Puneeth Rajkumar ; ಆ ಎರಡು 'ಹಾಡು'ಗಳನ್ನ ಅಪ್ಪು ಬೇಡ ಎಂದಿದ್ದೇಕೆ ..?
ಪುನೀತ್ ವ್ಯಕ್ತಿತ್ವವನ್ನ ಕೇವಲ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಯಾಕಂದ್ರೇ.. ಪುನೀತ್ ಅವ್ರದ್ದು ನಿಲುಕದ ವ್ಯಕ್ತಿತ್ವ. ಬದುಕಿದ್ದಷ್ಟು ದಿನ ಪ್ರೀತಿಯನ್ನೇ ಹಂಚಿ.. ಅಭಿಮಾನದ ಹೂಗಳನ್ನೆಲ್ಲ ತನ್ನ ಹೃದಯದಲ್ಲಿ ತುಂಬಿಸಿಕೊಂಡು ಬಾರದ ಲೋಕಕ್ಕೆ ಹೋದ ಪರಮಾತ್ಮ ಪುನೀತ್, ಮನಸ್ಸು ಎಂತಹದ್ದು ಅನ್ನುವದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ.
ನಿಮಗೆ ಗೊತ್ತಿರಲಿ ಕನ್ನಡ ಚಿತ್ರರಂಗದಲ್ಲಿ ಅನೇಕ ನಾಯಕರಿಗೆ ಅನೇಕ ನಿರ್ದೇಶಕರು ಮತ್ತು ಬರಹಗಾರರು ಒಂದ್ ಇಲ್ಲೊಂದು ರೀತಿಯಲ್ಲಿ ಅಪ್ಪು ಅಭಿಮಾನಿಯೇ. ಈ ಅಭಿಮಾನ ಆ ನಾಯಕರ ಜೊತೆ ಕೆಲ್ಸ ಮಾಡಲು ಅವಕಾಶ ಸಿಕ್ಕಾಗ ಇನ್ನೂ ಹೆಚ್ಚಾಗುತ್ತೆ.

ಇನ್ನೂ ನಿರ್ದೇಶಕ ಆ ನಾಯಕನ ಸಿನಿಮಾ ಮಾಡುವಾಗ ಅಭಿಮಾನಿಯ ದೃಷ್ಟಿಕೋನದಿಂದನೇ ಆಲೋಚನೆಯನ್ನ ಮಾಡುತ್ತಾನೇ. ಅಭಿಮಾನಿಯಾಗಿ ಸಮಸ್ತ ಅಭಿಮಾನಿಗಳಿಗೆ ಇಷ್ಟವಾಗುವಂತೆಯೇ ಸಿನಿಮಾ ಮಾಡಬೇಕೆಂದು ಹಪಹಪಿಸುತ್ತಾನೇ, ಸಂಭಾಷಣೆಗಾರರ ವಿಚಾರದಲ್ಲೂ ಈ ಮಾತು ಅನ್ವಯ ಆಗುತ್ತೆ. ಇದಕ್ಕೆ ಸಾಕ್ಷಿ ನಿಮಗೆ ಕನ್ನಡ ಚಿತ್ರರಂಗದಲ್ಲಿ ಅನೇಕ ನಟರ ಅನೇಕ ಸಿನಿಮಾ ಸಿಗುತ್ತೆ. ಅನೇಕ ರೀತೀಯ ಸಂಭಾಷಣೆಯ ಸಾಲು ನೆನಪಾಗುತ್ತೆ. ನಿರ್ದೇಶಕ ಪವನ್ ಒಡೆಯರ್ ಕೂಡಾ ಇದ್ರಿಂದ ಹೊರತಾಗಿಲ್ಲ.
ಅಸಲಿಗೆ ಪವನ್ ಒಡೆಯರ್ ಬೆಸಿಕಲಿ ಅಪ್ಪು ಅವರ ಓನ್ ಆಫ್ ದಿ ಫ್ಯಾನ್. ಖುದ್ದು ಪವನ್ ಅನೇಕ ಬಾರಿ ಇದನ್ನ ಹೇಳಿಕೊಂಡಿದ್ದು ಇದೆ. ಇವರ ಈ ಅಭಿಮಾನಕ್ಕೆ ಪ್ರತಿಫಲವೆನ್ನುವಂತೆ ಎರಡೆರಡು ಬಾರಿ ಪುನೀತ್ ರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳುವ ಅವಕಾಶ ಪವನ್ ಗೆ ಸಿಕ್ಕಿದೆ. ವಿಷ್ಯ ಅದಲ್ಲ. ವಿಷ್ಯ ಇರುವುದು. ಪುನೀತ್ ಕೈ ಹಿಡಿದು ಆ ಹಾಡೊಂದು ಮಾತ್ರ ಬೇಡವೆಂದಿದ್ದರಲ್ಲಿ.
ಹೌದು, ನಟಸಾರ್ವಭೌಮ ಸಿನಿಮಾ ಸಮಯದಲ್ಲಿ ಪವನ್ ಒಡೆಯರ್ ಹಾಡೊಂದನ್ನ ಬರೆದಿದ್ದರು. ನೋ ಡೌಟ್ ಆ ಹಾಡು ಅವತ್ತು ಹೊರ ಬಂದಿದ್ದರೆ ಅದು ಅಭಿಮಾನಿಗಳ ಹೃದಯ ಗೆಲ್ಲುತ್ತಿತ್ತು. ಯಾಕಂದ್ರೇ ಪವನ್ , ನಟಸಾರ್ವಭೌಮದ ತನ್ಕ ಬಂದ ಅಪ್ಪು ಸಿನಿಮಾದ ಶೀರ್ಷಿಕೆಯನ್ನೆಲ್ಲ ತುಂಬು ಅಭಿಮಾನದಿಂದ ಸಾಲಿನ ಮೂಲಕ ಪೋಣಿಸಿದ್ದರು. ಅಷ್ಟೇ ಅಭಿಮಾನದಿಂದ ಅಪ್ಪು ಹತ್ರ ಹೋಗಿ ಆ ಹಾಡನ್ನೂ ಕೇಳಿಸಿದ್ದರು.

ಆದ್ರೇ.. ಅಪ್ಪು ಅದೃಷ್ಟವಂತ ಎನ್ನುವ ಪದಕ್ಕೆ ಅನ್ವರ್ಥದಂತೆ ಬಾಳಿದವರು. ಯಾರೂ ನೋಡಲು ಸಾಧ್ಯವಿಲ್ಲದ ದೊಡ್ಡ ಗೆಲುವುಗಳನ್ನು ಬುದ್ಧಿ ಬಲಿಯುವ ಮುಂಚೆಯೇ ನೋಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಪುನೀತ್ ಎಲ್ಲ ಸಹಕಲಾವಿದರನ್ನ ಪ್ರೀತ್ಸುತ್ತಿದ್ದರು. ಗೌರವದಿಂದ ನೋಡ್ತಿದ್ದರು. ಹಿರಿಯ ಇರಲಿ ಕಿರಿಯ ಇರಲಿ ವಯಸ್ಸಿನ ಭೇದ ಭಾವ ಇಲ್ಲದೇ ಎಲ್ಲರೊಂದಿಗೆ ಮುಕ್ತವಾಗಿ ಮಾತನಾಡ್ತಿದ್ದರು ಪುನೀತ್ ರಾಜ್ ಕುಮಾರ್. ಈ ಕಾರಣಕ್ಕೆ ಪವನ್ ಒಡೆಯರ್ ವಿರಚಿತ ಹಾಡನ್ನ ಅವತ್ತು ಕೇಳಿದ್ದ ಅಪ್ಪು, ಪವನ್ ಒಡೆಯರ್ ಅವ್ರನ್ನ ಅಪ್ಪಿ ಮೆಚ್ಚುಗೆಯನ್ನ ವ್ಯಕ್ತಪಡಿಸಿದರು. ಆದ್ರೇ ನೆನಪಿಡಿ.. ಅಪ್ಪು ಈ ಹಾಡು ಚಿತ್ರದಲ್ಲಿ ಬಳಿಸಿಕೊಳ್ಳುವುದು ಬೇಡವೆಂದು ಪವನ್ ಒಡೆಯರ್ ಕೈ ಹಿಡಿದು ಹೇಳಿದ್ದರು.
ಅಂದ್ಹಾಗೇ.. ಅಪ್ಪು ಅಭಿನಯದ ಚಿತ್ರಗಳ ಶೀರ್ಷಿಕೆಯನ್ನ ಬಳಸಿಕೊಂಡು ಹಾಡು ಬರೆಯುವ ಪ್ರಯತ್ನ ಇದೇ ಮೊದಲೇನಾಗಿರಲಿಲ್ಲ. ಈ ಹಿಂದೆ ಪೃಥ್ವಿ ಸಮಯದಲ್ಲಿಯೂ ಈ ಪ್ರಯತ್ನ ನಡೆದಿತ್ತು. ಅವತ್ತು ಕೂಡಾ ಪುನೀತ್ ರಾಜ್ ಕುಮಾರ್ ಅಭಿಪ್ರಾಯ ಒಂದೇ ಆಗಿತ್ತು. ಹಾಡು ಬೇಡೆವೆಂದೇ ನಿರ್ಮಾಪಕ ಸೂರಪ್ಪ ಬಾಬು ಅವರಲ್ಲಿ ಮನವಿಯನ್ನೂ ಮಾಡ್ಕೊಂಡಿದ್ದರು ಪುನೀತ್ ರಾಜ್ ಕುಮಾರ್.

ಒಟ್ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಸರಳತೆ ಮತ್ತು ವಿನಯತೆ ಜೊತೇಲೀ ಸಿನಿಮಾ ಮೇಲಿದ್ದ ಶ್ರದ್ಧೇ ಮತ್ತು ಭಕ್ತಿಅಭಿಮಾನಿಗಳ ಮೇಲೀದ್ದ ಪ್ರೀತಿ, ನಿರ್ದೇಶಕ ನಿರ್ಮಾಪಕ ಮತ್ತು ಸಹ ಕಲಾವಿದರನ್ನ ನಡೆಸಿಕೊಳ್ತಿದ್ದ ರೀತಿಯನ್ನ ಕನ್ನಡ ಚಿತ್ರರಂಗ ಮರೆಯಲು ಸಾಧ್ಯವಿಲ್ಲ. ಹಿಂದೆ ಒಮ್ಮೆ ಪವನ್ ಒಡೆಯರ್ ಹೇಳಿದಂತೆ ಅಪ್ಪು ಬಗ್ಗೆ ಮಾತನಾಡಲು ದಿನಗಳಿರಲಿ..
ವಾರಗಳಿರಲಿ.. ಸಾಕಾಗಲ್ಲ..


Click it and Unblock the Notifications











