6 ವರ್ಷ ಪೂರೈಸಿದ 'ರಾಜಕುಮಾರ': ಅಪ್ಪು ಬ್ಲಾಕ್‌ಬಸ್ಟರ್ ಸಿನಿಮಾ ದಾಖಲೆಗಳ ಬಗ್ಗೆ ಅಭಿಮಾನಿಗಳ ಚರ್ಚೆ

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಸಿನಿ ಕರಿಯರ್‌ನ ಬಿಗ್ಗೆಸ್ಟ್ ಬ್ಲಾಕ್‌ಬಸ್ಟರ್ ಸಿನಿಮಾ 'ರಾಜಕುಮಾರ' 6 ವರ್ಷ ಪೂರೈಸಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಸಂಭ್ರಮಿಸುತ್ತಿದ್ದಾರೆ. 2017 ಮಾರ್ಚ್ 24ರಂದು ತೆರೆಕಂಡ ಈ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ ಬರೆದ ದಾಖಲೆಗಳು ಒಂದೆರಡಲ್ಲ. ದೊಡ್ಮನೆ ಹುಡ್ಗ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಆಲ್‌ಟೈಮ್ ಫೇವರಿಟ್ ಸಿನಿಮಾ 'ರಾಜಕುಮಾರ'.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಜಕುಮಾರ' ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಪವರ್‌ಫುಲ್ ಟೈಟಲ್‌ನಲ್ಲಿ ಸಿನಿಮಾ ಸೆಟ್ಟೇರಿದಾಗಲೇ ಅರ್ಧ ಗೆದ್ದುಬಿಟ್ಟಿತ್ತು. ವಿ. ಹರಿಕೃಷ್ಣ ಸಂಗೀತ ಚಿತ್ರಕ್ಕೆ ಆನೆಬಲ ತಂದುಕೊಟ್ಟಿತ್ತು. ಅದ್ಧೂರಿ ಸ್ವಾಗತ ಸಿಕ್ಕಿದ್ದ ಸಿನಿಮಾ ಮೊದಲ ದಿನವೇ ಬಾಕ್ಸಾಫೀಸ್ ಶೇಕ್ ಮಾಡಿ ಭಾರೀ ಓಪನಿಂಗ್ ಪಡೆದುಕೊಂಡಿತ್ತು. ನಿಧಾನವಾಗಿ 'ರಾಜಕುಮಾರ'ನ ದಾಖಲೆಗಳ ಬೇಟೆ ಶುರುವಾಯಿತು. 'KGF' ಚಾಪ್ಟರ್-1 ಬರೋಕು ಮುನ್ನ ಕನ್ನಡದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನು ದಾಖಲೆ 'ರಾಜಕುಮಾರ'ನ ಹೆಸರಿನಲ್ಲಿತ್ತು.

Puneeth Rajkumar Starrer Rajakumara Movie Completes 6 Years; Know Facts about the movie

ಆಕ್ಷನ್, ಕಾಮಿಡಿ, ಎಮೋಷನ್ ಎಲ್ಲವನ್ನು ಹದವಾಗಿ ಬೆರಸಿ ಸಂತೋಷ್ ಆನಂದ್‌ರಾಮ್ 'ರಾಜಕುಮಾರ' ಸಿನಿಮಾ ಕಟ್ಟಿಕೊಟ್ಟಿದ್ದರು. ಹೊಂಬಾಳೆ ಸಂಸ್ಥೆ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿ ರಿಲೀಸ್ ಮಾಡಿತ್ತು. 45ರಿಂದ 50 ಥಿಯೇಟರ್‌ಗಳಲ್ಲಿ ರಾಜಕುಮಾರ ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿತ್ತು. ಇಂತಾದೊಂದು ಸಕ್ಸಸ್ ಮತ್ಯಾವುದೇ ಚಿತ್ರಕ್ಕೂ ಸಿಕ್ಕಿರಲಿಲ್ಲ. ಮೈಸೂರಿನ ಮಲ್ಟಿಪ್ಲೆಕ್ಸ್‌ನಲ್ಲಿ 100 ದಿನ ಪ್ರದರ್ಶನ ಕಂಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅರಮನೆ ನಗರಿಯಲ್ಲಿ 4 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.

ಅಪ್ಪು ಸಂಯಮದ ನಟನೆ, ಡ್ಯಾನ್ಸ್ ಹಾಗೂ ಆಕ್ಷನ್ ಸಿನಿರಸಿಕರ ಮನಗೆದ್ದಿತ್ತು. ಪುನೀತ್‌ ರಾಜ್‌ಕುಮಾರ್ ಸಿನಿಮಾಗಳಿಗೆ ಫ್ಯಾಮಿಲಿ ಆಡಿಯನ್ಸ್ ಇದ್ದಾರೆ. 'ರಾಜಕುಮಾರ' ಸಿನಿಮಾ ನೋಡಲು ಪ್ರೇಕ್ಷಕರು ಫ್ಯಾಮಿಲಿ ಸಮೇತರಾಗಿ ಥಿಯೇಟರ್‌ಗಳಿಗೆ ಎಂಟ್ರಿ ಕೊಟ್ಟರು. 'ಬೊಂಬೆ ಹೇಳುತೈತೆ' ಮಾತ್ರವಲ್ಲ 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಸಾಂಗ್ ಮಕ್ಕಳ ಮನಗೆದ್ದಿತ್ತು. ಪರೀಕ್ಷೆಗಳು ಮುಗಿದ ಮೇಲೆ ಮಕ್ಕಳ ಸಮೇತ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಬಂದಿದ್ದರು. ಪರಿಣಾಮ ಬಾಕ್ಸಾಫೀಸ್‌ನಲ್ಲಿ 'ರಾಜಕುಮಾರ'ನ ಆರ್ಭಟ ಜೋರಾಗಿತ್ತು.

Puneeth Rajkumar Starrer Rajakumara Movie Completes 6 Years; Know Facts about the movie

ಅಂದಾಜು 75 ಕೋಟಿ ರೂ. ಕಲೆಕ್ಷನ್ ಮಾಡಿ 'ರಾಜಕುಮಾರ' ಸಿನಿಮಾ ಹೊಂಬಾಳೆ ಸಂಸ್ಥೆಗೆ ಮೊದಲ ಬ್ಲಾಕ್‌ಬಸ್ಟರ್‌ ಹಿಟ್ ತಂದುಕೊಟ್ಟಿತ್ತು. ಕನ್ನಡ ಚಿತ್ರರಂಗದಲ್ಲಿ 6 ವರ್ಷಗಳ ಹಿಂದೆ ಒಂದೇ ಭಾಷೆಯಲ್ಲಿ 75 ಕೋಟಿ ರೂ. ಕಲೆಕ್ಷನ್ ಅಂದ್ರೆ ತಮಾಷೆ ಮಾತಲ್ಲ. ಚಿತ್ರದ 'ಬೊಂಬೆ ಹೇಳುತೈತೆ' ಸಾಂಗ್ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿತ್ತು. ಮೊದಲು ಬಂದ ಮೇಕಿಂಗ್ ವಿಡಿಯೋ ಸಾಂಗ್ ಹಾಗೂ ವಿಡಿಯೋ ಸಾಂಗ್ ಸೇರಿ 200 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿದೆ. ಅಭಿಮಾನಿಗಳ ಫೇವರಿಟ್ ಪುನೀತ್ ಸಿನಿಮಾ ಸಾಂಗ್ಸ್‌ ಲಿಸ್ಟ್‌ನಲ್ಲಿ ಇದಕ್ಕೆ ಮೊದಲ ಸ್ಥಾನ ಇದ್ದೇ ಇರುತ್ತೆ.

ಕನ್ನಡ ಸಿನಿಮಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚು ಸದ್ದು ಮಾಡಲ್ಲ. ಕನ್ನಡ ಸಿನಿಮಾಗಳಿಗೆ ಶೋಗಳು ಸಿಗಲ್ಲ ಎನ್ನುವ ಆರೋಪ ಇದೆ. ಆದರೆ 'ರಾಜಕುಮಾರ' ಸಿನಿಮಾ 87 ದಿನಗಳಲ್ಲಿ ಒಟ್ಟು 7577 ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿತ್ತು. ಸಿನಿಮಾ ರಿಲೀಸ್ ಆದ 6 ವಾರಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಬರೋಬ್ಬರಿ 6000 ಪ್ರದರ್ಶನ ಕಂಡು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇನ್ನು ಸಿನಿಮಾ ಟಿವಿ ರೈಟ್ಸ್ ಭಾರೀ ಮೊತ್ತಕ್ಕೆ ಸೇಲಾಗಿತ್ತು. ಫಸ್ಟ್ ಪ್ರೀಮಿಯರ್‌ನಲ್ಲಿ ಹೆಚ್ಚು ಟಿಆರ್‌ಪಿ ಕೂಡ ಗಳಿಸಿತ್ತು. ತಂದೆ- ಮಗನ ಅನುಬಂಧ, ಪೋಷಕರನ್ನು ವೃದ್ಧಾಶ್ರಮಕ್ಕೆ ಬಿಡುವ ಮಕ್ಕಳಿಗೆ ನೀತಿಪಾಠ ಚಿತ್ರದಲ್ಲಿತ್ತು.

More from Filmibeat

English summary
Puneeth Rajkumar Starrer Rajakumara Movie Completes 6 Years; Know Facts about the movie. The film released in over 350 screens across Karnataka, collected ₹75 crore. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X