ನಟಿ ಸೌಂದರ್ಯ ಅಷ್ಟು ಬೇಗ ಸಾಯುತ್ತಾರೆ ಎಂದು ತಂದೆಗೆ ಮೊದ್ಲೆ ಗೊತ್ತಿತ್ತಾ? ಆಕೆಯ ಜಾತಕದಲ್ಲಿ ಏನಿತ್ತು?
ಪಕ್ಕದ ಮನೆ ಹುಡ್ಗಿಯಂತೆ ತಮ್ಮ ಮುಗ್ಧ ನಗು ಹಾಗೂ ಸಹಜ ಸೌಂದರ್ಯದಿಂದ ಮೋಡಿ ಮಾಡಿದ್ದ ನಟಿ ಸೌಂದರ್ಯ. ಸೌತ್ ಸಿನಿದುನಿಯಾದಲ್ಲಿ ದಶಕದ ಕಾಲ ಅಗ್ರಸ್ಥಾನದಲ್ಲಿ ಮೆರೆದ ನಟಿ ಚಿಕ್ಕ ವಯಸ್ಸಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ಆಕೆ ಅಗಲಿ 19 ವರ್ಷ ಕಳೆದಿದೆ. ಸೌಂದರ್ಯ ದಿಢೀರ್ ಕಣ್ಮರೆ ಆಗ್ತಾರೆ ಅಂತ ತಂದೆಗೆ ಮೊದಲೇ ಗೊತ್ತಿತ್ತಾ?
2004ರ ಏಪ್ರಿಲ್ 17ರಂದು ಚುನಾವಣೆಗೆ ಹೊರಟಿದ್ದ ವೇಳೆ ಹೆಲಿಕಾಪ್ಟರ್ ದುರಂತದಲ್ಲಿ ನಟಿ ಸೌಂದರ್ಯ ಕೊನೆಯುಸಿರೆಳೆದಿದ್ದರು. ಚಿತ್ರರಂಗಕ್ಕೆ ಎಷ್ಟೋ ಜನ ನಟಿಯರು ಬರ್ತಿರ್ತಾರೆ. ಹೋಗ್ತಿರ್ತಾರೆ. ಆದರೆ ಕೆಲವರು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸುತ್ತಾರೆ. ಅಂತಹ ನಟಿಯರಲ್ಲಿ ಸೌಂದರ್ಯ ಕೂಡ ಒಬ್ಬರು. ಇವತ್ತಿಗೂ ಆಕೆಯನ್ನು ಸಿನಿರಸಿಕರು ಮರೆತ್ತಿಲ್ಲ. ಸೌಂದರ್ಯ 19ನೇ ವರ್ಷದ ಪುಣ್ಯಸ್ಮರಣೆಯ ವೇಳೆ ಆಕೆಯ ಕುರಿತ ಇಂಟ್ರೆಸ್ಟಿಂಗ್ ಸಂಗತಿ ವೈರಲ್ ಆಗ್ತಿದೆ. ತೆಲುಗು ನಿರ್ಮಾಪಕ, ನಿರ್ದೇಶಕ ಚಿಟ್ಟಿಬಾಬು ಸಂದರ್ಶನದ ವಿಡಿಯೋ ವೈರಲ್ ಆಗ್ತಿದೆ.

ಅದಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಸೌಂದರ್ಯ ಅವರನ್ನು ಚಿಟ್ಟಿಬಾಬು ತಮ್ಮ 'ರೈತು ಭಾರತಂ' ಚಿತ್ರದ ಪಾತ್ರವೊಂದಕ್ಕೆ ಆಯ್ಕೆ ಮಾಡಿದ್ದರು. ಈ ಸಿನಿಮಾ ಚರ್ಚೆ ವೇಳೆ ಸೌಂದರ್ಯ ಅವರ ತಂದೆ ಸತ್ಯನಾರಾಯಣ ಬಿಚ್ಚಿಟ್ಟ ಶಾಕಿಂಗ್ ಸಂಗತಿಯನ್ನು ಹೇಳಿದ್ದಾರೆ. ಸೌಂದರ್ಯ ಅವರ ತಂದೆ ಕನ್ನಡದ ಕೆಲ ಸಿನಿಮಾಗಳಿಗೆ ಬರಹಗಾರರಾಗಿ, ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಅವರು ಜಾತಕವನ್ನು ಬಹಳ ನಂಬುತ್ತಿದ್ದರು. ಸೌಂದರ್ಯ ಅಗಲಿಕೆಯನ್ನು ಅವರು ಮೊದಲೇ ಊಹಿಸಿದ್ದರು ಎಂದು ಚಿಟ್ಟಿಬಾಬು ಹೇಳಿಕೊಂಡಿದ್ದರು.
"ರೈತು ಭಾರತಂ ಚಿತ್ರದಲ್ಲಿ 3 ಜನ ನಾಯಕರು. ಭಾನುಚಂದರ್ ಪಕ್ಕ ಒಬ್ಬ ನಟಿ ಬೇಕಾಗಿತ್ತು. ಹೊಸ ನಟಿಯನ್ನು ಆಯ್ಕೆ ಮಾಡಿಕೊಳ್ಳೋಣ ಎಂದುಕೊಂಡೆ. ಮೊದಲಿಗೆ ರೋಜಾನ ಸೆಲೆಕ್ಟ್ ಮಾಡೋಣ ಎಂದುಕೊಂಡೆ. ಅಷ್ಟರಲ್ಲೇ ಯಾರೋ ಒಬ್ಬರು ನೀವು ಹೊಸ ನಟಿಗಾಗಿ ಹುಡುಕಾಡುತ್ತಿದ್ದೀರಾ? ಒಬ್ಬ ಹುಡುಗಿ ಇದ್ದಾಳೆ ಅಂದರು. ಸರಿ ಅಂತ ಅವರ ಮನೆಗೆ ನಾನು ಹೋಗಿ ನೋಡಿದೆ. ಆಕೆ ಸೌಂದರ್ಯ. ನಾನು ಊಹಿಸಿದ ಪಾತ್ರಕ್ಕೆ ಆಯ್ಕೆಯೇ ಸೂಕ್ತ ಎಂದು ಅನಿಸಿತು. ಆಕೆಯನ್ನು ಆಕೆಯನ್ನು ಆಯ್ಕೆ ಮಾಡಿದೆ"

"ಪಾತ್ರಕ್ಕೆ ಸೌಂದರ್ಯ ಸೂಕ್ತ ಎಂದು ನಿರ್ಧರಿಸಿದ ಮೇಲೆ ಅವರ ತಂದೆ ಜೊತೆ ಮಾತನಾಡಿ ಅಗ್ರಿಮೆಂಟ್ ಮಾಡಿಕೊಂಡೆ. 25 ಸಾವಿರ ರೂ. ಸಂಭಾವನೆ. 5 ಸಾವಿರ ಮುಂಗಡ ಅಡ್ವಾನ್ಸ್ ನೀಡಿ ಅಗ್ರಿಮೆಂಟ್ ಮಾಡಿಕೊಂಡೆವು. ಸತತ 3 ಸಿನಿಮಾ ಮಾಡುವಂತೆಯೂ ಅಗ್ರಿಮೆಂಟ್ ಆಯಿತು. ಅವರ ತಂದೆ ಆ ದಿನ ಹೇಳಿದ್ರು. ಇವತ್ತು ನೀವು ನಾಳಿನ ಅಗ್ರನಟಿಗೆ ಅಡ್ವಾನ್ಸ್ ಕೊಟ್ಟಿದ್ದೀರಾ ಅಂದ್ರು. ನನಗೆ ಆಶ್ಚರ್ಯ ಆಯಿತು. ಇದೇನು ಈ ರೀತಿ ಹೇಳ್ತೀರಾ ಅಂತ. ಹೌದು ಸರ್ ನನ್ನ ಚಿತ್ರದಲ್ಲಿ ನಟಿಸುವವರು ದೊಡ್ಡಮಟ್ಟಕ್ಕೆ ಬೆಳೆಯಬೇಕು ಎಂದು ಕೋರಿಕೊಳ್ಳುತ್ತೇನೆ ಎಂದೆ"
"ಬರೀ ನನ್ನ ಮಗಳು ಎನ್ನುವ ಪ್ರೀತಿಯಿಂದ ನಾನು ಈ ಮಾತು ಹೇಳುತ್ತಿಲ್ಲ. ನನ್ನ ಮಗಳ ಜಾತಕ ಆ ರೀತಿ ಇದೆ. ಆಕೆಯ ಜಾತಕದ ಪ್ರಕಾರ 10 ರಿಂದ 12 ವರ್ಷ ಚಿತ್ರರಂಗದಲ್ಲಿ ರಾಣಿಯಂತೆ ಮೆರೆಯುತ್ತಾಳೆ. ಎಲ್ಲಾ ಸ್ಟಾರ್‌ಗಳ ಜೊತೆ ನಟಿಸುತ್ತಾಳೆ. ಅಗ್ರಸ್ಥಾನಕ್ಕೆ ಏರುತ್ತಾಳೆ. ಆ ನಂತರ ಚಿತ್ರರಂಗದಲ್ಲಿ ಇರಲ್ಲ ಅಂದ್ರು. ಇಂಡಸ್ಟ್ರಿಯಲ್ಲಿ ಇರಲ್ಲ ಅಂದ್ರು. ಸಾಯುತ್ತಾಳೆ ಎನ್ನಲಿಲ್ಲ. ನಾನು ಮದುವೆಯಾಗಿ ಚಿತ್ರರಂಗದಿಂದ ದೂರಾಗಬಹುದು ಎಂದುಕೊಂಡೆ"

"ಸತ್ಯ ನಾರಾಯಣ ಅವರು ಹೇಳಿದಂತೆ ಸೌಂದರ್ಯ ಸ್ಟಾರ್ ನಟಿಯಾದರು. ಚಿರಂಜೀವಿ, ರಜನಿಕಾಂತ್, ಅಮಿತಾಬ್ ಬಚ್ಚನ್‌ರಂತಹ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿದರು. ಕೊನೆಗೆ ಮದುವೆ ಫಿಕ್ಸ್ ಆಯಿತು. ನಾನು ಮದುವೆಗೆ ಹೋಗಿದ್ದೆ. ಆಕೆ ಜೊತೆ ಮಾತನಾಡುತ್ತಾ ಏನಮ್ಮ ನಿಮ್ಮ ತಂದೆ ಹೇಳಿದಂತೆ ಸ್ಟಾರ್ ನಟಿಯಾದೆ. ಈಗ ಮದುವೆ ಆಗ್ತಿದ್ದೀಯಾ ಇನ್ಮುಂದೆ ಸಿನಿಮಾ ಬಿಟ್ಟು ಪರ್ಸನಲ್ ಲೈಫ್‌ನಲ್ಲಿ ಬ್ಯುಸಿ ಆಗ್ತೀಯಾ ಅಲ್ವಾ ಎಂದೆ. ಅದಕ್ಕೆ ಆಕೆ ಅಯ್ಯೋ ಅಂಕಲ್ ನಾನು ಬಿಡ್ತೀನಿ ಅಂದರು ಚಿತ್ರರಂಗ ನನ್ನನ್ನು ಬಿಡುತ್ತಾ? ನಾನು ಸಾಯುವವರೆಗೂ ನಟಿಸ್ತಾನೆ ಇರ್ತೀನಿ ಎಂದಳು. ಆಕೆ ಹೇಳಿದಂತೆ ಮದುವೆ ಆದಮೇಲೂ ನಟಿಸಿದಳು. ಕೊನೆಗೆ ಆ ರೀತಿ ಅಗಲಿ ಹೊರಟು ಬಿಟ್ಟಳು" ಎಂದು ಚಿಟ್ಟಿಬಾಬು ಹೇಳಿದ್ದರು.


Click it and Unblock the Notifications











