Prabhas: ಅರೇ.. ಪ್ರಭಾಸ್ ಕೆನ್ನೆಗೆ ಹೊಡೆದು ಓಡಿ ಹೋದ ಹುಡುಗಿ.. ವಿಡಿಯೋ ವೈರಲ್

By ಫಿಲ್ಮಿಬೀಟ್ ಡೆಸ್ಕ್

ಬಾಹುಬಲಿ ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ದರ್ಬಾರ್ ನಡೆಸುತ್ತಿದ್ದಾರೆ. ಇತ್ತೀಚೆಗೆ ಯಂಗ್ ರೆಬಲ್ ಸ್ಟಾರ್ ನಟನೆಯ ಯಾವುದೇ ಸಿನಿಮಾ ಗೆಲ್ಲುತ್ತಿಲ್ಲ. ಹಾಗಂತ ಪ್ರಭಾಸ್ ಕ್ರೇಜ್ ಕಮ್ಮಿ ಆಗ್ತಿಲ್ಲ. ಸಿನಿಮಾ ಚೆನ್ನಾಗಿ ಇಲ್ಲದೇ ಇದ್ದರೂ ಪ್ರಭಾಸ್ ಹೆಸರಿನಿಂದಲೇ ಒಳ್ಳೆ ಕಲೆಕ್ಷನ್ ಮಾಡ್ತಿದೆ.

ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಪ್ರಭಾಸ್ ನಟಿಸಿದ್ದಾರೆ. ಡಿಸೆಂಬರ್ 22ಕ್ಕೆ ಸಿನಿಮಾ ವಿಶ್ವದಾದ್ಯಂತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ. ಶೀಘ್ರದಲ್ಲೇ ಸಿನಿಮಾ ಪ್ರಚಾರ ಶುರುವಾಗಲಿದೆ. ಇತ್ತೀಚೆಗೆ ಪ್ರಭಾಸ್ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿ ಕಾಲಿಗೆ ಶಸ್ತ್ರಚಿಕಿತ್ಸೆ ನಡೀತು ಎನ್ನಲಾಗ್ತಿದೆ.

Lady-fan-slaps-prabhas

'ಕಲ್ಕಿ 2898 AD' ಹಾಗೂ 'ರಾಜಾ ಡೀಲಕ್ಸ್' ಸಿನಿಮಾಗಳಲ್ಲಿ ಪ್ರಭಾಸ್ ಸದ್ಯ ಬಣ್ಣ ಹಚ್ಚಿದ್ದಾರೆ. ಮತ್ತೊಂದು ಸಿನಿಮಾ ಮಾತುಕತೆ ಹಂತದಲ್ಲಿದೆ. ಇನ್ನು 'ಸಲಾರ್' ಸಿನಿಮಾ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿರೋದು ವಿಶೇಷ. ಟಾಲಿವುಡ್ ಯಂಗ್ ರೆಬಲ್ ಸ್ಟಾರ್‌ಗೆ ದೇಶ ವಿದೇಶದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ನೆಚ್ಚಿನ ನಟನಿಗಾಗಿ ದೇವಸ್ಥಾನ ಕಟ್ಟಲು ಸಿದ್ಧರಿರುವ ಅಭಿಮಾನಿಗಳಿದ್ದಾರೆ. ಈ ಮೋಸ್ಟ್ ಎಲಿಜಬಲ್ ಬ್ಯಾಚುಲರ್‌ಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಕೂಡ ಜಾಸ್ತಿ ಇದೆ.

ನೆಚ್ಚಿನ ನಟ ಅಥವಾ ನಟಿಯನ್ನು ನೋಡಿದಾಗ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನು ಕೆಲವೊಮ್ಮೆ ನೋಡಿದ್ದೇವೆ. ಕೆಲವರು ಅಚ್ಚರಿಯಿಂದ ಕೇಕೆ ಹಾಕಿ ಸಂಭ್ರಮಿಸುತ್ತಾರೆ. ಮತ್ತೆ ಕೆಲವರು ಕಣ್ಣೀರು ಹಾಕಿರುವುದು ಇದೆ. ಕೆಲವರು ನೆಚ್ಚಿನ ನಟ, ನಟಿಯರನ್ನು ತಬ್ಬಿ ಭಾವುಕರಾಗುತ್ತಾರೆ. ತಮ್ಮ ಆರಾಧ್ಯದೈವವನ್ನು ನೋಡಿದಾಗ ಎಂತಹವರಿಗೂ ಸಂತಸವಾಗುತ್ತದೆ. ಆ ಸಮಯದಲ್ಲಿ ಅವರು ಏನು ಮಾಡ್ತಾರೆ ಅನ್ನೋದನ್ನು ಹೇಳೋಕೆ ಸಾಧ್ಯವಿಲ್ಲ.

ಅದೇ ಇಲ್ಲೊಬ್ಬ ಮಹಿಳಾ ಅಭಿಮಾನಿ ತನ್ನ ನೆಚ್ಚಿನ ನಟ ಪ್ರಭಾಸ್‌ನ ನೋಡಿ ಫೋಟೊ ಕ್ಲಿಕ್ಕಿಸಿಕೊಂಡು ಸಂತೋಷದಲ್ಲಿ ಆತನ ಕೆನ್ನೆಗೆ ಹೊಡೆದು ಓಡಿ ಹೋಗಿದ್ದಾಳೆ. ಏರ್‌ಪೋರ್ಟ್‌ನಲ್ಲಿ ಮಹಿಳಾ ಅಭಿಮಾನಿಯೊಬ್ಬಳು ಪ್ರಭಾಸ್‌ನ ನೋಡಿ ಖುಷಿಯಾಗಿ ಸಂಭ್ರಮಿಸಿದ್ದಾಳೆ. ಡಾರ್ಲಿಂಗ್ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾಳೆ. ಬಳಿಕ ಪ್ರಭಾಸ್ ಜೊತೆ ಮಾತನಾಡುತ್ತಾ ಬಂದ ಆಕೆ ಕೆನ್ನೆಗೆ ಹೊಡೆದು ಖುಷಿಯಿಂದ ಓಡಿ ಹೋಗಿದ್ದಾಳೆ. ಕೆಲವರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ.

ಅರೇ ಈ ಹುಡುಗಿ ಏನು ಈ ರೀತಿ ಮಾಡಿಬಿಟ್ಲು. ಸ್ಟಾರ್ ನಟನಿಗೆ ಹೀಗೆ ಅಭಿಮಾನಿ ಒಬ್ಬರು ಹೋಗಿ ಕೆನ್ನೆಗೆ ಒಡೆದು ಬರ್ತಾರಾ? ಎಂದುಕೊಂಡಿದ್ದಾರೆ. ಆದರೆ ಆಕೆ ತಾನು ನೋಡ್ತಿರೋದ ನಿಜಾನಾ? ಅಂತ ಪ್ರಭಾಸ್‌ನ ಮುಟ್ಟಿ ನಿಜವೇ ಎಂದು ಭಾವಿಸಿ ಅಲ್ಲಿಂದ ಹೊರಟು ಹೋಗಿದ್ದಾಳೆ. ಸಂತೋಷದಲ್ಲಿ ಆಕೆ ಹೀಗೆ ಮಾಡಿದ್ಲು ಅಷ್ಟೆ. ಬೇರೆ ಏನು ಇಲ್ಲ ಎಂದು ಅಭಿಮಾನಿಗಳು ಸುಮ್ಮನಾಗಿದ್ದಾರೆ.

Lady-fan-slaps-prabhas

ಅಂದಹಾಗೆ ಇದು ಇತ್ತೀಚೆಗೆ ನಡೆದ ಘಟನೆ ಕೂಡ ಅಲ್ಲ. 4 ವರ್ಷಗಳ ಹಿಂದೆ ಏರ್‌ಪೋರ್ಟ್‌ನಲ್ಲಿ ನಡೆದಿದ್ದ ಘಟನೆ. ಆ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.'ಸಲಾರ್' ವಿಚಾರಕ್ಕೆ ಬಂದರೆ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ 3 ತಿಂಗಳು ಮುಂದಕ್ಕೆ ಹೋಗಿದೆ.

ಗ್ರಾಫಿಕ್ಸ್ ವರ್ಕ್ ತಡವಾಗುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗ್ತಿದೆ. ಪ್ರಶಾಂತ್ ನೀಲ್ ಯಾವುದೇ ವಿಚಾರದಲ್ಲೂ ರಾಜಿಯಾಗಲು ಸಿದ್ಧರಿಲ್ಲ. ಬಹಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಕಾರಣಾಂತರಗಳಿಂದ ತೆರೆಗೆ ಬರೋದು ತಡವಾಗುತ್ತಿದೆ. ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಹೊಂಬಾಳೆ ಸಂಸ್ಥೆ ಘೋಷಿಸಿದೆ. ಈ ಬಾರಿ ಆದರೂ ಹೇಳಿದ ದಿನವೇ ರಿಲೀಸ್ ಆಗುತ್ತಾ ಕಾದು ನೋಡಬೇಕಿದೆ. ಇನ್ನು ಅದೇ ದಿನ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ರಿಲೀಸ್ ಆಗೋದು ಪಕ್ಕಾ ಆಗಿದೆ.

More from Filmibeat

English summary
Prabhas lady fan slaps actor after taking photo with him
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X