"ನಾನ್ ನೋಡಿರೋ ದುಡ್ಡು ದರ್ಶನ್ ನೋಡಿಲ್ಲ, ದುಡ್ಡು ಕೊಟ್ಟು ಕುಣಿಸಿದ್ದೀನಿ, ಪುಗ್ಸಟ್ಟೆ ಅಲ್ಲ"; ಉಮಾಪತಿ

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿಬರುತ್ತಿದ್ದಂತೆ ಪರ ವಿರೋಧ ಚರ್ಚೆ ಶುರುವಾಯಿತು. ಇವತ್ತಿಗೂ ನಿಂತಿಲ್ಲ. ಕೆಲ ಅಭಿಮಾನಿಗಳು ದರ್ಶನ್ ಪರ ನಿಂತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎಂದು ಚಿತ್ರರಂಗದಲ್ಲೇ ಕೆಲವರು ಹೇಳುತ್ತಿದ್ದಾರೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೇಳಿಕೆಗಳು ಸಖತ್ ವೈರಲ್ ಆಗುತ್ತಿದೆ. ದರ್ಶನ್ ನಟನೆಯ 'ರಾಬರ್ಟ್' ಚಿತ್ರವನ್ನು ಅವರು ನಿರ್ಮಿಸಿದ್ದರು. ಮತ್ತೊಂದು ಚಿತ್ರ್ಲೂ ಕೈ ಹಾಕಿದ್ದರು. ಅಷ್ಟರಲ್ಲೇ ಏನೋ ಸಮಸ್ಯೆಯಾಗಿ ಇಬ್ಬರೂ ದೂರಾದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದಾರೆ. ಸಾಕಷ್ಟು ಮಾಧ್ಯಮಗಳಿಗೆ ಈ ಬಗ್ಗೆ ಉಮಾಪತಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ.

Producer Umapathy Srinivas Strong Counter To Actor Darshan and his fans

ದರ್ಶನ್ ಹೆಸರೇಳಿಕೊಂಡು ಉಮಾಪತಿ ಸುಖಾಸುಮ್ಮನೆ ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಕಾಮೆಂಟ್ಸ್ ಸಹ ಬರುತ್ತಿದೆ. ಈ ಬಗ್ಗೆ ಸ್ವತಃ ಉಮಾಪತಿ ತಿರುಗೇಟು ನೀಡಿದ್ದಾರೆ. ಜೀ ಕನ್ನಡ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ಲ್ಯಾಂಬೋರ್ಗಿನಿ ಕಾರ್ ಖರೀದಿಸಲು ನಾನು ಹಣ ಕೊಟ್ಟಿಲ್ಲ. ನಾನು ದರ್ಶನ್ ಅವರಿಗೆ ಸಿನಿಮಾ ಸಂಭಾವನೆ ಹಣ ಕೊಡಬೇಕಿತ್ತು. ಆ ಹಣವನ್ನೇ ಅವರು ಕಾರ್ ಕೊಂಡುಕೊಳ್ಳುವ ಸಮಯದಲ್ಲಿ ಕೊಟ್ಟಿದ್ದೆ" ಎಂದಿದ್ದಾರೆ.

"ನಮ್ಮ ಮನೆಯ ಪಕ್ಕದಲ್ಲೇ 2 ಲ್ಯಾಂಬೊರ್ಗಿನಿ ಕಾರ್ ತೆಗೆದುಕೊಳ್ಳುವಷ್ಟು ಬೆಲೆ ಬಾಳುವ ಜಾಗವಿದೆ. ಅಲ್ಲಿ ನಾನು ಕೋಳಿ ಸಾಕುತ್ತಿದ್ದೇನೆ. ಮನೆಯಲ್ಲಿ ಮಕ್ಕಳಿಗೆ ನಾಟಿ ಕೋಳಿ ಮೊಟ್ಟೆ ಬೇಕು ಎನ್ನುವ ಕಾರಣಕ್ಕೆ ಸಾಕುತ್ತಿದ್ದೇನೆ. ಅರ್ಥ ಮಾಡಿಕೊಳ್ಳಿ. ಅಷ್ಟು ಜಾಗವನ್ನು ಈ ರೀತಿ ಬಳಸುತ್ತಿದ್ದೇನೆ. ಶ್ರೀಮಂತಿಕೆ ತೋರಿಸಿಕೊಂಡು ಓಡಾಡುವುದಕ್ಕೆ ಅಲ್ಲ. ಯಾರೋ ತೋರಿಸಿಕೊಳ್ಳುತ್ತಾರೆ. ನಮಗೆ ಅದರ ಅವಶ್ಯಕತೆ ಇಲ್ಲ."

Producer Umapathy Srinivas Strong Counter To Actor Darshan and his fans

"ನಾನು ದರ್ಶನ್ ಅವರ ಹೆಸರೇಳಿಕೊಂಡು ಉಮಾಪತಿ ಹೆಸರು ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಸುಳ್ಳು. ನಾನು ಅವಾಗ ನೋಡಿರುವ ದುಡ್ಡು ದರ್ಶನ್ ಇವತ್ತಿಗೂ ನೋಡಿಲ್ಲ. ಆಮಟ್ಟಿಗೆ ದುಡ್ಡು ನೋಡ್ಕೊಂಡು ಅಂತಹ ಕುಟುಂಬದಲ್ಲಿ ಹುಟ್ಟಿರುವುದು. ಈಗ ನಾವಿರುವ ಜಾಗ ಒಂದೂವರೆ ಎಕರೆ. ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಒಂದು ಚದರಡಿ 45 ಸಾವಿರ. ರೆಸಿಡೆಂಶಿಯಲ್ ಅಂದ್ರೆ 30 ಸಾವಿರ. ಒಂದೂವರೆ ಎಕರೆಗೆ ಎಷ್ಟಾಯ್ತು. ಈ ಸುತ್ತಾ ಮುತ್ತಾ ನಮ್ಮದು ಎಷ್ಟು ಎಕರೆ ಇದೆ. ನಾವು ಅವರೆಸರೆಳಿಕೊಂಡು ಬದುಕುವುದಲ್ಲ. ಅವ್ರು ನಮ್ಮ ಹೆಸರೇಳಿಕೊಂಡು ಅನ್ನ ತಿಂತಿದ್ದಾರೆ."

"ನಾನು ದುಡ್ಡು ಕೊಟ್ಟು ಸಿನಿಮಾ ಮಾಡಿದ್ದೀನಿ, ಪುಗ್ಸಟ್ಟೆ ಯಾವುದು ಮಾಡಿಲ್ಲ. ದುಡ್ಡು ಕೊಟ್ಟಿದ್ದೀನಿ ಆಕ್ಟ್ ಮಾಡ್ಸಿಕೊಂಡಿದ್ದೀನಿ, ದುಡ್ಡು ಕೊಟ್ಟಿದ್ದೀನಿ ಕುಣಿಸಿದ್ದೀನಿ, ಫ್ರೀಯಾಗಿ ಏನು ಮಾಡಿಸಿಕೊಂಡಿಲ್ಲ. ನನ್ನ ಕಾರ್ಯಕ್ರಮಕ್ಕೂ ಕರೆದಿಲ್ಲ. ನಮ್ಮ ಮನೆ ಕಾರ್ಯಕ್ರಮಕ್ಕೆ ಯಾವ ನಟರನ್ನು ಕರೆಯುವುದಿಲ್ಲ. ಚಿಕ್ಕಣ್ಣ ನಮ್ಮ ಕುಟುಂಬಕ್ಕೆ ಆಪ್ತರು. ಅವರನ್ನು ಮಾತ್ರ ಕರೆಯುತ್ತೇನೆ. ಇನ್ನು ಯಾರನ್ನೂ ಕರೆಯುವುದಿಲ್ಲ" ಎಂದು ಉಮಾಪತಿ ವಿವರಿಸಿದ್ದಾರೆ.

"ಮಲ್ಲತ್ತಳ್ಳಿಯಲ್ಲಿ ಇವರದ್ದೇ ಒಂದು ಜಾಗಕ್ಕೆ ಕಾಂಪೌಂಡ್ ಹಾಕಿಸೋಕೆ ಆಗಿರಲಿಲ್ಲ. ಅಲ್ಲಿಗೆ ಹೋಗಲು ಬಿಟ್ಟಿರಲಿಲ್ಲ. ಇವರ ಅಭಿಮಾನಿಗಳು ಮುಂದೆನಿಂತು ಕಾಂಪೌಂಡ್ ಹಾಕಿಸಬೇಕಿತ್ತಲ್ಲ. ನಾನು ಮುಂದೆ ನಿಂತು ಹಾಕಿಸಿಕೊಟ್ಟೆ. ನಾನು ಎಲ್ಲೋ ನೋಡ್ದೆ. ಇವರಿಲ್ಲ ಅಂದ್ರೆ ಟಿಆರ್‌ಪಿ ಇಲ್ಲ ಅಂತ. ಅಯ್ಯೋ ಇವರು ಬಾಯಿಯಲ್ಲಿರೋ ಕಪ್ಪೆಗಳಲ್ಲ, ಮೋರಿಯಲ್ಲಿರೋ ಕಪ್ಪೆಗಳು. ಇಂಥದ್ದಕ್ಕೆಲ್ಲಾ ತಲೆ ಕೆಡೆಸಿಕೊಳ್ಳಬಾರದು" ಎಂದಿದ್ದಾರೆ.

"ಬಲಾಢ್ಯರ ತಂಟೆಗೆ ಈ ವ್ಯಕ್ತಿ ಹೋಗಲ್ಲ. ಬರೀ ಬಾಯಿಮಾತು ಅಷ್ಟೆ, ಈಗ ದುಡುಕಿ ಮಾಡಿರುವುದು ಕೂಡ ಅಮಾಯಕನ ಮೇಲೆ. ಅವರ ಬಳಿಕ ಪರವಾನಗಿ ಗನ್ ಇದೆ. ನಾವು ಬಂಡೆಯಲ್ಲಿ ಡೈನಮೇಟ್ ಇಟ್ಟು ಬ್ಲಾಸ್ಟ್ ಮಾಡುವವರು. ಎಷ್ಟೋ ಸಲ ಪ್ರಾಣ ಕಳೆದುಕೊಳ್ಳುವಂತಹ ಸಮಯದಲ್ಲಿ ದೇವರು ನಮ್ಮನ್ನು ಕಾಪಾಡಿದ್ದಾನೆ. ಅಂಥದ್ದಕ್ಕೆ ಹೆದರಲಿಲ್ಲ. ಈ ದಾರಿಲೀ ಹೋಗುವ ದಾಸಪ್ಪನಿಗೆ ಹೆದರುತ್ತೇನಾ" ಎಂದಿದ್ದರು.

More from Filmibeat

English summary
Umapathy Srinivas takes dig at actor darshan;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X