twitter
    For Quick Alerts
    ALLOW NOTIFICATIONS  
    For Daily Alerts

    'ಕನ್ನಡ ಸಿನಿಮಾ ಮಾರ್ಕೆಟ್ ಏನೆಂದು ಅಪ್ಪು ಪರಿಚಯಿಸಿದ್ದಾರೆ, ಉಳಿಸುವ ಜವಾಬ್ದಾರಿ ನಿಮ್ಮದು'

    |

    ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಹಿರಿಯ ಸಹೋದರ ಶಿವರಾಜ್ ಕುಮಾರ್ ಅವರ ಸಾಮಾಜಿಕ ಜಾಲತಾಣದ ಫ್ಯಾನ್ಸ್ ಪೇಜ್ ನಲ್ಲಿ ಈ ರೀತಿಯ ಪೋಸ್ಟ್ ಒಂದನ್ನು ಹಾಕಲಾಗಿದೆ. ಅದರಲ್ಲಿ ಜೇಮ್ಸ್ ಚಿತ್ರದ ಮೂಲಕ ನಾಡಿಗೆ ಕನ್ನಡದ ಮಾರುಕಟ್ಟೆಯ ಪರಿಚಯವನ್ನು ಅಪ್ಪು ಮಾಡಿ ಹೋಗಿದ್ದಾರೆ.

    ಹೌದು. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರವೊಂದಕ್ಕೆ ಸಿಕ್ಕ ಬಹುದೊಡ್ಡ ಓಪನಿಂಗ್ ಜೇಮ್ಸ್ ಚಿತ್ರದ್ದಾಗಿತ್ತು. ಅದಕ್ಕೆ, ಪುನೀತ್ ಅವರ ಕೊನೆಯ ಸಿನಿಮಾ ಮತ್ತು ಅವರ ಹುಟ್ಟುಹಬ್ಬದ ದಿನ ಬಿಡುಗಡೆಯಾಗುತ್ತಿರುವ ಚಿತ್ರ ಎನ್ನುವ ಕಾರಣವೂ ಪ್ರಮುಖಾಂಶಗಳಲ್ಲೊಂದು.

    James Day 4 Box office collections : 'ಜೇಮ್ಸ್' ನಾಲ್ಕೇ ದಿನಕ್ಕೆ ವಿಶ್ವದಾದ್ಯಂತ ಬಾಕ್ಸಾಫೀಸ್ ಗಳಿಕೆ 100 ಕೋಟಿJames Day 4 Box office collections : 'ಜೇಮ್ಸ್' ನಾಲ್ಕೇ ದಿನಕ್ಕೆ ವಿಶ್ವದಾದ್ಯಂತ ಬಾಕ್ಸಾಫೀಸ್ ಗಳಿಕೆ 100 ಕೋಟಿ

    ಪುನೀತ್ ಅವರ ಅಕಾಲಿಕ ಸಾವನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗದೇ ಇದ್ದಂತಹ ಸಂದರ್ಭದಲ್ಲಿ ಬಿಡುಗಡೆಗೊಂಡ ಸಿನಿಮಾ ಇದಾಗಿರುವುದರಿಂದ, ಚಿತ್ರದ ರಿಪೋರ್ಟ್ ಏನೇ ಇದ್ದರು, ಅಪ್ಪು ಕೊನೆಯ ಸಿನಿಮಾ ನೋಡುವುದು ನಮ್ಮ ಕರ್ತವ್ಯ ಎನ್ನುವ ರೀತಿಯಲ್ಲಿ ಜನರು ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ.

    ಜೇಮ್ಸ್ ಚಿತ್ರಕ್ಕೆ ಪೈಪೋಟಿಗೆ ಯಾರೂ ನಿಲ್ಲದೇ ಇದ್ದದ್ದು ಅಪ್ಪುಗೆ ಕೊಟ್ಟ ಇನ್ನೊಂದು ಗೌರವವಾಗಿತ್ತು. ಎಸ್.ಎಸ್.ರಾಜಮೌಳಿ ನಿರ್ದೇಶನದ RRR ಸಿನಿಮಾ, ಜೇಮ್ಸ್ ಚಿತ್ರಕ್ಕಾಗಿ ಒಂದು ವಾರ ಮುಂದಕ್ಕೆ ಹಾಕಿಕೊಂಡಿತು. ಈ ಚಿತ್ರ ಮಾರ್ಚ್ 25ರಂದು ವಿಶ್ವದಾದ್ಯಂತ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

    ಶಿವಣ್ಣನ ಕಾರ್ಯಕ್ರಮಕ್ಕೆ ಕರೆಸಿ ನೋಯಿಸಿ ಯಾಕೆ ಕಳುಹಿಸುತ್ತೀರಾ?ಶಿವಣ್ಣನ ಕಾರ್ಯಕ್ರಮಕ್ಕೆ ಕರೆಸಿ ನೋಯಿಸಿ ಯಾಕೆ ಕಳುಹಿಸುತ್ತೀರಾ?

     ಡಾ.ಶಿವರಾಜ್ ಕುಮಾರ್ ಫ್ಯಾನ್ ಕ್ಲಬ್ ಪೋಸ್ಟ್

    ಡಾ.ಶಿವರಾಜ್ ಕುಮಾರ್ ಫ್ಯಾನ್ ಕ್ಲಬ್ ಪೋಸ್ಟ್

    'ಮೊದಲು ಕನ್ನಡ ಸ್ಟಾರ್ ಹೀರೋಗಳ ಸಿನಿಮಾಗಳಿಗೆ ಯುಟ್ಯೂಬ್‌ನಲ್ಲಿ ಟ್ರೈಲರಿಗೆ ಹತ್ತು ಲಕ್ಷ ವೀಕ್ಷಣೆ ಕೂಡಾ ಸಿಗುತ್ತಿರಲಿಲ್ಲ. ಆ ದಾಖಲೆಯನ್ನು ಮಾಡಿದ್ದು ಕೂಡಾ ಇವರೇ (ಪುನೀತ್), ಈಗ ಒಂದು ದಿನದಲ್ಲಿ 12.5ಲಕ್ಷ ಜನರು ಥಿಯೇಟರ್ ನಲ್ಲಿ ಜೇಮ್ಸ್ ಸಿನಿಮಾ ವೀಕ್ಷಣೆಯನ್ನು ಮಾಡಿದ್ದಾರೆ. ಈ ದಾಖಲೆಗೂ ಇವರೇ ಕಾರಣ. ಕನ್ನಡ ಚಿತ್ರೋದ್ಯಮದ ಮಾರುಕಟ್ಟೆಯನ್ನು ನಿಮಗೆಲ್ಲಾ ಅಪ್ಪು ಪರಿಚಯಿಸಿದ್ದಾರೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮದು' ಎನ್ನುವ ಬರಹವನ್ನು ಫೇಸ್ ಬುಕ್ ನಲ್ಲಿ ಡಾ.ಶಿವರಾಜ್ ಕುಮಾರ್ ಫ್ಯಾನ್ ಕ್ಲಬ್ ಪೋಸ್ಟ್ ಮಾಡಿದೆ.

     ''ನಮಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡುವ ಅಭ್ಯಾಸ''

    ''ನಮಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡುವ ಅಭ್ಯಾಸ''

    ನಮಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡುವ ಅಭ್ಯಾಸ ಎನ್ನುವ ಡೈಲಾಗು ಚಿತ್ರದಲ್ಲಿದೆ. ಮಾರ್ಚ್ ಹದಿನೇಳರಂದು ಬಿಡುಗಡೆಯಾಗಿದ್ದ ಜೇಮ್ಸ್, ಸ್ಯಾಂಡಲ್ ವುಡ್ ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸುತ್ತಾ ಮುನ್ನುಗ್ಗುತ್ತಿದೆ. ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರೇ ಹೇಳುವ ಪ್ರಕಾರ, ಮೊದಲ ದಿನ ಸುಮಾರು ನಾಲ್ಕು ಸಾವಿರ ಶೋ ಪ್ರದರ್ಶನಗೊಂಡಿದೆ. ಎರಡೇ ದಿನದಲ್ಲಿ ಸ್ಯಾಟಲೈಟ್, ಚಿತ್ರದ ಕಲೆಕ್ಷನ್ ಸೇರಿದಂತೆ ಚಿತ್ರ ನೂರು ಕೋಟಿ ರೂಪಾಯಿಗೂ ಮೀರಿ ವ್ಯವಹಾರ ನಡೆಸಿದೆ. ಇದನ್ನೂ ನಿರ್ಮಾಪಕರೇ ಹೇಳಿರುವುದು..

     ಚಿತ್ರದ ಪ್ರೊಡಕ್ಷನ್ ವ್ಯಾಲ್ಯೂ, ಸಾಹಸ ದೃಶ್ಯಗಳ ಬಗ್ಗೆ ವ್ಯಾಪಕ ಪ್ರಶಂಸೆ

    ಚಿತ್ರದ ಪ್ರೊಡಕ್ಷನ್ ವ್ಯಾಲ್ಯೂ, ಸಾಹಸ ದೃಶ್ಯಗಳ ಬಗ್ಗೆ ವ್ಯಾಪಕ ಪ್ರಶಂಸೆ

    ಚಿತ್ರ ಬಿಡುಗಡೆಯ ಎರಡನೇ ದಿನ ಪ್ರದರ್ಶನದ ಸಂಖ್ಯೆ ವಾರದ ದಿನವಾಗಿದ್ದರಿಂದ ಕಮ್ಮಿಯಿತ್ತು. ಆದರೆ, ಮತ್ತೆ ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಮತ್ತೆ ಏರಲು ಆರಂಭಿಸಿತು. ಚಿತ್ರದ ಪ್ರೊಡಕ್ಷನ್ ಗಾತ್ರ, ಡಿಸೈನ್ ಸಾಹಸ ದೃಶ್ಯಗಳ ಬಗ್ಗೆ ವ್ಯಾಪಕ ಪ್ರಶಂಶೆ ವ್ಯಕ್ತವಾಗಿದ್ದದ್ದು ಚಿತ್ರದ ಗಳಿಕೆಗೆ ಸಹಕಾರಿಯಾಯಿತು. ಗುರುವಾರದಿಂದ ಇಲ್ಲಿಯವರೆಗಿನ ನಾಲ್ಕು ದಿನಗಳಲ್ಲಿ ಚಿತ್ರ ಎಷ್ಟು ಗಳಿಕೆ ಕಂಡಿದೆ ಎನ್ನುವುದರ ಬಗ್ಗೆ ನಿರ್ಮಾಪಕರು ಹೇಳಿಲ್ಲದಿದ್ದರೂ, ಸ್ಯಾಟಲೈಟ್ ರೈಟ್ಸ್ ಹೊರತಾಗಿಯೇ ನೂರು ಕೋಟಿ ದಾಟಿರಬಹುದು.

     ಪುನೀತ್ ಎಲ್ಲಾ ವರ್ಗದವರ ಹೀರೋ ಆಗಿ ಗುರುತಿಸಿಕೊಂಡವರು

    ಪುನೀತ್ ಎಲ್ಲಾ ವರ್ಗದವರ ಹೀರೋ ಆಗಿ ಗುರುತಿಸಿಕೊಂಡವರು

    ಪುನೀತ್ ಎಲ್ಲಾ ವರ್ಗದವರ ಹೀರೋ ಆಗಿ ಗುರುತಿಸಿಕೊಂಡವರು. ಅವರ ನಿಧನದಿಂದಾಗಿ ಜೇಮ್ಸ್ ಚಿತ್ರಕ್ಕೆ ಭಾವನಾತ್ಮಕ ಟಚ್ ಬಂದಿದ್ದರಿಂದ, ಕನ್ನಡ ಚಿತ್ರೋದ್ಯಮದ ಇದುವರೆಗಿನ ಎಲ್ಲಾ ದಾಖಲೆಗಳನ್ನು ಜೇಮ್ಸ್ ಚಿತ್ರ ಧೂಳೀಪಟ ಮಾಡಿತು. ಇದರ ಜೊತೆಗೆ, ಕನ್ನಡ ಚಿತ್ರಕ್ಕಿರುವ ಮಾರುಕಟ್ಟೆಯನ್ನೂ ಈ ಚಿತ್ರ ಪರಿಚಯಿಸಿತು ಎಂದರೆ ತಪ್ಪಾಗಲಾರದು. ಸರಿಯಾದ ಪ್ರಚಾರ, ಯೋಜನೆಗಳನ್ನು ಹಾಕಿ ಚಿತ್ರ ಬಿಡುಗಡೆ ಮಾಡಿದರೆ, ಕನ್ನಡದ ಮುಂದಿನ ಸಿನಿಮಾಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬಹುದು.

    English summary
    Facebook Post: Puneeth Rajkumar Shown Kannada Cinema Market, Now It is Your Responsible. Know More,
    Monday, March 21, 2022, 12:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X