twitter
    For Quick Alerts
    ALLOW NOTIFICATIONS  
    For Daily Alerts

    1 ವರ್ಷದ ಚಿತ್ರರಂಗ: ಹಿಟ್ ಎಷ್ಟು? ಫ್ಲಾಫ್ ಎಷ್ಟು?

    |

    ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳು ನಿರ್ಮಾಣವಾಗುವ ಚಿತ್ರರಂಗಗಳ ಪೈಕಿ ಪ್ರಮುಖವಾಗಿರುವುದು ಕನ್ನಡ ಚಿತ್ರರಂಗ. ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ 180ಕ್ಕೂ ಹೆಚ್ಚು ಸಿನಿಮಾಗಳು ಬಂದಿವೆ.

    ಪ್ರತಿ ವಾರ ಕಡಿಮೆ ಎಂದರೂ ನಾಲ್ಕೈದು ಸಿನಿಮಾಗಳು ರಿಲೀಸ್ ಆಗಿವೆ. ಕೆಲ ಬಾರಿಯಂತೆ ಎಂಟು, ಒಂಬತ್ತು ಸಿನಿಮಾಗಳು ಒಟ್ಟೊಟ್ಟಿಗೆ ಚಿತ್ರಮಂದಿರಕ್ಕೆ ಬಂದಿವೆ. ಪರಿಣಾಮ ಸಿನಿಮಾದ ಬಿಡುಗಡೆ ಸಂಖ್ಯೆ ಹೆಚ್ಚಾಗಿದೆ.

    ವರ್ಷದ 'ಸಕ್ಸಸ್ ಫುಲ್ ನಿರ್ದೇಶಕ' ಪಟ್ಟ ಯಾರಿಗೆ ಸಿಗಬಹುದು?ವರ್ಷದ 'ಸಕ್ಸಸ್ ಫುಲ್ ನಿರ್ದೇಶಕ' ಪಟ್ಟ ಯಾರಿಗೆ ಸಿಗಬಹುದು?

    ಗೆಲುವು ಸೋಲಿನ ಲೆಕ್ಕಾಚಾರ ನೋಡಿದರೆ, ಎಂದಿನಿಂತೆ ಈ ಬಾರಿಯೂ ಸೋತ ಸಿನಿಮಾಗಳ ಸಂಖ್ಯೆಯೇ ಹೆಚ್ಚಿದೆ. ಬೆರಳೆಣಿಕೆಯಷ್ಟು ಸಿನಿಮಾಗಳು 100 ದಿನ ಪ್ರದರ್ಶನ ಆಗಿದೆ. ಈ ವರ್ಷ ಮುಗಿಯಲು ಇನ್ನು ಎರಡು ವಾರಗಳ ಸಮಯ ಇದ್ದು, ಒಂದಷ್ಟು ಸಿನಿಮಾಗಳು ಬರಬೇಕಿದೆ. ಈ ಸಾಲಿನಲ್ಲಿ 'ಅವನೇ ಶ್ರೀಮನ್ನಾರಾಯಣ', 'ದಬಾಂಗ್ 3' (ಡಬ್ಬಿಂಗ್ ಸಿನಿಮಾ) ಕೂಡ ಇವೆ.

    ಪ್ರಯೋಗಾತ್ಮಕ ಸಿನಿಮಾಗಳು, ವಿಭಿನ್ನ ಶೈಲಿಯ ಸಿನಿಮಾಗಳಿಗಿಂತ ಕಮರ್ಷಿಯಲ್ ಸಿನಿಮಾಗಳು ಈ ಬಾರಿ ಯಶಸ್ಸು ಪಡೆದಿವೆ.

    ಒಟ್ಟು ಸಿನಿಮಾಗಳ ಸಂಖ್ಯೆ 180+7

    ಒಟ್ಟು ಸಿನಿಮಾಗಳ ಸಂಖ್ಯೆ 180+7

    ಈ ವರ್ಷ ಕನ್ನಡದಲ್ಲಿ ಒಟ್ಟು 180 ಸಿನಿಮಾಗಳು ಬಿಡುಗಡೆಯಾಗಿದೆ. ಇದರ ಜೊತೆಗೆ 7 ಡಬ್ಬಿಂಗ್ ಸಿನಿಮಾಗಳು ಇವೆ. ಜನವರಿಯಿಂದ ಜೂನ್ ವರೆಗೆ 99 ಸಿನಿಮಾಗಳು ಬಂದಿತ್ತು. ಆ ನಂತರ ಜುಲೈನಿಂದ ಡಿಸೆಂಬರ್ ವರೆಗೆ 81 ಚಿತ್ರಗಳು ಬಿಡುಗಡೆಯಾಗಿವೆ. ಇನ್ನು ಎರಡು ವಾರಗಳಲ್ಲಿ 10 ರಿಂದ 12 ಸಿನಿಮಾ ಬರುವ ನಿರೀಕ್ಷೆ ಇದೆ. ಬಹು ನಿರೀಕ್ಷಿತ 'ಅವನೇ ಶ್ರೀಮನ್ನಾರಯಣ' ಚಿತ್ರ ಸಹ ಡಿಸೆಂಬರ್ 27ಕ್ಕೆ ಬರುತ್ತಿದೆ.

    100 ಡೇಸ್ ಆಗಿದ್ದು ನಾಲ್ಕೇ ಸಿನಿಮಾ

    100 ಡೇಸ್ ಆಗಿದ್ದು ನಾಲ್ಕೇ ಸಿನಿಮಾ

    ರಿ‍ಷಭ್ ಶೆಟ್ಟಿ ನಟನೆಯ 'ಬೆಲ್ ಬಾಟಂ', ದರ್ಶನ್ ಅಭಿನಯದ 'ಯಜಮಾನ', 'ಕುರುಕ್ಷೇತ್ರ', ಉಪೇಂದ್ರರ 'ಐ ಲವ್ ಯೂ' ಸಿನಿಮಾ ಈ ವರ್ಷ 100 ದಿನ ಪೂರೈಸಿದ ಸಿನಿಮಾಗಳಾಗಿವೆ. ಆದರೆ, 'ಐ ಲವ್ ಯೂ' ಹಾಗೂ 'ಕುರುಕ್ಷೇತ್ರ' ನೂರು ದಿನಕ್ಕೆ ಬರಲು ಬಾರಿ ಒದ್ದಾಟ ನಡೆಸಿದವು. ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಈ ಚಿತ್ರಗಳು 100 ಡೇಸ್ ಆಯ್ತು.

    ದರ್ಶನ್, ಸುದೀಪ್, ಶಿವಣ್ಣ, ಪುನೀತ್...ಈ ವರ್ಷ ಬಾಕ್ಸ್ ಆಫೀಸ್ 'ಕಿಂಗ್' ಯಾರು?ದರ್ಶನ್, ಸುದೀಪ್, ಶಿವಣ್ಣ, ಪುನೀತ್...ಈ ವರ್ಷ ಬಾಕ್ಸ್ ಆಫೀಸ್ 'ಕಿಂಗ್' ಯಾರು?

    50 ದಿನ ಪ್ರದರ್ಶನವಾದ ಚಿತ್ರಗಳು

    50 ದಿನ ಪ್ರದರ್ಶನವಾದ ಚಿತ್ರಗಳು

    ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' 50 ದಿನ ಪೂರೈಸಿತು. ಸುದೀಪ್ 'ಪೈಲ್ವಾನ್' ಎಲ್ಲರಿಗೂ ಇಷ್ಟವಾಯ್ತು. 'ಕೆಮಿಸ್ಟಿ ಆಫ್ ಕರಿಯಪ್ಪ' 73 ದಿನಗಳ ಯಶಸ್ವಿ ಪ್ರದರ್ಶನ ಕಂಡಿತು. ಶ್ರೀಮುರಳಿ ನಟನೆಯ 'ಭರಾಟೆ' 50 ದಿನ ಪೂರೈಸಿತು. ಈ ನಾಲ್ಕು ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. 'ಕೆಮಿಸ್ಟಿ ಆಫ್ ಕರಿಯಪ್ಪ' ತುಂಬ ಸಹಜವಾಗಿ ಚಿತ್ರೀಕರಣ ಮಾಡಿದ ಸಿನಿಮಾವಾಗಿದ್ದು, ಅಷ್ಟೇ ಹತ್ತಿರ ಆಯ್ತು.

    ಖುಷಿ ಕೊಟ್ಟ ಸಿನಿಮಾಗಳು

    ಖುಷಿ ಕೊಟ್ಟ ಸಿನಿಮಾಗಳು

    ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ', 'ಕಾಳಿದಾಸ ಕನ್ನಡ ಮೇಷ್ಟ್ರು' ಪ್ರಿಯಾಂಕಾ ಉಪೇಂದ್ರ ನಟನೆಯ 'ದೇವಕಿ', ಶಿವರಾಜ್ ಕುಮಾರ್ ನಟನೆಯ 'ಕವಚ', ಸತೀಶ್ ನೀನಾಸಂ 'ಚಂಬಲ್', ಅದಿತಿ ಪ್ರಭುದೇವ ಅಭಿನಯದ 'ರಂಗನಾಯಕಿ', ಗಿರೀಶ್ ವೈರಮುಡಿ ನಿರ್ದೇಶನದ 'ಒಂದ್ ಕಥೆ ಹೇಳ್ಲಾ' ಹಾಗೂ 'ಗಂಟುಮೂಟೆ' ಸಿನಿಮಾಗೆ ಒಳ್ಳೆಯ ಮಾತುಗಳು ಕೇಳಿ ಬಂದವು. ಒಂದು ಒಳ್ಳೆಯ ವಿಷಯದ ಮೇಲೆ ಈ ಸಿನಿಮಾಗಳನ್ನು ಮಾಡಲಾಗಿತ್ತು. 'ದೇವಕಿ' ಚಿತ್ರ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನವಾಯಿತು.

    ಈ ಸಿನಿಮಾಗಳೆಲ್ಲಾ ಯಾವಾಗ ಬಂದ್ವು.? ಹೆಸರೇ ಕೇಳಿಲ್ಲ ಚೊಂಬೇಶ್ವರ.!ಈ ಸಿನಿಮಾಗಳೆಲ್ಲಾ ಯಾವಾಗ ಬಂದ್ವು.? ಹೆಸರೇ ಕೇಳಿಲ್ಲ ಚೊಂಬೇಶ್ವರ.!

    ನಿರೀಕ್ಷೆ ಹುಟ್ಟಿಸಿ ನಿರಾಸೆ ಮಾಡಿದ ಸಿನಿಮಾಗಳು

    ನಿರೀಕ್ಷೆ ಹುಟ್ಟಿಸಿ ನಿರಾಸೆ ಮಾಡಿದ ಸಿನಿಮಾಗಳು

    ಈ ವರ್ಷ ಶೇಕಡ 85 ರಷ್ಟು ಸಿನಿಮಾಗಳು ಸೋತಿವೆ. ಯೋಗರಾಜ್ ಭಟ್ ನಿರ್ದೇಶನದ 'ಪಂಚತಂತ್ರ', ಗಣೇಶ್ ನಟನೆಯ 'ಗಿಮಿಕ್', '99', 'ಗೀತಾ', ಸುನಿ ನಿರ್ದೇಶನದ 'ಬಜಾರ್', ಸೃಜನ್ ಲೋಕೇಶ್ ನಟನೆಯ 'ಎಲ್ಲಿದ್ದೆ ಇಲ್ಲಿ ತನಕ', ಕೋಮಲ್ ಅವರ 'ಕೆಂಪೇಗೌಡ 2', 'ಯಾನ', 'ಸೂಜಿದಾರ' 'ಅಮರ್', 'ಅಧ್ಯಕ್ಷ ಇನ್ ಅಮೇರಿಕಾ', 'ಆದಿಲಕ್ಷ್ಮಿ ಪುರಾಣ' ಹೀಗೆ ಅನೇಕ ಸಿನಿಮಾಗಳು ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತವು.

    English summary
    Only 4 kannada movies completes 100 days in 2019.
    Wednesday, December 18, 2019, 10:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X