10 ತಿಂಗಳ ಚಿತ್ರರಂಗ: ಬಿಡುಗಡೆಯಾಗಿದ್ದು 163 ಸಿನಿಮಾ, 100 ಡೇಸ್ ಆಗಿದ್ದು ಎರಡೇ ಸಿನಿಮಾ

ಜನವರಿಯಿಂದ ನವೆಂಬರ್ ಬಂದಿದೆ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ 163 ಸಿನಿಮಾಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿವೆ. ತಿಂಗಳಿಗೆ ಸುಮಾರು 16 ಸಿನಿಮಾಗಳು ಚಿತ್ರಮಂದಿರದ ಮುಂದೆ ಬಂದು ನಿಲ್ಲುತ್ತಿವೆ.

163 ಚಿತ್ರಗಳಲ್ಲಿ ಈ ಬಾರಿ ಹಿಟ್ ಆದ ಸಿನಿಮಾಗಳು ತೀರಾ ಕಡಿಮೆ. ಹಾಗೆ ನೋಡಿದರೆ, ಈ ಬಾರಿ ಕರ್ಮಷಿಯಲ್ ಸಿನಿಮಾಗಳು ಗೆದ್ದಿವೆ. ಸ್ಟಾರ್ ನಟರಲ್ಲಿ ದರ್ಶನ್ ಮಿಂಚಿದ್ದಾರೆ. ಸುದೀಪ್, ಪುನೀತ್ ಸೋಲು ಒಪ್ಪಿಕೊಂಡಿಲ್ಲ. ಶಿವರಾಜ್ ಕುಮಾರ್, ಗಣೇಶ್ ಮೂರು ಸಿನಿಮಾ ಮಾಡಿದ್ದಾರೆ. ಯಶ್, ರಕ್ಷಿತ್ ಶೆಟ್ಟಿ ಖಾತೆ ತೆರೆದಿಲ್ಲ

ಆರು ತಿಂಗಳಿನಲ್ಲಿ 99 ಸಿನಿಮಾಗಳು ರಿಲೀಸ್ ಆಗಿತ್ತು. ಕಳೆದ ನಾಲ್ಕು ತಿಂಗಳಿಗೆ 64 ಸಿನಿಮಾ ತೆರೆಗೆ ಬಂದವು. ಇವುಗಳ ಪೈಕಿ 'ಬೆಲ್ ಬಾಟಂ' ಈ ವರ್ಷದ ದೊಡ್ಡ ಹಿಟ್ ಆದ ಸಿನಿಮಾವಾಗಿದೆ. ಸಿನಿಮಾ ಹಿಟ್ ಆಗುವುದರ ಜೊತೆಗೆ ಬೇರೆ ಭಾಷೆಯಲ್ಲಿಯೂ ರಿಮೇಕ್ ಆಗುತ್ತಿದೆ.

ಅಂದಹಾಗೆ, 10 ತಿಂಗಳ ಕನ್ನಡ ಚಿತ್ರರಂಗದ ಒಂದು ಹಿನ್ನೋಟ ಹೀಗಿದೆ.

100 ದಿನ ಓಡಿದ 'ಬೆಲ್ ಬಾಟಂ' ಹಾಗೂ 'ಯಜಮಾನ'

100 ದಿನ ಓಡಿದ 'ಬೆಲ್ ಬಾಟಂ' ಹಾಗೂ 'ಯಜಮಾನ'

ನಟ ದರ್ಶನ್ ಅಭಿನಯದ 'ಯಜಮಾನ' ಹಾಗೂ ರಿಷಬ್ ಶೆಟ್ಟಿ ನಟನೆಯ 'ಬೆಲ್ ಬಾಟಂ' ನೂರು ದಿನವನ್ನು ಯಶಸ್ವಿಯಾಗಿ ಪೂರೈಸಿವೆ. 'ಕುರುಕ್ಷೇತ್ರ' ನೂರು ದಿನದ ಸನಿಹದಲ್ಲಿ ಇದ್ದರೂ, ಒಂದೇ ಒಂದು ಚಿತ್ರಮಂದಿರದಲ್ಲಿ ಪ್ರದರ್ಶನ ಆಗುತ್ತಿದೆ. 'ಬೆಲ್ ಬಾಟಂ' ಈ ವರ್ಷದ ಬೆಸ್ಟ್ ಸಿನಿಮಾವಾಗಿದೆ. ಸಿನಿಮಾದ ಹೊಸತನ, ಕಥೆಯ ಗಟ್ಟಿತನ ಎಲ್ಲವೂ ದೊಡ್ಡ ಗೆಲುವಿಗೆ ಕಾರಣವಾಗಿದೆ.

ತೃಪ್ತಿ ನೀಡಿದ ಸಿನಿಮಾಗಳು

ತೃಪ್ತಿ ನೀಡಿದ ಸಿನಿಮಾಗಳು

ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' 50 ದಿನ ಪೂರೈಸಿತು. 'ಪೈಲ್ವಾನ್' ಎಲ್ಲರಿಗೂ ಇಷ್ಟವಾಯ್ತು. 'ಕೆಮಿಸ್ಟಿ ಆಫ್ ಕರಿಯಪ್ಪ' 73 ದಿನಗಳ ಯಶಸ್ವಿ ಪ್ರದರ್ಶನ ಕಂಡಿತು. 'ಕುರುಕ್ಷೇತ್ರ' 75 ದಿನಗಳನ್ನು ದಾಟಿದೆ. ಈ ನಾಲ್ಕು ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. 'ಕೆಮಿಸ್ಟಿ ಆಫ್ ಕರಿಯಪ್ಪ' ತುಂಬ ಸಹಜವಾಗಿ ಚಿತ್ರೀಕರಣ ಮಾಡಿದ ಸಿನಿಮಾವಾಗಿದ್ದು, ಅಷ್ಟೇ ಹತ್ತಿರ ಆಯ್ತು.

ಒಳ್ಳೆಯ ಮಾತು ಪಡೆದ ಸಿನಿಮಾಗಳು

ಒಳ್ಳೆಯ ಮಾತು ಪಡೆದ ಸಿನಿಮಾಗಳು

ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಪ್ರಿಯಾಂಕಾ ಉಪೇಂದ್ರ ನಟನೆಯ 'ದೇವಕಿ', ಶಿವರಾಜ್ ಕುಮಾರ್ ನಟನೆಯ 'ಕವಚ', ಸತೀಶ್ ನೀನಾಸಂ 'ಚಂಬಲ್', ಅದಿತಿ ಪ್ರಭುದೇವ ಅಭಿನಯದ 'ರಂಗನಾಯಕಿ' ಹಾಗೂ 'ಗಂಟುಮೂಟೆ' ಸಿನಿಮಾಗೆ ಒಳ್ಳೆಯ ಮಾತುಗಳು ಕೇಳಿ ಬಂದವು. ಒಂದು ಒಳ್ಳೆಯ ವಿಷಯದ ಮೇಲೆ ಈ ಸಿನಿಮಾಗಳನ್ನು ಮಾಡಲಾಗಿತ್ತು. 'ಕವಚ' ಸಿನಿಮಾ ಶಿವರಾಜ್ ಕುಮಾರ್ ಅದ್ಭುತವಾಗಿ ನಟಿಸಿದ್ದರು.

ಗೆಲುವು ಕಡಿಮೆ, ಸೋಲೇ ಹೆಚ್ಚು

ಗೆಲುವು ಕಡಿಮೆ, ಸೋಲೇ ಹೆಚ್ಚು

ಈ ಹತ್ತು ತಿಂಗಳಿನಲ್ಲಿ ಗೆದ್ದ ಸಿನಿಮಾಗಳಿಗಿಂತ ಸೋತ ಸಿನಿಮಾಗಳೇ ಹೆಚ್ಚು. ಯೋಗರಾಜ್ ಭಟ್ ನಿರ್ದೇಶನದ 'ಪಂಚತಂತ್ರ', ಗಣೇಶ್ ನಟನೆಯ 'ಗಿಮಿಕ್', '99', 'ಗೀತಾ', ಸುನಿ ನಿರ್ದೇಶನದ 'ಬಜಾರ್, ಸೃಜನ್ ಲೋಕೇಶ್ ನಟನೆಯ 'ಎಲ್ಲಿದ್ದೆ ಇಲ್ಲಿ ತನಕ', ಕೋಮಲ್ ಅವರ 'ಕೆಂಪೇಗೌಡ 2', 'ಯಾನ', 'ಸೂಜಿದಾರ' 'ಅಮರ್' ಸಿನಿಮಾಗಳು ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತವು.

More from Filmibeat

English summary
Only 2 kannada movies completes 100 days in 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X