twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ ಮೇಲೆ ನಂಬಿಕೆ ಇಟ್ಟ ನಿರ್ಮಾಪಕ ಕೊಟ್ಟ ಸಂಭಾವನೆ ಎಷ್ಟು.?

    |

    ''ಏನು 'ವಾಲಿ' ಸಿನಿಮಾ ಮಾಡ್ತಿದ್ದೀರಾ.? ಅದಕ್ಕೆ 'ಸ್ಪರ್ಶ' ಹೀರೋ ಫಿಕ್ಸ್ ಆಗಿದ್ದಾರಾ.? ಅವರು ಒಳ್ಳೆ ಮಾಡೆಲ್ ತರಹ ಇದ್ದಾರೆ. ಅವರ ಕೈಯಲ್ಲಿ ಆಗಲ್ಲ ಬಿಡಿ'' - ಹೀಗಂತ ಹಲವು ಮಂದಿ ಕನ್ನಡದ 'ವಾಲಿ' ಚಿತ್ರದ ಆರಂಭದಲ್ಲೇ ನಿರ್ಮಾಪಕ ರಮೇಶ್ ಯಾದವ್ ಗೆ ಬೈದಿದ್ರಂತೆ.

    ಯಾರು ಏನೇ ಹೇಳಿದರೂ, ಯಾವುದನ್ನೂ ರಮೇಶ್ ಯಾದವ್ ಕಿವಿಗೆ ಹಾಕಿಕೊಂಡಿರಲಿಲ್ಲ. ಕಾರಣ, ಸುದೀಪ್ ಪ್ರತಿಭೆ ಬಗ್ಗೆ ರಮೇಶ್ ಯಾದವ್ ಗೆ ಅಪಾರವಾದ ನಂಬಿಕೆ ಇತ್ತು. ಅದಾಗಲೇ ಇನ್ನೂ ಬಿಡುಗಡೆ ಆಗಿರದ 'ಹುಚ್ಚ' ಚಿತ್ರದ ಕೆಲ ಸನ್ನಿವೇಶಗಳನ್ನು ರಮೇಶ್ ಯಾದವ್ ವೀಕ್ಷಿಸಿದ್ದರು. ಹೀಗಾಗಿ, ಕನ್ನಡದ 'ವಾಲಿ' ಚಿತ್ರಕ್ಕೆ ಸುದೀಪ್ ಖಂಡಿತ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ನಿರ್ಮಾಪಕ ರಮೇಶ್ ಯಾದವ್ ರವರಲ್ಲಿತ್ತು.

    ಅಂದ್ಹಾಗೆ, ಸುದೀಪ್ ನಾಯಕನಾಗಿ ಅಭಿನಯಿಸಿದ ಮೂರನೇ ಚಿತ್ರ 'ವಾಲಿ'. ತಮಿಳಿನ 'ವಾಲಿ' ಚಿತ್ರವನ್ನು ನೋಡಿ, ಅದರ ರೀಮೇಕ್ ರೈಟ್ಸ್ ತಂದಿದ್ದ ಸುದೀಪ್ ಜೊತೆ ಕೈಜೋಡಿಸಿದವರು ನಿರ್ಮಾಪಕ ರಮೇಶ್ ಯಾದವ್ ಮತ್ತು ಎಸ್.ಮಹೇಂದರ್.

    'ವಾಲಿ' ಚಿತ್ರದಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಶೇಡ್ ಇರುವ ಡಬಲ್ ಆಕ್ಟಿಂಗ್ ಮಾಡಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಸುದೀಪ್ ಯಶಸ್ವಿ ಆದರು. ಆ ಮೂಲಕ 'ವಾಲಿ' ಶುರುವಾಗುವ ಮುನ್ನ ಆಡಿಕೊಂಡು ನಕ್ಕವರ ಬಾಯಿಗೆ ಸುದೀಪ್ ಬೀಗ ಜಡಿದರು.

    ಚಿತ್ರರಂಗಕ್ಕೆ ಸುದೀಪ್ ಕಾಲಿಟ್ಟು 25 ವರ್ಷಗಳು ತುಂಬಿದ ಸಂದರ್ಭದಲ್ಲಿ, ಕಿಚ್ಚ ಡಬಲ್ ಆಕ್ಟಿಂಗ್ ಮಾಡಿದ್ದ 'ವಾಲಿ' ಚಿತ್ರದ ಬಗ್ಗೆ ನಿರ್ಮಾಪಕ ರಮೇಶ್ ಯಾದವ್ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಹಂಚಿಕೊಂಡಿರುವ ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ, ಓದಿರಿ...

    'ವಾಲಿ' ಚಿತ್ರಕ್ಕಾಗಿ ಸುದೀಪ್ ಗೆ ಸಿಕ್ಕ ಸಂಭಾವನೆ ಎಷ್ಟು.?

    'ವಾಲಿ' ಚಿತ್ರಕ್ಕಾಗಿ ಸುದೀಪ್ ಗೆ ಸಿಕ್ಕ ಸಂಭಾವನೆ ಎಷ್ಟು.?

    2-3 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾದ 'ವಾಲಿ' ಚಿತ್ರಕ್ಕಾಗಿ ಕಿಚ್ಚ ಸುದೀಪ್ ಏಳು ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದರಂತೆ. ಹಾಗಂತ ಸ್ವತಃ ರಮೇಶ್ ಯಾದವ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ತಿಳಿಸಿದ್ದಾರೆ.

    'ಈ' ಸಿನಿಮಾ ಸುದೀಪ್ ಗೆ ಎಷ್ಟು ಇಷ್ಟ ಅಂದ್ರೆ, ಪ್ರಿಂಟ್ ಹಾಕಿಸಿ ಮನೆಯಲ್ಲಿ ಇಟ್ಟುಕೊಂಡಿದ್ದಾರೆ.!'ಈ' ಸಿನಿಮಾ ಸುದೀಪ್ ಗೆ ಎಷ್ಟು ಇಷ್ಟ ಅಂದ್ರೆ, ಪ್ರಿಂಟ್ ಹಾಕಿಸಿ ಮನೆಯಲ್ಲಿ ಇಟ್ಟುಕೊಂಡಿದ್ದಾರೆ.!

    ಕಥೆ ಹುಡುಕುತ್ತಿದ್ರಂತೆ ರಮೇಶ್ ಯಾದವ್.!

    ಕಥೆ ಹುಡುಕುತ್ತಿದ್ರಂತೆ ರಮೇಶ್ ಯಾದವ್.!

    ''ಸ್ಪರ್ಶ', 'ಹುಚ್ಚ' ಆದ್ಮೇಲೆ ಸುದೀಪ್ ಜೊತೆಗೆ ಒಂದು ಸಿನಿಮಾ ಮಾಡಬೇಕು ಅಂತ ನಾನು ಕಥೆ ಹುಡುಕುತ್ತಿದ್ದೆ. ಅಷ್ಟೊತ್ತಿಗೆ ಸುದೀಪ್ ಬಳಿ 'ವಾಲಿ' ರೀಮೇಕ್ ರೈಟ್ಸ್ ಇತ್ತು. 'ವಾಲಿ ಚಿತ್ರವನ್ನೇ ಮಾಡೋಣ ಅಂತ ಡಿಸೈಡ್ ಮಾಡಿದ್ವಿ'' - ರಮೇಶ್ ಯಾದವ್, ನಿರ್ಮಾಪಕ

    ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿ ಸುದೀಪ್: ಹೃದಯ ತುಂಬಿ ಮಾತಾಡಿದ ನಿರ್ದೇಶಕರುಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿ ಸುದೀಪ್: ಹೃದಯ ತುಂಬಿ ಮಾತಾಡಿದ ನಿರ್ದೇಶಕರು

    ನಿರ್ಮಾಪಕರಿಗೆ ಬೈಗುಳ.!

    ನಿರ್ಮಾಪಕರಿಗೆ ಬೈಗುಳ.!

    ''ಸುದೀಪ್ ಗೆ 'ವಾಲಿ' ಮೂರನೇ ಸಿನಿಮಾ. ಮೂರನೇ ಚಿತ್ರಕ್ಕೆ ಡಬಲ್ ಆಕ್ಟಿಂಗ್ ಮಾಡುವುದು ತುಂಬಾ ಕಷ್ಟ. ಸುದೀಪ್ ಒಳ್ಳೆ ಮಾಡೆಲ್ ತರಹ ಇದ್ದಾರೆ. ಹೀಗಾಗಿ, ಅವರ ಕೈಯಲ್ಲಿ 'ವಾಲಿ' ಚಿತ್ರ ಹೇಗೆ ಮಾಡಲು ಸಾಧ್ಯ ಅಂತ ಹಲವರು ನನಗೆ ಬೈದಿದ್ದರು. ಸುದೀಪ್ ಕೈಯಲ್ಲಿ ಆಗಲ್ಲ ಅಂತ ಕೆಲವರು ನನಗೆ ಹೇಳಿದ್ದರು. ಆದ್ರೆ, ಸುದೀಪ್ ಗಿರುವ ಟ್ಯಾಲೆಂಟ್ ಬಗ್ಗೆ ನನಗೆ ಗೊತ್ತಿತ್ತು'' ಅಂತಾರೆ ರಮೇಶ್ ಯಾದವ್.

    'ಹುಚ್ಚ' ಚಿತ್ರ ವೀಕ್ಷಿಸಿದ್ದೆ.!

    'ಹುಚ್ಚ' ಚಿತ್ರ ವೀಕ್ಷಿಸಿದ್ದೆ.!

    ''ಹುಚ್ಚ' ಡಬ್ಬಿಂಗ್ ನಡೆಯುತ್ತಿರುವಾಗ, ಅದರ ಒಂದು ರೀಲ್ ನ ಸುದೀಪ್ ನನಗೆ ತೋರಿಸಿದ್ದರು. ಅದರಲ್ಲಿ ಸುದೀಪ್ ಆಕ್ಟಿಂಗ್ ನೋಡಿದ್ಮೇಲೆ, 'ವಾಲಿ' ಚಿತ್ರಕ್ಕೆ ಇವರೇ ಬೆಸ್ಟ್ ಅಂತ ನಾನು ಡಿಸೈಡ್ ಮಾಡಿಬಿಟ್ಟೆ. ಎಸ್.ಮಹೇಂದರ್ ಡೈರೆಕ್ಟರ್ ಆದರು'' - ರಮೇಶ್ ಯಾದವ್, ನಿರ್ಮಾಪಕ

    ದೊಡ್ಡ ಹೀರೋ ಆಗುತ್ತಾರೆ ಎಂಬ ನಂಬಿಕೆ ಇತ್ತು.!

    ದೊಡ್ಡ ಹೀರೋ ಆಗುತ್ತಾರೆ ಎಂಬ ನಂಬಿಕೆ ಇತ್ತು.!

    ''ವಾಲಿ' ರೀಮೇಕ್ ಆಗಿದ್ರಿಂದ, ಅಲ್ಲಿನ ಮ್ಯೂಸಿಕ್ ಟ್ರ್ಯಾಕ್ ಗಳನ್ನೇ ಇಲ್ಲಿ ಬಳಸಿಕೊಂಡ್ವಿ. ಅಲ್ಲಿನ ಗಾಯಕರೇ ಇಲ್ಲೂ ಹಾಡಿದರು. ಫೀಲ್ ಒಂದೇ ಇರಲಿ ಅಂತ ಗಾಯಕರನ್ನೂ ನಾನು ಚೇಂಜ್ ಮಾಡಲಿಲ್ಲ. ಸಾಂಗ್ ರೆಕಾರ್ಡಿಂಗ್ ನ ರವಿ ಸರ್ ಮನೆಯಲ್ಲಿರುವ ಸ್ಟುಡಿಯೋದಲ್ಲೇ ಮಾಡಿದ್ವಿ. ಸಾಂಗ್ ರೆಕಾರ್ಡಿಂಗ್ ಮಾಡುವಾಗಲೂ ಸ್ಟುಡಿಯೋಗೆ ಸುದೀಪ್ ಬರುತ್ತಿದ್ದರು. ಪ್ರತಿಯೊಂದರಲ್ಲೂ ಸುದೀಪ್ ಇನ್ವಾಲ್ವ್ ಆಗುತ್ತಿದ್ದರು. ಹೀಗಾಗಿ, ಸುದೀಪ್ ದೊಡ್ಡ ಹೀರೋ ಆಗುತ್ತಾರೆ ಅನ್ನೋದು ನಮಗೆ ಆಗಲೇ ಗೊತ್ತಿತ್ತು'' - ರಮೇಶ್ ಯಾದವ್, ನಿರ್ಮಾಪಕ

    ಸುದೀಪ್ ಗೆ ಮದುವೆ ಫಿಕ್ಸ್ ಆಗಿತ್ತು.!

    ಸುದೀಪ್ ಗೆ ಮದುವೆ ಫಿಕ್ಸ್ ಆಗಿತ್ತು.!

    ''ವಾಲಿ' ಚಿತ್ರದ ಪೂಜೆ ಕಂಠೀರವ ಸ್ಟುಡಿಯೋದಲ್ಲಿ ಮಾಡಿದ್ವಿ. ಪೂಜೆ ದಿನವೇ ಎರಡು ಸೀನ್ ಶೂಟ್ ಮಾಡಿದ್ವಿ. ಅಂದು ಪ್ರೆಸ್ ಮೀಟ್ ನಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿಬಿಟ್ವಿ. ಅಷ್ಟೊತ್ತಿಗೆ ಸುದೀಪ್ ಗೆ ಮದುವೆ ಫಿಕ್ಸ್ ಆಗಿತ್ತು. 'ವಾಲಿ' ಚಿತ್ರದ ಪೂಜೆಗೂ, ಅವರ ಮದುವೆಗೂ 82 ದಿನಗಳ ಗ್ಯಾಪ್ ಇತ್ತು. ಹೀಗಾಗಿ, ಸುದೀಪ್ ಮದುವೆ ದಿನವೇ 'ವಾಲಿ' ರಿಲೀಸ್ ಅಂತ ಘೋಷಿಸಿಬಿಟ್ವಿ'' - ರಮೇಶ್ ಯಾದವ್, ನಿರ್ಮಾಪಕ

    ಸುದೀಪ್ ಮದುವೆಗೆ ಗಿಫ್ಟ್

    ಸುದೀಪ್ ಮದುವೆಗೆ ಗಿಫ್ಟ್

    ''ಆಡಿದ ಮಾತಿನಂತೆ ಸುದೀಪ್ ಮದುವೆ ದಿನವೇ 'ವಾಲಿ' ಚಿತ್ರವನ್ನು ರಿಲೀಸ್ ಮಾಡಿದ್ವಿ. ಸುದೀಪ್, ನಿರ್ದೇಶಕ ಎಸ್.ಮಹೇಂದರ್, ಕೋ-ಡೈರೆಕ್ಟರ್ ಎಂ.ಡಿ.ಶ್ರೀಧರ್.. ಎಲ್ಲರೂ ಸಹಕಾರ ಕೊಟ್ಟರು. 72 ದಿನಗಳಿಗೆ ಫಸ್ಟ್ ಕಾಪಿ ಬಂತು, ಸೆನ್ಸಾರ್ ಮಾಡಿಸಿ, 82ನೇ ದಿನಕ್ಕೆ 'ವಾಲಿ' ರಿಲೀಸ್ ಮಾಡಿದ್ವಿ. ಬೆಳಗ್ಗೆ 'ವಾಲಿ' ಚಿತ್ರವನ್ನ ನೋಡಿಕೊಂಡು, ಸಂಜೆ ಸುದೀಪ್ ಆರತಕ್ಷತೆಗೆ ಹೋಗಿದ್ದೆ'' ಅಂತಾರೆ ರಮೇಶ್ ಯಾದವ್.

    ರಿಲೀಸ್ ಗೂ ಮೊದಲೇ ಸೋಲ್ಡ್ ಔಟ್

    ರಿಲೀಸ್ ಗೂ ಮೊದಲೇ ಸೋಲ್ಡ್ ಔಟ್

    ''ವಾಲಿ' ಚಿತ್ರ ರಿಲೀಸ್ ಗೂ ಮೊದಲೇ ಆಲ್ ಏರಿಯಾ ಸೋಲ್ಡ್ ಔಟ್ ಆಗಿತ್ತು. 50 ಡೇಸ್ ಸಿನಿಮಾ ಚೆನ್ನಾಗಿ ಓಡ್ತು. ನನಗೆ ಲಾಭ ಬಂತು. ವಿತರಕರಿಗೂ ಲಾಭ ಆಯ್ತು'' ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ನಿರ್ಮಾಪಕ ರಮೇಶ್ ಯಾದವ್.

    English summary
    Producer Ramesh Yadav reveals Interesting facts about Kannada Movie Vaali.
    Thursday, February 20, 2020, 18:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X