ಚಿರು ಜೊತೆ ಲಿಪ್ ಲಾಕ್ ಮಾಡಿದ್ದ ರಾಧಿಕಾ, ವಿಷ್ಣು ಜೊತೆ ನಿರಾಕರಿಸಿದ್ದೇಕೆ?
ಇವತ್ತಿಗೂ ಹಸಿಬಿಸಿ ದೃಶ್ಯಗಳು ಅಥವಾ ಲಿಪ್‌ಲಾಕ್ ದೃಶ್ಯಗಳಲ್ಲಿ ನಟಿಸಲು ಕೆಲ ನಟ, ನಟಿಯರು ಹಿಂದೇಟು ಹಾಕುತ್ತಾರೆ. ಕೆಲವರು ನೋ ಲಿಪ್‌ಲಾಕ್ ನಿಯಮ ಪಾಲಿಸುತ್ತಿದ್ದಾರೆ. ಆದರೆ ದಶಕಗಳ ಹಿಂದೆಯೇ ಕೆಲ ಚಿತ್ರಗಳಲ್ಲಿ ಇಂತಹ ಸನ್ನಿವೇಶಗಳಿತ್ತು. ಅದೊಂದು ಚಿತ್ರದಲ್ಲಿ ನಟ ವಿಷ್ಣುವರ್ಧನ್ ಜೊತೆ ರಾಧಿಕಾ ಲಿಪ್ ಲಾಕ್ ಮಾಡಲು ಹಿಂದೇಟು ಹಾಕಿದ್ದರು.
ಸಿನಿಮಾ ಅಂದರೆ ಅಭಿನಯ ಎನ್ನುವುದು ಎಲ್ಲರಿಗೂ ಗೊತ್ತು. ಆಕ್ಷನ್ ಸನ್ನಿವೇಶಗಳಲ್ಲಿ ನಾಯಕ ಖಳನಾಯಕನಿಗೆ ನಿಜವಾಗಿ ಹೊಡೆಯದೇ ಇದ್ದರೂ ಆ ರೀತಿ ನಟಿಸುತ್ತಾರೆ. ಒಂದಷ್ಟು ಟ್ರಿಕ್ಸ್ ಮಾಡಿ ಬಹಳ ನೈಜವಾಗಿ ಅಂತಹ ಸನ್ನಿವೇಶಗಳನ್ನು ತೆರೆಮೇಲೆ ತೋರಿಸಲಾಗುತ್ತದೆ. ಇಂತಹ ಸಾಕಷ್ಟು ಟ್ರಿಕ್ಸ್, ಡ್ಯೂಪ್ ಸಿನಿಮಾಗಳಲ್ಲಿ ನೋಡಬಹುದು. ಆದರೆ ನಾಯಕ-ನಾಯಕಿ ತಬ್ಬಿಕೊಳ್ಳುವುದು, ಮುತ್ತು ಕೊಡುವುದನ್ನು ಮಾಡಲೇಬೇಕು.

ಇತ್ತೀಚಿನ ವರ್ಷಗಳಲ್ಲಿ ಲಿಪ್‌ಲಾಕ್ ಸನ್ನಿವೇಶಗಳು ಸರ್ವೇಸಾಧಾರಣ ಎನ್ನುವಂತಾಗಿದೆ. ಕೆಲ ನಟಿಯರು ಮೈಚಳಿ ಬಿಟ್ಟು ನಟಿಸಲು ಸಿದ್ಧರಿರುತ್ತಾರೆ. ಇನ್ನು ಪಾತ್ರ, ಸನ್ನಿವೇಶ ಬಯಸಿದರೆ ಆ ರೀತಿ ನಟಿಸೋಕೆ ಅಭ್ಯಂತರವಿಲ್ಲ ಎಂದು ಹೇಳುವ ನಟಿಯರು ಇದ್ದಾರೆ. ನಟಿಯರು ಮಾತ್ರವಲ್ಲ ಲಿಪ್‌ಲಾಕ್ ಸನ್ನಿವೇಶಗಳಿಗೆ ಸ್ಟಾರ್ ನಟರೂ ನಿರಾಕರಿಸಿರುವ ಉದಾಹರಣೆಗಳಿವೆ. ಕೆಲ ಬಿಟೌನ್ ನಟ-ನಟಿಯರು ನೋ ಲಿಪ್‌ಲಾಕ್ ನಿಮಯಕ್ಕೆ ಕಟ್ಟುಬಿದ್ದಿದ್ದಾರೆ.
ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿ ರಾಧಿಕಾ ಶರತ್‌ಕುಮಾರ್ ಲಿಪ್‌ಲಾಕ್ ಮಾಡಲು ನಿರಾಕರಿಸಿದ್ದರು ಎನ್ನುವ ವಿಚಾರವನ್ನು ಇದೀಗ ಖ್ಯಾತ ನಿರ್ದೇಶಕ ಸಾಯಿ ಪ್ರಕಾಶ್ ಬಹಿರಂಗಪಡಿಸಿದ್ದಾರೆ. ಕೆ. ಎಸ್. ಆರ್ ದಾಸ್ ನಿರ್ದೇಶನದ 'ಸತ್ಯಂ ಶಿವಂ ಸುಂದರಂ' ಚಿತ್ರದಲ್ಲಿ ವಿಷ್ಣು ಜೋಡಿಯಾಗಿ ರಾಧಿಕಾ ನಟಿಸಿದ್ದರು. ಆ ಚಿತ್ರಕ್ಕೆ ಸಾಯಿ ಪ್ರಕಾಶ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ರಘುರಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಯಿ ಪ್ರಕಾಶ್ ಭಾಗವಹಿಸಿದ್ದಾರೆ. ಈ ವೇಳೆ ತಮ್ಮ ಸಿನಿಬದುಕಿನ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ ನಟಿಸಿದ 'ಜ್ವಾಲ' ಚಿತ್ರದ ಕನ್ನಡ ರೀಮೆಕ್ 'ಸತ್ಯಂ ಶಿವಂ ಸುಂದರಂ'. ವಿಷ್ಣುವರ್ಧನ್ ಈ ಚಿತ್ರದಲ್ಲಿ ತ್ರಿಪಾತ್ರದಲ್ಲಿ ನಟಿಸಿದ್ದರು. ತೆಲುಗಿನಲ್ಲಿ ನಾಯಕಿಯಾಗಿ ನಟಿಸಿದ್ದ ರಾಧಿಕಾ ಕನ್ನಡದಲ್ಲೂ ಬಣ್ಣ ಹಚ್ಚಿದ್ದರು.
'ಸತ್ಯಂ ಶಿವಂ ಸುಂದರಂ' ಚಿತ್ರದಲ್ಲಿ ಆ ಕಾಲಕ್ಕೆ ಒಂದು ಲಿಪ್‌ಲಾಕ್ ಸನ್ನಿವೇಶ ಇತ್ತು. ಚಿರಂಜೀವಿ ಅವರಿಗೆ ರಾಧಿಕಾ ಬಹಳ ಕ್ಲೋಸ್ ಆಗಿ ಇದ್ದರು. ಒಟ್ಟಿಗೆ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಕ್ಲೋಸ್ ಫ್ರೆಂಡ್ಸ್. ಕನ್ನಡದಲ್ಲಿ ಲಿಪ್‌ಲಾಕ್ ಮಾಡಲು ರಾಧಿಕಾ ಮುಜುಗರಪಟ್ಟರು. ಆ ಸನ್ನಿವೇಶ ತೆಗೆಯುವಂತೆ ಕೇಳಿದ್ದರು. ವಿಷ್ಣುವರ್ಧನ್ ಅವರಿಗೆ ಕೊಂಚ ಟೆನ್ಷನ್ ಆಗಿತ್ತು ಎಂದು ಸಾಯಿ ಪ್ರಕಾಶ್ ನೆನಪಿಸಿಕೊಂಡಿದ್ದಾರೆ.
ಅದು ಚಿತ್ರದ ಕ್ಲೈಮ್ಯಾಕ್ಸ್. ಶಿವರಾಜ್(ವಿಷ್ಣುವರ್ಧನ್)ಪತ್ನಿ ಗೀತಾ (ರಾಧಿಕಾ) ಸಾಯುವ ಸನ್ನಿವೇಶ. ಅಂತಹ ಸಮಯದಲ್ಲಿ ಬರುವ ಇಂಟಿಮೇಟ್ ಸೀನ್. ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿ ಎಲ್ಲರೂ ಕಾಯುತ್ತಿದ್ದರು. ರಾಧಿಕಾ ಮೇಕಪ್ ರೂಮ್‌ನಲ್ಲಿ ಕೂತೂ ಬರಲ್ಲ ಎಂದರು. ನಿರ್ದೇಶಕರಾದ ದಾಸ್ ನನಗೆ ಹೇಳಿ ರಾಧಿಕಾ ಬಳಿಕ ಮಾತನಾಡಲು ಹೇಳಿದರು. ನಾನು ಹೋಗಿ "ಇದು ರೀಮೆಕ್ ಸಿನಿಮಾ, ಚಿರಂಜೀವಿ ರೀತಿ ವಿಷ್ಣುವರ್ಧನ್. ನೀವು ನಾಯಕ, ನಾಯಕಿ ಅಷ್ಟೆ. ಸನ್ನಿವೇಶಕ್ಕೆ ಗೌರವ ಕೊಡಬೇಕು ಎಂದು ವಿವರಿಸಿದೆ.
ಚಿರಂಜೀವಿ ನನ್ನ ಸ್ನೇಹಿತರು, ಅದಕ್ಕೆ ಮಾಡಿದೆ, ಹಾಗೆ ಹೀಗೆ ಎಂದು ಏನೇನೋ ಹೇಳಿದರು. ಬಳಿಕ ನಾನು ಒಪ್ಪಿಸಿ ಕರೆದುಕೊಂಡು ಬಂದು ಆ ಸನ್ನಿವೇಶದಲ್ಲಿ ನಟಿಸುವಂತೆ ಮಾಡಿದೆ ಎಂದು ಸಾಯಿ ಪ್ರಕಾಶ್ ನೆನಪಿಸಿಕೊಂಡಿದ್ದಾರೆ. 'ಸತ್ಯಂ ಶಿವಂ ಸುಂದರಂ' ಚಿತ್ರದಲ್ಲಿ ಆ ಸನ್ನಿವೇಶವನ್ನು ಸೆರೆ ಹಿಡಿದಿದ್ದಾರೆ. ಇಬ್ಬರು ಒಬ್ಬರನ್ನೊಬ್ಬರು ತಬ್ಬಿ ಚುಂಬಿಸುವಂತೆ ತೋರಿಸಿ ಅದನ್ನು ಕೊಂಚಮಟ್ಟಿಗೆ ಚೀಟ್ ಮಾಡಿರುವುದು ಗೊತ್ತಾಗುತ್ತದೆ.


Click it and Unblock the Notifications











