RRR ಬಳಿಕ ರಾಧೆ ಶ್ಯಾಮ್- ವಲಿಮೈ ಪೊಸ್ಟ್ ಪೋನ್!

ಕೊರೊನಾ ಮೂರನೇ ಅಲೆಯ ಭೀತಿ ಎಲ್ಲೆಡೆ ಶುರುವಾಗಿದೆ. ಭಾರತದಾದ್ಯಂತ ಕೊರೊನಾ ಮತ್ತೆ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ದೇಶದ ಹಲವೆಡೆ ಲಾಕ್‌ ಡೌನ, ಕರ್ಫ್ಯೂ, ಜಾರಿ ಆಗುತ್ತಿದೆ. ಆದರೆ ಇದು ಎಲ್ಲಾ ರಂಗದ ಹಾಗೆ ಚಿತ್ರರಂಗದ ಮೇಲೂ ಪರಿಣಾಮ ಬೀರಿದೆ. ವರ್ಷಗಳಿಂದ ಕಾದು ಈಗ ಚಿತ್ರವನ್ನು ರಿಲೀಸ್‌ ಮಾಡಬೇಕು ಎಂದು ಯೋಜನೆ ಹಾಕೊಂಡ ಚಿತ್ರಗಳ ಪ್ಲ್ಯಾನ್ ತಲೆ ಕೆಳಗೆ ಮಾಡಿದೆ ಕೊರೊನಾ.

Recommended Video

ರಾಧೆ ಶ್ಯಾಮ್ 97 ಕಿಸ್, ಪ್ರಭಾಸ್ ಅಭಿಮಾನಿಗಳು ಶಾಕ್

ಈ ಸಂದರ್ಭದಲ್ಲಿ ಸಿನಿಮಾ ಮಂದಿ ಮುಂದೆ ಇಟ್ಟಿದ್ದ ಹೆಜ್ಜೆಯನ್ನು ಹಿಂದೆ ಇಡುತ್ತಿದ್ದಾರೆ. ಕಳೆದ ಬಾರಿ ಕೊರೊನಾದಿಂದ ಚಿತ್ರಗಳನ್ನು ರಿಲೀಸ್‌ ಮಾಡಲು ಆಗಿರಲಿಲ್ಲ. ಈಗ ಮತ್ತೆ ಅದೇ ಸ್ಥಿತಿ ಎದುರಾದಂತೆ ಇದೆ. ಯಾಕೆಂದರೆ ಈ ಬರುತ್ತಿರುವ ಬಹತೇಕ ಚಿತ್ರಗಳು ಪ್ಯಾನ್‌ ಇಂಡಿಯಾ ಚಿತ್ರಗಳು. ಹಾಗಾಗಿ ದೇಶದ ಒಂದಷ್ಟು ಭಾಗಗಳಲ್ಲಿ ಕರ್ಫ್ಯೂ ಹೇರಿದರೆ ಅದು ಚಿತ್ರದ ಕಲೆಕ್ಷನ್‌ ಮೇಲೆ ಪರಣಾಮ ಬಿರುತ್ತದೆ. ಇನ್ನು ಕೊರೊನಾ ಹೆಚ್ಚುತ್ತಿದೆ ಎಂದಾಗ ಜನ ಕೂಡ ಚಿತ್ರ ಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಾರೆ.

ಇದರಿಂದಾಗಿಯೇ RRR ಚಿತ್ರ ರಿಲೀಸ್ ಮುಂದೂಡಿದೆ. ಈಗ ಆರ್‌ಆರ್‌ಆರ್‌ ಚಿತ್ರದ ಮಾದರಿಯಲ್ಲೇ ಮತ್ತೆ ಎರಡು ಚಿತ್ರಗಳು ಅನಿರ್ಧಿಷ್ಟ ಅವಧಿಗೆ ರಿಲೀಸ್‌ ಮುಂದೂಡಿವೆ. ಬಹು ನಿರೀಕ್ಷಿತ ರಾಧೆ ಶ್ಯಾಮ್ ಮತ್ತು ವಲಿಮೈ ಎರಡು ಚಿತ್ರಗಳೂ ಕೂಡ ಈ ಪೋಸ್ಟ್ ಪೋನ್ ಆಗಿವೆ.

ಜನವರಿ 14ಕ್ಕೆ ರಿಲೀಸ್‌ ಆಗಬೇಕಿದ್ದ ರಾಧೆ ಶ್ಯಾಮ್!

ಜನವರಿ 14ಕ್ಕೆ ರಿಲೀಸ್‌ ಆಗಬೇಕಿದ್ದ ರಾಧೆ ಶ್ಯಾಮ್!

ಸಾಹೋ ಚಿತ್ರದ ಬಳಿಕ ವರ್ಷಗಳ ಅಂತರದಲ್ಲಿ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ರಿಲೀಸ್ ಆಗಲು ರೆಡಿ ಆಗಿತ್ತು. ಈ ವರ್ಷ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಜಾತ್ರೆ ಮಾಡಲು ಪ್ರಭಾಸ್ ಅಭಿಮಾನಿಗಳು ಸಜ್ಜಾಗಿದ್ದರು. ಆದರೆ ಅದಕ್ಕೆಲ್ಲಾ ಕೊರೊನಾ ತಣ್ಣೀರು ಹಾಕಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಸಲುವಾಗಿ ಚಿತ್ರದ ರಿಲೀಸ್ ಪೊಸ್ಟ್ ಪೋನ್ ಮಾಡಿದೆ ಚಿತ್ರ ತಂಡ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಅಧಿಕೃತವಾಗಿ ಪ್ರಕಟ ಮಾಡಿದೆ. ಇನ್ನು ಪೋಸ್ಟ್‌ನಲ್ಲಿ "ನಾವು ಸಾಕಷ್ಟು ಪ್ರಯತ್ನ ಪಟ್ಟೆವು, ಆದರೆ ಓಮಿಕ್ರಾನ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ದೊಡ್ಡ ಪರದೆ ಮೇಲೆ ಬರಲು, ನಾವು ಇನ್ನು ಕೆಲವು ಕಾಲ ಕಾಯಲೇ ಬೇಕು" ಎಂದು ಬರೆದಿದ್ದಾರೆ.

ಅಜಿತ್ ಅಭಿನಯದ ತಮಿಳಿನ ವಲಿಮೈ ಮುಂದೂಡಿಕೆ!

ಅಜಿತ್ ಅಭಿನಯದ ತಮಿಳಿನ ವಲಿಮೈ ಮುಂದೂಡಿಕೆ!

ಆರ್‌ಆರ್‌ಆರ್‌ ಪೋಸ್ಟ್‌ ಬಳಿಕ ರಿಲೀಸ್‌ ಆಗಬೇಕಿದ್ದ ಎರಡು ನಿರೀಕ್ಷಿತ ಚಿತ್ರಗಳು ಅಂದರೆ, ಒಂದು ರಾಧೆ ಶ್ಯಾಮ್ ಮತ್ತೊಂದು ವಲಿಮೈ, ರಾಧೆ ಶಾಮ್ ಮತ್ತು ವಲಿಮೈ ಒಂದು ದಿನದ ಅಂತರದಲ್ಲಿ ತೆರೆಗೆ ಬರಬೇಕಿತ್ತು. ರಾಧೆ ಶ್ಯಾಮ್‌ ಜನವರಿ 14ಕ್ಕೆ ರಿಲೀಸ್‌ ದಿನಾಂಕವನ್ನು ನಿಗದಿ ಮಾಡಿಕೊಂಡರೆ, ಜನವರಿ 13ಕ್ಕೆ ವಲಿಮೈ ಚಿತ್ರದ ಬಿಡುಗಡೆ ದಿನಾಂಕ ನಿಗದಿ ಆಗಿತ್ತು. ಆದರೆ ಈಗ ಎರಡೂ ಚಿತ್ರಗಳು ಕೂಡ ರಿಲೀಸ್‌ ದಿನಾಂಕವನ್ನು ಮುಂದೂಡಿವೆ.

ಸಪ್ಪೆ ಆಯ್ತು ಸಂಕ್ರಾಂತಿ ಸಿನಿಮಾ ಸಂಭ್ರಮ!

ಸಪ್ಪೆ ಆಯ್ತು ಸಂಕ್ರಾಂತಿ ಸಿನಿಮಾ ಸಂಭ್ರಮ!

ಸಂಕ್ರಾಂತಿ ಹಬ್ಬ ಅಂದರೆ ಸಿನಿಮಾ ಮಂದಿಗೆ ಸುಗ್ಗಿ ಕಾಲ ಇದ್ದ ಹಾಗೆ. ಯಾಕೆಂದರೆ ಒಂದು ಕಡೆ ಹೊಸ ವರ್ಷ ಮತ್ತೊಂದು ಕಡೆ ಹಬ್ಬದ ರಜೆ. ಹಾಗಾಗಿ ಬಹುತೇಕ ಚಿತ್ರಗಳು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ರಿಲೀಸ್ ಆಗುವುದು ಸಹಜ. ಆದರೆ ಈ ವರ್ಷ ಆರ್‌ಆರ್‌ಆರ್‌ ರಿಲೀಸ್‌ ಇದ್ದ ಕಾರಣ ಬಹುತೇಕ ಚಿತ್ರಗಳು ಮೊದಲೇ ಹಿಂದೆ ಸರಿದಿದ್ದವು. ಆದರೆ ರಾಧೆ ಶ್ಯಾಮ್ ಮತ್ತು ವಲಿಮೈ ಎರಡೂ ಚಿತ್ರಗಳು ಸಂಕ್ರಾಂತಿಗೆ ಬರಲು ಸಜ್ಜಾಗಿದ್ದವು. ಈಗ ಆ ಚಿತ್ರಗಳ ರಿಲೀಸ್ ಕೂಡ ಇಲ್ಲ. ಹಾಗಾಗಿ ಈ ಬಾರಿಯ ಸಂಕ್ರಾಂತಿ ಸಪ್ಪೆಯಾಗಿ ಇರಲಿದೆ.

ಮತ್ತೆ ಶುರುವಾಗಲಿದೆ ರಿಲೀಸ್ ಗೊಂದಲ!

ಮತ್ತೆ ಶುರುವಾಗಲಿದೆ ರಿಲೀಸ್ ಗೊಂದಲ!

ಸದ್ಯಕ್ಕೆ ದೊಡ್ಡ, ದೊಡ್ಡ ಚಿತ್ರಗಳ ರಿಲೀಸ್‌ ಪೋಸ್ಟ್ ಪೋನ್‌ ಆಗಿದೆ. ಆದರೆ ಮುಂದೆ ಮತ್ತೆ ಚಿತ್ರಗಳನ್ನು ರಿಲೀಸ್ ಮಾಡಲು ಇದೇ ಗೊಂದಲ ಉಂಟಾಗುತ್ತದೆ. ಯಾವ ಚಿತ್ರ ಮೊದಲು ರಿಲೀಸ್‌ ಆಗ್ಬೇಕು ಎನ್ನುವ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಈಗಾಗಲೆ ಆರ್ಆರ್ಆರ್ ಚಿತ್ರಕ್ಕಾಗಿ ಹಲವು ಚಿತ್ರಗಳು ದಾರಿ ಬಿಟ್ಟಿದ್ದವು. ಆದರೆ ಮತ್ತೆ ಅಂತಹ ನಿರ್ಧಾರಗಳು ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಾಗಿ ಒಂದಷ್ಟು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಕಾದಟಕ್ಕೆ ಇಳಿಯ ಬೇಕಾಗುತ್ತದೆ.

More from Filmibeat

English summary
Prabha's Radhe Shyam And Ajith's Valimai Release Postpone, Because Of Covid-19, Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X