twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಾರ್ ನಟರು ಕಡಿಮೆ ಚಿತ್ರ ಮಾಡೋದರಿಂದ ಲಾಭಕ್ಕಿಂತ ನಷ್ಟ ಹೆಚ್ಚು!

    |

    ಸ್ಟಾರ್ ನಟರು ಸಾಮಾನ್ಯವಾಗಿ ಎರಡು ರೀತಿ ಯೋಚಿಸುತ್ತಾರೆ. ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡ್ಬೇಕು ಅಥವಾ ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಹಿಟ್ ಕೊಡಬೇಕು.

    ಆದರೆ, ಸ್ಟಾರ್ ನಟರ ಈ ನಿರ್ಧಾರ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಎಂಬುದು ನಿರ್ಮಾಪಕರ ವಾದ. ಸ್ಟಾರ್ ನಟರು ವರ್ಷಕ್ಕೆ ಮೂರು ಅಥವಾ ನಾಲ್ಕು ಸಿನಿಮಾ ಮಾಡಬೇಕು, ಒಂದೊಂದೆ ಸಿನಿಮಾ ಮಾಡುತ್ತಿದ್ದಾರೆ. ಇದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುತ್ತಿದ್ದಾರೆ.

    ಅಷ್ಟಕ್ಕೂ, ಸ್ಟಾರ್ ನಟರು ಕಡಿಮೆ ಚಿತ್ರ ಮಾಡೋದ್ರಿಂದ ಇಂಡಸ್ಟ್ರಿಗೆ ಆಗುವ ನಷ್ಟವೇನು? ಮುಂದೆ ಓದಿ...

    ವರ್ಷಕ್ಕೆ ಮೂರು ಸಿನಿಮಾ ಬರಬೇಕು

    ವರ್ಷಕ್ಕೆ ಮೂರು ಸಿನಿಮಾ ಬರಬೇಕು

    ಸುದೀಪ್, ಪುನೀತ್ ರಾಜ್ ಕುಮಾರ್, ಯಶ್ ಹಾಗೂ ದರ್ಶನ್ ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ಮಾಡ್ತಾ ಬಂದಿದ್ದಾರೆ. ಆದರೆ, ಸ್ಟಾರ್ ನಟರು ವರ್ಷಕ್ಕೆ ಮೂರು ಅಥವಾ ನಾಲ್ಕು ಸಿನಿಮಾ ಮಾಡಲಿ ಎನ್ನುತ್ತಿದ್ದಾರೆ ಕನ್ನಡ ನಿರ್ಮಾಪಕರು. ಹೆಚ್ಚು ಹೆಚ್ಚು ಸಿನಿಮಾ ಮಾಡಿದಾಗ ಮಾತ್ರ ಇಂಡಸ್ಟ್ರಿಗೆ ಹಾಗೂ ನಿರ್ಮಾಪಕರಿಗೆ ಒಳ್ಳೆಯದಾಗುತ್ತೆ ಎಂದು ಹೇಳುತ್ತಿದ್ದಾರೆ.

    10 ವರ್ಷದ ಹಿಂದೆ ನಮ್ ಸ್ಟಾರ್ಸ್ ಹೇಗಿದ್ರು, ಯಾವ ಸಿನಿಮಾ ಮಾಡ್ತಿದ್ರು?10 ವರ್ಷದ ಹಿಂದೆ ನಮ್ ಸ್ಟಾರ್ಸ್ ಹೇಗಿದ್ರು, ಯಾವ ಸಿನಿಮಾ ಮಾಡ್ತಿದ್ರು?

    ಪರಭಾಷೆ ಚಿತ್ರಗಳನ್ನು ನಿಯಂತ್ರಿಸಬಹುದು

    ಪರಭಾಷೆ ಚಿತ್ರಗಳನ್ನು ನಿಯಂತ್ರಿಸಬಹುದು

    'ಸ್ಟಾರ್ ನಟರು ವರ್ಷಕ್ಕೆ ಮೂರು ಸಿನಿಮಾ ಮಾಡಿದ್ರೆ ವರ್ಷಪೂರ್ತಿ ಅವರ ಚಿತ್ರಗಳೇ ಥಿಯೇಟರ್ ನಲ್ಲಿರುತ್ತೆ. ಇದು ಪರಭಾಷೆ ಚಿತ್ರಗಳ ಮೇಲೆ ಪರಿಣಾಮ ಬೀರುತ್ತೆ. ನಮ್ಮವರ ಚಿತ್ರವೇ ಇರುವುದರಿಂದ ಸಹಜವಾಗಿ ನಮ್ಮವರಿಗೆ ಮೊದಲ ಅಧ್ಯತೆ ಸಿಗುತ್ತೆ. ಈ ಮೂಲಕ ಪರಭಾಷೆಯ ಚಿತ್ರಗಳಿಗೆ ಕಡಿವಾಣ ಹಾಕಬಹುದು'' ಎಂದು ನಿರ್ಮಾಪಕ ಸಂಘದ ಅಧ್ಯಕ್ಷ ರಾಮಕೃಷ್ಣ ಡಿ ಕೆ ಹೇಳಿದ್ದಾರೆ.

    ರಾಜ್-ವಿಷ್ಣು ಸಮಯದಲ್ಲಿ ಆಗಿದ್ದು ಅದೇ

    ರಾಜ್-ವಿಷ್ಣು ಸಮಯದಲ್ಲಿ ಆಗಿದ್ದು ಅದೇ

    ''ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅಂತವರ ಸಮಯದಲ್ಲಿ ಚಿತ್ರಣವೇ ಬೇರೆ ಇತ್ತು. ವರ್ಷಕ್ಕೆ ನಾಲ್ಕೈದು ಚಿತ್ರಗಳಲ್ಲಿ ನಟಿಸುತ್ತಿದ್ದರು. ಕರ್ನಾಟಕ ಪೂರ್ತಿ ಕನ್ನಡ ಸಿನಿಮಾಗಳೇ ಇರುತ್ತಿದ್ದವು. ಆ ಸಮಯದಲ್ಲಿ ಪರಭಾಷೆ ಚಿತ್ರಗಳಿಗೆ ಇಂತಿಷ್ಟೆ ಚಿತ್ರಮಂದಿರಗಳು ಸಿಗುತ್ತಿದ್ದವು. ಈಗ ಅಂತಹ ಸಂಸ್ಕೃತಿ ಮಾಯವಾಗಿದೆ'' ಎಂದು ನಿರ್ಮಾಪರು ತಮ್ಮ ಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಸುದೀಪ್, ಯಶ್, ಪುನೀತ್ ಗೆ ಆಘಾತ ತಂದ ದಿನವಿದು: ಅಂದು ನಡೆದಿದ್ದೇನು?ಸುದೀಪ್, ಯಶ್, ಪುನೀತ್ ಗೆ ಆಘಾತ ತಂದ ದಿನವಿದು: ಅಂದು ನಡೆದಿದ್ದೇನು?

    ವರ್ಷಕ್ಕೆ ಒಂದು ಮಾಡಿದ್ರೆ ಹೇಗೆ?

    ವರ್ಷಕ್ಕೆ ಒಂದು ಮಾಡಿದ್ರೆ ಹೇಗೆ?

    ಒಬ್ಬ ನಟ ಒಂದು ಚಿತ್ರಕ್ಕಾಗಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆ ಚಿತ್ರ ಬಿಡುಗಡೆಯಾಗುವವರೆಗೂ ನಿರ್ಮಾಪಕ ಮುಂದಿನ ಸಿನಿಮಾ ಮಾಡಲು ಕಷ್ಟ ಆಗುತ್ತೆ. ನಿರ್ದೇಶಕನೂ ಬೇರೆ ಸಿನಿಮಾ ಮಾಡುವ ಕಡೆ ಯೋಚಿಸಲ್ಲ. ಇದು ಸಹಜವಾಗಿ ನಿರ್ಮಾಪಕರಿಗೆ ಹೊರೆಯಾಗುತ್ತೆ ಎಂದು ವಾದಿಸುತ್ತಾರೆ.

    ನಟರು ಯೋಚನೆ ಬೇರೆ ಇದೆ

    ನಟರು ಯೋಚನೆ ಬೇರೆ ಇದೆ

    ವರ್ಷಕ್ಕೆ ಒಂದು ಸಿನಿಮಾ ಮಾಡಿದರೂ ಅದು ಒಳ್ಳೆಯ ಕ್ವಾಲಿಟಿ, ಮನರಂಜನೆ ಮತ್ತು ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಚಿತ್ರ ಕೊಡಬೇಕು ಎಂಬುದು ಸ್ಟಾರ್ ನಟರ ನಿರ್ಧಾರ. ಪ್ರೇಕ್ಷಕರು ಕೂಡ ಅದೇ ಹೇಳ್ತಾರೆ. ಒಂದೇ ಸಿನಿಮಾ ಮಾಡಿದರೂ ಒಳ್ಳೆಯ ಚಿತ್ರ ಕೊಡಿ ಅಂತಾರೆ. ಕೆಲವು ಅಭಿಮಾನಿಗಳು ಮಾತ್ರ ಒಂದು ವರ್ಷಕ್ಕೆ ಅಥವಾ ಎರಡು ವರ್ಷ ಆದರೂ ಸ್ಟಾರ್ ನಟರ ಚಿತ್ರ ಬಂದಿಲ್ಲ ಎಂದು ಬೇಸರ ಮಾಡಿಕೊಳ್ಳವವರು ಇದ್ದಾರೆ. ಹೆಚ್ಚು ಹೆಚ್ಚು ಸಿನಿಮಾ ಮಾಡಲಿ ಎನ್ನುವವರು ಇದ್ದಾರೆ.

    ಲಾಭ-ನಷ್ಟದ ಲೆಕ್ಕಾಚಾರ

    ಲಾಭ-ನಷ್ಟದ ಲೆಕ್ಕಾಚಾರ

    'ಸ್ಟಾರ್ ನಟರು ಸಿನಿಮಾ ಮಾಡೋದು ಕಮ್ಮಿ. ಅದಕ್ಕೆ ಪರಭಾಷೆ ಚಿತ್ರಗಳ ಬಂದಾಗ ವಿತರಣೆ ಹಕ್ಕು ಖರೀದಿಸಿ ಕರ್ನಾಟಕದಲ್ಲಿ ಬಿಡುಗಡೆ ಮಾಡ್ತಾರೆ. ಇಲ್ಲಿನ ನಟರು ಹೆಚ್ಚು ಸಿನಿಮಾ ಮಾಡಿದ್ರೆ ನಮ್ಮ ಚಿತ್ರಗಳ ಮೇಲೆ ಬಂಡವಾಳ ಹಾಕಬಹುದು. ಒಂದೇ ಸಿನಿಮಾನ ಒಂದು ವರ್ಷವೆಲ್ಲ ಮಾಡಿದ್ರೆ, ಈ ಗ್ಯಾಪ್ ನಲ್ಲಿ ಬೇರೆ ಭಾಷೆ ಚಿತ್ರಗಳಿಗೆ ಅನುಕೂಲ ಆಗುತ್ತೆ' ಎಂದು ನಿರ್ಮಾಪಕರು ವಾಸ್ತವ ಹಂಚಿಕೊಂಡಿದ್ದಾರೆ.

    English summary
    Kannada film Producers demanding that star actors make more films a year.
    Saturday, February 8, 2020, 13:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X