ರವಿ ಬೆಳಗೆರೆಯ 'ರಾಜ್ ಲೀಲಾ ವಿನೋದ' ಮುಖಪುಟದಲ್ಲಿರೋ ಫೋಟೊ ಅಸಲಿಯೋ.. ನಕಲಿಯೋ?
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. 87 ವರ್ಷ ಇಳಿವಯಸ್ಸಿನ ಈ ಹಿರಿಯ ನಟಿ ಬದುಕಿನಲ್ಲಿ ಸಾಕಷ್ಟು ನೋವುಗಳನ್ನು ಕಂಡಿದ್ದಾರೆ. ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಅಲ್ಲದೆ ಒಬ್ಬ ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾರೆ.
ಲೀಲಾವತಿಯವರದ್ದು ಹೋರಾಟದ ಬದುಕು. ಇಂತಹ ಹೋರಾಟದಲ್ಲಿ ಬದುಕಿನಲ್ಲೊಂದು ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಆದರೆ, ಅದಕ್ಕೆ ಸ್ಪಷ್ಟತೆ ಅವರಿಂದಲೂ ಸಿಕ್ಕಿಲ್ಲ. ಅಣ್ಣಾವ್ರ ಹಾಗೂ ಲೀಲಾವತಿಯವರ ಪುತ್ರ ವಿನೋದ್ ರಾಜ್ ಅನ್ನೋ ಸಂಗತಿ ಹಲವು ದಶಕಗಳಿಂದ ಚರ್ಚೆಯಾಗುತ್ತಿದೆ. ಜನಪ್ರಿಯ ಪತ್ರಕರ್ತ ದಿವಂಗತ ರವಿ ಬೆಳಗೆರೆ ಕೂಡ 'ರಾಜ್ ಲೀಲಾ ವಿನೋದ' ಅನ್ನೋ ಪುಸ್ತಕ ಬರೆದಿದ್ದರು. ಆಗಲೂ ವಿವಾದವೆದ್ದಿತ್ತು.

ಸ್ವತ: ಲೀಲಾವತಿ ಹಾಗೂ ವಿನೋದ್ ರಾಜ್ ಅವರೇ ನಮ್ಮ ವಿಷಯಕ್ಕೆ ಬರಬೇಡಿ ಅಂತ ಮನವಿ ಮಾಡಿಕೊಂಡರೂ ಪದೇ ಪದೆ ಕೆದುಕುತ್ತಲೇ ಇದ್ದರು. ರವಿ ಬೆಳಗೆರೆಯ 'ರಾಜ್ ಲೀಲಾ ವಿನೋದ' ಪುಸ್ತಕ ಬಿಡುಗಡೆಯಾದಾಗ, ಮುಖಪುಟದಲ್ಲಿ ಬಳಸಿದ ಫೋಟೊ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಆಗ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಕಿಡಿಕಾರಿದ್ದರು. ರವಿಬೆಳಗೆರೆ ಬಳಸಿದ ಫೋಟೋ ನಕಲಿ ಅಂತ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದರು. ಆ ಮಾತುಗಳ ಝಲಕ್ ಇಲ್ಲಿವೆ.
ವಿನೋದ್ ರಾಜ್ ಹೆಸರು ಬಂದಿದ್ದೇಗೆ?
"1987ರಲ್ಲಿ ವಿನೋದ್ ಚಿತ್ರರಂಗಕ್ಕೆ ಬರಬೇಕಾಗುತ್ತೆ. ಆಗ ಅವರಿಗೆ ವಿನೋದ್ ರಾಜ್ ಅಂತ ನಾಮಕರಣ ಮಾಡುತ್ತಾರೆ. ಆ ನಾಮಕರಣದ ಹಿಂದೆ ರಾಜ್‌ಕುಮಾರ್ ಹಾಗೂ ಲೀಲಾವತಿಯವರಿಂದ ಜನಿಸಿದವರು ಎಂಬ ಮಾತನ್ನು ಹರಿಬಿಡುತ್ತಾರೆ. ಆ ಸಿನಿಮಾ ಪ್ರಮೋಷನ್ ಸಲುವಾಗಿ. ಪುತ್ರ ವ್ಯಾಮೋಹ ಎಲ್ಲರಿಗೂ ಇರುತ್ತೆ. ಪುತ್ರ ಚಿತ್ರರಂಗದಲ್ಲಿ ಬೆಳಗಬೇಕು ಅನ್ನೋ ಆಸೆ ಲೀಲಾವತಿಯವರಿಗೂ ಇದೆ. ಹೀಗಾಗಿ ಲೀಲಾವತಿಯವರ ಬಗ್ಗೆ ಯಾರೇ ಮಾತಾಡಿದರೂ ಸ್ಪಷ್ಟವಾದ ಪ್ರತಿಕ್ರಿಯೆ ಕೊಡುತ್ತಿಲ್ಲ." ಎಂದು ಹರಿಹರ ಪುರ ಮಂಜುನಾಥ್ ಅಂದು ವಿನೋದ್ ಪಕ್ಕದಲ್ಲಿ ರಾಜ್ ಹೆಸರು ಬಂದಿದ್ದೇಗೆ? ಅನ್ನೋದನ್ನು ಹೇಳಿದ್ದರು.
"ರಾಜ್ ಲೀಲಾ ವಿನೋದ ಫೋಟೊ ಬಗ್ಗೆ ಕಿಡಿ"
'ರಾಜ್ ಲೀಲಾ ವಿನೋದ' ಪುಸ್ತಕದ ಮುಖಪುಟದಲ್ಲಿ ಡಾ.ರಾಜ್‌ಕುಮಾರ್, ಲೀಲಾವತಿ ಹಾಗೂ ಬಾಲಕ ವಿನೋದ್ ರಾಜ್ ಫೋಟೊವನ್ನು ಬಳಸಲಾಗಿತ್ತು. ಈ ಫೋಟೊ ಫೇಕ್ ಎಂದು ಹರಿಹರ ಪುರ ಮಂಜುನಾಥ್ ಕಿಡಿಕಾರಿದ್ದರು. "ಈ ಪುಸ್ತಕದ ಮುಖ ಪುಟವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿ ನೋಡಿ, ನಿಮಗೆ ಗೊತ್ತಾಗುತ್ತೆ. ಇಲ್ಲಿ ರವಿ ಬೆಳಗೆರೆಯವರು ಹೇಳುತ್ತಾರೆ. ಒಂದು ಗಂಡು ಹೆಣ್ಣು ಮಗುವಿನ ಜೊತೆ ಫೋಟೊವನ್ನು ತೆಗೆಸಿಕೊಳ್ಳುತ್ತಿದ್ದದ್ದು ಸರ್ವೆ ಸಾಮಾನ್ಯ. ಇದು ಗಂಡ ಹೆಂಡತಿ ಮಗುವಿನ ಫೋಟೊ ಅಂತ ಯಾರು ಬೇಕಾದರೂ ಹೇಳಬಹುದು ಅಂತ ಹೇಳ್ತಾರೆ." ಎಂದು ರವಿ ಬೆಳಗೆರೆ ಬರೆದ ಸಾಲುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಫೋಟೊ ನಕಲಿನಾ?
"ಇಲ್ಲಿ ಲೀಲಾವತಿಯವರ ಫೋಟೊವನ್ನು ನೋಡಿ. ರಾಜ್‌ಕುಮಾರ್ ಅವರ ಫೋಟೊವನ್ನು ನೋಡಿ. ಲೀಲಾವತಿ ಹಾಗೂ ರಾಜ್‌ಕುಮಾರ್ ಒಂದೇ ಆಳುತನ ಇದ್ದವರು. ಒಂದೇ ಎತ್ತರ ಇದ್ದವರು. ಸ್ವಲ್ಪ ವ್ಯತ್ಯಾಸ ಇರಬಹುದು. ಇಲ್ಲಿ ಲೀಲಾವತಿಯವರ ಫೋಟೊ ಎಷ್ಟು ದೊಡ್ಡದಾಗಿ ಕಾಣಿಸುತ್ತೆ. ರಾಜ್‌ಕುಮಾರ್ ಅವರ ಫೋಟೊ ಎಷ್ಟು ಚಿಕ್ಕದಾಗಿ ಕಾಣಿಸುತ್ತೆ ನೋಡಿ. ಇದು ಫೋಟೊ ಶಾಪ್‌ನಲ್ಲಿ ಮಾಡಿರುವ ಫೋಟೊ. ನಮ್ಮ ಪ್ರಕಾಶ್ ರಾಜ್ ಮೇಹು ಇನ್ನು ಹೆಚ್ಚು ಸಂಶೋಧನೆ ಮಾಡಿದ್ದಾರೆ." ಎಂದು ಹರಿಹರ ಪುರ ಮಂಜುನಾಥ್ ಆಕ್ರೋಶ ಹೊರ ಹಾಕಿದ್ದರು.
ಗೊಂದಲದಲ್ಲಿ ಬರೆದುಕೊಂಡಿದ್ದಾ?
"ಈ ಪುಸ್ತಕ ಬರೀತಿರೋದು ಲೀಲಾವತಿಯವರ ಜೀವನ ಚರಿತ್ರೆನಾ? ಅಥವಾ ರಾಜ್ ಲೀಲಾ ವಿನೋದನಾ? ವಿನೋದ್ ರಾಜ್, ಲೀಲಾವತಿ ಹಾಗೂ ರಾಜ್‌ಕುಮಾರ್ ಅವರ ಪುತ್ರ ಅಂತ ನಂಬಿಸೋದಾ? ಬಿಂಬಿಸೋದಾ? ಈ ರೀತಿಯ ಒಂದು ಗೊಂದಲದಲ್ಲಿ ಪುಸ್ತಕವನ್ನು ಬರೆದುಕೊಂಡು ಹೋಗುತ್ತಾರೆ. ಆದರೆ, ಇದರ ಒನ್ ಲೈನ್ ಸ್ಟೋರಿ ಇರೋದು ರಾಜ್‌ಕುಮಾರ್ ಹಾಗೂ ಲೀಲಾವತಿಯವರ ಪುತ್ರ ವಿನೋದ್ ರಾಜ್ ಅಂತ ನಂಬಿಸೋದು ಮತ್ತು ಬಿಂಬಿಸೋದು. ಆ ಕೆಲಸದಲ್ಲಿ ಅವರು ಸೋತಿದ್ದಾರೆ." ಎಂದು ಹರಿಹರ ಪುರ ಮಂಜುನಾಥ್ ಯೂಟ್ಯೂಬ್ ಚಾನೆಲ್‌ಗೆ ಹೇಳಿಕೆ ನೀಡಿದ್ದರು.


Click it and Unblock the Notifications











