ಹೊಕ್ಕಳು ತೋರಿಸೋಕೆ 'ವೀರ ಮದಕರಿ' ಚಿತ್ರಕ್ಕೆ ನನ್ನ ಆಯ್ಕೆ ಮಾಡಿದ್ರಾ ಗೊತ್ತಿಲ್ಲ; ರಾಗಿಣಿ

ತುಪ್ಪದ ಹುಡುಗಿ ರಾಗಿಣಿ ತಮ್ಮ ಬೋಲ್ಡ್ ಪಾತ್ರಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಾ ಬರ್ತಿದ್ದಾರೆ. ವಿವಾದಗಳು ಏನೇ ಇದ್ದರೂ ಕೆಲ ಹಿಟ್ ಸಿನಿಮಾಗಳಲ್ಲಿ ರಾಗಿಣಿ ಮಿಂಚಿದ್ದಾರೆ. ಸುದೀಪ್ ನಿರ್ದೇಶಿಸಿ ನಟಿಸಿದ 'ವೀರ ಮದಕರಿ' ಚಿತ್ರದ ಮೂಲಕ ರಾಗಿಣಿ ಸಿನಿರಸಿಕರ ಮನಗೆದ್ದಿದ್ದರು.

ಇತ್ತೀಚಿನ ದಿನಗಳಲ್ಲಿ ರಾಗಿಣಿ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. The Tuhin Show ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಆಕೆ ಮಾತನಾಡಿದ್ದಾರೆ. ತಮ್ಮ ಸಿನಿ ಜೀವನ, ವೈಯಕ್ತಿಯ ಸಾಕಷ್ಟು ಸಂಗತಿಗಳನ್ನು ನೆನಪಿಸಿಕೊಂಡಿದ್ದಾರೆ. ಈ 'ವೀರ ಮದಕರಿ' ಚಿತ್ರದ ತಮ್ಮ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ. ಬರೀ ಹೊಕ್ಕಳು ತೋರಿಸೋಕೆ ಆ ಚಿತ್ರಕ್ಕೆ ನನ್ನ ಆಯ್ಕೆ ಮಾಡಿದ್ರಾ? ಗೊತ್ತಿಲ್ಲ ಎಂದು ರಾಗಿಣಿ ಹೇಳಿರುವುದು ವೈರಲ್ ಆಗ್ತಿದೆ.

Ragini Dwivedi Opens Up on Sudeep s Veera Madakari film navel obsession scenes

ರಾಜಮೌಳಿ ನಿರ್ದೇಶನದ 'ವಿಕ್ರಮಾರ್ಕುಡು' ರೀಮೆಕ್ 'ವೀರ ಮದಕರಿ'. ಕನ್ನಡದಲ್ಲಿ ಕಿಚ್ಚ ಸುದೀಪ್ ಆಕ್ಷನ್ ಕಟ್ ಹೇಳಿ ನಟಿಸಿದ್ದರು. ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ಮಾಡಿದ್ದ ನೀರಜಾ ಪಾತ್ರವನ್ನು ಕನ್ನಡದಲ್ಲಿ ರಾಗಿಣಿ ನಿಭಾಯಿಸಿದ್ದರು. ಅದೇ ಹೆಸರು ಆ ಪಾತ್ರಕ್ಕಿತ್ತು. ತೆಲುಗು ಟ್ಯೂನ್‌ಗಳನ್ನೇ ಕನ್ನಡದಲ್ಲಿ ಕೂಡ ಬಳಸಿಕೊಳ್ಳಲಾಗಿತ್ತು. ಸುದೀಪ್ ಜೊತೆ ರಾಗಿಣಿ ಬಿಂದಾಸ್ ಆಗಿ ಹೆಜ್ಜೆ ಹಾಕಿ ರಂಗೇರಿಸಿದ್ದರು.

'ವೀರ ಮದಕರಿ' ಚಿತ್ರದ ಬಗ್ಗೆ ನಿರೂಪಕ ತುಹಿನಂಶು ಇಂಟ್ರೆಸ್ಟಿಂಗ್ ಪ್ರಶ್ನೆ ಕೇಳಿದ್ದಾರೆ. ಆ ಚಿತ್ರದಲ್ಲಿ ಹೊಕ್ಕಳಿನ ಬಗ್ಗೆ ಆ ಗೀಳು ಯಾಕೆ? ನಿರ್ದೇಶಕ ಹೊಕ್ಕಳ ಆಫೀಸರಾ? ರಾಗಿಣಿಯನ್ನು ಕಂಡ ಕೂಡಲೇ ಸುದೀಪ್ ಹೊಕ್ಕಳು ಮುಟ್ಟಲು ನೋಡ್ತಿರ್ತಾರೆ ಎಂದು ಹೇಳಿದ್ದಾರೆ. ಅದಕ್ಕೆ ನಕ್ಕು ಪ್ರತಿಕ್ರಿಯಿಸಿರುವ ರಾಗಿಣಿ "ಆ ಸನ್ನಿವೇಶಗಳ ಹಿಂದೆ ಐಡಿಯಾ ಏನೋ ಗೊತ್ತಿಲ್ಲ. ನನ್ನ ಪ್ರಕಾರ ಮಹಿಳೆಯರಲ್ಲಿ ಹೊಟ್ಟೆ, ಹೊಕ್ಕಳು ಬಹಳ ಸೆಕ್ಸಿಯೆಸ್ಟ್ ಭಾಗ. ನಾಯಕನಿಗೆ ಹೊಕ್ಕಳು ಕಂಡರೆ ಮುಟ್ಟಬೇಕು ಎನ್ನುವ ವೀಕ್ನೆಸ್ ಇರುವಂತೆ ತೋರಿಸಿರಬಹುದು" ಎಂದಿದ್ದಾರೆ.

ಮಾತು ಮುಂದುವರೆಸಿರುವ ರಾಗಿಣಿ "ನನ್ನನ್ನು ಅದೇ ಕಾರಣಕ್ಕೆ ಚಿತ್ರಕ್ಕೆ ಆಯ್ಕೆ ಮಾಡಿದ್ರಾ ಗೊತ್ತಿಲ್ಲ. ನನ್ನ ಮುಖಕ್ಕಿಂತ ನನ್ನ ಹೊಕ್ಕಳು ಮುಖ್ಯವಾಯ್ತಾ, ಸಿನಿಮಾದಲ್ಲಿ ನೋಡ್ಬೇಕು.. ಆದರೂ ಚಿತ್ರದಲ್ಲಿ ನನಗೆ ಒಳ್ಳೆ ಪಾತ್ರ ಸಿಕ್ಕಿತ್ತು" ಎಂದಿದ್ದಾರೆ. ಇವತ್ತಿಗೂ ಕೆಲ ಸಿನಿಮಾಗಳಲ್ಲಿ ನಾಯಕಿಯರ ಪಾತ್ರವನ್ನು ಗ್ಲಾಮರ್ ಆಗಿ ಮಾದಕವಾಗಿ ತೋರಿಸುತ್ತಿದ್ದಾರೆ. ನಟಿಯರ ಸೀಳು ಎದೆ ತೋರಿಸುವುದು, ಹೊಕ್ಕಳು ತೋರಿಸುವುದು ಮಾಡ್ತಾರೆ. ಇತ್ತೀಚೆಗೆ ಬಾಲಿವುಡ್ ಸಿನಿಮಾಗಳಲ್ಲಿ ಅದೇ ತೋರಿಸಿದ್ದರು ಎಂದು ರಾಗಿಣಿ ಹೇಳಿದ್ದಾರೆ.

'ವೀರ ಮದಕರಿ' ಸಿನಿಮಾ ರಿಲೀಸ್ ಹೊತ್ತಲ್ಲಿ ನಾನು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆ ಸಿನಿಮಾ ಬಿಡುಗಡೆ ಆಗಿದ್ದು ಗೊತ್ತಾಗಲಿಲ್ಲ. ಆಗ ತಂತ್ರಜ್ಞಾನ ಇಷ್ಟು ಮುಂದುವರೆದಿರಲಿಲ್ಲ. ಸೋಶಿಯಲ್ ಮೀಡಿಯಾ ಇರಲಿಲ್ಲ. 2009ರ ಮಾರ್ಚ್ 20ರಂದು ಸಿನಿಮಾ ರಿಲೀಸ್ ಆಗಿತ್ತು. ಆಗ ನಾನು ಬೆಂಗಳೂರಿನಲ್ಲಿ ಇರಲಿಲ್ಲ. ನನಗೆ ಆಗ ಕನ್ನಡ ಭಾಷೆ ಗೊತ್ತಿರಲಿಲ್ಲ. ಸಿನಿಮಾ ಪ್ರಚಾರದ ಬಗ್ಗೆ ಗೊತ್ತಾಗಲಿಲ್ಲ. ಪೋಸ್ಟರ್‌ಗಳಲ್ಲಿ ಕೂಡ ನಾಯಕ ಚಿತ್ರ ದೊಡ್ಡದಾಗಿ ಇರ್ತಿತ್ತು. ಆಗ ಮಿಸ್‌ ಇಂಡಿಯಾಗಾಗಿ ಮುಂಬೈನಲ್ಲಿದ್ದೆ. ಮಿಸ್ ಇಂಡಿಯಾ ಮುಗಿಸಿ ಬಂದ ಮೇಲೆ ಎಲ್ಲರೂ ನನ್ನನ್ನು ಗುರ್ತಿಸಲು ಆರಂಭಿಸಿದರು ಎಂದು ರಾಗಿಣಿ ಮೆಲುಕು ಹಾಕಿದ್ದಾರೆ.

ನನ್ನ ಹೈಟ್ ಕಾರಣಕ್ಕೆ ಜನ ನನ್ನನ್ನು ಗುರ್ತಿಸಲು ಆರಂಭಿಸಿದರು. ದಕ್ಷಿಣದಲ್ಲಿ ಅನುಷ್ಕಾ ಶೆಟ್ಟಿ, ನಾನು ಸೇಮ್ ಹೈಟ್ ಇರುವುದು ಅನ್ನಿಸುತ್ತೆ. ಪುಣ್ಯ ನನ್ನ ಹೊಕ್ಕಳ ಕಾರಣಕ್ಕೆ ಅಲ್ಲ, ಎತ್ತರದ ಕಾರಣಕ್ಕೆ ಗುರ್ತಿಸುತ್ತಿದ್ದರು ಅನ್ನಿಸುತ್ತೆ ಎಂದು ರಾಗಿಣಿ ದ್ವಿವೇದಿ ನಕ್ಕಿದ್ದಾರೆ. ಬಳಿಕ 'ಕೆಂಪೇಗೌಡ' ಚಿತ್ರದಲ್ಲಿ ಮತ್ತೆ ಕಿಚ್ಚ ಸುದೀಪ್ ಜೋಡಿಯಾಗಿ ತುಪ್ಪದ ಬೆಡಗಿ ಮಿಂಚಿದ್ದರು.

More from Filmibeat

Read more about: sudeep ragini sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X