ನನ್ನ 'ಮದುವೆ' ಆಗ್ತೀಯಾ ಎಂದು ಕೇಳಿದ್ದ ಈ ಚೆಲುವೆಗೆ ರಾಮ್‌ಗೋಪಾಲ್ ವರ್ಮಾ ಹೇಳಿದ್ದ ಉತ್ತರ ಏನು..?
ಭಾರತೀಯ ಚಿತ್ರರಂಗದಲ್ಲಿ ವಿಲಕ್ಷಣ ನಿರ್ದೇಶಕರೆಂದೇ ಕರೆಯಲ್ಪಡುವರು ರಾಮ್ ಗೋಪಾಲ್ ವರ್ಮಾ. ಒಂದು ಕಾಲದಲ್ಲಿ ಒಂದಕ್ಕಿಂತೊಂದು ಚೆಂದದ ಚಿತ್ರಗಳನ್ನು ನೀಡಿದ ರಾಮ್ ಗೋಪಾಲ್ ವರ್ಮಾ ಬದಲಾದ ಕಾಲದಲ್ಲಿ ಸಾಫ್ಟ್ ಪಾರ್ನ್ ಚಿತ್ರಗಳತ್ತ ಹೊರಳಿದ್ದು ದುರಂತ.
ಇನ್ನು, ಹೆಣ್ಣನ್ನು ಪೂಜಿಸುವ ನೆಲದಲ್ಲಿ ರಾಮ್ ಗೋಪಾಲ್ ವರ್ಮಾ ಹೆಣ್ಮಕ್ಳನ್ನು ಹೇಗೆ ನೋಡುತ್ತಾರೆ ಎನ್ನುವ ವಿಚಾರ ಎಲ್ಲರಿಗೆ ಗೊತ್ತಿರುವಂತಹದ್ದೆ. ಇವರ ಮನೋಭಾವಕ್ಕೆ ಇವರ ಪುಸ್ತಕ ನಾ ಇಷ್ಟ ಅತ್ಯುತ್ತಮ ಕೈಗನ್ನಡಿ. ಬೆಳ್ಳಿ ಪರದೆಯ ಮೇಲೆ ವರ್ಮಾ 'ಗನ್ಸ್ ಅಂಡ್ ಥೈಯ್ಸ್' ಹಿಂದೆ ಬೀಳುವ ರಾಮು ನಿಜ ಜೀವನದಲ್ಲಿ ಹೆಣ್ಣು ಮತ್ತು ಎಣ್ಣೆ ಹಿಂದೆ ಬಿದ್ದು ಮದುವೆಯಾದ ರತ್ನ ಅವರಿಗೆ ವಿಚ್ಛೇದನವನ್ನು ನೀಡಿದರು. ಇಂಥಾ ವಿಚಿತ್ರ-ವಿಕ್ಷಿಪ್ತ ವ್ಯಕ್ತಿಯನ್ನು ಬಾಲಿವುಡ್‌ನ ಚೆಲುವೆಯೊಬ್ಬಳು ಮದುವೆಯಾಗಲು ನಿರ್ಧರಿಸಿದ್ದರು. ಪ್ರಪೋಸ್ ಕೂಡ ಮಾಡಿದ್ದರು ಎಂದರೆ ಎಂತಹವರಿಗಾದರೂ ಆಶ್ಚರ್ಯವಾಗದಿರದು.

ಹೌದು, ಸುಚಿತ್ರಾ ಕೃಷ್ಣಮೂರ್ತಿ ಶಾರುಖ್ ಖಾನ್ ಅಭಿನಯದ ''ಕಭಿ ಹಾ ಕಭಿ ನಾ'' ಚಿತ್ರದ ನಾಯಕಿಯಾಗಿ ಜನ ಮನ ಗೆದ್ದವರು. ಆ ನಂತರ ಗಾಯಕಿಯಾಗಿ ಬರಹಗಾರ್ತಿಯಾಗಿ ಕೂಡ ಹೆಸರು ಮಾಡಿದವರು ಇವರು.
ಇನ್ನೂ .. ಮಿಸ್ಟರ್ ಇಂಡಿಯಾ ಚಿತ್ರದ ನಿರ್ದೇಶಕ ಶೇಖರ್ ಕಪೂರ್ ಅವರ ಜೊತೆ 08 ವರ್ಷ ಸಂಸಾರ ನಡೆಸಿ ಆ ನಂತರ ವಿಚ್ಛೇದನ ಪಡೆದು ದೂರವಾದ ಸುಚಿತ್ರಾ ಕೃಷ್ಣಮೂರ್ತಿ, ಒಮ್ಮೆ ರಾಮ್ ಗೋಪಾಲ್ ವರ್ಮಾ ಅವರಿಗೆ ನೀವು ನನ್ನನ್ನೂ ಮದುವೆಯಾಗ್ತೀರಾ ಎಂಬ ಸಂದೇಶವನ್ನು ಕಳಿಸಿದ್ದರು. ಸುಚಿತ್ರಾ ಅವರ ಈ ಮೆಸೇಜ್ ಓದಿ ಅಕ್ಷರಶಃ ಬೆಚ್ಚಿ ಬಿದ್ದಿದ್ದ ರಾಮ್ ಗೋಪಾಲ್ ವರ್ಮಾ ಕೂಡಲೇ ಆಫೀಸ್‌ಗೆ ಬರುವಂತೆ ಹೇಳಿದ್ದರು. ರಾಮು ಹೇಳಿದಂತೆ ಸುಚಿತ್ರಾ ಅವತ್ತು ಆಫೀಸ್‌ಗೆ ಹೋದರು ಕೂಡ.

ಆ ನಂತರ ಸುಚಿತ್ರಾ ಅವರ ಮನಪರಿವರ್ತನೆ ಮಾಡಲು ಆರ್‌ಜಿವಿ ಮುಂದಾಗಿದ್ದರು. ಮದುವೆಯಲ್ಲಿ ನನಗೆ ನಂಬಿಕೆ ಇಲ್ಲ, ನಮ್ಮಿಬ್ಬರ ಮನೋಭಾವ ಕೂಡ ಒಂದೇ ರೀತಿ ಇಲ್ಲ ಎಂದು ಸುಚಿತ್ರಾಗೆ ಹೇಳಿದ್ದ ರಾಮು ನಮ್ಮಿಬ್ಬರ ಮದುವೆ ಯಾವತ್ತು ಸಾಧ್ಯ ಇಲ್ಲ ಎಂದು ಖಂಡತುಂಡವಾಗಿ ಹೇಳಿದ್ದರು. ನೀವು ತುಂಬಾ ಒಳ್ಳೆಯವರು ಆದರೆ ನಮ್ಮ ಜೋಡಿ ಮಾತ್ರ ಭಯಂಕರವಾಗಿ ಕಾಣುತ್ತೆ ಎಂದು ಹೇಳಿದ್ದರು. ಇಷ್ಟೇ ಅಲ್ಲ ನಾನು ಮಹಿಳೆಯರ ದೇಹವನ್ನು ಮಾತ್ರ ಇಷ್ಟಪಡುತ್ತೇನೆ ಅವರ ಬುದ್ದಿವಂತಿಕೆಯನ್ನು ಅಲ್ಲ ಎಂದು ಕೂಡ ಸುಚಿತ್ರಾ ಕೃಷ್ಣಮೂರ್ತಿ ಅವರಿಗೆ ರಾಮ್ ಗೋಪಾಲ್ ವರ್ಮಾ ಹೇಳಿದ್ದರು.
ವಿಶೇಷ ಅಂದರೆ ರಾಮ್ ಗೋಪಾಲ್ ಅವರಿಗೆ ಸುಚಿತ್ರಾ ಮದುವೆಯ ಸಂದೇಶ ಕಳಿಸಿದ್ದು ಕೇವಲ ತಮಾಷೆಗಾಗಿ, ಕಾಲೆಳೆಯಲು ಅಷ್ಟೇ. ಆದರೆ, ರಾಮ್ ಗೋಪಾಲ್ ವರ್ಮಾ ಮಾತ್ರ ಸುಚಿತ್ರಾ ಅವರ ಈ ಪ್ರಪೋಸಲ್ ನ ಗಂಭೀರವಾಗಿ ತೆಗೆದುಕೊಂಡಿದ್ದರು. ನಾನು ಜೋಕ್ ಮಾಡ್ತಿದ್ದೆ ಎಂದು ಸುಚಿತ್ರಾ ಎಷ್ಟೇ ಹೇಳಿದರು ಕೂಡ ಸುಚಿತ್ರಾ ಮಾತನ್ನು ಕೇಳಲು ರಾಮು ಸುತಾರಾಂ ರೆಡಿ ಇರಲಿಲ್ಲ.
ಅಂದ್ಹಾಗೇ ಈ ವಿಚಾರವನ್ನು ಸುಚಿತ್ರಾ ಕೃಷ್ಣ ಮೂರ್ತಿ ತಮ್ಮ ಆತ್ಮಕಥೆ ಡ್ರಾಮಾ ಕ್ವೀನ್‌ನಲ್ಲಿ ಬರೆದುಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಕುರಿತು ಒಂದು ಸ್ವಾರಸ್ಯಕರ ಪ್ರಸಂಗ ಹೇಳುತ್ತೇನೆ ಕೇಳಿ ಎಂದು ಈ ವಿಚಾರ ಹಂಚಿಕೊಂಡಿದ್ದಾರೆ. ಇನ್ನು ಚಿತ್ರದ ವಿಚಾರಕ್ಕೆ ಬಂದರೆ ರಾಮ್ ಗೋಪಾಲ್ ವರ್ಮಾ ಜೊತೆ ಮೈ ವೈಫ್ ಮರ್ಡರ್, ಆಗ್ ಮತ್ತು ರಣ್ ಹೀಗೆ ಮೂರು ಚಿತ್ರಗಳಲ್ಲಿ ಸುಚಿತ್ರಾ ಕೃಷ್ಣಮೂರ್ತಿ ಕೆಲಸ ಮಾಡಿದ್ದಾರೆ. ಇನ್ನುಳಿದಂತೆ ಸುಚಿತ್ರಾ ಕೃಷ್ಣಮೂರ್ತಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಕರುನಾಡ ಚಕ್ರವರ್ತಿ ಡಾ,ಶಿವರಾಜ್ ಕುಮಾರ್ ಜೊತೆ ತೆರೆಹಂಚಿಕೊಂಡಿದ್ದರು. ಚಿತ್ರದಲ್ಲಿ ಅನಂತ್ ನಾಗ್ ಕೂಡ ಇದ್ದರು. ಶಿವಮಣಿ ನಿರ್ದೇಶನದ ಈ ಚಿತ್ರದ ಹೆಸರು 'ವಿಶ್ವ' ಎನ್ನುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.


Click it and Unblock the Notifications











