ನನ್ನ ಜೊತೆ ಮಾತಾಡೋದಿಲ್ವಾ ? ಕರೀನಾ ಕಪೂರ್‌ಗೆ ಈ ಪ್ರಶ್ನೆ ಕೇಳಿದ್ದೇಕೆ ಅಮೀರ್ ಖಾನ್ ? ಮಾಡಿದ್ದ ತಪ್ಪೇನು ?

ಯಾರ ಬದುಕಿನಲ್ಲಿ ಸೋಲು, ಗೆಲುವುಗಳಿರಲ್ಲ ಹೇಳಿ ? ಕೆಲವೊಮ್ಮೆ ಸ್ವಯಂ ಕೃತ ಅಪರಾಧಗಳು ಸೋಲಿಗೆ ಕಾರಣವಾದರೆ ಇನ್ನೂ ಕೆಲವೊಮ್ಮೆ ಅದೃಷ್ಟ ಸೋಲಿನೆಡೆಗೆ ಕರೆದೊಯ್ಯುತ್ತೆ. ಆದರೆ ಹೀಗೆ ಸೋತಾಗ ಕುಗ್ಗಬಾರದು. ಉತ್ಸಾಹ, ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬಾರದು. ಸೋಲು ಗೆಲುವಿನ ಮೆಟ್ಟಿಲು ಎನ್ನುವುದನ್ನು ಮರೆಯಬಾರದು

ಆದರೂ ಕೂಡ ಕೆಲ ಒಮ್ಮೆ ಸೋಲಿನ ಹೊಡೆತಗಳು ನಮ್ಮನ್ನು ಮಗುಚಿ ಬೀಳಿಸಿ ಹೋಗಿರುತ್ತವೆ. ಚೇತರಿಸಿಕೊಳ್ಳುವ ಮೊದಲು ಅವಮಾನ, ಯಾತನೆ ಅನುಭವಿಸಬೇಕಾಗುತ್ತೆ. ನಾನು ಹಾಗೇ ಮಾಡದೇ ಹೀಗೆ ಮಾಡಿದ್ದಿದ್ದರೆ ಗೆಲ್ಲುತ್ತಿದ್ದೆ ಎಂದು ಹಲಬುತ್ತಾರೆ. ಉದಾಹರಣೆಗೆ ಅಮೀರ್ ಖಾನ್.

our-movie-didn-t-work-you-will-still-talk-to-me-right-aamirkhan-asked-kareenakapoor-after-lsc-s-fail

ಹೌದು, ಬಹುತೇಕರಿಗೆ ಗೊತ್ತಿರುವಂತೆ ತಮ್ಮ ಪಾಡಿಗೆ ತಾವೂ ಇದ್ದು, ಕೇವಲ ಒಂದು ಚಿತ್ರದ ಮೂಲಕ ಸುದ್ದಿಯಾಗುವ ಕಲೆ ಅಮೀರ್ ಖಾನ್‌ಗಷ್ಟೇ ಗೊತ್ತು. ಯಾಕೆಂದರೆ, ಬಾಲಿವುಡ್ ಒಂದು ಸಿದ್ಧ ಮಾದರಿಯ ಹಿಂದೆ ಬಿದ್ದಾಗ ಭಿನ್ನವಾದ ಹಾದಿಯನ್ನು ತುಳಿದವರು ಅಮೀರ್ ಖಾನ್. ಕೇವಲ ಕಮರ್ಷಿಯಲ್ ಚಿತ್ರಗಳನ್ನಷ್ಟೇ ಮಾಡದೇ ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದರು. ಆ ಪೈಕಿ ಲಾಲ್ ಸಿಂಗ್ ಚಡ್ಡಾ ಕೂಡ ಒಂದು.

ಆದರೆ, ದುರಾದೃಷ್ಟ ಅಮೀರ್ ಖಾನ್ ಮಾಡಿದ್ದ ಈ ಪ್ರಯೋಗ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಚಿತ್ರ ಗೆಲ್ಲಲಿಲ್ಲ. ಗೆಲ್ಲುವುದು ದೂರದ ಮಾತು. ಚಿತ್ರವನ್ನು ಕಣ್ತುಂಬಿಕೊಂಡು ನಾಲ್ಕು ಜನ ನಾಲ್ಕೊಳ್ಳೆಯ ಮಾತುಗಳನ್ನೂ ಆಡಲಿಲ್ಲ. ಹೀಗಾಗಿಯೇ ಹೈರಾಣಾದ ಅಮೀರ್ ಖಾನ್ ಛೇ ಹೀಗಾಗಿ ಹೋಯ್ತಲ್ಲ ಎಂದು ಯೋಚನೆ ಮಾಡಲು ಶುರು ಮಾಡಿದರು.ಒಂದು ಸೋಲನ್ನೇ ಹಿಡಿದು ಜೋತಾಡತೊಡಗಿದರು. ನಿವೃತ್ತಿ ತೆಗೆದುಕೊಳ್ಳುವ ಮಾತುಗಳನ್ನೂ ಆಡಿದರು.

our-movie-didn-t-work-you-will-still-talk-to-me-right-aamirkhan-asked-kareenakapoor-after-lsc-s-fail

ಇನ್ನು ಲಾಲ್ ಸಿಂಗ್ ಚಡ್ಡಾ ಸೋಲು ಅಮೀರ್ ಖಾನ್ ಮನಸಿನ ಮೇಲೆ ಯಾವ ರೀತಿಯ ಪರಿಣಾಮ ಬೀರಿತ್ತು ಅಂದರೆ ಲಾಲ್ ಸಿಂಗ್ ಚಡ್ಡಾ ಚಿತ್ರದ ನಾಯಕಿ ಕರೀನಾ ಕಪೂರ್ ಬಳಿ ನನ್ನ ಜೊತೆ ಇನ್ಮುಂದೆ ನೀನು ಮಾತನಾಡುವುದಿಲ್ವಾ ಎಂದು ಕೇಳಿದ್ದರು. ಖುದ್ದು ಕರೀನಾ ಕಪೂರ್ ಈ ವಿಚಾರವನ್ನು ಹೇಳಿದ್ದಾರೆ.

ಹೌದು ದಿ ಹಾಲಿವುಡ್‌ ರಿಪೋರ್ಟರ್‌ಗೆ ನೀಡಿದ ರೌಂಡ್ ಟೇಬಲ್ ಸಂದರ್ಶನದಲ್ಲಿ ಮಾತನಾಡಿರುವ ಕರೀನಾ ಕಪೂರ್, ಲಾಲ್ ಸಿಂಗ್ ಚಡ್ಡಾ ನಾವೆಲ್ಲರು ಸೇರಿ ಮಾಡಿದ್ದ ಪ್ರಾಮಾಣಿಕ ಪ್ರಯತ್ನವಾಗಿತ್ತು. ಆದರೆ, ದುರಾದೃಷ್ಟ ಆ ಚಿತ್ರಕ್ಕೆ ಸಿಗಬೇಕಿದ್ದ ಪ್ರೀತಿ ಪ್ರೇಕ್ಷಕರಿಂದ ಸಿಗಲಿಲ್ಲ ಎಂದಿದ್ದಾರೆ. ಈ ಕಾರಣಕ್ಕೆ ಅಮೀರ್ ಖಾನ್ ತುಂಬಾ ನೊಂಕೊಂಡಿದ್ದರು ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ಅದೊಂದು ದಿನ ಕಾರ್ಯಕ್ರಮವೊಂದರಲ್ಲಿ ಸಿಕ್ಕಾಗ ನಮ್ಮ ಚಿತ್ರವಂತೂ ಓಡಲಿಲ್ಲ, ಮುಂಬರುವ ದಿನಗಳಲ್ಲಿ ನನ್ನ ಜೊತೆ ಮಾತನಾಡ್ತೀಯಾ ತಾನೇ ಎಂದು ಅಮೀರ್ ಖಾನ್ ನನಗೆ ಕೇಳಿದ್ದರು ಎಂದಿರುವ ಕರೀನಾ ಕಪೂರ್, ಅಮೀರ್ ಖಾನ್ ಅವರ ಈ ಮಾತು ಕೇಳಿ ರೂಪಾ ಅಂತಹ ಪಾತ್ರವನ್ನು ನನಗೆ ನೀಡಿದ್ದಕ್ಕೆ ನಾವು ಅವರಿಗೆ ಧನ್ಯವಾದ ಹೇಳಿದ್ದೆ ಎಂದಿದ್ದಾರೆ. ಸಿಂಗಂ ಅಗೇನ್ ಚಿತ್ರದ ಪಾತ್ರಕ್ಕಿಂತ ನನ್ನ ಹೃದಯಕ್ಕೆ ಲಾಲ್ ಸಿಂಗ್ ಚಡ್ಡಾ ಚಿತ್ರದ ರೂಪಾ ಪಾತ್ರ ಸದಾ ಹತ್ತಿರವಾಗಿರುತ್ತೆ ಎಂದು ಹೇಳಿದ್ದಾರೆ. ಆ ಪಾತ್ರವನ್ನು ಬರಹಗಾರ ಅದ್ವೈತ್ ಚಂದನ್ ತುಂಬಾ ಚೆನ್ನಾಗಿ ಬರೆದಿದ್ದರು, ಅದಕ್ಕೆ ಸಾಕಷ್ಟು ಅಧ್ಯಯನವನ್ನು ಮಾಡಿದ್ದರು ಎಂದಿರುವ ಕರೀನಾ ಕಪೂರ್, ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಎಲ್ಲರು ಹೃದಯದಿಂದ ಮಾಡಿದ್ದರು ಎಂದಿದ್ದಾರೆ. ಅಮೀರ್ ಖಾನ್ ಅವರ ಶ್ರದ್ಧೆ ಮತ್ತು ಶ್ರಮವನ್ನು ಕೂಡ ಕರೀನಾ ಕಪೂರ್ ಕೊಂಡಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X