Megha Shetty: ಹಳ್ಳಿ ಹುಡುಗಿಯಾದ ಮೇಘಾ ಶೆಟ್ಟಿ, ಇದು ನಮ್ ಕನ್ನಡತಿ ಅಂದ್ರೆ ಎಂದ ಫ್ಯಾನ್ಸ್!

ಪ್ರತಿ ಬಾರಿ ಒಂದಲ್ಲ ಒಂದು ಫೋಟೋಶೂಟ್ ಮೂಲಕ ಸದಾ ಅಭಿಮಾನಿಗಳ ಮನ ಗೆಲ್ಲುತ್ತಿರುವ ನಟಿ ಮೇಘಾ ಶೆಟ್ಟಿ ಈ ಬಾರಿ ಲಂಗ ದಾವಣಿ ತೋಟ್ಟು ಪಕ್ಕ ಹಳ್ಳಿ ಹುಡುಗಿಯಾಗಿದ್ದಾರೆ. ಜೀ ಕನ್ನಡದ ಜೊತೆ ಜೊತೆಯಲಿ ಧಾರಾವಾಹಿಯಿಂದ ಖ್ಯಾತಿ ಗಳಿಸಿದ ನಟಿ ಮೇಘಾ ಶೆಟ್ಟಿ ಚಂದನವನ ದಾಟಿ ಬೇರೆ ಭಾಷೆಗಳಲ್ಲಿಯೂ ಬ್ಯೂಸಿಯಾಗಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ನಟಿ, ಮಾಡ್ರನ್ ಲುಕ್‌ನಲ್ಲಿ ಮಿಂಚುತ್ತಿದ್ದರು. ಆದರೆ, ಭಾನುವಾರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇದು ನಮ್ಮ ಕನ್ನಡತಿ ಅಂದ್ರೆ, ನೀವು ಯಾವಾಗಲೂ ಹೀಗೆ ಇರಿ ಎಂದು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ.

Pics: Jothe Jotheyali fame Actress Megha Shetty New Photoshoot

ಹಸಿರು ಬಣ್ಣದ ಲಂಗ ದಾವಣಿ ಉಡುಗೆಯಲ್ಲಿ ಹಚ್ಚ ಹಸಿರಿನ ಹೊಲದ ಮಧ್ಯೆ ನಿಂತಿರುವ ಮೇಘಾ ಶೆಟ್ಟಿ ಲುಕ್‌ಗೆ ಜನ ಮರುಳಾಗಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಯಾವಾಗಲೂ ಕುರ್ತಾ, ಸೀರೆ ಧರಿಸುತ್ತಾ ಇದ್ದ ಅವರು, ಸಿನಿಮಾಗೆ ಬಂದು ಮಾಡ್ರನ್ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದು ಕೆಲವರಲ್ಲಿ ಬೇಸರ ಮೂಡಿಸಿತ್ತು. ಆದರೆ, ಭಾನುವಾರ ಶೇರ್ ಮಾಡಿರುವ ಫೋಟೋಗಳಿಗೆ ಅವರ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹಸಿರು ಲಂಗ, ನೀಲಿ ದಾವಣಿಯಲ್ಲಿ ಮೇಘಾ!

ಹಸಿರು ಲಂಗ, ನೀಲಿ ದಾವಣಿ ಧರಿಸಿ, ಕಿವಿಗೆ ಜುಮುಕಿ ಹಾಕಿ, ಕುತ್ತಿಗೆಗೆ ಸರಳವಾದ ಸರ, ಕೈಗೆ ಮ್ಯಾಚಿಂಗ್ ಗಾಜಿನ ಬಳೆಗಳನ್ನು ಧರಿಸಿರುವ ಅವರು ಪಕ್ಕ ನಮ್ಮ ಮನೆಯ ಹುಡುಗಿಯಂತೆ ಕಾಣುತ್ತಿದ್ದಾರೆ. ಹಚ್ಚ ಹಸಿರಿನ ಹೊಲದ ಮಧ್ಯೆ ನಿಂತು ನಸುನಗುತ್ತಾ ಫೋಟೋಗಳಿಗೆ ಫೋಸ್ ನೀಡಿದ್ದಾರೆ.

ಫೋಟೋಗಳಿಗೆ "ಬಂಗಾರದ ಬೊಂಬೆ... ಇದು ನಮ್ ಕನ್ನಡತಿ ಅಂದ್ರೆ... ಮೇಘ ಸುಂದರಿ. ಮೇಘ ಮುದ್ದು ಮುದ್ದಾದ ಚೆಲುವೆ. ಮೇಘ ಮುದ್ದು ಮುದ್ದಾದ ಗೊಂಬೆ. ಈತರ ಬಟ್ಟೆಯಲ್ಲಿ ಮಾತ್ರ ಚೆನ್ನಾಗಿ ಕಾಣಿಸ್ತೀಯ.. ದೇವತೆಯೇ ಧರೆಗಿಳಿದು ಬಂದಂತಿದೆ, ನಿಮ್ಮ ಸೌಂದರ್ಯಕೆ ಮನವು ಸೋತು ಹೋಗಿದೆ, ಹೊಗಳಲು ಪದವು ತೋಚದಾಗಿದೆ " ಎಂಬಂತಹ ಕಾಮೆಂಟ್‌ಗಳು ಬರುತ್ತಿವೆ.

ಹಲವು ಮಂದಿ ನೀವು ಸಾಂಪ್ರದಾಯಿಕ ಉಡುಪಿನಲ್ಲಿ ಹೆಚ್ಚು ಮುದ್ದಾಗಿ ಕಾಣಿಸುತ್ತೀರ ಎಂದು ಬರೆದಿದ್ದಾರೆ. ಮತ್ತೆ ಕೆಲವರು ನೀವು ಏನೇ ಬಟ್ಟೆ ಹಾಕಿದರೂ ಚೆನ್ನಾಗಿರುತ್ತೆ ಎಂದಿದ್ದಾರೆ. ಸಿನಿಮಾ ನಟ ನಟಿಯರು ಏನೂ ಮಾಡಿದರೂ ದೊಡ್ಡ ಸುದ್ದಿ ಮತ್ತು ಯಾವ ಬಟ್ಟೆ ಹಾಕಿದರೂ ಅದಕ್ಕೆ ಕಾಮೆಂಟ್ ಮಾಡುವವರು ಇದ್ದೇ ಇರುತ್ತಾರೆ.

Pics: Jothe Jotheyali fame Actress Megha Shetty New Photoshoot

ಇನ್ನು, ಇತ್ತೀಚೆಗೆ ಮೇಘಾ ಶೆಟ್ಟಿ ಮಾಡ್ರನ್ ಬಟ್ಟೆಯಲ್ಲಿ ಸಕತ್ ಫೋಟೋಶೂಟ್ ಮಾಡಿಸಿದ್ದರು. ಆಗ ಅವರ ಹಲವು ಅಭಿಮಾನಿಗಳು ಬೇಸರ ಹೊರಹಾಕಿದ್ದರು. "ಟ್ರೆಡಿಷನಲ್ ವೇರ್ ನಲ್ಲಿ ಲಕ್ಷ್ಮಿಯಂತೆ ಕಾಣುತ್ತೀಯ.. ಇದು ನಿಜವಾಗಿಯೂ ನಿನಗೆ ಸೂಟ್ ಅಲ್ಲ. ನೀನು ನಮ್ಮ ಹುಡುಗಿ ಹಾಲಿವುಡ್ ಹೀರೋಯಿನ್ ಅಲ್ಲ.. ಎಷ್ಟೋ ನಟಿಯರು ಟ್ರೆಡಿಷನಲ್ ವೇರ್ ನಲ್ಲಿ ಸ್ಟಾರ್ ಆಗಿ ಸಕ್ಸಸ್ ಆಗಿದ್ದಾರೆ. ನೀನು ಕೂಡ ಹಾಗೆ ಆಗುತ್ತಿಯ. ಆದರೆ ಈ ರೀತಿಯ ಕಾಸ್ಟ್ಯೂಮ್ ಜೊತೆಯಲ್ಲ. ಬಹುಶಃ ಹಣ ನಿಮ್ಮನ್ನು ಹೀಗೆ ಮಾಡುತ್ತದೆ...ನೀನು ನಮ್ಮ ಹಳೆಯ ಲಕ್ಷ್ಮಿಯಂತೆ ಇರು" ಎಂದು ಹೇಳಿದ್ದರು.

ಮೇಘಾ ಶೆಟ್ಟಿ ಇತ್ತೀಚೆಗೆ ತಮ್ಮ ಪ್ಯಾನ್ ಇಂಡಿಯಾ ಮೂವಿ ಆಪರೇಷನ್ ಲಂಡನ್ ಕೆಫೆ ಮುಗಿಸಿದ್ದಾರೆ. ಸಿನಿಮಾ ಡಬ್ಬಿಂಗ್ ಹಂತದಲ್ಲಿದೆ. ಈ ಆಪರೇಷನ್ ಲಂಡನ್ ಕೆಫೆ ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸಿದೆ. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ನಟಿಸಿರುವ ಸಿನಿಮಾವು ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Jothe Jotheyali fame actress Megha Shetty new photoshoot , she looks fabulous in traditional green dress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X