For Quick Alerts
  ALLOW NOTIFICATIONS  
  For Daily Alerts

  ಮನೆ ಪತ್ರ ಅಡ ಇಟ್ಟು 'ಲವ್ ಗುರು' ಮಾಡಿದ್ರು ಪ್ರಶಾಂತ್ ರಾಜ್!

  |

  ಪ್ರಶಾಂತ್ ರಾಜ್ ನಿರ್ದೇಶನದ 'ಲವ್ ಗುರು' ಸಿನಿಮಾ 2009ರಲ್ಲಿ ತೆರೆಕಂಡಿತ್ತು. ಇದು ಪ್ರಶಾಂತ್ ಡೈರೆಕ್ಟ್ ಮಾಡಿದ ಚೊಚ್ಚಲ ಸಿನಿಮಾ. ಆಗಷ್ಟೇ 'ಮೊಗ್ಗಿನ ಮನಸು' ಸಿನಿಮಾ ಮಾಡಿದ್ದ ರಾಧಿಕಾ ಪಂಡಿತ್ ಕೈಗೆತ್ತಿಕೊಂಡಿದ್ದ ಎರಡನೇ ಚಿತ್ರ. 'ಗೆಳೆಯ' ಖ್ಯಾತಿಯ ತರುಣ್ ಚಂದ್ರ ನಾಯಕರಾಗಿದ್ದ ಸಿನಿಮಾ.

  DIRECTOR'S DIARY : ನನ್ ಫ್ರೆಂಡ್ಸ್ ರಜನಿಕಾಂತ್ ಬಗ್ಗೆ ಹೇಳ್ತಿದ್ರು ನಾನು ರಾಜಕುಮಾರ್ ಬಗ್ಗೆ ಹೇಳ್ತಿದ್ದೆ| Part 1

  2009ರಲ್ಲಿ ದೊಡ್ಡ ಹಿಟ್ ಆದ ಈ ಚಿತ್ರದ ನಿರ್ದೇಶನಕ್ಕಾಗಿ ಪ್ರಶಾಂತ್ ರಾಜ್‌ಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಫಿಲಂ ಫೇರ್ ಪ್ರಶಸ್ತಿ ಸಹ ಲಭಿಸಿದೆ. ಚೊಚ್ಚಲ ಸಿನಿಮಾದಲ್ಲೇ ಯಶಸ್ಸು ಕಂಡ ಪ್ರಶಾಂತ್ ರಾಜ್ ಈ ಚಿತ್ರಕ್ಕಾಗಿ ತನ್ನ ಮನೆಯ ಪತ್ರ ಅಡಮಾನ ಇಟ್ಟು ದುಡ್ಡು ತಂದಿದ್ದರು ಎನ್ನುವುದನ್ನು 'ಫಿಲ್ಮಿಬೀಟ್ ಡೈರೆಕ್ಟರ್ ಡೈರಿ'ಯಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿ...

  ಚೊಚ್ಚಲ ಚಿತ್ರಕ್ಕೆ ನಿರ್ಮಾಪಕರು ಸಿಕ್ಕಿಲ್ಲ

  ಚೊಚ್ಚಲ ಚಿತ್ರಕ್ಕೆ ನಿರ್ಮಾಪಕರು ಸಿಕ್ಕಿಲ್ಲ

  ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಪ್ರಶಾಂತ್ ರಾಜ್ ಸಿನಿಮಾ ಮಾಡಬೇಕೆಂದಾಗ ನಿರ್ಮಾಪಕರು ಸಿಕ್ಕಿಲ್ಲ. ಪರಿಚಯ ಇಲ್ಲ, ಸಿನಿಮಾ ಮಾಡಿಲ್ಲ ಎಂಬ ಕಾರಣಕ್ಕೆ ಯಾವ ನಿರ್ಮಾಪಕನೂ ಮುಂದೆ ಬರ್ತಿಲ್ಲ. ಕೊನೆಗೆ ತಮ್ಮ ಸಹೋದರ ನವೀನ್ ಅವರೇ ಸಿನಿಮಾ ಮಾಡಲು ಕೈ ಜೋಡಿಸಿದರು. ಕೆಲವರನ್ನು ಪಾಟ್ನರ್ ಮಾಡಿಕೊಂಡು ಪ್ರಾಜೆಕ್ಟ್ ಆರಂಭಿಸಿದರು. ಸಿನಿಮಾ ಶುರುವಾಗುವುದಕ್ಕೆ ಒಂದು ವಾರದ ಮುಂಚೆ ಈ ಚಿತ್ರ ನಾವು ಮಾಡಲ್ಲ, ನಮ್ಮ ಹಣ ವಾಪಸ್ ಕೊಡಿ ಎಂದು ತಕರಾರು ತೆಗೆದರಂತೆ. ಇದರಿಂದ ನಿರಾಸೆಗೆ ಒಳಗಾದ ಪ್ರಶಾಂತ್ ರಾಜ್ ಕೊನೆಗೆ ತಮ್ಮ ಮನೆಯ ಪತ್ರವನ್ನು 10 ಲಕ್ಷಕ್ಕೆ ಅಡ ಇಟ್ಟು ದುಡ್ಡು ತಂದು ಕೊಟ್ಟು ಸಿನಿಮಾ ಆರಂಭಿಸಿದ್ದರಂತೆ.

  'ಅಯೋಗ್ಯ' ಮುಹೂರ್ತದ ಹಿಂದಿನ ದಿನ ನಡೆದ ಆ ಘಟನೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೊಂದಿದ್ದರಂತೆ!'ಅಯೋಗ್ಯ' ಮುಹೂರ್ತದ ಹಿಂದಿನ ದಿನ ನಡೆದ ಆ ಘಟನೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೊಂದಿದ್ದರಂತೆ!

  ಗಣೇಶ್ ಜೊತೆ ಮಾಡಬೇಕೆಂಬ ಆಸೆ ಈಡೇರಲಿಲ್ಲ

  ಗಣೇಶ್ ಜೊತೆ ಮಾಡಬೇಕೆಂಬ ಆಸೆ ಈಡೇರಲಿಲ್ಲ

  ಮೊದಲ ಚಿತ್ರವನ್ನು ಗಣೇಶ್ ಜೊತೆ ಮಾಡಬೇಕೆಂಬ ಆಸೆ ಹೊಂದಿದ್ದ ಪ್ರಶಾಂತ್ ರಾಜ್, ಅವರನ್ನು ಭೇಟಿ ಮಾಡಿ ಸಿನಿಮಾ ಕುರಿತು ಚರ್ಚಿಸಲು ಸಾಧ್ಯವಾಗಲಿಲ್ಲ. ಮುಂಗಾರುಮಳೆ ಯಶಸ್ಸಿನ ಬಳಿಕ ಗಣೇಶ್ ಬ್ಯುಸಿ ಇದ್ದ ಕಾರಣ ಸಿಕ್ಕಿರಲಿಲ್ಲ. ನಂತರ ಗೆಳೆಯ ಸಿನಿಮಾ ನೋಡಿ ತರುಣ್ ಚಂದ್ರ ಅವರನ್ನು ಮೆಚ್ಚಿಕೊಂಡ ಪ್ರಶಾಂತ್ ಅವರನ್ನು ಆಯ್ಕೆ ಮಾಡಿಕೊಂಡರು.

  ರಾಧಿಕಾ ಮೊದಲು ಒಪ್ಪಲಿಲ್ಲ

  ರಾಧಿಕಾ ಮೊದಲು ಒಪ್ಪಲಿಲ್ಲ

  'ಮೊಗ್ಗಿನ ಮನಸು' ಪಾತ್ರ ನೋಡಿ ಮೆಚ್ಚಿಕೊಂಡಿದ್ದ ಪ್ರಶಾಂತ್ ರಾಜ್, ರಾಧಿಕಾ ಪಂಡಿತ್ ಅವರನ್ನ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ಆದ್ರೆ, ಆರಂಭದಲ್ಲಿ ರಾಧಿಕಾ ಒಪ್ಪಲಿಲ್ಲ. ನಂತರ, ಅವರ ಮನವೊಲಿಸಿ ಕಥೆ ವಿವರಿಸಿದರು. ಕಥೆ ಕೇಳಿದ ಬಳಿಕ ಲವ್ ಗುರು ಚಿತ್ರಕ್ಕೆ ಓಕೆ ಎಂದರು.

  2 ವರ್ಷ ಸ್ಟಾರ್ ನಟನ ಮನೆ ಅಲೆದಾಡಿದ ಮಹೇಶ್, ನಟ ಒಪ್ಪಿದ್ರು, ಕುಟುಂಬದವರು ಬೇಡ ಎಂದ್ರು!2 ವರ್ಷ ಸ್ಟಾರ್ ನಟನ ಮನೆ ಅಲೆದಾಡಿದ ಮಹೇಶ್, ನಟ ಒಪ್ಪಿದ್ರು, ಕುಟುಂಬದವರು ಬೇಡ ಎಂದ್ರು!

  ಕಾರ್ಮಿಕರಿಗೆ ಸಂಬಳ ಕೊಡಲು ಕಷ್ಟ ಆಗ್ತಿತ್ತು

  ಕಾರ್ಮಿಕರಿಗೆ ಸಂಬಳ ಕೊಡಲು ಕಷ್ಟ ಆಗ್ತಿತ್ತು

  ಎಲ್ಲರಿಗೂ ಅಡ್ವಾನ್ಸ್ ನೀಡಿ ಕೆಲಸ ಆರಂಭವಾಗಿದೆ. ಶೂಟಿಂಗ್ ನಡೆಯುತ್ತಿದೆ. ಎಷ್ಟೋ ಸಲ ಕಾರ್ಮಿಕರಿಗೆ ಸಂಬಳ ನೀಡಲಾಗದೆ, ರಾತ್ರಿ ಸಹ ಚಿತ್ರೀಕರಣ ಮುಂದುವರಿಸಿರುವುದು ಉಂಟು ಎಂದು ಪ್ರಶಾಂತ್ ಹೇಳಿಕೊಂಡಿದ್ದಾರೆ. ಹೇಗೋ ಕಷ್ಟ ಪಟ್ಟು ಸಿನಿಮಾ ಮುಗಿಸಿ ರಿಲೀಸ್ ವರೆಗೂ ಬಂತು. ಸಿನಿಮಾ ಬಿಡುಗಡೆ ಆಯ್ತು, ಲಾಭನೂ ಮಾಡ್ತು ಎಂದು ಖುಷಿ ಹಂಚಿಕೊಂಡಿದ್ದಾರೆ.

  English summary
  Kannada director Prashant Raj shares his first movie 'Love Guru' experience with Filmibeat kannada director dairy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X