ಈ ಫೋಟೊಗಳ ಹಿಂದಿನ ಕಥೆ ಗೊತ್ತಾ? ಅಂದು ಅಣ್ಣಾವ್ರಿಗಾಗಿ ಇಡೀ ಚಿತ್ರರಂಗ ಬೀದಿಗಿಳಿದಿತ್ತು!

ಖ್ಯಾತ ಸಿನಿಮಾ ತಾರೆಯರು ಅವಮಾನ ಅಪಮಾನ ಎದುರಿಸಿರುವ ದಿನಗಳಿವೆ. ನಿಂದನೆ, ಹಲ್ಲೆ ರೀತಿಯ ಸಂಕಷ್ಟ ಎದುರಿಸಿದ ಸಂದರ್ಭಗಳಿವೆ. ನಟ ಸಾರ್ವಭೌಮ, ವರನಟ ಡಾ. ರಾಜ್‌ಕುಮಾರ್ ಅವರಿಗೂ ಇದು ತಪ್ಪಲಿಲ್ಲ. ಅಂದು ಅಣ್ಣಾವ್ರು ಒಂದೇ ಒಂದು ಮಾತು ಹೇಳಿದ್ದರೆ ರಾಜ್ಯದಲ್ಲಿ ಕೋಲಾಹಲ ಉಂಟಾಗುತ್ತಿತ್ತು. ತಮಿಳು ಭಾಷಿಕರು ಸಂಕಷ್ಟಕ್ಕೆ ಸಿಲುಕುತ್ತಿದ್ದರು.

ಹೀಗೆ ಕನ್ನಡ ಸಿನಿಮಾ ತಾರೆಯರು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಕನ್ನಡಮ್ಮನಿಗೆ ದ್ರೋಹ, ಇಂದು ರಾಜ್ ನಾಳೆ? ಹೀಗೆ ಬಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ಹೊರ ಹಾಕಿದ್ದರು. ಇದು ವಿಕೋಪಕ್ಕೆ ತಿರುಗುತ್ತದೆ ಎಂದು ಗೊತ್ತಾಗಿ ಅಂದಿನ ತಮಿಳುನಾಡು ಸಿಎಂ ಎಂಜಿಆರ್ ಬಂದು ಅಣ್ಣಾವ್ರ ಕ್ಷಮೆ ಕೇಳಿದ್ದರು. ಆ ಕಹಿ ಘಟನೆ ನಡೆದಿದ್ದು 1984ರಲ್ಲಿ.

Picture Talk How a Silent Protest Shook Karnataka After the Attack on Dr Rajkumar

ಅಂದು ತಮಿಳುನಾಡಿನ ಊಟಿಯಲ್ಲಿ 'ಯಾರಿವನು' ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. 'ಕಾವೇರಿ ಏಕೆ ಓಡುವೆ' ಹಾಡಿನ ಚಿತ್ರೀಕರಣ ನಡೆಯುತ್ತಿದ್ದ ಸಮಯ. ಅಂದು ಕೆಲ ಕಿಡಿಗೇಡಿಗಳು ಚಿತ್ರೀಕರಣದ ಸೆಟ್‌ಗೆ ನುಗ್ಗಿದ್ದರು. ಡಾ. ರಾಜ್‌ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಸೈಕಲ್ ಚೈನ್ ಹಾಗೂ ರೇಜರ್ ಹಿಡಿದು ದಾಳಿ ಮಾಡಿದ್ದರು. ಕೂಡಲೇ ಚಿತ್ರತಂಡ ಸುತ್ತುವರೆದು ಅಣ್ಣಾವ್ರನ್ನು ಬೆಂಗಳೂರಿಗೆ ಕಾರಿನಲ್ಲಿ ಕಳುಹಿಸಿಕೊಟ್ಟಿದ್ದರು.

ಅಣ್ಣಾವ್ರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆದಿದೆ ಎನ್ನುವ ವಿಚಾರ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು. ಡಾ. ರಾಜ್‌ಕುಮಾರ್ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಕನ್ನಡ ಸಿನಿಮಾ ತಾರೆಯರು ಹೀಗೆ ಆಕ್ರೋಶ ಹೊರ ಹಾಕಿದ್ದರು. ಆಗ ಬೆಂಗಳೂರಿನಲ್ಲಿ ಭಾರೀ ಮಳೆ. ಅದನ್ನೆಲ್ಲಾ ಲೆಕ್ಕಿಸದೇ ಪ್ರತಿಭಟನೆಗಳು ನಡೆದವು.

Picture Talk How a Silent Protest Shook Karnataka After the Attack on Dr Rajkumar

ಕರ್ನಾಟಕದಲ್ಲಿ ನೆಲೆಸಿದ್ದ ತಮಿಳರಿಗೆ ಆಂತಕ ಶುರುವಾಗಿತ್ತು. ರಾಜ್ಯದಲ್ಲಿ ಗಲಾಟೆ ನಡೆದು ಸಮಸ್ಯೆ ಉದ್ಭವಿಸುವ ಆತಂಕ ಇತ್ತು. ಆದರೆ ಅಣ್ಣಾವ್ರ ಎಲ್ಲಾ ನೋವು ನುಂಗಿ, ಗಲಾಟೆ ಆಗಬಾರದು ಎಂದು ತಮಗೆ ಏನೂ ಆಗಲಿಲ್ಲ, ಎಲ್ಲರೂ ಸಮಾಧಾನದಿಂದ ಇರಿ ಎಂದು ಮನವಿ ಮಾಡಿದ್ದರು. ಎಂಜಿಆರ್ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರು. ಎಲ್ಲದಕ್ಕೂ ಬ್ರೇಕ್ ಹಾಕಿದ್ದರು. ಅಣ್ಣಾವ್ರ ಮೇಲೆ ಹಲ್ಲೆ ಮಾಡಿದ್ದವರ ವಿರುದ್ಧ ಕ್ರಮ ಕೈಗೊಂಡಿದ್ದರು.

ಅಣ್ಣಾವ್ರ ಬೆಂಬಲದಿಂದ ಗೋಕಾಕ್ ಚಳುವಳಿ ಯಶಸ್ವಿಯಾಗಿತ್ತು. ಆ ಬಳಿಕ ರಾಜ್ಯದಲ್ಲಿ 3 ಮತ್ತು 4ನೇ ದರ್ಜೆಯ ನೌಕಕರರಿಗೆ ಕನ್ನಡ ಕಡ್ಡಾಯ ಎನ್ನುವ ನಿಯಮವನ್ನು ರಾಮಕೃಷ್ಣ ಹೆಗಡೆ ಅದನ್ನು ತೆಗೆದು ಹಾಕಿದ್ದರು. ಹಾಗಾಗಿ ಪರಭಾಷಿಕರು ಬಂದು ಇಲ್ಲಿ ಕೆಲಸ ಮಾಡಬಹುದು ಎನ್ನುವಂತಾಗಿತ್ತು. ಇದನ್ನೆಲ್ಲಾ ನೋಡಿಕೊಂಡು ಅಣ್ಣಾವ್ರ, ಅವರ ಅಭಿಮಾನಿಗಳು ಏನು ಮಾಡುತ್ತಿದ್ದಾರೆ ಎಂದಾಗ ಬೆಂಗಳೂರು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಅದೇ ಸಮಯದಲ್ಲಿ ಎ. ಕೆ ಸುಬ್ಬಯ್ಯ ತಮಿಳುನಾಡಿನಲ್ಲಿ ಮಾತನಾಡಿ ಡಾ. ರಾಜ್‌ಕುಮಾರ್ ಹಾಗೂ ಅವರ ಹಿಂಬಾಲಕರು(ಅಭಿಮಾನಿಗಳು) ಪ್ರತಿಭಟನೆ ಮಾಡುತ್ತಿದ್ದಾರೆ. ತಮಿಳರ ಮೇಲೆ ದಬ್ಬಾಳಿಕೆ ನಡೆಸಿ ಕರ್ನಾಟಕದಲ್ಲಿ ಇರಲು ಬಿಡುತ್ತಿಲ್ಲ" ಎಂದುಬಿಟ್ಟಿದ್ದರು. ಇದೇ ಅಣ್ಣಾವ್ರ ಮೇಲಿನ ಹಲ್ಲೆಗೆ ಕಾರಣವಾಗಿತ್ತು.

ಕೊಡಗಿನ ಮೂಲದ ಎ. ಕೆ ಸುಬ್ಬಯ್ಯ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡು ಅಂದು ಕೊಟ್ಟ ಒಂದು ಹೇಳಿಕೆ ಭಾರೀ ರಾದ್ಧಾಂತಕ್ಕೆ ಕಾರಣವಾಗಿಬಿಟ್ಟಿತ್ತು. 'ಯಾರವನು' ಸಿನಿಮಾ ಬಳಿಕ ಡಾ. ರಾಜ್‌ಕುಮಾರ್ ತಮಿಳುನಾಡಿನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಹೋಗುತ್ತಿರಲಿಲ್ಲ. ಆ ಹಲ್ಲೆ ಪ್ರಕರಣ ಅವರಿಗೆ ದುಃಸ್ವಪ್ನವಾಗಿ ಕಾಡುತ್ತಿತ್ತು. ದೊರೆ- ಭಗವಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಬಾಲನಟನಾಗಿ ಪುನೀತ್ ರಾಜ್‌ಕುಮಾರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

More from Filmibeat

Read more about: rajkumar shankar nag sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X