ಅಪ್ಪು- ರಮ್ಯಾ ಮಾತ್ರವಲ್ಲ, RCB ತಂಡಕ್ಕೆ ಬೇರೆ ಯಾರೆಲ್ಲಾ ರಾಯಭಾರಿಗಳಾಗಿದ್ದರು ಗೊತ್ತಾ?

ಮತ್ತೆ ಐಪಿಎಲ್ ಫೀವರ್ ಶುರುವಾಗಿದೆ. ಮತ್ತೆ ತುಂಬಿ ತುಳುಕುವ ಕ್ರಿಕೆಟ್ ಸ್ಟೇಡಿಯಂ ಗ್ಯಾಲರಿ, ಮೈದಾನಗಳಲ್ಲಿ ಸಿಕ್ಸರ್- ಬೌಂಡರಿ, ದುಡ್ಡು ಕೊಟ್ಟು ಕರೆತಂದವರ ಆಟ, ನೂರಾರು ಕೋಟಿ ಸುರಿದು ಆಡಿಸುವವರ ಹಠ, ಅಭಿಮಾನಿಗಳ ಹರ್ಷದ ಹೊಳೆ, ಗೆದ್ದವರ ಆರ್ಭಟ, ಸೋತವರ ಸಂಕಟ, ಎಲ್ಲವನ್ನು ಸಮಯ ಬಂತು.

ದೇಶದಲ್ಲಿ ಕ್ರಿಕೆಟ್ ಮಹಾಹಬ್ಬ ಐಪಿಎಲ್ ಆರಂಭಕ್ಕೆ ಇನ್ನೊಂದೇ ದಿನ ಬಾಕಿಯಿದೆ. ಇತ್ತೀಚೆಗೆ ನಡೆದ ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಿರಾಟ್ ಕೊಹ್ಲಿ ಕನ್ನಡ ಪದಗಳು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಗಮನ ಸೆಳೆದಿತ್ತು. ಸ್ಯಾಂಡಲ್‌ವುಡ್‌ಗೂ- ಕ್ರಿಕೆಟ್ ನಂಟು ಹಳೆಯದು. ಅಣ್ಣಾವ್ರ ಕಾಲದಿಂದಲೂ ಸಿನಿಮಾ ತಾರೆಯರು ಒಟ್ಟಿಗೆ ಸೇರಿ ಕ್ರಿಕೆಟ್ ಆಡುತ್ತಾ ಬರುತ್ತಿದ್ದಾರೆ. ಸಾಹಸಸಿಂಹ ಡಾ. ವಿಷ್ಣುವರ್ಧನ್‌ಗೆ ಕ್ರಿಕೆಟ್ ಆಸಕ್ತಿ ಹೆಚ್ಚಿತ್ತು. ಸ್ನೇಹಲೋಕ ಎನ್ನುವ ಸ್ನೇಹಿತರ ತಂಡ ಕಟ್ಟಿಕೊಂಡು ಜಯನಗರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಾಡುತ್ತಿದ್ದರು.

Puneeth Rajkumar to Deepika Padukone list of Royal challengers bangalore brand ambassadors in IPL

ಅಂಬರೀಶ್ ಕೂಡ ಕ್ರಿಕೆಟ್ ಸ್ಟೇಡಿಯಂನದಲ್ಲಿ ಕಾಣಿಸಿಕೊಂಡಿದ್ದು ಇದೆ. ರಾಜ್‌ ಕಪ್ ಟೂರ್ನಿಗಳಲ್ಲಿ ಕೂಡ ಕನ್ನಡ ಸಿನಿಮಾ ತಾರೆಯರು ಆಡುತ್ತಾ ಬರುತ್ತಿದ್ದಾರೆ. ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಶುರುವಾದ ಬಳಿಕ ಸ್ಯಾಂಡಲ್‌ವುಡ್‌ ಕ್ರಿಕೆಟ್ ಕ್ರೇಜ್ ಮತ್ತಷ್ಟು ಚೆನ್ನಾಗಿತು. ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ 10 ಸೀಸನ್‌ಗಳಲ್ಲಿ ಭಾಗಿ ಆಗುತ್ತಾ ಬರ್ತಿದೆ. ಈ ವರ್ಷ ಕೂಡ ತಂಡ ಫೈನಲ್ ತಲುಪಿತ್ತು. ಬಳಿಕ ನಟ ಸುದೀಪ್ ನೇತೃತ್ವದಲ್ಲಿ KCC ಟೂರ್ನಿ ಆರಂಭವಾಯಿತು. 4 ಸೀಸನ್‌ ಮುಕ್ತಾಯವಾಗಿದೆ. ಒಟ್ನಲ್ಲಿ ಸ್ಯಾಂಡಲ್‌ವುಡ್ ಹಾಗೂ ಕ್ರಿಕೆಟ್ ನಂಟು ಬಹಳ ದೊಡ್ಡದು.

ಇಷ್ಟಕ್ಕೇ ಮುಗಿಯಲ್ಲ. ಕನ್ನಡ ಚಿತ್ರರಂಗ ಹಾಗೂ ಕ್ರಿಕೆಟ್ ಬಾಂಧವ್ಯ. IPL ಕ್ರಿಕೆಟ್ ಟೂರ್ನಿ ಆರಂಭವಾದಾಗ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ಸಿನಿಮಾ ತಾರೆಯರನ್ನು ಬಳಸಿಕೊಳ್ಳಲಾಯಿತು. ಶಾರುಖ್ ಖಾನ್, ಜೂಹ್ಲಿ ಚಾವ್ಲಾ ಹಾಗೂ ಪ್ರೀತಿ ಜಿಂಟಾ ಕ್ರಿಕೆಟ್ ಫ್ರಾಂಚೈಸಿಗಳನ್ನು ಕೊಂಡುಕೊಂಡರು. RCB ತಂಡ ಕನ್ನಡ ಸಿನಿಮಾ ತಾರೆಯರನ್ನು ತಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿಕೊಂಡಿತ್ತು.

ರಿಯಲ್ ಸ್ಟಾರ್ ಉಪೇಂದ್ರ ಮೊದಲಿಗೆ ಆರ್‌ಸಿಬಿ ತಂಡ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದರು. ಮೊದಲ ಎರಡು ಸೀಸನ್‌ಗಳಲ್ಲಿ ಅವರು ಆರ್‌ಸಿಬಿ ಜೆರ್ಸಿ ತೊಟ್ಟು ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 2 ಸೀಸನ್‌ಗಳಲ್ಲಿ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್‌ಗೆ ಆ ಅವಕಾಶ ಸಿಕ್ಕಿತ್ತು. ಬಳಿಕ ಆಕೆ ಸಿನಿಮಾಗಳಲ್ಲಿ ಬಹಳ ಬ್ಯುಸಿ ಇರುವ ಕಾರಣ ಅದರಿಂದ ದೂರ ಉಳಿದರು.

Puneeth Rajkumar to Deepika Padukone list of Royal challengers bangalore brand ambassadors in IPL

2010ರಲ್ಲಿ ದೀಪಿಕಾ ಪಡುಕೋಣೆ ಕೂಡ ಆರ್‌ಸಿಬಿ ತಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದರು. ಬಳಿಕ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕೂಡ ತಂಡದ ಪರ ಪ್ರಚಾರ ಕಾರ್ಯಗಳಲ್ಲಿ ಭಾಗಿ ಆಗಿದ್ದರು. ಅಪ್ಪು- ರಮ್ಯಾ ಸ್ಟೇಡಿಯಂನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಫೋಟೊಗಳು ಇವತ್ತಿಗೂ ವೈರಲ್ ಆಗುತ್ತಿದೆ.

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಆರ್‌ಸಿಬಿ ತಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಂಡಿದ್ದರು. ಮೊನ್ನೆ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ 'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡು ಮಾರ್ದನಿಸಿತ್ತು.

More from Filmibeat

English summary
Kannada actors who who cheered RCB team in IPL;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X