ಫೆಬ್ರವರಿ 14 'ವ್ಯಾಲೆಂಟೈನ್ಸ್ ಡೇ' ಯಾಕಾಯ್ತು? ಪ್ರೇಮಿಗಳ ದಿನಕ್ಕೊಂದು ಇತಿಹಾಸವಿದೆ ಗೊತ್ತಾ?
ಒಂದು ಮನಸ್ಸು ತಾನು ಪ್ರೀತಿಸುವ ಮನಸ್ಸಿಗೆ ಪ್ರೇಮ ನಿವೇದನೆಯನ್ನು ತಿಳಿಸುವಂತಹ ದಿನ. ಪ್ರೇಮಿಗಳ ದಿನದಂದು ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರೆ, ಅದು ಸಫಲವಾಗುತ್ತದೆ ಅನ್ನೋ ನಂಬಿಕೆ ಅವರಲ್ಲಿ ಈಗಲೂ ಇದೆ.
ಪ್ರೇಮಿಗಳ ದಿನಕ್ಕೆ ಕ್ರಿ.ಶ. 4ನೇ ಶತಮಾನದಿಂದ ಈಗಿನವರೆಗೂ ಸುಧೀರ್ಘವಾದಂತಹ ಇತಿಹಾಸವಿದೆ. ರೋಮನ್ ರಾಜನಾದಂತಹ 'ಕ್ಲಾಡಿಯಸ್' ತನ್ನ ಸೈನಿಕರು ವಿವಾಹವಾದರೆ ಯುದ್ಧದಲ್ಲಿ ಸಮರ್ಥರಾಗಿರುವುದಿಲ್ಲವೆಂದು, ಸೈನಿಕರು ತಾವು ಪ್ರೀತಿಸುವವರನ್ನು ವಿವಾಹವಾಗದಂತೆ ಕಟ್ಟಾಜ್ಞೆಯನ್ನು ಹೊರಡಿಸಿದ್ದ. ಅಲ್ಲಿನ ಒಬ್ಬ ಸಂತ 'ವ್ಯಾಲೆಂಟೈನ್' ಎನ್ನುವವನು ಪರಸ್ಪರ ಪ್ರೀತಿಸುತ್ತಿದ್ದವರನ್ನು ವಿವಾಹವಾಗಲು ಸಹಕರಿಸುತ್ತಿದ್ದ. ಈ ವಿಚಾರ ತಿಳಿದ ರಾಜ 'ಕ್ಲಾಡಿಯಸ್' ಸಂತ 'ವ್ಯಾಲೆಂಟೈನ್' ಅನ್ನು ಫೆಬ್ರವರಿ 14ರಂದು ಗಲ್ಲಿಗೇರಿಸಿದನು. ಆಗಿನಿಂದಲೂ ಈ ದಿನವನ್ನು 'ವ್ಯಾಲೆಂಟೈನ್ಸ್ ಡೇ' ಎಂದು ಆಚರಿಸಲಾಗುತ್ತದೆ.

ಅಂದಿನಿಂದಲೂ ಈ ದಿನವು ಇತಿಹಾಸದ ಪುಟಗಳಲ್ಲಿ ಅತ್ಯಂತ ಉತ್ಕೃಷ್ಟ ಪದಗಳಿಂದ ಉಲ್ಲೇಖಗೊಂಡಿದೆ. ಇತಿಹಾಸವೇನೇ ಇರಲಿ. ಈಗಿರುವ ನಿಮ್ಮ ಭವಿಷ್ಯದಲ್ಲಿ ನಿಮ್ಮ ಪ್ರೀತಿಯ ಪಾತ್ರ ಎಷ್ಟರ ಮಟ್ಟಿಗೆ ಇದೆಯೆಂದು ಖಚಿತಪಡಿಸಿಕೊಳ್ಳಿ. ಏಕೆಂದರೆ, ಪ್ರೀತಿಗೆ ಜಗತ್ತನ್ನೇ ಗೆಲ್ಲುವ ಶಕ್ತಿಯದೆ. ಹಾಗೆಯೇ ಪ್ರೀತಿಗೆ ಎಲ್ಲವನ್ನೂ ನಾಶಪಡಿಸುವ ಸರ್ವಾಧಿಕಾರವೂ ಇದೆ. ಹಾಗಾಗಿ ನಿಮ್ಮ ಈಗಿನ ಈ ಪ್ರೀತಿಯು ನಿಮ್ಮ ಬದುಕಿಗೆ ಉಜ್ವಲ್ ಭವಿಷ್ಯತ್ತನ್ನು ತುಂಬಲಿ. ಹಲವಾರು ಉತ್ಕೃಷ್ಟ ಪ್ರೇಮಕಥೆಗಳ ಸಾಲಿನಲ್ಲಿ ನಿಮ್ಮ ಪ್ರೀತಿಯು ಸೇರಲಿ ಎಂದು ಹಾರೈಸುತ್ತೇವೆ.

ಪ್ರೀತಿಯಲ್ಲಿ ಸಾವು ಬದುಕಿನ ನಡುವೆ ಅಂತಹ ಅಂತರವೇನಿಲ್ಲ. ಯಾರನ್ನು ನೋಡಿದರೆ ಪ್ರಾಣ ಹೋದಂತಾಗುವುದೋ ಅವರನ್ನು ನೋಡಲು ಮತ್ತೆ ಮತ್ತೆ ಹಾತೊರೆಯುವುದೇ ಬದುಕು. ಪ್ರೀತಿ ಒಲಿದ ಮನಸ್ಸುಗಳಿಗೆ ಅಭಿನಂದನೆ. ಪ್ರೀತಿ ಒಲಿಯದ ಮನಸ್ಸುಗಳಿಗೆ ನಿಮ್ಮನ್ನು ಪ್ರೀತಿಸುವಂತ ಮನಸ್ಸು ಸಿಗುವವರೆಗೂ ಕಾಯಿರಿ. ಏಕೆಂದರೆ, ವಿರಹದ ಮಜವೇ ಬೇರೆ.


Click it and Unblock the Notifications











