For Quick Alerts
  ALLOW NOTIFICATIONS  
  For Daily Alerts

  ತಮಿಳು ನಿರ್ದೇಶಕನೊಂದಿಗೆ ರಘುವೀರ್ ಪುತ್ರಿ ವಿವಾಹ, ಯಾರು ಆ ಡೈರೆಕ್ಟರ್?

  |

  ದಿವಂಗತ ನಟ ರಘುವೀರ್ ಹಿರಿಯ ಪುತ್ರಿ ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ. ರಘುವೀರ್-ಸಿಂಧು ದಂಪತಿ ಮಗಳು ಶ್ರೇಯಾ ತಾಯಿಯ ನಿಧನದ ಬಳಿಕ ಅಜ್ಜ-ಅಜ್ಜಿ ಕುಟುಂಬದೊಂದಿಗೆ ಅಲ್ಲಿಯೇ ಉಳಿದುಕೊಂಡರು. ಶಿಕ್ಷಣ, ಕೆಲಸ ಎಲ್ಲವೂ ಚೆನ್ನೈನಲ್ಲಿಯೇ ಮುಂದುವರಿಯಿತು. ಶ್ರೇಯಾಗೆ ವಿವಾಹ ಸಹ ಆಗಿದೆ.

  ತಮಿಳು ನಿರ್ದೇಶಕ ಅಶ್ವಿನ್ ಜೊತೆ ಶ್ರೇಯಾ ದಾಂಪತ್ಯ ಜೀವನ ಆರಂಭಿಸಿದ್ದು, ಒಂದು ಮಗು ಸಹ ಇದೆ. ಅಶ್ವಿನ್ ತಮಿಳಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸಿದ್ದು, ಸ್ಟಾರ್ ಡೈರೆಕ್ಟರ್‌ಗಳ ಬಳಿ ಸಹಾಯಕರಾಗಿ ಕೆಲಸ ಸಹ ಮಾಡಿದ್ದಾರೆ. ಅಷ್ಟಕ್ಕೂ, ರಘುವೀರ್ ಅಳಿಯ ಅಶ್ವಿನ್ ಹಿನ್ನೆಲೆ ಏನು? ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್? ಮುಂದೆ ಓದಿ....

  ಕನ್ನಡಿಗರ ಮುಂದೆ ಬಂದ ರಘುವೀರ್-ಸಿಂಧು ಪುತ್ರಿ ಶ್ರೇಯಾ ಕನ್ನಡಿಗರ ಮುಂದೆ ಬಂದ ರಘುವೀರ್-ಸಿಂಧು ಪುತ್ರಿ ಶ್ರೇಯಾ

  ಶ್ರೇಯಾ ಕುಟುಂಬಕ್ಕೆ ಆಪ್ತರಾಗಿದ್ದ ಅಶ್ವಿನ್

  ಶ್ರೇಯಾ ಕುಟುಂಬಕ್ಕೆ ಆಪ್ತರಾಗಿದ್ದ ಅಶ್ವಿನ್

  ಈ ಮೊದಲೇ ತಿಳಿಸಿದಂತೆ ತಮ್ಮ ಸಿಂಧು ಮನೆಯವರ ಜೊತೆ ಶ್ರೇಯಾ ಬೆಳೆದರು. ಕುಟುಂಬ ಆಪ್ತರಾಗಿದ್ದ ಅಶ್ವಿನ್ ಜೊತೆ ಬಹಳ ವರ್ಷದ ಪರಿಚಯ. ಹಾಗೆಯೇ ಪ್ರೀತಿ ಸಹ ಹುಟ್ಟಿಕೊಂಡಿತು. ನಂತರ ಈ ವಿಚಾರ ಮನೆಯವರಿಗೆ ತಿಳಿಸಿ ಅದ್ಧುರಿಯಾಗಿ ವಿವಾಹವಾದರು. ಈ ಮದುವೆಗೆ ಬೆಂಗಳೂರಿನಲ್ಲಿ ನೆಲೆಸಿರುವ ರಘುವೀರ್ ಕುಟುಂಬ ಸದಸ್ಯರೆಲ್ಲರು ಭಾಗಿಯಾಗಿದ್ದರು ಎನ್ನುವುದು ವಿಶೇಷ.

  ಶ್ರೇಯಾ-ಅಶ್ವಿನ್ ದಂಪತಿಗೆ ಒಂದು ಮಗು

  ಶ್ರೇಯಾ-ಅಶ್ವಿನ್ ದಂಪತಿಗೆ ಒಂದು ಮಗು

  ಶ್ರೇಯಾ 16ನೇ ವಯಸ್ಸಿನಲ್ಲಿದ್ದಾಗಲೇ ಅಶ್ವಿನ್ ಜೊತೆ ಪ್ರೀತಿಯಲ್ಲಿದ್ದರು. ರಘುವೀರ್ ಸಹ ಒಮ್ಮೆ ಅಶ್ವಿನ್‌ರನ್ನು ಭೇಟಿ ಮಾಡಿದ್ದರು. ಪ್ರೀತಿ ವಿಚಾರ ಗೊತ್ತಿದ್ದರೂ ಮಗಳ ವಿಚಾರವಾಗಿ ಏನೂ ಪ್ರಶ್ನಿಸಿರಲಿಲ್ಲ. ಅಂದ್ಹಾಗೆ, ಶ್ರೇಯಾ ಮತ್ತು ಅಶ್ವಿನ್ ದಂಪತಿಗೆ ಒಂದು ಮುದ್ದಾದ ಮಗು ಸಹ ಇದೆ.

  ನಟ ರಘುವೀರ್‌ ಪತ್ನಿ-ಮಗಳು ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ?ನಟ ರಘುವೀರ್‌ ಪತ್ನಿ-ಮಗಳು ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ?

  ಚೊಚ್ಚಲ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ

  ಚೊಚ್ಚಲ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ

  ನಿರ್ದೇಶಕ ಅಟ್ಲಿ ಹಾಗು ಸೌಂದರ್ಯ ರಜನಿಕಾಂತ್‌ರ ಬಳಿ ಅಶ್ವಿನ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ 'ಹಿಪಪಾದಿ' ಎಂಬ ಚಿತ್ರವನ್ನು ಮೊದಲ ಸಲ ನಿರ್ದೇಶಿಸುತ್ತಿದ್ದಾರ. ಕೋವಿಡ್ ಇರುವುದರಿಂದ ಚಿತ್ರೀಕರಣ ನಿಂತಿದೆ. ಕೊನೆಯ ಹಂತದಲ್ಲಿ ಕೆಲವೂ ದೃಶ್ಯಗಳು ಮಾತ್ರ ಬಾಕಿಯಿದೆ ಎಂದು ತಿಳಿದು ಬಂದಿದೆ.

  ಜೀವ ರವಿ ಪುತ್ರ ಅಶ್ವಿನ್

  ಜೀವ ರವಿ ಪುತ್ರ ಅಶ್ವಿನ್

  ಅಂದ್ಹಾಗೆ, ರಘುವೀರ್ ಅಳಿಯ ಅಶ್ವಿನ್ ತಮಿಳಿನ ಖ್ಯಾತ ಕಲಾವಿದ ಜೀವ ರವಿ ಅವರ ಪುತ್ರ. ಜೀವ ರವಿ ತಮಿಳು ಸಿನಿಮಾ ಹಾಗೂ ಕಿರುತೆರೆ ಲೋಕದಲ್ಲಿ ಪ್ರಸಿದ್ದ ಹೆಸರು. ಶ್ರೇಯಾ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಒಂದು ಸಲ ಮಾತ್ರ ರಘುವೀರ್ ಅವರನ್ನು ಅಶ್ವಿನ್‌ರನ್ನು ಭೇಟಿ ಮಾಡಿದ್ದರು.

  English summary
  Kannada late actor Raghuveer daughter shreya married tamil film director ashwin and settled in chennai.
  Friday, May 28, 2021, 13:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X