಿಮಾಗಳ ಪರ್ವ ಮುಗಿದಂತಾಗಿದೆ. ಆಗೊಮ್ಮೆ ಈಗೊಮ್ಮೆ ಈಗ ರೀಮೆಕ್ ಚಿತ್ರಗಳು ಬರುತ್ತವೆ. ಆದರೆ ಸ್ಟಾರ್ ನಟರು ಮಾತ್ರ ಅದಕ್ಕೆ ಒಪ್ಪುವುದಿಲ್ಲ. ಈಗ ದೊಡ್ಡ ಸಿನಿಮಾಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಯೂನಿವರ್ಸಲ್ ಸಬ್ಜೆಕ್ಟ್‌ಗಳನ್ನು ತೆರೆಗ ತರುವ ಪ್ರಯತ್ನ ಜೋರಾಗಿದೆ.

ನಟ ದರ್ಶನ್ ಒಂದಷ್ಟು ರೀಮೆಕ್ ಸಿನಿಮಾಗಳಲ್ಲಿ ನಟಿಸಿದ್ದರು. ತಕ್ಕಮಟ್ಟಿಗೆ ಆ ಸಿನಿಮಾಗಳು ಹಿಟ್ ಕೂಡ ಆಗಿದ್ದವು. ಆದರೆ ಅದೊಂದು ಚಿತ್ರವನ್ನು ಒಲ್ಲದ ಮನಸ್ಸಿನಿಂದಲೇ ಮಾಡಿದ್ದಾರೆ. ಮೊದಲಿಗೆ ಆ ಕಥೆ ಬೇಡ, ಎಲ್ಲಾ ಭಾಷೆಗಳಲ್ಲಿ ಬಂದುಬಿಟ್ಟಿದೆ. ಕರ್ನಾಟಕದಲ್ಲೇ ಆ ಸಿನಿಮಾಗಳು ಗೆದ್ದಿವೆ. ನಾವು ಮಾಡಿದರೆ ನೋಡುತ್ತಾರಾ? ಎನ್ನುವ ಗೊಂದಲದಲ್ಲೇ ಸಿನಿಮಾ ಆರಂಭವಾಗಿತ್ತು.
ಆ ಸಮಯದಲ್ಲಿ ದರ್ಶನ್ ನಟಿಸಿದ್ದ ಒಂದೆರಡು ಸಿನಿಮಾಗಳು ಗೆಲ್ಲಲಿಲ್ಲ. ಮುಂದೆ ಯಾವ ಸಿನಿಮಾ ಎನ್ನುವ ಆಲೋಚನೆಯಲ್ಲಿದ್ದರು. ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದರು. ಇದೇ ಸಮಯದಲ್ಲಿ ತೆಲುಗಿನ 'ಪೋಕಿರಿ' ಚಿತ್ರವನ್ನು ರೀಮೆಕ್ ಮಾಡುವ ಚರ್ಚೆ ಶುರುವಾಯಿತು. ಮೊದಲಿಗೆ ದರ್ಶನ್ ಬೇಡ ಎಂದುಬಿಟ್ಟಿದ್ದರಂತೆ. ಆದರೆ ಬಳಿಕ ಒಂದಷ್ಟು ಕಥೆಗಳನ್ನು ಕೇಳಿ ಇಷ್ಟವಾಗದೇ ಮತ್ತೆ 'ಪೊರ್ಕಿ' ರೀಮೆಕ್ ಮಾಡಲು ಒಪ್ಪಿದ್ದರಂತೆ.
ನಿರ್ದೇಶಕ ಎಂ. ಡಿ ಶ್ರೀಧರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನನ್ನೊಟ್ಟಿಗೆ ಸಿನಿಮಾ ಮಾಡುವಂತೆ ದರ್ಶನ್ ಸರ್‌ಗೆ ಅಂಬರೀಶ್ ಸರ್ ಸಲಹೆ ನೀಡಿದ್ದರು. ಆಗ ಯಾವ ಸಿನಿಮಾ ಎನ್ನುವ ಚರ್ಚೆ ಬಂದು 'ಪೋಕಿರಿ' ರೀಮೆಕ್ ಮಾಡುವಂತಾಯಿತು. ಯಾವುದನ್ನು ಬೇಡ ಎನ್ನದೇ ದರ್ಶನ್ ಸರ್ ಚಿತ್ರದಲ್ಲಿ ನಟಿಸಿದರು. ನಾಯಕಿಯಾಗಿ ಪ್ರಣಿತಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದೆವು ಎಂದು ಎಂ. ಡಿ ಶ್ರೀಧರ್ ನೆನಪಿಸಿಕೊಂಡಿದ್ದಾರೆ.

ತೆಲುಗು, ತಮಿಳಿನದಲ್ಲಿ 'ಪೋಕಿರಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಕರ್ನಾಟಕದಲ್ಲಿ ಈ ಎರಡೂ ಸಿನಿಮಾಗಳು ಭರ್ಜರಿ ಯಶಸ್ಸು ಕಂಡಿದ್ದವು. ಹಾಗಾಗಿ ನಮಗೆ ಅದು ಬಹಳ ಸವಾಲಿನ ಸಿನಿಮಾ ಆಗಿತ್ತು. ಆದರೂ ಸಿನಿಮಾ ಚೆನ್ನಾಗಿ ಮೂಡಿ ಬಂದಿತ್ತು. ಯಶಸ್ವಿಯಾಗಿ 100 ದಿನ ಪ್ರದರ್ಶನ ಕಂಡಿತ್ತು ಎಂದು ಎಂ. ಡಿ ಶ್ರೀಧರ್ ಹೇಳಿದ್ದಾರೆ. ಈ ವೀಡಿಯೋ ವೈರಲ್ ಆಗ್ತಿದೆ.
ದುನಿಯಾ ವಿಜಯ್ ಹೀರೊ ಆಗಿ 'ಪೋಕಿರಿ' ಸಿನಿಮಾ ರೀಮೆಕ್ ಮಾಡಬೇಕು ಎಂದು ನಿರ್ಮಾಪಕರು ಅಂದುಕೊಂಡಿದ್ದರಂತೆ. ಬಳಿಕ ದರ್ಶನ್ ನಟಿಸಿದರೆ ಸೂಕ್ತ ಎನ್ನುವ ಚರ್ಚೆಗೆ ಬಂದಿದ್ದರು. ಈ ವಿಚಾರವನ್ನು ಬಹಳ ದಿನಗಳ ಬಳಿಕ ನಿರ್ಮಾಪಕರು ನನ್ನ ಬಳಿ ಹೇಳಿಕೊಂಡಿದ್ದರು. ಆದರೆ ನನ್ನ ಬಳಿ ನಿರ್ಮಾಪಕರು ಬಂದಾಗ ದರ್ಶನ್ ಹೀರೊ ಎಂದು ಫಿಕ್ಸ್ ಆಗಿದ್ದರು ಎಂದು ಅವರು ವಿವರಿಸಿದ್ದಾರೆ.
ತೆಲುಗಿನಲ್ಲಿ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮಹೇಶ್ ಬಾಬು ಹೀರೊ ಆಗಿ 'ಪೋಕಿರಿ' ಸಿನಿಮಾ ಬಂದಿತ್ತು. ಬಳಿಕ ತಮಿಳಿನಲ್ಲಿ ದಳಪತಿ ವಿಜಯ್ ಹೀರೊ ಆಗಿ ನಟಿಸಿ ಗೆದ್ದಿದ್ದರು. ಪ್ರಭುದೇವಾ ಆಕ್ಷನ್ ಕಟ್ ಹೇಳಿದ್ದರು. ಬಳಿಕ ಪ್ರಭುದೇವಾ ಇದೇ ಕಥೆಯನ್ನು ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಜೊತೆ 'ವಾಟೆಂಡ್' ಸಿನಿಮಾ ಮಾಡಿ ಗೆದ್ದಿದ್ದರು. ಎಲ್ಲಾ ಭಾಷೆಗಳಲ್ಲಿ ಕೂಡ ಸಿನಿಮಾ ಸಕ್ಸಸ್ ಕಂಡಿತ್ತು. ಅಂಡರ್‌ಕವರ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ದರ್ಶನ್ ನಟಿಸಿದ್ದರು.


Click it and Unblock the Notifications











