ಮದುವೆಯಾದ ನಿರ್ದೇಶಕನೊಂದಿಗೆ ಅಫೇರ್.. ಗರ್ಭಪಾತಕ್ಕೆ ₹75 ಲಕ್ಷ ಬೇಡಿಕೆ: ರಮ್ಯಾ ಕೃಷ್ಣ ಮೇಲಿದ್ದ ಆರೋಪವೇನು?

By ಫಿಲ್ಮಿಬೀಟ್ ಡೆಸ್ಕ್

ರಮ್ಯಾ ಕೃಷ್ಣ ದಕ್ಷಿಣ ಭಾರತದ ನಾಲ್ಕು ಭಾಷೆಯ ಸಿನಿಮಾ ಪ್ರೇಮಿಗಳಿಗೂ ಗೊತ್ತು. ಅಷ್ಟೇ ಯಾಕೆ ಹಿಂದಿ ಸಿನಿಮಾಗಳನ್ನು ನೋಡುವವರಿಗೂ ಈ ನಟಿಯ ಪರಿಚಯವಿದೆ. ಸೌಂದರ್ಯದಲ್ಲಿ, ನಟನೆಯಲ್ಲಿ ಈ ನಟಿಗೆ ತನ್ನದೇ ಆದ ಅಭಿಮಾನಿ ಬಳಗವಿದೆ.

ಒಂದು ಕಾಲದಲ್ಲಿ ರಮ್ಯಾ ಕೃಷ್ಣ ಸೂಪರ್‌ಸ್ಟಾರ್ ರಜನಿಕಾಂತ್ ಸೇರಿದಂತೆ ದಕ್ಷಿಣ ಭಾರತದ ದಿಗ್ಗಜರೊಂದಿಗೆ ನಟಿಸಿದ್ದಾರೆ. 'ಬಾಹುಬಲಿ' ಸಿನಿಮಾದಲ್ಲಿ ಶಿವಗಾಮಿಯಾಗಿ ನಟಿಸಿದ ರಮ್ಯಾ ಕೃಷ್ಣ ಇನ್ನಷ್ಟು ಜನಪ್ರಿಯತೆಯನ್ನು ಗಳಿಸಿದ್ದರು. ವಿಜಯ್ ದೇವರಕೊಂಡ ನಟಿಸಿದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್‌'ನಲ್ಲೂ ಅಮ್ಮನ ಪಾತ್ರದಲ್ಲಿ ಕಂಡಿದ್ದರು.

Once rumours alleged that Ramya Krishna demanded 75 lakhs from K. S. Ravi Kumar for abortion

ಅಮ್ಮನ ಪಾತ್ರ ಅಂದಕೂಡಲೇ ರಮ್ಯಾ ಕೃಷ್ಣ ಸೌಂದರ್ಯದ ಬಗ್ಗೆ ಅನುಮಾನ ಪಡಬೇಡಿ. ಇತ್ತೀಚೆಗೆ ನಡೆದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಇದೇ ರಮ್ಯಾ ಕೃಷ್ಣ ಜೊತೆ ಯಶ್ ಹಾಗೂ ದರ್ಶನ್ ಕೂಡ ಹೆಜ್ಜೆ ಹಾಕಿದ್ದರು. ಒಂದು ಕಾಲದಲ್ಲಿ ಬೇಡಿಕೆಯ ನಟಿಯಾಗಿದ್ದ ರಮ್ಯಾ ಕೃಷ್ಣ ವಿರುದ್ಧ ಗಾಳಿಸುದ್ದಿಯೊಂದು ಹರಿದಾಡಿತ್ತು. ಅದೇನು? ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಮದುವೆಯಾದ ನಿರ್ದೇಶಕನ ಜೊತೆ ಅಫೇರ್

ರಮ್ಯಾ ಕೃಷ್ಣ ಸೌಂದರ್ಯಕ್ಕೆ ಇಂದಿಗೂ ಮರುಳಾಗುವ ಅದೆಷ್ಟೋ ಮಂದಿ ಅಭಿಮಾನಿಗಳಿದ್ದಾರೆ. ತನ್ನ ಮಾದಕ ಅಭಿನಯದಿಂದ ರಮ್ಯಾ ಕೃಷ್ಣ ಅದೆಷ್ಟೋ ಹುಡುಗರ ಹೃದಯಕ್ಕೆ ಖನ್ನ ಹಾಕಿದ್ದರು. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದ ನಟಿಯೀಕೆ. ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಇವರ ಸುತ್ತ ಒಂದು ವಿವಾದಾತ್ಮಕ ಸುದ್ದಿ ಹರಿದಾಡಿತ್ತು.

ರಮ್ಯಾ ಕೃಷ್ಣ ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಕೆ ಎಸ್ ರವಿಕುಮಾರ್ ಜೊತೆ ಅಫೇರ್ ಹೊಂದಿದ್ದರು ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿ ಹಲವು ದಿನಗಳವರೆಗೆ ಜೀವಂತವಾಗಿತ್ತು. ರಮ್ಯಾ ಕೃಷ್ಣ ಹಾಗೂ ಕೆ ಎಸ್ ರವಿಕುಮಾರ್ 'ಪಡೆಯಪ್ಪ', 'ಪಟ್ಟಾಲಿ' ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಎರಡೂ ಸಿನಿಮಾಗಳಿಂದ ರಮ್ಯಾ ಕೃಷ್ಣ ಜನಪ್ರಿಯತೆ ಸಿಕ್ಕಿತ್ತು. ಈ ವೇಳೆ ಇಬ್ಬರ ನಡುವೆ ಅಫೇರ್ ಇತ್ತು ಅನ್ನೋ ಸುದ್ದಿ ಹಬ್ಬಿತ್ತು.

Once rumours alleged that Ramya Krishna demanded 75 lakhs from K. S. Ravi Kumar for abortion

ಏನಿದು ₹75 ಲಕ್ಷದ ಗರ್ಭಪಾತದ ಕಥೆ

ರಮ್ಯಾ ಕೃಷ್ಣವ ಹಾಗೂ ನಿರ್ದೇಶಕ ಕೆ ಎಸ್ ರವಿಕುಮಾರ್ ಇಬ್ಬರೂ ಡೇಟಿಂಗ್ ಮಾಡುತ್ತಿರೋ ಅಂದು ಬಿಸಿಬಿಸಿ ಸುದ್ದಿಯಾಗಿತ್ತು. ರವಿಕುಮಾರ್ ಅಷ್ಟೊತ್ತಿಗಾಗಲೇ ಮದುವೆಯಾಗಿದ್ದರು. ಆದರೂ, ರಮ್ಯಾ ಕೃಷ್ಣ ಹಾಗೂ ರವಿಕುಮಾರ್‌ಗೆ ಮನ ಸೋತಿದ್ದರು ಎಂದು ಸುದ್ದಿಯಾಗಿದೆ. ಇಷ್ಟೇ ಅಲ್ಲದೆ, ರಮ್ಯಾ ಕೃಷ್ಣ ನಿರ್ದೇಶಕ ರವಿಕುಮಾರ್ ಮಗುವಿಗೆ ತಾಯಿಯಾಗಿದ್ದರು ಎಂಬ ಸುದ್ದಿ ಕೂಡ ಹಬ್ಬಿತ್ತು.

ಈ ವಿಷಯ ರವಿಕುಮಾರ್ ಪತ್ನಿಗೂ ಮುಟ್ಟಿತ್ತು. ಆಗ ರಮ್ಯಾ ಕೃಷ್ಣ ಬೆದರಿಕೆ ಹಾಕಿದ್ದರು ಎಂದು ಹೇಳಲಾಗುತ್ತಿದೆ. ಇದೇ ವೇಳೆ ರವಿಕುಮಾರ್ ಹಾಗೂ ರಮ್ಯಾ ಕೃಷ್ಣ ಇಬ್ಬರಿಗೂ ಮಗು ಬೇಕಿರಲಿಲ್ಲ ಹೀಗಾಗಿ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗಿದ್ದರು. ಆ ವೇಳೆ ರವಿಕುಮಾರ್ ಬಳಿ ₹75 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎಂದು ಸುದ್ದಿಯಾಗಿತ್ತು. ಆದರೆ, ಎಲ್ಲಾ ಗಾಳಿ ಸುದ್ದಿಗಳನ್ನು ಇಬ್ಬರೂ ತಳ್ಳಿ ಹಾಕಿದ್ದರು.

ಕೃಷ್ಣ ವಂಶಿ ಜೊತೆ ವಿವಾಹ

ಇಷ್ಟೆಲ್ಲಾ ಗಾಳಿ ಸುದ್ದಿ ಹರಿದಾಡಿದ್ದರೂ, ಇಬ್ಬರೂ ತಲೆಕೆಡಿಸಿಕೊಂಡಿರಲಿಲ್ಲ. ತಮ್ಮ ಮೇಲೆ ಬಂದಿರೋ ಆರೋಪವನ್ನು ರಮ್ಯಾ ಕೃಷ್ಣ ಹಾಗೂ ಕೆ ಎಸ್ ರವಿಕುಮಾರ್ ಅಲ್ಲಗೆಳೆದಿದ್ದರು. ಬಳಿಕ 2003ರಲ್ಲಿ ರಮ್ಯಾ ಕೃಷ್ಣ ತೆಲುಗು ಫಿಲ್ಮ್ ಮೇಕರ್ ಕೃಷ್ಣ ವಂಶಿಯನ್ನು ವಿವಾಹವಾದರು.

ರಮ್ಯಾ ಕೃಷ್ಣ ಆಯ್ಕೆ ಮಾಡಿಕೊಳ್ಳುವ ಪಾತ್ರಗಳ ಮೂಲಕವೇ ತಾನೆಷ್ಟು ದಿಟ್ಟ ಮಹಿಳೆ ಅನ್ನೋದನ್ನು ತೋರಿಸಿದ್ದರು. ತಮಿಳು, ತೆಲುಗು ಅಷ್ಟೇ ಅಲ್ಲ ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಕೃಷ್ಣ ರುಕ್ಮಿಣಿ', 'ಗಡಿಬಿಡಿ ಗಂಡ', 'ಮಾಂಗಲ್ಯಂ ತಂತುನಾನೇನಾ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ 'ಏಕಾಂಗಿ' ಹಾಗೂ 'ರಕ್ತ ಕಣ್ಣೀರು' ಸಿನಿಮಾದ ಪಾತ್ರಗಳು ಗಮನ ಸೆಳೆದಿದ್ದರು.

More from Filmibeat

English summary
Once rumours alleged that Ramya Krishna demanded 75 lakhs from K. S. Ravikumar for abortion, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X