ಪಿತ್ತ ನೆತ್ತಿಗೇರಿ ಕಪಾಳಕ್ಕೆ ಹೊಡೆದಿದ್ದ ಅಕ್ಷಯ್ ಕುಮಾರ್, ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿ ; ನಡುಗಿದ್ದ ಖಿಲಾಡಿ-ಆ ನಂತರ ?
ಬಾಲಿವುಡ್ ಅಂಗಳದಲ್ಲಿ ಅಕ್ಷಯ್ ಕುಮಾರ್ ಎಂದರೆ ಶಿಸ್ತಿನ ಸಿಪಾಯಿ. ಅವರು ಎಲ್ಲರ ಜೊತೆ ನಗುನಗುತ್ತಾ ಇರುತ್ತಾರೆ. ಫಿಟ್ನೆಸ್ ವಿಚಾರದಲ್ಲಿ ಅವರಿಗೆ ಸಾಟಿ ಯಾರೂ ಇಲ್ಲ. ಆದರೆ ಇಂತಹ ಶಾಂತ ಸ್ವಭಾವದ ನಟನಿಗೆ ಒಮ್ಮೆ ವಿಪರೀತ ಕೋಪ ಬಂದಿತ್ತು. ಆ ಕೋಪ ಎಷ್ಟು ಜೋರಾಗಿತ್ತು ಎಂದರೆ ಒಬ್ಬ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಿದ್ದ.
ಸಾಮಾನ್ಯವಾಗಿ ಅಕ್ಷಯ್ ವಿವಾದಗಳಿಂದ ದೂರ ಇರುತ್ತಾರೆ. ಶೂಟಿಂಗ್ ಮುಗಿದರೆ ಸಾಕು ಮನೆಗೆ ಓಡುತ್ತಾರೆ. ಪಾರ್ಟಿಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಅಂದು ನಡೆದ ಆ ಒಂದು ಘಟನೆ ಅಕ್ಷಯ್ ಕುಮಾರ್ ಅವರ ಜೀವನದ ದೊಡ್ಡ ಪಾಠವಾಯಿತು. ಇಂದಿಗೂ ಆ ಕಹಿ ಘಟನೆಯನ್ನು ಅವರು ಮರೆತಿಲ್ಲ.

ಹೌದು, ಎಲ್ಲರಿಗೆ ಗೊತ್ತಿರುವಂತೆ, ಬಾಲಿವುಡ್ ಸ್ಟಾರ್ ಗಳ ಲೈಫ್ ಅಂದರೆ ಅಲ್ಲಿ ಮೋಜು ಮಸ್ತಿಗೆ ಕೊರತೆ ಇರುವುದಿಲ್ಲ. ಅಕ್ಷಯ್ ಕೂಡ ಒಂದು ಅದ್ದೂರಿ ಪಾರ್ಟಿಗೆ ಹೋಗಿದ್ದರು. ಅಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಹಠಾತ್ ಆಗಿ ನಡೆದ ಆ ಒಂದು ಸನ್ನಿವೇಶ ಅಕ್ಷಯ್ ಅವರನ್ನೇ ಬೆಚ್ಚಿ ಬೀಳಿಸಿತ್ತು. ಆ ರಾತ್ರಿ ನಡೆದಿದ್ದೇನು ಎಂಬುದು ನಿಜಕ್ಕೂ ಆಶ್ಚರ್ಯಕರ.
ಅಸಲಿಗೆ ಅಂದು ಪಾರ್ಟಿಯಲ್ಲಿ ನಡೆದಿದ್ದೇನು?
ಅದು ಅಕ್ಷಯ್ ಕುಮಾರ್ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳು. ಒಂದು ದೊಡ್ಡ ಪಾರ್ಟಿಯಲ್ಲಿ ಅಕ್ಷಯ್ ಪಾಲ್ಗೊಂಡಿದ್ದರು. ಅಲ್ಲಿ ಕುಡಿದ ಮತ್ತಿನಲ್ಲಿದ್ದ ಒಬ್ಬ ವ್ಯಕ್ತಿ ಅಕ್ಷಯ್ ಜೊತೆ ಜಗಳತೆಗೆದಿದ್ದ. ಅಷ್ಟೇ ಅಲ್ಲದೆ ಅಕ್ಷಯ್ ಕುಮಾರ್ ಅವರ ಮೇಲೆ ಕೈ ಮಾಡಲು ಮುಂದಾಗಿದ್ದ. ಈ ವರ್ತನೆ ಅಕ್ಷಯ್ ಅವರ ತಾಳ್ಮೆ ಕೆಡಿಸಿತ್ತು.

ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಕ್ಷಯ್ ಕುಮಾರ್ ಆ ವ್ಯಕ್ತಿಗೆ ಜೋರಾಗಿ ಒಂದು ಏಟು ಕೊಟ್ಟರು. ಅಕ್ಷಯ್ ಮಾರ್ಷಲ್ ಆರ್ಟ್ಸ್ ಕಲಿತವರು ಎಂಬುದು ಎಲ್ಲರಿಗೂ ಗೊತ್ತು. ಅವರ ಕೈ ಬಲ ಎಷ್ಟಿತ್ತು ಎಂದರೆ, ಏಟು ತಿಂದ ವ್ಯಕ್ತಿ ಅಲ್ಲೇ ನೆಲಕ್ಕೆ ಉರುಳಿದ. ಕೇವಲ ಉರುಳಿದ್ದಷ್ಟೇ ಅಲ್ಲ, ಆತ ಪ್ರಜ್ಞೆ ಕಳೆದುಕೊಂಡು ಮೌನವಾಗಿದ್ದ.
"ಅವನು ಎಚ್ಚರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ"...
ಆ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಾಗ ಅಕ್ಷಯ್ ಕುಮಾರ್ ಅವರಿಗೆ ಕೈಕಾಲು ನಡುಗಲು ಶುರುವಾಯಿತು. ತನ್ನಿಂದ ದೊಡ್ಡ ಅನಾಹುತ ನಡೆದುಹೋಯಿತು ಎಂದು ಅವರು ಭಯಪಟ್ಟರು. "ಅಯ್ಯೋ ದೇವರೇ, ಇವನು ಸತ್ತೇ ಹೋದನೇನೋ" ಎಂಬ ಆತಂಕ ಅವರನ್ನು ಕಾಡತೊಡಗಿತು. ಆ ಕ್ಷಣದಲ್ಲಿ ಅಕ್ಷಯ್ ಕುಮಾರ್ ಪಟ್ಟ ಪಾಡು ಅಷ್ಟಿಷ್ಟಲ್ಲ.
ನಂತರದ ಸಂದರ್ಶನಗಳಲ್ಲಿ ಈ ಬಗ್ಗೆ ಅಕ್ಷಯ್ ಹೇಳಿಕೊಂಡಿದ್ದಾರೆ. "ನಾನು ಅಂದು ತುಂಬಾ ಹೆದರಿದ್ದೆ. ಅವನು ಕಣ್ಣು ಬಿಟ್ಟರೆ ಸಾಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಅಷ್ಟೇ ಅಲ್ಲ, ಅವನ ಮುಖಕ್ಕೆ ನೀರು ಹಾಕಿ ಎಬ್ಬಿಸಲು ಪ್ರಯತ್ನಿಸಿದೆ. ಅವನು ಎದ್ದ ಮೇಲೆಯೇ ನನಗೆ ಸಮಾಧಾನವಾಗಿದ್ದು" ಎಂದು ಅಕ್ಷಯ್ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಕಿಲಾಡಿ ಪಟ್ಟದ ಹಿಂದೆ ಅಡಗಿರುವ ಗಂಭೀರ ಮುಖ...
ಅಕ್ಷಯ್ ಕುಮಾರ್ ಅಂದಿನ ಘಟನೆಯ ನಂತರ ಪಾರ್ಟಿಗಳಿಂದ ಅಂತರ ಕಾಯ್ದುಕೊಂಡರು. ಆ ಘಟನೆ ಅವರಿಗೆ ದೊಡ್ಡ ಪಾಠ ಕಲಿಸಿತ್ತು. ಹೌದು, ಅಕ್ಷಯ್ ಅಂದು ಹೊಡೆದ ಏಟು ಆ ವ್ಯಕ್ತಿಯನ್ನು ಆಸ್ಪತ್ರೆ ಸೇರಿಸುವ ಹಂತಕ್ಕೆ ತಲುಪಿತ್ತು. ಅಂದಿನಿಂದ ಅಕ್ಷಯ್ ಯಾವುದೇ ಗಲಾಟೆಗಳಿಗೆ ಹೋಗದೆ ಶಿಸ್ತಿನ ಜೀವನ ನಡೆಸುತ್ತಿದ್ದಾರೆ. ಅಕ್ಷಯ್ ಕುಮಾರ್ ಈಗ ಸಿನಿಮಾ ರಂಗದ ಸೂಪರ್ ಸ್ಟಾರ್. ಆದರೆ ಅವರ ಈ ಹಳೆಯ ಕಥೆ ಕೇಳಿದರೆ ಅಭಿಮಾನಿಗಳಿಗೂ ಶಾಕ್ ಆಗುವುದು ಗ್ಯಾರಂಟಿ.


Click it and Unblock the Notifications











