ಮಗಳು ಶಮಿಕಾ ಬಗ್ಗೆ ತಂದೆಯ ಕನಸು ಬಿಚ್ಚಿಟ್ಟ ನಟಿ ರಾಧಿಕಾ ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ ನಟನೆಯ 'ಭೈರಾದೇವಿ' ಸಿನಿಮಾ ಬಿಡುಗಡೆಗೆ ತಯಾರಿ ನಡೀತಿದೆ. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಕಾರಣಾಂತರಗಳಿಂದ ತೆರೆಗೆ ಬರುವುದು ತಡವಾಗಿತ್ತು. ಇದೀಗ ಸಿನಿಮಾ ಪ್ರಚಾರ ಆರಂಭವಾಗಿದೆ. ಅಕ್ಟೋಬರ್ 3ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

ಒಂದ್ಕಾಲದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದ ರಾಧಿಕಾ ಕುಮಾರಸ್ವಾಮಿ ಈಗ ಮಗಳ ಲಾಲನೆ ಪಾಲನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಎರಡು ವರ್ಷದ ಹಿಂದೆ 'ಕಾಂಟ್ರಾಕ್ಟ್' ಹಾಗೂ 'ರವಿ ಬೋಪಣ್ಣ' ಚಿತ್ರಗಳಲ್ಲಿ ನಟಿಸಿದ್ದರು. ಸದ್ಯ 'ಭೈರಾದೇವಿ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ.

Radhika kumaraswamy about Her Daughter Shamika s Film Industry Entry

'ಅಜಾಗ್ರತಾ' ಎನ್ನುವ ಮತ್ತೊಂದು ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿದ್ದಾರೆ. ಇನ್ನು 'ಭೈರಾದೇವಿ' ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಒಂದಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಜೊತೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಮಗಳು ಶಮಿಕಾ ಬಗ್ಗೆಯೂ ಸ್ವೀಟಿ ರಾಧಿಕಾ ಮಾತನಾಡಿದ್ದಾರೆ. ಮಗಳ ಬಗ್ಗೆ ತಂದೆಯ ಕನಸುಗಳನ್ನು ವಿವರಿಸಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಭೈರಾದೇವಿ' ಚಿತ್ರದಲ್ಲಿ ಮಗಳು ಶಮಿಕಾ ನಟಿಸಬೇಕಿತ್ತು ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ನನ್ನ ಮಗಳನ್ನು ನಿರ್ದೇಶಕರು ನೋಡಿ ಆಕೆಗೊಂದು ಪಾತ್ರ ಕೊಡೋಣ ಎಂದು ನಿರ್ಧರಿಸಿದದು. ನನ್ನ ಅನುಮತಿ ಕೇಳಿದರು, ನಾನು ಓಕೆ ಎಂದೆ. ಅವಳಿಗೆ ಒಂದು ಸೀನ್ ಕೊಟ್ಟರು. ಅವಳ ನಟನೆ ನೋಡಿ ಶಾಕ್ ಆಗಿತ್ತು. ಅಷ್ಟು ಸೊಗಸಾಗಿ ನಟಿಸಿದ್ದಳು.

Radhika kumaraswamy about Her Daughter Shamika s Film Industry Entry

ಶಮಿಕಾ ನಟನೆ ನೋಡಿ ನಿರ್ದೇಶಕರು ಖುಷಿಪಟ್ಟರು. ಆ ಸನ್ನಿವೇಶದಲ್ಲಿ ನಟಿಸಲಿ ಎಂದರು. ಆದರೆ ಇಡೀ ದಿನ ಶಮಿಕಾ ಅದೇ ಗುಂಗಿನಲ್ಲಿ ಕಳೆದು ಹೋಗಿದ್ದಳು. ಆ ಸನ್ನಿವೇಶದಲ್ಲಿ ನಟಿಸೋ ಬಗ್ಗೆ ಆಲೋಚಿಸುತ್ತಿದ್ದಳು. ರಾತ್ರಿ ನಿದ್ದೆಯಿಂದ ಎದ್ದು ನಾನು ಟ್ಯಾನ್ ಆಗಿದ್ದೀನಿ. ಬೆಳ್ಳಗೆ ಆಗಬೇಕು. ಸಿನಿಮಾದಲ್ಲಿ ನಟಿಸಬೇಕಲ್ಲಾ? ಎಂದಳು. ಇದನ್ನು ನೋಡಿ ಅಚ್ಚರಿ ಆಯಿತು. ಯಾಕೋ ಆಕೆಯ ಓದು ಬಿಟ್ಟು ಸಿನಿಮಾದತ್ತ ಒಲವು ಬೆಳೆಸಿಕೊಳ್ಳುತ್ತಾಳೆ ಎಂದು ನನಗೆ ಅನ್ನಿಸಿತು.

ಬಳಿಕ ನಿರ್ದೇಶಕರಿಗೆ ಕರೆ ಮಾಡಿ ನನ್ನ ಮಗಳು ಚಿತ್ರದಲ್ಲಿ ನಟಿಸೋದು ಬೇಡ. ನಾನು ಹೇಳಿದರೆ ಕೇಳಲ್ಲ. ನೀವೇ ಏನಾದರೂ ಹೇಳಿ, ಈ ಸಿನಿಮಾ ಬೇಡ, ಮುಂದಿನ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಎಂದು ಒಪ್ಪಿಸಿದೆ. ಅವರು ಅದೇ ರೀತಿ ಶಮಿಕಾಗೆ ಹೇಳಿ ಸಮಾಧಾನ ಮಾಡಿದ್ದರು ಎಂದು ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

ಮಗಳು ಟೆನ್ನಿಸ್ ಕಲಿಯುತ್ತಿದ್ದಾಳೆ. ಅವಳು ಟೆನ್ನಿಸ್ ಪ್ಲೇಯರ್ ಆಗಬೇಕು ಎನ್ನುವುದು ಅವರ ತಂದೆಯ ಆಸೆ. ಹಾಗಾಗಿ ತಂದೆ ಕನಸು ಪೂರೈಸಲು ಶಮಿತಾ ಟೆನ್ನಿಸ್ ಕಲಿಯುತ್ತಿದ್ದಾಳೆ ಎಂದು ರಾಧಿಕಾ ಕುಮಾರಸ್ವಾಮಿ ಟಿವಿ9 ವಾಹಿನಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಮ್ಮ ತಂದೆಗೆ ನಾನು ಹೀರೊಯಿನ್ ಆಗಬೇಕು ಎನ್ನುವ ಆಸೆ ಇತ್ತು. ದೇವರಾಜ್‌ ಹಾಗೂ ಮಾಲಾಶ್ರೀ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದರಂತೆ. ನೀನು ಮಾಲಾಶ್ರೀ ರೀತಿ ಆಗಬೇಕು ಎಂದು ಚಿಕ್ಕಂದಿನಲ್ಲೇ ತಂದೆ ಹೇಳುತ್ತಿದ್ದರು. ಹಾಗಾಗಿ ನನಗೂ ಸಿನಿಮಾ ನಟಿಯಾಗುವ ಆಸೆ ಚಿಗುರಿತು ಎಂದು ರಾಧಿಕಾ ಕುಮಾರಸ್ವಾಮಿ ವಿವರಿಸಿದ್ದಾರೆ.

'ಭೈರಾದೇವಿ' ಚಿತ್ರದಲ್ಲಿ ಅಘೋರಿಯಾಗಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದಾರೆ. ತಮ್ಮದೇ ಶಮಿಕಾ ಎಂಟರ್‌ಪ್ರೈಸಸ್ ಬ್ಯಾನರ್‌ ಅಡಿಯಲ್ಲಿ ಈ ಚಿತ್ರವನ್ನು ಸ್ವೀಟಿ ನಿರ್ಮಿಸಿದ್ದಾರೆ. ಆರ್ಮುಗ ರವಿಶಂಕರ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಜೈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಸಾಕಷ್ಟು ಸನ್ನಿವೇಶಗಳನ್ನು ಸ್ಮಶಾಣದಲ್ಲಿ ಸೆರೆಹಿಡಿಯಲಾಗಿದೆ.

More from Filmibeat

English summary
Radhika kumaraswamy on daughter's future; says her father want she become tennis player
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X