ಸುದೀಪ್, ಯಶ್, ಪುನೀತ್ ಗೆ ಆಘಾತ ತಂದ ದಿನವಿದು: ಅಂದು ನಡೆದಿದ್ದೇನು?

ಕಳೆದ ವರ್ಷ ಅಂದರೆ 2019ರ ವರ್ಷಾರಂಭ ಸ್ಯಾಂಡಲ್ ವುಡ್ ನ ಕೆಲವು ಸ್ಟಾರ್ ನಟರು ಮತ್ತು ಖ್ಯಾತ ನಿರ್ಮಾಪಕರಿಗೆ ದೊಡ್ಡ ಆಘಾತ ತಂದ ದಿನವಾಗಿತ್ತು. ಸ್ಯಾಂಡಲ್ ವುಡ್ ನ 8 ಸ್ಟಾರ್ಸ್ ಮನೆ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ನಡೆಸಿದ ದಿಢೀರ್ ದಾಳಿಗೆ ಇಡಿ ಸ್ಯಾಂಡಲ್ ವುಡ್ ಬೆಚ್ಚಿ ಬಿದ್ದಿತ್ತು. ಸ್ಯಾಂಡಲ್ ವುಡ್ ಇತಿಹಾಸದಲ್ಲೆ ದೊಡ್ಡ ಮಟ್ಟದ ದಾಳಿ ಇದಾಗಿತ್ತು.

ಸ್ಟಾರ್ ನಟರು ಮತ್ತು ಖ್ಯಾತ ನಿರ್ಮಾಪಕರು ಸೇರಿದಂತೆ ಒಟ್ಟು 8 ಜನರ ಮನೆಯನ್ನು ಸುಮಾರು ನಾಲ್ಕೈದು ದಿನಗಳ ಕಾಲ ಅಧಿಕಾರಿಗಳು ಜಾಲಾಡಿದ್ದರು. ಸ್ಟಾರ್ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್ ಮತ್ತು ನಿರ್ಮಾಪಕರಾದ ವಿಜಯ್ ಕಿರಂಗಂದೂರು, ಸಿ.ಆರ್ ಮನೋಹರ್, ಜಯಣ್ಣ, ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದರು.

ಮೊದಲ ಬಾರಿಗೆ ನಡೆದ ಐಟಿ ಅಧಿಕಾರಿಗಳ ದಾಳಿಗೆ ಸ್ಟಾರ್ ನಟರು ಮತ್ತು ನಿರ್ಮಾಪಕರು ಒಮ್ಮೆ ಆಘಾತಕ್ಕೆ ಒಳಗಾಗಿದ್ದರು. ಹೊಸ ವರ್ಷ ಸಂಭ್ರಮಾಚರಣೆ, ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ನಟರು ಐಟಿ ದಾಳಿಯ ಸುದ್ದಿ ಕೇಳಿ ಗಾಬರಿಯಲ್ಲಿಯೆ ಮನೆಗೆ ವಾಪಸ್ ಆಗಿದ್ದರು. ಅಂದು ಐಟಿ ದಾಳಿ ಮಾಡಿದಾಗ ಏನೆಲ್ಲ ನಡೆಯಿತು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

ಬೆಳಗ್ಗೆ 6 ಗಂಟೆಗೆ, 8 ಸ್ಟಾರ್ಸ್ ಮನೆ, 200 ಅಧಿಕಾರಿಗಳು

ಬೆಳಗ್ಗೆ 6 ಗಂಟೆಗೆ, 8 ಸ್ಟಾರ್ಸ್ ಮನೆ, 200 ಅಧಿಕಾರಿಗಳು

ಕನ್ನಡ ಚಿತ್ರರಂಗದ ಒಟ್ಟು 8 ಜನ ಶ್ರೀಮಂತ ಸ್ಟಾರ್ ನಟರು ಹಾಗೂ ಖ್ಯಾತ ನಿರ್ಮಾಪಕರ ಮನೆ, ಕಛೇರಿ ಮತ್ತು ಸಂಬಂಧಿಕರ ಮನೆ ಮೇಲೆ ರೈಡ್ ಮಾಡಲಾಗಿತ್ತು. ಸುಮಾರು 200 ಅಧಿಕಾರಿಗಳು, ಬೆಂಗಳೂರಿನ 25 ಕಡೆ ದಾಳಿ ನಡೆಸಿ ದೊಡ್ಡ ಶಾಕ್ ನೀಡಿದ್ದರು.

ಐಟಿ ದಾಳಿ ಆದಾಗ ಮನೆಯಲ್ಲಿ ಇರಲಿಲ್ಲ ಯಶ್

ಐಟಿ ದಾಳಿ ಆದಾಗ ಮನೆಯಲ್ಲಿ ಇರಲಿಲ್ಲ ಯಶ್

ಆಗಷ್ಟೆ ಕೆಜಿಎಫ್ ಸಿನಿಮಾ ರಿಲೀಸ್ ಆಗಿತ್ತು. ಕೆಜಿಎಫ್ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ ಎನ್ನುವ ಸುದ್ದಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಯಶ್ ಮನೆ ಟಾರ್ಗೆಟ್ ಮಾಡಿದ್ದು ನಿಜಕ್ಕು ಆಘಾತ ನೀಡಿತ್ತು. ದಾಳಿ ಸಮಯದಲ್ಲಿ ನಟ ಯಶ್ ಮನೆಯಲ್ಲಿ ಇರಲಿಲ್ಲ. ಐಟಿ ದಾಳಿ ವಿಷಯ ತಿಳಿದು ಗಾಬರಿಯಲ್ಲಿಯೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಅಧಿಕಾರಿಗಳು ಕತ್ರಿಗುಪ್ಪೆಯಲ್ಲಿರುವ ಯಶ್ ನಿವಾಸ, ಮಾವನ ಮನೆ, ಕಚೇರಿ ಸೇರಿದಂತೆ ಹಲವು ಕಡೆ ಶೋಧ ನಡೆಸಿದ್ದರು.

ಚಿತ್ರೀಕರಣದಲ್ಲಿ ಇದ್ದರು ಸುದೀಪ್

ಚಿತ್ರೀಕರಣದಲ್ಲಿ ಇದ್ದರು ಸುದೀಪ್

ಐಟಿ ದಾಳಿ ನಡೆಸಿದ ಸಮಯದಲ್ಲಿ ನಟ ಸುದೀಪ್ ಕೂಡ ಮನೆಯಲ್ಲಿ ಇರಲಿಲ್ಲ. ಚಿತ್ರೀಕರಣದಲ್ಲಿದ್ದ ಸುದೀಪ್ ಮಧ್ಯಾಹ್ನ ಮನೆಗೆ ವಾಪಸ್ ಆಗಿದ್ದರು. ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು. ಜೆಪಿ ನಗರದಲ್ಲಿರುವ ಕಿಚ್ಚನ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದರು. ಅಧಿಕಾರಿಗಳು ಆಸ್ತಿ ವಿವರ, ದಾಖಲೆ ಪತ್ರಗಳು ಪರಿಶೀಲನೆ ನಡೆಸಿದ್ದರು. ಸುದೀಪ್ ಮನೆ ಮೇಲೆ ನಡೆದ ಐಟಿ ದಾಳಿಗೆ ದಿ ವಿಲನ್ ಸಿನಿಮಾದ ಗಳಿಕೆ ಪ್ರಮುಖ ಕಾರಣವಾಗಿತ್ತು ಎಂದು ಹೇಳಲಾಗಿತ್ತು.

ಡಾ.ರಾಜ್ ಮಕ್ಕಳ ಮನೆ ಮೇಲೆ ದಾಳಿ

ಡಾ.ರಾಜ್ ಮಕ್ಕಳ ಮನೆ ಮೇಲೆ ದಾಳಿ

ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಮನೆಯ ಮೇಲು ಐಟಿ ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದರು. ಸದಾಶಿವನಗರದಲ್ಲಿರುವ ಪುನೀತ್ ನಿವಾಸ ಮತ್ತು ನಾಗವಾರದಲ್ಲಿರುವ ಶಿವಣ್ಣನ ನಿವಾಸದ ಮೇಲೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ದಾಳಿ ಮಾಡಿದ ಅಧಿಕಾರಿಗಳು ಮೂರು ದಿನಗಳ ಕಾಲ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಆರ್ಥಿಕ ವ್ಯವಹಾರ ನೋಡಿಕೊಳ್ಳುತ್ತಿದ್ದ ಆಡಿಟರ್ಸ್ ಮನೆಗೆ ಬಂದು ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ವಿಲನ್ ಮತ್ತು ಕೆಜಿಎಫ್ ನಿರ್ಮಾಪಕರ ಮನೆ ಮೇಲೆ ದಾಳಿ

ವಿಲನ್ ಮತ್ತು ಕೆಜಿಎಫ್ ನಿರ್ಮಾಪಕರ ಮನೆ ಮೇಲೆ ದಾಳಿ

ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆಯ 'ದಿ ವಿಲನ್' ಚಿತ್ರವನ್ನ ನಿರ್ಮಾಣ ಮಾಡಿದ್ದ, ವಿಧಾನ ಪರಿಷತ್ ಸದಸ್ಯ ಸಿ ಆರ್ ಮನೋಹರ್ ಗೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದರು. ಎಚ್ ಎಸ್ ಆರ್ ಲೇಔಟ್ ನಿವಾಸ ಸೇರಿದಂತೆ ಕಚೇರಿಗಳ ಮೇಲೆ ರೈಡ್ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿತ್ತು. ಇನ್ನು ಸ್ಯಾಂಡಲ್ ವುಡ್ ನ ಮತ್ತೋರ್ವ ಖ್ಯಾತ ನಿರ್ಮಾಪಕ, ಕೆಜಿಎಫ್ ಚಿತ್ರದ ಸರದಾರ ವಿಜಯ್ ಕಿರಗಂದೂರು ಸಹ ಐಟಿಗೆ ಟಾರ್ಗೆಟ್ ಆಗಿದ್ದರು. ಕೆಜಿಎಫ್ ಸಿನಿಮಾ ಅತಿ ದೊಡ್ಡ ಗಳಿಕೆ ಕಂಡು ಐಟಿ ಅಧಿಕಾರಿಗಳ ಕಣ್ಣುಕುಕ್ಕಿತ್ತು. ನಾಗರಬಾವಿಯಲ್ಲಿರುವ ನಿವಾಸಕ್ಕೆ ಮುಂಜಾನೆಯೇ ಐಟಿ ಆಫಿಸರ್ಸ್ ಎಂಟ್ರಿ ಕೊಟ್ಟು ಪರಿಶೀಲನೆ ಶುರುಮಾಡಿದ್ದರು.

ರಾಕ್ ಲೈನ್ ಮತ್ತು ಜಯಣ್ಣ

ರಾಕ್ ಲೈನ್ ಮತ್ತು ಜಯಣ್ಣ

ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುತ್ತಿರುವ ಖ್ಯಾತ ನಿರ್ಮಾಣ ಸಂಸ್ಥೆ ಜಯಣ್ಣ ಕಂಬೈನ್ಸ್ ಮಾಲೀಕ ಜಯಣ್ಣ ಅವರ ನಾಗರಬಾವಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇನ್ನು ರಜನಿಕಾಂತ್, ಸಲ್ಮಾನ್ ಖಾನ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೂ ಐಟಿ ಅಧಿಕಾರಿಗಳು ಶಾಕ್ ನೀಡಿದ್ದರು. ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ನಿವಾಸವನ್ನ ಐಟಿ ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು.

ದಾಳಿ ನಂತರ ಏನಾಯಿತು?

ದಾಳಿ ನಂತರ ಏನಾಯಿತು?

ಕಳೆದ ವರ್ಷದ ಆರಂಭದಲ್ಲಿ ನಡೆದ ದೊಡ್ಡ ಮಟ್ಟದ ಐಟಿ ದಾಳಿ ಇಡೀ ಚಿತ್ರರಂಗವನ್ನು ಆತಂಕಕ್ಕೆ ನೂಕಿತ್ತು. ಮೊದಲ ಬಾರಿಗೆ ಏಕಕಾಲಕ್ಕೆ ದೊಡ್ಡ ದೊಡ್ಡ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ಐಟಿ ಅದಿಕಾರಿಗಳು ನಡೆಸಿದ ದಾಳಿ ಕನ್ನಡ ಚಿತ್ರರಂಗದಲ್ಲೆ ದೊಡ್ಡ ಮಟ್ಟದ ದಾಳಿ ಆಗಿತ್ತು. ಅಧಿಕಾರಿಗಳು ಮೂರು ನಾಲ್ಕು ದಿನಗಳು ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿ ಅಧಿಕಾರಿಗಳು ಹೊರಟುಹೋಗಿದ್ದರು. ನಂತರ ಸ್ಟಾರ್ ನಟರು ಎರಡು ಮೂರು ಬಾರಿ ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಆದರೆ ಆ ನಂತರ ಏನಾಯಿತು ಗೊತ್ತಿಲ್ಲ. ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದ ದಾಳಿ ಅಷ್ಟೆ ವೇಗವಾಗಿ ಸೈಲೆಂಟ್ ಆಯಿತು.

More from Filmibeat

English summary
One Year completed as an IT Raid on Sandalwood Stars and producers. IT Raid on Actors Shiva rajkumar, puneeth rajkumar, Sudeep, Yash and producers are rockline venkatesh, vijay kiragandur, jayannas house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X