For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಅಪ್ಪಿಕೊಂಡ ಅಚ್ಚುಮೆಚ್ಚಿನ ಫೋಟೋಗ್ರಾಫರ್ ಸಾಧನೆ ಬಹಳ ದೊಡ್ಡದು

  |

  ''ಏನ್ ಸಾರ್, ಒಬ್ಬೊಬ್ಬರೆ ಕಾಡಿಗೆ ಹೋಗ್ತೀರಾ? ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ, ನಾವು ಬರ್ತೇವೆ'' ಎಂದು ಮೈಸೂರಿನ ಹಿರಿಯ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡ ನಟ ದರ್ಶನ್ ಹೇಳಿದ ಮಾತಿದು.

  ಭಾನುವಾರ ಮೈಸೂರಿನ ಪೊಲೀಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಟ ದರ್ಶನ್, ಫೋಟೋಗ್ರಾಫರ್ ಕಂಡು ಪ್ರೀತಿಯಿಂದ ಅಪ್ಪುಕೊಂಡು ನಗುನಗುತಾ ಮಾತನಾಡಿಸಿದರು. ಈ ವೇಳೆ ಕ್ಲಿಕ್ಕಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಬಿಂಕದಕಟ್ಟಿಯಿಂದ ಬಣ್ಣದ ಲೋಕಕ್ಕೆ, ಸ್ಟಾರ್ ಫೋಟೋಗ್ರಾಫರ್ ಪಚ್ಚಿಬಿಂಕದಕಟ್ಟಿಯಿಂದ ಬಣ್ಣದ ಲೋಕಕ್ಕೆ, ಸ್ಟಾರ್ ಫೋಟೋಗ್ರಾಫರ್ ಪಚ್ಚಿ

  ಸಾಮಾನ್ಯವಾಗಿ ಮಾಧ್ಯಮದವರು ಅಂದ್ರೆ ನಟ ದರ್ಶನ್ ದೂರ ಇರ್ತಾರೆ. ಮೀಡಿಯಾ ಕಂಡ್ರೆ ಡಿ ಬಾಸ್‌ಗೆ ಅಷ್ಟಕ್ಕಷ್ಟೇ. ಆದರೆ, ಮಾಧ್ಯಮದಲ್ಲಿ ಕೆಲಸ ಮಾಡುವ ಕೆಲವರ ಜೊತೆ ದರ್ಶನ್ ಈಗಲೂ ಬಹಳ ಆತ್ಮೀಯ ಒಡನಾಟ ಹೊಂದಿರುವ ಉದಾಹರಣೆಗಳಿವೆ. ವೃತ್ತಿಯನ್ನು ಮೀರಿ ಅವರನ್ನು ಗೌರವಾನ್ವಿತವಾಗಿ ಮಾತನಾಡ್ತಾರೆ. ಅದರಲ್ಲೂ ಮೈಸೂರು ಭಾಗದವರು ಅಂದ್ರೆ ಹೇಳಬೇಕಾ ಸ್ವಲ್ಪ ವಿಶೇಷ ಕಾಳಜಿ ಇದ್ದೇ ಇರುತ್ತೆ.

  ಅಂದ್ಹಾಗೆ, ದರ್ಶನ್ ಜೊತೆ ಕಾಣಿಸಿಕೊಂಡ ಈ ಛಾಯಾಗ್ರಾಹಕ ಯಾರು ಎಂದು ಹೇಳುವುದಾದರೇ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಫೋಟೋ ಜರ್ನಲಿಸ್ಟ್. ಕರ್ನಾಟಕ ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲಿ ಅನುರಾಗ್ ಬಸವರಾಜ್ ಹೆಸರು ಬಹಳ ದೊಡ್ಡದಿದೆ. ನಟ ದರ್ಶನ್ ಅವರಿಗೂ ವೈಲ್ಡ್ ಲೈಫ್ ಮೇಲೆ ಹೆಚ್ಚು ಆಸಕ್ತಿ ಇರುವುದರಿಂದ ಅನುರಾಗ್ ಜೊತೆ ಉತ್ತಮ ಬಾಂಧವ್ಯ ಇದೆ.

  ಹಾಗಾಗಿ, ಯಾವುದೇ ವಿಚಾರ, ವಿವಾದದ ಸಂದರ್ಭದಲ್ಲಿ ಅನುರಾಗ್ ಬಸವರಾಜ್ ಸಿಕ್ಕರೆ ನಟ ದರ್ಶನ್ ಬಹಳ ಆತ್ಮೀಯವಾಗಿ ಮಾತನಾಡುತ್ತಾರೆ. ಬಸವರಾಜ್ ಅವರು ಸಹ ಚಾಲೆಂಜಿಂಗ್ ಸ್ಟಾರ್ ಬಗ್ಗೆ ಖುಷಿ ವ್ಯಕ್ತಪಡಿಸ್ತಾರೆ. ಈ ಕುರಿತು ಫಿಲ್ಮಿಬೀಟ್ ಕನ್ನಡಗೆ ಪ್ರತಿಕ್ರಿಯಿಸಿದ ಬಸವರಾಜ್ ''ದರ್ಶನ್ ಒಬ್ಬ ಜಂಟಲ್‌ಮ್ಯಾನ್, ಅವರ ಜೊತೆ ಚೆನ್ನಾಗಿದ್ದರೆ ತುಂಬಾ ಚೆನ್ನಾಗಿ ಇರ್ತಾರೆ, ಜನರು ಜೊತೆ ಚೆನ್ನಾಗಿ ಬೆರಿತಾರೆ. ನನಗೆ ಬಹಳ ಹಳೆಯ ಪರಿಚಯ'' ಎಂದು ತಿಳಿಸಿದರು. ಮುಂದೆ ಓದಿ...

  ಜರ್ನಲಿಸಂ & ವೈಲ್ಡ್ ಲೈಫ್ ಫೋಟೋಗ್ರಫರ್

  ಜರ್ನಲಿಸಂ & ವೈಲ್ಡ್ ಲೈಫ್ ಫೋಟೋಗ್ರಫರ್

  ಪ್ರಸ್ತುತ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುರಾಗ್ ಸುಮಾರು ಮೂರುವರೆ ದಶಕದಿಂದಲೂ ಮಾಧ್ಯಮ ಹಾಗೂ ವೈಲ್ಡ್ ಲೈಫ್‌ನಲ್ಲಿ ತೊಡಗಿಕೊಂಡಿದ್ದು, ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿಯೂ ಸದಸ್ಯನಾಗಿದ್ದರು. ಅಣ್ಣಾವ್ರು ಕಿಡ್ನ್ಯಾಪ್ ಆದಾಗಲೂ ಒಬ್ಬರೇ ಕಾಡಿಗೆ ಹೋಗಿ ಸುತ್ತಾಡಿದ್ದರು. ನಾಗಪ್ಪ ಕೊಲೆಯಾದ ವಿಚಾರ ತಿಳಿದು ಕಾಡಿನಲ್ಲಿ ಅವರ ಪಾರ್ಥಿವ ಶರೀರ ಹುಡುಕಿದ್ದರು. ನಾಗರಹೊಳೆ, ಬಂಡೀಪುರ ಅರಣ್ಯದಲ್ಲಿ ಈಗಲೂ ವೈಲ್ಡ್ ಫೋಟೋಗ್ರಫಿಯಲ್ಲಿ ಬಸವರಾಜ್ ಖ್ಯಾತನಾಮರು.

  ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ

  ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ

  ಅನುರಾಗ್ ಬಸವರಾಜ್ ತೆಗೆದಿರುವ ಅನೇಕ ಫೋಟೋಗಳಿಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ. ಫೋಟೋಗ್ರಫಿಕ್ ಸೊಸೈಟಿ ಆಫ್ ಅಮೆರಿಕ (ಪಿಎಸ್‌ಎ) ಹಾಗೂ ಸ್ಯಾಮ್ ಸರ್ಕ್ಯೂಟ್ ಸಂಸ್ಥೆ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನದಲ್ಲಿ ಅನುರಾಗ್ ಬಸವರಾಜ್ ವಿವಿಧ ಭಾಗಗಳಲ್ಲಿ ಪ್ರಶಸ್ತಿಗೆ ಭಾಜನರಾದರು. ಈ ಸ್ಪರ್ಧೆಯಲ್ಲಿ 9 ಪದಕಗಳು ಹಾಗೂ 2 ಮೆರಿಟ್ ಸರ್ಟಿಫಿಕೇಟ್ ಜಯಗಳಿಸಿದ್ದರು.

  ಹಲವು ಚಿನ್ನದ ಪದಕ ಜಯಗಳಿಸಿದ್ದಾರೆ

  ಹಲವು ಚಿನ್ನದ ಪದಕ ಜಯಗಳಿಸಿದ್ದಾರೆ

  ಅದಕ್ಕೂ ಮುಂಚೆ ಪಶ್ಚಿಮ ಬಂಗಾಳ, ದೆಹಲಿ, ರಾಜಸ್ತಾನ ಹಾಗೂ ಕಲ್ಕತ್ತಾದಲ್ಲಿ ನಡೆದ ಪ್ರತ್ಯೇಕ ಸ್ಪರ್ಧೆಯಲ್ಲಿ 4 ಚಿನ್ನದ ಪದಕ ಫೋಟೋಗ್ರಫಿಕ್ ಸೊಸೈಟಿ ಆಫ್ ಅಮೆರಿಕ (ಪಿಎಸ್‌ಎ) ಹಾಗೂ 2 ಚಿನ್ನದ ಪದಕ ವೈಲ್ಡ್ ಲೈಫ್ ಫೋಟೋಗ್ರಾಫರ್ ಅಸೋಸಿಯೇಷನ್ ಆಫ್ ಇಂಡಿಯಾ (ಡಬ್ಲೂಪಿಎಐ) ಹಾಗೂ ಎಚ್‌ಎಪಿ ಇಂಟರ್ ನ್ಯಾಷನಲ್ ಸಲೂನ್ ಸಂಸ್ಥೆಯಿಂದ 1 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಬಂದಿದೆ.

  ಚಿರತೆ ದಾಳಿ ಫೋಟೋ ಸೆರೆಹಿಡಿದ ಮಾಂತ್ರಿಕ

  ಚಿರತೆ ದಾಳಿ ಫೋಟೋ ಸೆರೆಹಿಡಿದ ಮಾಂತ್ರಿಕ

  ಬಸವರಾಜ್ ಅವರು ಸೆರೆಹಿಡಿದ ಚಿರತೆ ದಾಳಿ, ಮೈಸೂರು ತಾಲೂಕಿನ ಸಿದ್ದಲಿಂಗಪುರದಲ್ಲಿ ನಡೆದ ಹಸುಗಳಿಗೆ ಕಿಚ್ಚು ಹಾಯಿಸುವುದು ಹಾಗೂ ಸ್ಮಾಲ್ ಬ್ಲೂ ಕಿಂಗ್‌ಫೀಷರ್‌ನ ಆಹಾರ ಬೇಟೆ ಚಿತ್ರಗಳು ಅಂತಾರಾಷ್ಟ್ರೀಯ ಪುರಸ್ಕಾರ ಪಡೆದಿದೆ.

  ಮೈಸೂರು ಜಿಲ್ಲೆಯ ಕೀರ್ತಿ

  ಮೈಸೂರು ಜಿಲ್ಲೆಯ ಕೀರ್ತಿ

  ಪ್ರಸ್ತುತ, ಮೈಸೂರಿನಲ್ಲಿ ಕನ್ನಡಪ್ರಭ ಪತ್ರಿಕೆಯಲ್ಲಿ ಕೆಲಸ ಮಾಡ್ತಿದ್ದಾರೆ. ಒಬ್ಬನೇ ಮಗ ಬೆಂಗಳೂರಿನಲ್ಲಿ ನ್ಯೂಸ್ ಫಸ್ಟ್ ವಾಹಿನಿಯಲ್ಲಿ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಸವರಾಜ್ ಸಾಧನೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಮೈಸೂರು ಜಿಲ್ಲೆಯ ಕನ್ನಡ ರಾಜ್ಯೋತ್ಸವ, ನಂದಿ ಪ್ರಶಸ್ತಿ, ರೋಟ್ರಿ ಸಿಲಿಕಾನ್ ಅವಾರ್ಡ್, ಬಸವಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಲಭಿಸಿವೆ.

  English summary
  Here is the Photo Journalist Anurag Basavaraj Profile, Age, Education, Awards and Achievements in kannada. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X