twitter
    For Quick Alerts
    ALLOW NOTIFICATIONS  
    For Daily Alerts

    'ಮಿಲನ' Vs 'ಅನಾಥರು': 15 ವರ್ಷಗಳ ಹಿಂದೆ ಬಾಕ್ಸಾಫೀಸ್‌ ಕದನದಲ್ಲಿ ಗೆದ್ದಿದ್ದು ಯಾರು?

    |

    ಬಾಕ್ಸಾಫೀಸ್‌ ಕ್ಲ್ಯಾಶ್ ಅನ್ನೋ ಪದ ಈಗ ಕಾಮನ್ ಆಗ್ಬಿಟ್ಟಿದೆ. ಸೂಪರ್ ಸ್ಟಾರ್‌ಗಳ ಸಿನಿಮಾಗಳು ಒಂದೇ ದಿನ ತೆರೆಕಂಡರೆ ಕೆಲವೊಮ್ಮೆ ಯಾವುದಾದರೂ ಒಂದಕ್ಕೆ ಹಿನ್ನಡೆ ಆಗುತ್ತದೆ. ದಶಕಗಳಿಂದ ಇದು ನಡೆದುಕೊಂಡು ಬಂದಿದೆ. 15 ವರ್ಷಗಳ ಹಿಂದೆ ತೆರೆಕಂಡಿದ್ದ ಪುನೀತ್ ರಾಜ್‌ಕುಮಾರ್ ನಟನೆಯ 'ಮಿಲನ' ಸಿನಿಮಾ ದಾಖಲೆ ಬರೆದಿತ್ತು. ವಿಶೇಷ ಅಂದರೆ ಅದೇ ದಿನ ಉಪೇಂದ್ರ ಹಾಗೂ ದರ್ಶನ್‌ ನಟನೆಯ 'ಅನಾಥರು' ಚಿತ್ರ ಕೂಡ ಪ್ರೇಕ್ಷಕರ ಮುಂದೆ ಬಂದಿತ್ತು.

    ಪುನೀತ್ ರಾಜ್‌ಕುಮಾರ್ ಹಾಗೂ ಪಾರ್ವತಿ ನಟನೆಯ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ 'ಮಿಲನ'. ಈ ಚಿತ್ರಕ್ಕೆ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದರು. ಇವತ್ತಿಗೂ ಅವರನ್ನು ಮಿಲನಾ ಪ್ರಕಾಶ್ ಅಂತಲೇ ಕರೆಯುತ್ತಾರೆ. ಅಷ್ಟರಮಟ್ಟಿಗೆ ಈ ಸಿನಿಮಾ ಸಕ್ಸಸ್ ಕಂಡಿತ್ತು. ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅದೇ ದಿನ ಬಿಡುಗಡೆಯಾಗಿದ್ದ 'ಅನಾಥರು' ಚಿತ್ರಕ್ಕೆ ಸಾಧು ಕೋಕಿಲ ಸಾರಥ್ಯ ವಹಿಸಿಕೊಂಡಿದ್ದರು. ಚಿತ್ರದಲ್ಲಿ ಉಪ್ಪಿ- ದರ್ಶನ್ ನಟನೆ ನೋಡಿದವರು ಫಿದಾ ಆಗೋಗಿದ್ದರು.

    500 ದಿನ ಅಬ್ಬರಿಸಿದ್ದ ಅಪ್ಪು ಸಿನಿಮಾ 'ಮಿಲನ'ಗೆ 15 ವರ್ಷ: ಈ ಚಿತ್ರದ ಬಗ್ಗೆ ನಿಮಗೇನು ಗೊತ್ತು?500 ದಿನ ಅಬ್ಬರಿಸಿದ್ದ ಅಪ್ಪು ಸಿನಿಮಾ 'ಮಿಲನ'ಗೆ 15 ವರ್ಷ: ಈ ಚಿತ್ರದ ಬಗ್ಗೆ ನಿಮಗೇನು ಗೊತ್ತು?

    ಸೆಪ್ಟೆಂಬರ್ 14, 2007. ಅಂದರೆ ಸರಿಯಾಗಿ 15 ವರ್ಷ ಹಿಂದೆ ಈ ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿತ್ತು. ರಾಜ್ಯದಲ್ಲಿ ಆಗ ಮಳೆಗಾಲ. ಆ ಸಮಯದಲ್ಲಿ ವರುಣದ ಆರ್ಭಟ ಸಿಕ್ಕಾಪಟ್ಟೆ ಜೋರಾಗಿತ್ತು. ಪ್ರೇಕ್ಷಕರು ಥಿಯೇಟರ್‌ಗೆ ಬಂದು ಸಿನಿಮಾ ನೋಡುವುದೇ ಕಷ್ಟ ಅನ್ನುವಂತಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಹುಸಿ ಮಾಡಿ 'ಮಿಲನ' ಸಿನಿಮಾ ಸೂಪರ್ ಹಿಟ್ ಆಗಿತ್ತು.

    ಅಬ್ಬರಿಸಿ ತಣ್ಣಗಾಗಿದ್ದ 'ಅನಾಥರು'

    ಅಬ್ಬರಿಸಿ ತಣ್ಣಗಾಗಿದ್ದ 'ಅನಾಥರು'

    ತಮಿಳಿನ 'ಪಿತಾಮಗನ್' ಚಿತ್ರದ ರೀಮೆಕ್ 'ಅನಾಥರು'. ಮೂಲ ಚಿತ್ರದಲ್ಲಿ ಚಿಯಾನ್ ವಿಕ್ರಂ ಹಾಗೂ ಸೂರ್ಯ ಮಾಡಿದ್ದ ಪಾತ್ರಗಳನ್ನು ಕನ್ನಡದಲ್ಲಿ ಉಪೇಂದ್ರ ಹಾಗೂ ದರ್ಶನ್ ನಿಭಾಯಿಸಿದ್ದರು. ಇಬ್ಬರ ಅಭಿನಯಕ್ಕೆ ಕನ್ನಡ ಸಿನಿರಸಿಕರು ಫಿದಾ ಆಗಿ ಹೋಗಿದ್ದರು. ರುದ್ರ ಆಗಿ ಉಪೇಂದ್ರ, ಸತ್ಯ ಪ್ರಕಾಶ್ ಆಗಿ ದರ್ಶನ್ ಇಬ್ಬರು ಪೈಪೋಟಿಗೆ ಬಿದ್ದು ನಟಿಸಿದ್ದರು. ಸಾಂಘವಿ ಹಾಗೂ ರಾಧಿಕಾ ಕುಮಾರಸ್ವಾಮಿ ಕೂಡ ಬಹಳ ಸೊಗಸಾಗಿ ನಟಿಸಿದ್ದರು. ಫಸ್ಟ್ ವೀಕೆಂಡ್ 'ಅನಾಥರು' ಸಿನಿಮಾ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ಚಿತ್ರಮಂದಿರಕ್ಕೆ ಸೆಳೆದಿತ್ತು. ಆದರೆ ನಂತರ ತಣ್ಣಗಾಗಿತ್ತು.

    ಅನಾಥರು : ರೀಮೇಕ್ ಮಾಡಿದ್ರೂ ಹೀಗೇ ಮಾಡಬೇಕು!ಅನಾಥರು : ರೀಮೇಕ್ ಮಾಡಿದ್ರೂ ಹೀಗೇ ಮಾಡಬೇಕು!

     ವಿತರಣೆ ಹಕ್ಕು ಖರೀದಿಸಿದ್ದ ರಾಧಿಕಾ

    ವಿತರಣೆ ಹಕ್ಕು ಖರೀದಿಸಿದ್ದ ರಾಧಿಕಾ

    ಎಲ್ಲಾ ವಿಭಾಗಗಳಲ್ಲೂ 'ಅನಾಥರು' ಸಿನಿಮಾ ಅದ್ಭುತ ಎನಿಸಿಕೊಂಡಿತ್ತು. ಸ್ವತಃ ಸಾಧುಕೋಕಿಲ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ವಿಶೇಷ ಅಂದರೆ ಸಿನಿಮಾ ನೋಡಿ ಮೆಚ್ಚಿದ್ದ ನಟಿ ರಾಧಿಕಾ ಕುಮಾರಸ್ವಾಮಿ ವಿತರಣೆಯ ಹಕ್ಕು ಖರೀದಿಸಿದ್ದರು. ಅದ್ಯಾಕೋ ಗೊತ್ತಿಲ್ಲ. ಅಷ್ಟು ಒಳ್ಳೆಯ ಚಿತ್ರವನ್ನು ಪ್ರೇಕ್ಷಕರು ಕೈಹಿಡಿಯಲಿಲ್ಲ. ನಂತರ ಟಿವಿಯಲ್ಲಿ ನೋಡಿ ಸೂಪರ್ ಸಿನಿಮಾ ಎಂದಿದ್ದರು. ಇನ್ನು ಸಿನಿಮಾ ಲಾಭ ನಷ್ಟದ ಬಗ್ಗೆ ನಟಿ ರಾಧಿಕಾ ಮಾತನಾಡಲೇ ಇಲ್ಲ. ಮುನಿರತ್ನ ನಿರ್ಮಾಣದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ತುಷಾರ್ ರಂಗನಾಥ್ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದರು.

     ನಿಧಾನವಾಗಿ ಟೇಕ್‌ ಆಫ್ ಆಗಿದ್ದ 'ಮಿಲನ'

    ನಿಧಾನವಾಗಿ ಟೇಕ್‌ ಆಫ್ ಆಗಿದ್ದ 'ಮಿಲನ'

    ಉಪೇಂದ್ರ ಹಾಗೂ ದರ್ಶನ್ ನಟಿಸಿದ್ದ ಕಾರಣಕ್ಕೆ 'ಅನಾಥರು' ಸಿನಿಮಾ ದೊಡ್ಡಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿತ್ತು. ಈ ಸಿನಿಮಾ ಎದುರು ಅಪ್ಪು ನಟನೆಯ ಫ್ಯಾಮಿಲಿ ಎಂಟರ್‌ಟ್ರೈನರ್ ಎಲ್ಲಲ್ಲ ಅಂತಲೇ ಕೆಲವರು ಅಂದುಕೊಂಡಿದ್ದರು. ಅದೇ ದಿನ ರಿಲೀಸ್ ಆಗಿದ್ದ 'ಮಿಲನ' ಚಿತ್ರಕ್ಕೆ ಸಾಧಾರಣ ಓಪನಿಂಗ್ ಸಿಕ್ಕಿತ್ತು. ಆದರೆ ನೋಡ್ತಾ ನೋಡ್ತಾ ಈ ಸಿನಿಮಾ ಥಿಯೇಟರ್‌ಗಳಲ್ಲಿ ಕಚ್ಚಿಕೊಂಡಿತ್ತು. ಪ್ರೇಕ್ಷಕರು ಫ್ಯಾಮಿಲಿ ಸಮೇತ ಆಕಾಶ್ ಹಾಗೂ ಅಂಜಲಿ ಜೋಡಿಯ ಆಫ್ಟರ್ ಮ್ಯಾರೇಜ್ ಪ್ರೇಮ್‌ ಕಹಾನಿ ನೋಡಲು ಮುಗಿಬಿದ್ದರು. ಅದಕ್ಕೆ ಮನೋಮೂರ್ತಿ ಸಂಗೀತದ ಬಲ ಸಿಕ್ಕಿತ್ತು. ಮುಂದೆ ಸತತ 500 ದಿನಗಳ ಕಾಲ ಪ್ರದರ್ಶನ ಕಂಡ ಸಿನಿಮಾ ದಾಖಲೆ ಬರೀತು.

     ಫ್ಯಾಮಿಲಿ ಹಿಟ್ 'ಮಿಲನ' ಸಿನಿಮಾ

    ಫ್ಯಾಮಿಲಿ ಹಿಟ್ 'ಮಿಲನ' ಸಿನಿಮಾ

    'ಮಿಲನ' ಚಿತ್ರದಲ್ಲಿ ಅಪ್ಪು ಪಕ್ಕಾ ಫ್ಯಾಮಿಲಿಮ್ಯಾನ್ ಆಗಿ ನಟಿಸಿದ್ದರು. ಆರ್‌ಜೆ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದರು. ಮಲಯಾಳಿ ಚೆಲುವೆ ಪಾರ್ವತಿ ಅಭಿನಯವೂ ಚಿತ್ರಕ್ಕೆ ಪ್ಲಸ್ ಆಗಿತ್ತು. ಮುಖ್ಯಮಂತ್ರಿ ಚಂದ್ರು, ಸುಮಿತ್ರಾ, ರಂಗಾಯಣ ರಘು, ಸಿಹಿಕಹಿ ಚಂದ್ರು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. 'ಇಷ್ಟಂ ಎನಿಕ್ಕಿಷ್ಟಂ' ಹೆಸರಿನಲ್ಲಿ ಚಿತ್ರ ಮಲಯಾಳಂಗೂ ಡಬ್ ಆಗಿ ರಿಲೀಸ್ ಆಗಿತ್ತು. ಅದು ಮಲ್ಟಿಪ್ಲೆಕ್ಸ್‌ಗಳ ಜಮಾನ ಶುರುವಾಗುತ್ತಿದ್ದ ಕಾಲ. ಅಂತ ಸಮಯಲ್ಲಿ 'ಮಿಲನ' ಮಲ್ಟಿಪ್ಲೆಕ್ಸ್‌ನಲ್ಲಿ 500 ದಿನ ಪ್ರದರ್ಶನ ಕಂಡಿತ್ತು.

    English summary
    Puneeth Rajkumar Starrer Milana vs Upendra And Darshan Starrer Anatharu Unknown Facts. Milana And Anatharu both Movies released on the same day 15 Years Ago.
    Friday, September 16, 2022, 13:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X