Year Eneder 2024 : ಈ ವರ್ಷ ಬರಾಕ್ ಒಬಾಮಾ ಹೃದಯ ಗೆದ್ದ ಚಿತ್ರಗಳಲ್ಲಿ ಭಾರತದ ಈ ಚಿತ್ರಕ್ಕೆ ಮೊದಲ ಸ್ಥಾನ..!

ಆಸ್ಕರ್ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ. ಆಸ್ಕರ್ ಪಡೆಯುವುದು ವಿಶ್ವದ ಹಲವು ನಿರ್ದೇಶಕರ ಜೀವಮಾನದ ಆಸೆ. ಆದರೆ ಆಸ್ಕರ್ ಪ್ರಶಸ್ತಿ ದೊರೆಯುವುದು ಇರಲಿ, ಪ್ರಶಸ್ತಿಗೆ ನಾಮ ನಿರ್ದೇಶನವಾದರೆ ಸಾಕು ಸಿನಿಮಾ ಹಾಗೂ ಸಾಕ್ಷ್ಯ ಚಿತ್ರತಂಡಕ್ಕೆ ಅದು ದೊಡ್ಡ ವಿಚಾರ. ಹೀಗಾಗಿ ಭಾರತಕ್ಕೊಂದು ಆಸ್ಕರ್ ತರಬೇಕು ಅನ್ನುವ ಕನಸನ್ನ ಇಲ್ಲಿಯವರೆಗೆ ಅನೇಕರು ಕಂಡಿದ್ದಾರೆ. ಆದರೆ ಆ ಕನಸು ಇಲ್ಲಿಯವರೆಗೆ ಮರಿಚೀಕೆಯಾಗಿಯೇ ಉಳಿದಿದೆ.

ನಿಜಾ.. ಸ್ಲಂ ಡಾಗ್ ಮಿಲಿಯನೇರ್ ಚಿತ್ರಕ್ಕೆ ಆಸ್ಕರ್ ಸಿಕ್ಕಿತ್ತು. ರೆಹಮಾನ್‌ಗೆ, ಗುಲ್ಜರ್‌ಗೆ, ರಸೂಲ್ ಪೂಕುಟ್ಟಿಗೆ ಆಸ್ಕರ್ ಲಭಿಸಿತ್ತು.‌ ಆ ಕ್ಷಣಕ್ಕೆ ಖುಷಿಯನ್ನೂ ಕೊಟ್ಟಿತ್ತು. ಆದರೆ. ಗೆಲುವು ನಮ್ಮದಲ್ಲ. ತಾಂತ್ರಿಕವಾಗಿ ಆ ಸಿನಿಮಾ ಭಾರತೀಯರದ್ದಲ್ಲ. ಯಾಕೆಂದರೆ ಆ ಸಿನಿಮಾದ ನಿರ್ದೇಶಕ ಭಾರತೀಯನಲ್ಲ. ಆ ಕಾಲಕ್ಕೆ ಆ ಚಿತ್ರದ ನಿರ್ದೇಶಕ ಡ್ಯಾನಿ ಬಾಯಲ್ ಖುದ್ದು ಹೇಳಿಕೊಂಡಂತೆ ಸ್ಲಂ ಡಾಗ್ ಮಿಲಿಯನೇರ್ ಬ್ರಿಟಿಶ್ ಸಿನಿಮಾ.

Payal Kapadia s All We Imagine as Light tops Barack Obama s 2024 favorite films list

ಇನ್ನೂ ಆರ್ ಆರ್ ಆರ್ ಚಿತ್ರಕ್ಕೆ ಆಸ್ಕರ್ ಬಂತಾದರೂ ಅದು ಹಾಡಿಗಷ್ಟೇ. ಚಿತ್ರಕ್ಕಲ್ಲ. ನಿಜಾ ಇದು ಹೆಮ್ಮೆಯ ವಿಷ್ಯವೇ. ಆದರೆ ಚಿತ್ರಕ್ಕೆ ಬಂದಿದ್ದರೆ ಆ ಸಂಭ್ರಮ ಇನ್ನೂ ಹೆಚ್ಚಿರುತ್ತಿತ್ತು. ಆರ್.ಆರ್.ಆರ್ ಜೊತೆ ಕಳೆದ ವರ್ಷ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತ್ತು. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ 'ದಿ ಎಲಿಫೆಂಟ್ ವಿಸ್ಪರರ್ಸ್' ಪಾತ್ರವಾಯಿತು. ಇತಿಹಾಸವನ್ನೂ ಸೃಷ್ಟಿಸಿತು.

ಆದರೂ, ಇಲ್ಲಿಯವರೆಗೆ ಭಾರತೀಯರು ಮಾಡಿದ ಭಾರತದ ಚಿತ್ರವೊಂದಕ್ಕೆ ಅತ್ಯುತ್ತಮ ಚಿತ್ರ ಎಂಬ ಆಸ್ಕರ್ ಸಿಗಲಿಲ್ಲ ಎಂಬ ಕೊರಗು ಇದ್ದೇ ಇತ್ತು. ಈ ವರ್ಷವಾದರೂ ಆಸ್ಕರ್ ಬರಬಹುದು ಎಂಬ ನಿರೀಕ್ಷೆ ಅನೇಕರಲ್ಲಿತ್ತು. ಆದರೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಅಮೀರ್ ಖಾನ್ ನಿರ್ಮಾಣದ ಲಾಪತಾ ಲೇಡಿಸ್ ಚಿತ್ರ ನಿರಾಸೆಯನ್ನು ಮೂಡಿಸಿತು. ಆರಂಭದಲ್ಲಿಯೇ ಸ್ಫರ್ಧೆಯಿಂದ ಹೊರ ಬಿತ್ತು.

ಅಂದ್ಹಾಗೇ ಲಾಪತಾ ಲೇಡಿಸ್ ಚಿತ್ರದ ಬದಲು 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಚಿತ್ರವನ್ನು ಆಸ್ಕರ್‌ಗೆ ಕಳುಹಿಸಬೇಕಿತ್ತು ಎನ್ನುವ ಮಾತನ್ನು ಮೊದಲಿಂದ ಅನೇಕರು ಹೇಳುತ್ತಾನೇ ಬಂದಿದ್ದಾರೆ. ಆದರೆ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಗೆ ಈ ಮಾತುಗಳು ಕೇಳಿಸಲಿಲ್ಲ. ಈ ಕಾರಣಕ್ಕೆ ಲಾಪತಾ ಲೇಡಿಸ್ ಚಿತ್ರ ಹೊರ ಬಿದ್ದ ಬೆನ್ನಲ್ಲೇ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಅರ್ಹತೆ ಮತ್ತು ಯೋಗ್ಯತೆ ಇರುವ ಚಿತ್ರಗಳನ್ನು ಕಡೆಗಣಿಸುತ್ತಾ ಬಂದರೆ ಭಾರತಕ್ಕೆ ಆಸ್ಕರ್ ಬರಲು ಹೇಗೆ ಸಾಧ್ಯ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ನಡುವೆ ಈಗ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 2024ರಲ್ಲಿ ನೋಡಲೇಕಾದ ಚಿತ್ರಗಳ ಪಟ್ಟಿಯನ್ನು ಮಾಡಿದ್ದಾರೆ. ವಿಶೇಷ ಅಂದರೆ ಭಾರತದ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಚಿತ್ರಕ್ಕೆ ಒಬಾಮ ತಮ್ಮ ಈ ಪಟ್ಟಿಯಲ್ಲಿ ಮೊದಲ ಸ್ಥಾನ ನೀಡಿದ್ದಾರೆ.

ಹೀಗೆ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಬೆರಗಾಗಿಸಿದ 'ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್' ಚಿತ್ರವನ್ನು ಪಾಯಲ್ ಕಪಾಡಿಯಾ ನಿರ್ದೇಶನ ಮಾಡಿದ್ದಾರೆ. ಇನ್ನು 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್'' ಚಿತ್ರ 2024ರ ಕಾನ್ ಚಲನಚಿತ್ರೋತ್ಸವದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದೇ ವರ್ಷ ಸಿಡ್ನಿಯಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಕೂಡ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಯನ್ನು ಈ ಚಿತ್ರ ಪಡೆದಿದೆ. ಚಿಕ್ಯಾಗೋ ಇಂಟರ್‌ನ್ಯಾಷನಲ್ ಚಲನಚಿತ್ರೋತ್ಸವಕ್ಕೆ ಕೂಡ ''ಆಲ್ ವಿ ಇಮ್ಯಾಜಿನ್ ಆಸ್ ಲೈಟ್'' ಚಿತ್ರ ಆಯ್ಕೆಯಾಗಿದೆ. ಇನ್ನೂ.. ಈ ಚಿತ್ರವನ್ನು ನೋಡಿರುವ ಅಂತರಾಷ್ಟ್ರೀಯ ವಿಮರ್ಷಕರು ಈ ಚಿತ್ರಕ್ಕೆ ಮನ ಸೋತಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಪಾಯಲ್ ಕಪಾಡಿಯಾ ಚಿತ್ರವನ್ನು ಹೆಣೆದ ರೀತಿಯನ್ನೂ ಮನಸಾರೆ ಕೊಂಡಾಡಿದ್ಧಾರೆ. ಅಲ್ಲಿನ ಪ್ರೇಕ್ಷಕರು ಕೂಡ ಈ ಚಿತ್ರವನ್ನು ಕಣ್ತುಂಬಿಕೊಂಡು ಮೆಚ್ಚಿಕೊಂಡಿದ್ದಾರೆ.ಈ ಸಾಲಿಗೆ ಈಗ ಬರಾಕ್ ಒಬಾಮಾ ಕೂಡ ಸೇರಿಕೊಂಡಿದ್ದಾರೆ.

More from Filmibeat

Read more about: oscar hollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X