ವಿನೋದ್ ರಾಜ್ ಚೆನ್ನೈ ಆಸ್ತಿ ಮೌಲ್ಯ ಎಷ್ಟು ಕೋಟಿ? ದಾಖಲೆ ಸಮೇತ ಮಾಹಿತಿ ಇಲ್ಲಿದೆ

ಲೀಲಾವತಿ ಪುತ್ರ ವಿನೋದ್ ರಾಜ್ ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದಷ್ಟು ಸಂದರ್ಶನಗಳಲ್ಲಿ ಮಾತನಾಡಿ ಆಗಾಗ್ಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ವಿನೋದ್ ರಾಜ್ ತಂದೆ ಯಾರು? ಎನ್ನುವ ಬಗ್ಗೆ ಎನ್‌. ಆರ್ ರಮೇಶ್ ಒಂದಷ್ಟು ದಾಖಲೆಗಳನ್ನು ತೋರಿಸಿದ್ದಾರೆ.

ವಿನೋದ್ ರಾಜ್ ತಂದೆ ಡಾ. ರಾಜ್‌ಕುಮಾರ್ ಎನ್ನುವ ಅರ್ಥದಲ್ಲಿ ಸಾಕಷ್ಟು ಚರ್ಚೆ ನಡೆದಿರುವುದು ಗೊತ್ತೇಯಿದೆ. ಯಾರೊಬ್ಬರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಲೀಲಾವತಿ ಹಾಗೂ ವಿನೋದ್ ರಾಜ್‌ ಈ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಗೊಂದಲದ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ. ಈ ಬಗ್ಗೆ ಅಣ್ಣಾವ್ರಿಗೆ ಆಪ್ತರಾಗಿದ್ದ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಹಾಗೂ ಎನ್‌. ಆರ್ ರಮೇಶ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

NR Ramesh revealed the value of Leelavathi and Vinod Raj s property in Chennai

ದಶಕಗಳ ಹಿಂದೆ ನಟಿ ಲೀಲಾವತಿ ಚೆನ್ನೈ ಸಮೀಪ ಒಂದಷ್ಟು ಆಸ್ತಿ ಖರೀದಿಸಿದ್ದರು. ಅದರಲ್ಲಿ ಕೊಂಚ ಜಮೀನು ಮಾರಿ ಸೋಲದೇವನಹಳ್ಳಿ ಬಳಿ ಜಾಗ ಖರೀದಿಸಿ ತೋಟ ಮಾಡುತ್ತಾ ಮಗನ ಜೊತೆ ವಾಸವಾಗಿದ್ದರು. ಆದರೆ ಚೆನ್ನೈನಲ್ಲಿ ಇನ್ನು ಕೊಂಚ ಜಮೀನು ವಿನೋದ್ ರಾಜ್ ಹೆಸರಿನಲ್ಲಿದೆ. ಎರಡು ವರ್ಷದ ಹಿಂದೆ ಆ ಜಮೀನನ್ನು ಮಗನ ಹೆಸರಿಗೆ ಲೀಲಾವತಿ ತೀರುವಳಿ ಪತ್ರ ಮಾಡಿಸಿದ್ದರು. ಆ ಪತ್ರಗಳು ಇಲ್ಲಿದೆ ನೋಡಿ ಎಂದು ಟೋಟಲ್ ಕನ್ನಡ ಯೂಟ್ಯೂಬ್ ಸಂದರ್ಶನದಲ್ಲಿ ಎನ್‌. ಆರ್ ರಮೇಶ್ ಪ್ರದರ್ಶಿಸಿದ್ದಾರೆ.

ಆ ದಾಖಲೆ ಪತ್ರಗಳಲ್ಲಿ ಲೀಲಾವತಿ ತಮ್ಮ ನಿಜವಾದ ಹೆಸರು, ಗಂಡನ ಮಾಹಿತಿ ಬಗ್ಗೆ ನೀಡಿದ್ದಾರೆ. ವಿನೋದ್ ರಾಜ್ ತಂದೆ ಮಹಾಲಿಂಗ ಭಾಗವತರ್ ಎಂದು ನಮೂದಿಸಲಾಗಿದೆ ಎಂದು ಎನ್. ಆರ್ ರಮೇಶ್ ತೋರಿಸಿದ್ದಾರೆ. ಸದ್ಯ ಚೆನ್ನೈನಲ್ಲಿ 3 ಎಕರೆ 76 ಸೆಂಟ್‌ ಜಮೀನು ವಿನೋದ್ ರಾಜ್‌ ಹೆಸರಿನಲ್ಲಿದೆ ಎನ್ನುವುದು ತೀರುವಳಿ ಪತ್ರದಲ್ಲಿ ಗೊತ್ತಾಗುತ್ತಿದೆ. ಅದರ ಮೌಲ್ಯ 4 ಕೋಟಿ 6 ಲಕ್ಷದ 50 ಸಾವಿರ ಎಂದು ಪತ್ರದಲ್ಲಿರುವುದಾಗಿ ವಿವರಿಸಿದ್ದಾರೆ.

ಅದೇ 3 ಎಕರೆ ಜಾಗದಲ್ಲಿ ವಿನೋದ್ ರಾಜ್ ತಂದೆ ಮಹಾಲಿಂಗ ಭಾಗವತರ್ ಸಮಾಧಿ ಕೂಡ ಇದೆ ಎಂದು ಎನ್. ಆರ್ ರಮೇಶ್ ಹೇಳಿದ್ದಾರೆ. ನಿಮ್ಮ ಸೋಲದೇವನಹಳ್ಳಿ ಬಳಿ ಇರುವ ಜಮೀನು ಒಂದು ರೀತಿ ನಿತ್ಯಾನಂದನ ಆಶ್ರಮದಂತೆ ಪರಿವರ್ತನೆ ಆಗಿರುವುದು ನಿಜಾನಾ? ಸುಳ್ಳಾ? ಎಂದು ವಿನೋದ್ ರಾಜ್ ಬಳಿಕ ಪ್ರಶ್ನಿಸಿದ್ದಾರೆ.

NR Ramesh revealed the value of Leelavathi and Vinod Raj s property in Chennai

ವಿನೋದ್ ರಾಜ್ ಶಾಲಾ, ಕಾಲೇಜು ದಾಖಲಾತಿಗಳನ್ನು ಸಂಗ್ರಹಿಸುತ್ತೇವೆ. ಆ ದಾಖಲೆಗಳಲ್ಲಿ ನಿಮ್ಮ ತಂದೆ ಹೆಸರು ಏನೆಂದು ಇದೆ ನೋಡೋಣ. ಅಣ್ಣಾವ್ರಿಗೂ ನಿಮಗೂ ಯಾವುದೇ ಸಂಬಂಧ ಇಲ್ಲ. ಅಣ್ಣಾವ್ರಿಗೂ ಲೀಲಾವತಿ ಅವರಿಗೂ ಯಾವುದೇ ಸಂಬಂಧ ಇಲ್ಲ. 1962ರಲ್ಲಿ ಡಾ. ರಾಜ್‌ಕುಮಾರ್ ಹಾಗೂ ನಾನು ಹುಬ್ಬಳಿ ಹೋಟೆಲ್‌ವೊಂದರಲ್ಲಿ 'ಸಂತ ತುಕಾರಂ' ಚಿತ್ರೀಕರಣದ ವೇಳೆ ತಂಗಿದ್ವಿ ಎಂದು ಹೇಳಿದ್ದರು. ವಿನೋದ್ ರಾಜ್ ಹುಟ್ಟಿದ್ದು 1967 ಆದರೆ 5 ವರ್ಷ ಗಜಪ್ರಸವ ಮಾಡುವ ಹೆಣ್ಣು ಪ್ರಪಂಚದಲ್ಲಿ ಎಲ್ಲೂ ಹುಟ್ಟಿಲ್ಲ ಎಂದು ಎನ್‌. ಆರ್ ರಮೇಶ್ ವ್ಯಂಗ್ಯವಾಡಿದ್ದಾರೆ.

ಮುಂದೆ ಈ ವಿಚಾರದ ಬಗ್ಗೆ ವಿನೋದ್ ರಾಜ್ ಗೊಂದಲದ ಹೇಳಿಕೆ ಕೊಟ್ಟರೆ ಮಾನನಷ್ಟ ಮೊಕದ್ದಮೆ ಮಾತ್ರವಲ್ಲ ಕ್ರಿಮಿನಲ್ ಮೊಕದ್ದಮೆ ಸಹ ಹೂಡುತ್ತೇವೆ ಎಂದು ಎನ್‌. ಆರ್ ರಮೇಶ್ ಎಚ್ಚರಿಕೆ ನೀಡಿದ್ದಾರೆ.

More from Filmibeat

English summary
NR Ramesh disclosed the worth of Leelavathi and Vinod Raj's property in Chennai
Read more about: rajkumar vinod raj leelavathi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X