For Quick Alerts
  ALLOW NOTIFICATIONS  
  For Daily Alerts

  ಜಾತಕ ದೋಷ, ಮರದೊಂದಿಗೆ ಐಶ್ವರ್ಯಾ ರೈ ಮೊದಲ ಮದುವೆ: ವಿದೇಶದಲ್ಲಿ ಮಾಜಿ ವಿಶ್ವಸುಂದರಿ ಉತ್ತರ!

  By ಫಿಲ್ಮಿ ಬೀಟ್
  |

  ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಇಂದಿಗೂ ಬ್ಯೂಟಿಪುಲ್. ರೇಖಾ ಬಿಟ್ಟರೆ ಬಾಲಿವುಡ್‌ನಲ್ಲಿ ಎವರ್‌ಗ್ರೀನ್ ಬ್ಯೂಟಿ ಅಂತ ಕರೆಸಿಕೊಳ್ಳುವ ಏಕೈಕ ನಟಿ ಈಕೆನೇ. ಐವತ್ತರ ಆಸು-ಪಾಸಿನಲ್ಲಿದ್ದರೂ ಐಶ್ವರ್ಯಾ ರೈ ಬಚ್ಚನ್‌ಗೆ ಇನ್ನೂ ಅಭಿಮಾನಿಗಳು ಮಾತ್ರ ಕಮ್ಮಿಯಾಗಿಲ್ಲ. ಫ್ಯಾನ್ಸ್‌ಗಳಿಗೆ ಈ ಬ್ಯೂಟಿ ಬಗ್ಗೆ ವಿಶೇಷವಾದ ಒಲವು ಇದ್ದೇ ಇದೆ.

  ಐಶ್ವರ್ಯಾ ರೈ ಬಚ್ಚನ್ ಭಾರತೀಯ ಚಿತ್ರರಂಗದಲ್ಲಿ ಅದೆಷ್ಟೋ ಹೀರೊಯಿನ್‌ಗಳಿಗೆ ಆದರ್ಶವಿದ್ದಂತೆ. ಇತ್ತೀಚೆಗಂತೂ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ಆಗೊಮ್ಮೆ ಈಗೊಮ್ಮೆ ನಟಿಸಿದ್ದರೂ, ಐಶ್ವರ್ಯಾಗೆ ಮಾತ್ರ ಅಭಿಮಾನಿಗಳ ಕೊರತೆ ಕಾಣುತ್ತಿಲ್ಲ. ಅದಕ್ಕೆ ಕಾರಣ 'ಪೊನ್ನಿಯಿನ್ ಸೆಲ್ವನ್'.

  ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!ರಜನಿಕಾಂತ್ ಕಾಲಿಗೆ ಬಿದ್ದ ಐಶ್ವರ್ಯಾ ರೈ: ಹಾಗಂತ ಇದು ಮೊದಲೇನಲ್ಲ!

  ಕಳೆದ ನಾಲ್ಕು ವರ್ಷಗಳಿಂದ ಐಶ್ವರ್ಯಾ ರೈ ಅಭಿನಯದ ಒಂದೇ ಒಂದು ಸಿನಿಮಾ ಬಿಡುಗಡೆಯಾಗಿಲ್ಲ. ಆದರೂ, ಚಿತ್ರರಂಗದಲ್ಲಿ ಐಶ್ವರ್ಯಾ ಸ್ಥಾನವನ್ನು ಯಾರಿಂದಲೂ ಕಸಿದು ಕೊಳ್ಳಲು ಸಾಧ್ಯವಾಗಿಲ್ಲ. ಸದ್ಯಕ್ಕೀಗ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವಂ' ಚಿತ್ರದ ಮೂಲಕ ಚೋಳ ರಾಣಿಯಾಗಿ ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಅಂದ್ಹಾಗೆ ಐಶ್ವರ್ಯಾ ರೈ ಉತ್ತುಂಗದಲ್ಲಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಂದೇ ಇವರ ಮದುವೆ ಬಗ್ಗೆ ಒಂದು ಸಂಗತಿ ಸಂಚಲನ ಸೃಷ್ಟಿಸಿತ್ತು.

   ಐಶ್ವರ್ಯಾ ರೈ ಮದುವೆ

  ಐಶ್ವರ್ಯಾ ರೈ ಮದುವೆ

  ಐಶ್ವರ್ಯಾ ರೈ ಯಶಸ್ಸಿನ ತುತ್ತ ತುದಿಯಲ್ಲಿದ್ದರು. ಬಹುತೇಕ ಬಾಲಿವುಡ್‌ನ ಟಾಪ್ ಪಟ್ಟವನ್ನು ಅಲಂಕರಿಸಿದ್ದರು. ಆಗಲೇ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. 2007 ರಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಸುಪುತ್ರ ಅಭಿಷೇಕ್ ಬಚ್ಚನ್‌ರನ್ನು ವಿವಾಹವಾದರು. ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ 'ಗುರು' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಸೆಟ್‌ನಲ್ಲಿ ಪ್ರೀತಿ ಹುಟ್ಟಿತ್ತು. ಅದೇ ಪ್ರೀತಿ ಮದುವೆಗೂ ತಿರುಗಿತ್ತು. ಹೀಗಾಗಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆ ಬಾಲಿವುಡ್‌ನಲ್ಲಿ ದೊಡ್ಡ ಚರ್ಚೆಯಾಗಿತ್ತು.

  'ಪೊನ್ನಿಯನ್ ಸೆಲ್ವನ್' ಟೀಂಗೆ ಶಾಕ್: ಐಶ್ವರ್ಯಾ, ಕಾರ್ತಿ ಫೋಟೊ ಲೀಕ್!'ಪೊನ್ನಿಯನ್ ಸೆಲ್ವನ್' ಟೀಂಗೆ ಶಾಕ್: ಐಶ್ವರ್ಯಾ, ಕಾರ್ತಿ ಫೋಟೊ ಲೀಕ್!

   ಮದುವೆ ಬಳಿಕ ಗಾಸಿಪ್

  ಮದುವೆ ಬಳಿಕ ಗಾಸಿಪ್

  ಐಶ್ವರ್ಯಾ ರೈ ಗೆಳೆಯ ಅಭಿಷೇಕ್ ಬಚ್ಚನ್‌ರನ್ನು ವಿವಾಹವಾಗುತ್ತಿದ್ದಂತೆ ಗಾಳಿ ಸುದ್ದಿಯೊಂದು ಹಬ್ಬಿತ್ತು. ಐಶ್ವರ್ಯಾ ರೈ ಜಾತಕದಲ್ಲಿ ದೋಷವಿದೆ ಎನ್ನುವ ಸುದ್ದಿ ಹಬ್ಬಿತ್ತು. ಈ ಕಾರಣಕ್ಕೆ ಐಶ್ವರ್ಯಾ ರೈ ಮೊದಲು ಮರಕ್ಕೆ ಮದುವೆಯಾಗಿದ್ದರು ಎಂಬ ಸುದ್ದಿ ಹಬ್ಬಿತ್ತು. ಈ ವದಂತಿಗಳಿಂದ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು.

   ಐಶ್ವರ್ಯಾ ಹೇಳಿದ್ದೇನು?

  ಐಶ್ವರ್ಯಾ ಹೇಳಿದ್ದೇನು?

  ಅದ್ಯಾವಾಗ ಈ ಸುದ್ದಿ ಹಬ್ಬಿತ್ತೋ. ಅಲ್ಲಿಂದ ಐಶ್ವರ್ಯಾಗೆ ಸಿಕ್ಕಾಪಟ್ಟೆ ಸಮಸ್ಯೆ ಎದುರಾಗಿತ್ತು. ಮದುವೆಯಾದ ಮರು ವರ್ಷವೇ, ಅಂದರೆ, 2008ರಲ್ಲಿ ಎನ್‌ಡಿಟಿಗೆ ಸಂದರ್ಶವನ್ನು ನೀಡಿದ್ದರು. ಆಗ ಐಶ್ವರ್ಯಾ ರೈ ಜಾತಕ ದೋಷದ ಬಗ್ಗೆ ಬೇಸರದ ಸಂಗತಿಯನ್ನುಹೊರ ಹಾಕಿದ್ದರು. ವಿದೇಶಕ್ಕೆ ಹೋದರೂ ಅಲ್ಲಿನ ಮಾಧ್ಯಮಗಳು ಕೂಡ ನೀವು ಮರಕ್ಕೆ ಮೊದಲು ಮದುವೆಯಾಗಿದ್ದರಂತೆ ಅಂತ ಕೇಳುತ್ತಾರೆ ಎಂದು ಬೇಸರ ಹೊರಹಾಕಿದ್ದರು.

   ಬಿಗ್ ಬಿ ಕಿಡಿ

  ಬಿಗ್ ಬಿ ಕಿಡಿ

  ಐಶ್ವರ್ಯಾ ರೈ ಬಚ್ಚನ್‌ಗೆ ಈ ಪ್ರಶ್ನೆ ಸಿಕ್ಕಾಪಟ್ಟೆ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ವಿದೇಶಿ ಮಾಧ್ಯಮಗಳು ನಿರಂತರವಾಗಿ ಐಶ್ವರ್ಯಾ ರೈರನ್ನು" ನೀವು ಮರವನ್ನು ಮದುವೆಯಾಗಿದ್ದೀರಾ? ನಿಮಗೆ ಜಾತಕ ದೋಷವಿದೆಯೇ?" ಎಂಬ ಪ್ರಶ್ನೆಗಳನ್ನು ಹೇಳುತ್ತಿದ್ದರು. ಈ ಎಲ್ಲಾ ಪ್ರಶ್ನೆಗಳಿಗೆ ನಾನು ಹೇಗೆ ಉತ್ತರಿಸಲು ಸಾಧ್ಯ?" ಎಂದಿದ್ದರು. ಈ ವಿವಾದದ ಬಗ್ಗೆ ಅಭಿಷೇಕ್ ಬಚ್ಚನ್ ತಂದೆ ಅಮಿತಾಬ್ ಬಚ್ಚನ್ ಕೂಡ ಪ್ರತಿಕ್ರಿಯಿಸಿದ್ದರು. ನನ್ನ ಕುಟುಂಬದಲ್ಲಿ ಮೂಢನಂಬಿಕೆ ಇಲ್ಲ. ಐಶ್ವರ್ಯಾ ಜಾತಕವನ್ನೂ ನಾವು ನೋಡಿಲ್ಲ. ನೀವು ಹೇಳುವ ಆ ಮರ ಎಲ್ಲಿದೆ? ಅಮಿತಾಬ್ ಬಚ್ಚನ್ ಕಿಡಿಕಾರಿದ್ದರು.

  English summary
  Once Aishwarya Rai Reacted About Rumours Of Marriage With A Tree, Know More.
  Friday, September 16, 2022, 20:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X