twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ ಕಪೂರ್‌ ಅನ್ನು ಬೀದಿಗೆ ತಂದ ಸಿನಿಮಾದಿಂದ ಕೋಟಿಗಟ್ಟಲೆ ಬಾಚಿತ್ತು ರಷ್ಯಾದ ಕಂಪೆನಿ!

    |

    ರಾಜ್ ಕಪೂರ್ ಉಲ್ಲೇಖವಿಲ್ಲದೆ ಭಾರತೀಯ ಚಿತ್ರರಂಗದ ಇತಿಹಾಸವನ್ನು ಬರೆಯಲಾಗದು. ಭಾರತೀಯ ಚಿತ್ರರಂಗದ ಆರಂಭಿಕ ಸ್ಥಂಭಗಳಲ್ಲಿ ಒಬ್ಬರು ರಾಜ್ ಕಪೂರ್.

    ಭಾರತ ಸ್ವಾತಂತ್ರ್ಯ ಪಡೆವ ಮುಂಚಿನಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಜ್ ಕಪೂರ್, ಹಿಂದಿ ಚಿತ್ರರಂಗವನ್ನು ಕಟ್ಟಿ ಬೆಳೆಸುವಲ್ಲಿ ಅತಿ ಮಹತ್ವದ ಪಾತ್ರವಹಿಸಿದ್ದಾರೆ. ಐತಿಹಾಸಿಕ ರಾಜ್ ಸ್ಟುಡಿಯೋ ನಿರ್ಮಾಣ ಮಾಡಿದವರು ಸಹ ಇದೇ ರಾಜ್ ಕಪೂರ್.

    ಅದ್ಭುತ ಕನಸುಗಾರರಾಗಿದ್ದ ರಾಜ್ ಕಪೂರ್ ಸಿನಿಮಾಗಳಿಗಾಗಿಯೇ ಜೀವನ ಮುಡಿಪಾಗಿಟ್ಟಿದ್ದ ವ್ಯಕ್ತಿ. ತಮ್ಮ ಸಿನಿಮಾ ವೃತ್ತಿ ಪಯಣದಲ್ಲಿ ಹಲವಾರು ಎವರ್‌ಗ್ರೀನ್ ಚಿತ್ರಗಳನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ್ದಾರೆ. ಅವುಗಳಲ್ಲಿ 'ಮೇರಾ ನಾಮ್ ಜೋಕರ್' ಸಿನಿಮಾ ಸಹ ಒಂದು. ಆದರೆ ಇದೇ ಸಿನಿಮಾ ರಾಜ್ ಕಪೂರ್ ಅನ್ನು ಬೀದಿಗೆ ತಂದಿತ್ತು. ಭಾರಿ ನಿರೀಕ್ಷೆಯಿಂದ ಆ ಕಾಲಕ್ಕೆ ಕೋಟ್ಯಂತರ ಹಣವನ್ನು ರಾಜ್ ಕಪೂರ್ ಈ ಸಿನಿಮಾದ ಮೇಲೆ ಹೂಡಿದ್ದರು. ಆದರೆ ಈ ಸಿನಿಮಾ ನೆಲಕಚ್ಚಿತು. ರಾಜ್ ಕಪೂರ್ ಮನೆ-ಮಟ ಬಿಡಬೇಕಾಯಿತು. ಆದರೆ ಈ ಸಿನಿಮಾದಿಂದಲ ರಷ್ಯಾದ ಸಂಸ್ಥೆಯೊಂದು ಕೋಟಿ-ಕೋಟಿ ರುಪಾಯಿ ಹಣ ಬಾಚಿತ್ತು!

    ಮನೆ ಅಡವಿಟ್ಟು ದೊಡ್ಡ ಬಜೆಟ್ ಸಿನಿಮಾ ಮಾಡಿದ್ದ ರಾಜ್ ಕಪೂರ್

    ಮನೆ ಅಡವಿಟ್ಟು ದೊಡ್ಡ ಬಜೆಟ್ ಸಿನಿಮಾ ಮಾಡಿದ್ದ ರಾಜ್ ಕಪೂರ್

    'ಮೇರಾ ನಾಮ್ ಜೋಕರ್' ಸಿನಿಮಾ 1970 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ನಟಿಸಿ, ನಿರ್ದೇಶನ ಮಾಡಿ ನಿರ್ಮಾಣ ಸಹ ಮಾಡಿದ್ದರು ರಾಜ್ ಕಪೂರ್. ಆ ಕಾಲದಲ್ಲಿ ಸಿನಿಮಾ ಮೇಲೆ 1 ಕೋಟಿಗೂ ಹೆಚ್ಚು ಬಂಡವಾಳ ಹೂಡಿದ್ದರು. ಆ ಕಾಲಕ್ಕೆ ತಮ್ಮ ಮನೆಯನ್ನು ಗಿರವಿ ಇಟ್ಟು ಹಣ ಹೂಡಿದ್ದರು ರಾಜ್ ಕಪೂರ್. ಆದರೆ ಬಿಡುಗಡೆ ಆದ ಬಳಿಕ ಸಿನಿಮಾ ಧಾರುಣವಾಗಿ ನೆಲಕಚ್ಚಿತು. ಯಾವ ಮಟ್ಟಿಗೆದೆಂದರೆ ಸಿನಿಮಾಕ್ಕೆ ಆ ಸಿನಿಮಾದಿಂದ ಇದ್ದ ಎಲ್ಲ ಹಣ ಆಸ್ತಿ, ಮನೆಯನ್ನು ರಾಜ್ ಕಪೂರ್ ಕಳೆದುಕೊಳ್ಳಬೇಕಾಯಿತು.

    ಸಿನಿಮಾ ಬಹಳ ಉದ್ದ ಇತ್ತು

    ಸಿನಿಮಾ ಬಹಳ ಉದ್ದ ಇತ್ತು

    'ಮೇರಾ ನಾಮ್ ಜೋಕರ್' ಸಿನಿಮಾದಲ್ಲಿ ಹಲವು ಪ್ರಯೋಗಗಳನ್ನು ರಾಜ್ ಕಪೂರ್ ಮಾಡಿದ್ದರು. ಅಲ್ಲದೆ ಸಿನಿಮಾ ಬಹಳ ಉದ್ದವಾಗಿತ್ತು. ಹಾಗಾಗಿ ಸಿನಿಮಾಕ್ಕೆ ಎರಡು ಇಂಟರ್ವೆಲ್‌ಗಳನ್ನು ಇಡಲಾಗಿತ್ತು. ಸಿನಿಮಾದ ಒಟ್ಟು ಉದ್ದ 4.15 ನಿಮಿಷ ಇತ್ತು. ಸಿನಿಮಾದ ಅಂತ್ಯ ಸಹ ಜನರಿಗೆ ಇಷ್ಟವಾಗಿರಲಿಲ್ಲ. ಹಾಗಾಗಿ ಭಾರತೀಯ ಬಾಕ್ಸ್‌ ಆಫೀಸ್‌ನಲ್ಲಿ ಸಿನಿಮಾ ಧಾರುಣವಾಗಿ ಸೋತಿತು. ಆದರೆ ಈ ಸಿನಿಮಾದಲ್ಲಿ ರಷ್ಯಾದ ಸಂಸ್ಥೆಯೊಂದು ಅದೇ ಸಮಯದಲ್ಲಿ ಕೋಟ್ಯಂತರ ರುಪಾಯಿ ಹಣ ಮಾಡಿಕೊಂಡಿತು.

    ರಷ್ಯಾದ ಸಂಸ್ಥೆಗೆ 15 ಲಕ್ಷಕ್ಕೆ ಮಾರಿದ ರಾಜ್ ಕಪೂರ್

    ರಷ್ಯಾದ ಸಂಸ್ಥೆಗೆ 15 ಲಕ್ಷಕ್ಕೆ ಮಾರಿದ ರಾಜ್ ಕಪೂರ್

    ರಾಜ್ ಕಪೂರ್‌ಗೆ ರಷ್ಯಾದಲ್ಲಿಯೂ ಅಭಿಮಾನಿಗಳಿದ್ದರು. ಹಾಗಾಗಿ ಸಿನಿಮಾದಿಂದ ಆದ ನಷ್ಟವನ್ನು ತುಸುವಾದರು ಸರಿದೂಗಿಸಿಕೊಳ್ಳಲು ರಾಜ್ ಕಪೂರ್ 'ಮೇರಾ ನಾಮ್ ಜೋಕರ್' ಸಿನಿಮಾವನ್ನು ರಷ್ಯಾದ ಡಿಸ್ಟ್ರಿಬ್ಯೂಷನ್ ಸಂಸ್ಥೆಗೆ ಕೇವಲ 15 ಲಕ್ಷ ಹಣಕ್ಕೆ ಮಾರಿಬಿಟ್ಟರು. ಅದೂ ಸಹ ಆಗಿನ ಕಾಲಕ್ಕೆ ದೊಡ್ಡ ಮೊತ್ತವೇ ಆಗಿತ್ತು. ಆದರೆ ಸಿನಿಮಾವನ್ನು ಕೊಂಡುಕೊಂಡ ರಷ್ಯಾದ ಸಂಸ್ಥೆ ಅದ್ಭುತ ಯೋಜನೆಯೊಂದನ್ನು ಮಾಡಿ ಭಾರತದಲ್ಲಿ ಫ್ಲಾಪ್ ಆಗಿದ್ದ ಸಿನಿಮಾವನ್ನು ರಷ್ಯಾದಲ್ಲಿ ಬ್ಲಾಕ್ ಬಸ್ಟರ್ ಮಾಡಿಕೊಂಡಿತು.

    ಬುದ್ಧಿವಂತಿಕೆ ಉಪಯೋಗಿಸಿದ ವಿತರಕ

    ಬುದ್ಧಿವಂತಿಕೆ ಉಪಯೋಗಿಸಿದ ವಿತರಕ

    ಬಹಳ ಉದ್ದವಾಗಿದ್ದ 'ಮೇರಾ ನಾಮ್ ಜೋಕರ್' ಸಿನಿಮಾವನ್ನು ರಷ್ಯಾದ ಆ ವಿತರಣಾ ಸಂಸ್ಥೆ ಮೂರು ಭಾಗವಾಗಿ ವಿಂಗಡಿಸಿ ಮೊದಲ ಭಾಗವನ್ನಷ್ಟೆ ಬಿಡುಗಡೆ ಮಾಡಿತು. ಜನ ನೋಡಿದರು, ಆ ನಂತರ ಎರಡನೇ ಭಾಗ ಬಿಡುಗಡೆ ಮಾಡಿತು. ಮೊದಲನೇ ಭಾಗ ನೋಡಿದವರೆಲ್ಲ ಎರಡನೇ ಭಾಗ ನೋಡಲು ಬಂದರು. ನಂತರ ಕೊನೆಯ ಭಾಗವನ್ನು ಬಿಡುಗಡೆ ಮಾಡಿತು ಆಗಂತೂ ಜನ ಜಾತ್ರೆಯೇ ನೆರೆಯಿತು. ಹೀಗೆ ಮಾಡಿ ಕೇವಲ 15 ಲಕ್ಷಕ್ಕೆ ಖರೀದಿಸಿದ್ದ 'ಮೇರಾ ನಾಮ್ ಜೋಕರ್' ಸಿನಿಮಾದಿಂದ ಬರೋಬ್ಬರಿ ಆಗಿನ ಕಾಲಕ್ಕೆ 16 ಕೋಟಿ ರುಪಾಯಿ ಹಣ ಗಳಿಸಿತು ಸಂಸ್ಥೆ!

    ಈಗಿನ ಲೆಕ್ಕದಲ್ಲಿ 1057 ಕೋಟಿ

    ಈಗಿನ ಲೆಕ್ಕದಲ್ಲಿ 1057 ಕೋಟಿ

    ಆಗಿನ ಕಾಲದ 16 ಕೋಟಿಯನ್ನು ಈಗಿನ ಹಣದುಬ್ಬರದೊಂದಿಗೆ ಲೆಕ್ಕಾಚಾರ ಹಾಕಿದರೆ 1057 ಕೋಟಿ ರುಪಾಯಿಯಾಗುತ್ತದೆ. ಯಾವ ಸಿನಿಮಾದಿಂದ ರಾಜ್ ಕಪೂರ್ ಸಾಲಗಾರನಾಗಿ ಇದ್ದ ಮನೆಯನ್ನು ಬಿಡಬೇಕಾಗಿ ಬಂತೊ ಅದೇ ಸಿನಿಮಾದಿಂದ ಸಣ್ಣ ಜಾಣತನ ಉಪಯೋಗಿಸಿ ರಷ್ಯಾದ ಸಂಸ್ಥೆಯೊಂದು ಕೋಟ್ಯಂತರ ರುಪಾಯಿ ಹಣ ಗಳಿಸಿತ್ತು. ಸಿನಿಮಾ ಉದ್ಯಮ ಕೇವಲ ಒಳ್ಳೆಯ ಕಂಟೆಂಟ್ ನೀಡುವುದಲ್ಲ ಬದಲಿಗೆ ಮಾರುಕಟ್ಟೆ ತಂತ್ರವೂ ಅತ್ಯವಶ್ಯಕ ಎನ್ನುವುದು ಇದೇ ಕಾರಣಕ್ಕೆ.

    English summary
    One Soviet Union Russian company made crores of profit by Raj Kapoor's flop movie Mera Naam Joker. It made 16 crore rs only Russia.
    Wednesday, June 29, 2022, 18:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X