twitter
    For Quick Alerts
    ALLOW NOTIFICATIONS  
    For Daily Alerts

    ಎರಡು ದಿನಗಳ ಚಿತ್ರೀಕರಣಕ್ಕಾಗಿ ರಜನಿಕಾಂತ್ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಗೊತ್ತೇ?

    |

    ಅನೇಕ ಸ್ಟಾರ್ ಕಲಾವಿದರ ಬೆಲೆ ಗಗನಕ್ಕೆ ಏರಿದೆ. ಚಿತ್ರಕ್ಕೆ ಪ್ರಚಾರ ನೀಡುವ ಸಲುವಾಗಿ ಕೆಲವರು ಸ್ಟಾರ್ ಕಲಾವಿದರನ್ನು ವಿಶೇಷ ಪಾತ್ರದಲ್ಲಿ ನಟಿಸುವಂತೆ ಆಹ್ವಾನಿಸುತ್ತಾರೆ. ಹೀಗೆ ಬರುವ ಕಲಾವಿದರಲ್ಲಿ ಕೆಲವರು ಇತರೆ ಸೌಲಭ್ಯಗಳ ಜತೆಗೆ ಐದಾರು ನಿಮಿಷದ ದೃಶ್ಯಗಳಿಗೇ ದುಬಾರಿ ಹಣ ಪಡೆದುಕೊಳ್ಳುತ್ತಾರೆ. ಇತ್ತೀಚೆಗೆ 'ವಕೀಲ್ ಸಾಬ್' ಚಿತ್ರದಲ್ಲಿ ನಟಿಸಲು ಒಂದು ಗಂಟೆಗೆ ಒಂದು ಲಕ್ಷ ರೂ. ಸಂಭಾವನೆ ನೀಡುವಂತೆ ಶ್ರುತಿ ಹಾಸನ್ ಡಿಮ್ಯಾಂಡ್ ಮಾಡಿದ್ದು ಸುದ್ದಿಯಾಗಿತ್ತು.

    Recommended Video

    Kannad Gothilla :ರಚಿತಾ ರಾಮ್ ಚಾನ್ಸ್ ಮಿಸ್ ಮಾಡ್ಕೊಂಡ್ರು ಹರಿಪ್ರಿಯಾ ಕ್ಯಾಚ್ ಹಾಕೊಂಡ್ರು |Mayuraa Raghavendra

    ಆದರೆ, ಸ್ಟಾರ್‌ ನಟನಾಗಿ ಬೆಳೆದರೂ ರಜನಿಕಾಂತ್ ಹಣಕಾಸಿನ ವಿಚಾರದಲ್ಲಿ ಈ ರೀತಿಯ ಡಿಮ್ಯಾಂಡ್‌ಗಳನ್ನು ಇಟ್ಟವರಲ್ಲ. ಅದರಲ್ಲಿಯೂ ತಮ್ಮ ಆಪ್ತರ ಸಿನಿಮಾಗಳಿಗೆ ಎಷ್ಟೋ ಬಾರಿ ನೆರವಾಗಿದ್ದರು. ಅದಕ್ಕೆ ಉದಾಹರಣೆ ಕನ್ನಡದ ಅಪರಂಜಿ ಚಿತ್ರ. 1984ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದರು. ಇದಕ್ಕಾಗಿ ಚೆನ್ನೈನಿಂದ ಬಂದು ಎರಡು ದಿನ ಶೂಟಿಂಗ್ ನಡೆಸಿದ್ದರಂತೆ ರಜನಿ. ಮುಂದೆ ಓದಿ...

    ಕಮಲ್ ಹಾಸನ್-ರಜನಿಕಾಂತ್ ಕನಸಿನ ಸಿನಿಮಾ ನಿಂತೋಯ್ತಾ? ಇಲ್ಲಿದೆ ಅಪ್ ಡೇಟ್ಕಮಲ್ ಹಾಸನ್-ರಜನಿಕಾಂತ್ ಕನಸಿನ ಸಿನಿಮಾ ನಿಂತೋಯ್ತಾ? ಇಲ್ಲಿದೆ ಅಪ್ ಡೇಟ್

    ಎರಡೇ ದಿನಕ್ಕಾಗಿ ಸಾಗರಕ್ಕೆ ತೆರಳಿದ್ದರು

    ಎರಡೇ ದಿನಕ್ಕಾಗಿ ಸಾಗರಕ್ಕೆ ತೆರಳಿದ್ದರು

    ರಜನಿಕಾಂತ್ ಆಗಲೇ ತಮಿಳು ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರು. ಅವರ ಕಾಲ್‌ಷೀಟ್‌ಗಾಗಿ ನಿರ್ಮಾಪಕರು ಕಾದು ಕೂರುತ್ತಿದ್ದರು. ಅವರ ಖ್ಯಾತಿ ಆಗಲೇ ದೇಶದಾದ್ಯಂತ ಹರಡಿತ್ತು. ಅವರನ್ನು ಹಾಕಿಕೊಂಡು ಸಿನಿಮಾ ಮಾಡುವುದೇ ದೊಡ್ಡ ಕನಸಾಗಿತ್ತು. ಹಾಗಿರುವಾಗ ರಜನಿಕಾಂತ್ ಸ್ನೇಹಿತನ ಚಿತ್ರದ ಕೇವಲ ಎರಡು ದಿನದ ಚಿತ್ರೀಕರಣಕ್ಕಾಗಿ ಶಿವಮೊಗ್ಗದ ಸಾಗರದವರೆಗೂ ಪ್ರಯಾಣಿಸಿ ಬಂದಿದ್ದರಂತೆ.

    ರವೀಂದ್ರನಾಥ್ ನಿರ್ದೇಶನದ ಅಪರಂಜಿ

    ರವೀಂದ್ರನಾಥ್ ನಿರ್ದೇಶನದ ಅಪರಂಜಿ

    ರವೀಂದ್ರನಾಥ್ ನಿರ್ದೇಶನದ 'ಅಪರಂಜಿ' ಚಿತ್ರದಲ್ಲಿ ರಜನಿಕಾಂತ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ರವೀಂದ್ರನಾಥ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವಂತೆ ರವೀಂದ್ರನಾಥ್ ಸ್ನೇಹಿತನಿಗೆ ಕೇಳಿದ್ದರು. ಎಷ್ಟು ದಿನದ ಶೂಟಿಂಗ್ ಇದೆ ಎಂದು ರಜನಿ ಕೇಳಿದ್ದರು. ಎರಡು ದಿನ ಬೇಕಾಗಬಹುದು ಎಂದಾಗ, ರಜನಿ ಹಾಗಾದರೆ ಚಿತ್ರೀಕರಣ ಯಾವತ್ತು ಎಂದು ತಿಳಿಸಿ ಬಂದುಬಿಡುತ್ತೇನೆ ಎಂದು ಹೇಳಿದ್ದರಂತೆ.

    ಸವಾಲು ಹಾಕಿ ವಿದೇಶಿ ಕಾರು ಕೊಂಡು ವಿದೇಶಿ ಡ್ರೈವರ್ ನೇಮಿಸಿಕೊಂಡಿದ್ದ ರಜನೀಕಾಂತ್ಸವಾಲು ಹಾಕಿ ವಿದೇಶಿ ಕಾರು ಕೊಂಡು ವಿದೇಶಿ ಡ್ರೈವರ್ ನೇಮಿಸಿಕೊಂಡಿದ್ದ ರಜನೀಕಾಂತ್

    ಎರಡು ಪ್ಯಾಕ್ ಸಿಗರೇಟ್

    ಎರಡು ಪ್ಯಾಕ್ ಸಿಗರೇಟ್

    ಚಿತ್ರೀಕರಣದ ಸಮಯಕ್ಕೆ ಸರಿಯಾಗಿ ಅಷ್ಟು ದೂರದಿಂದ ಪ್ರಯಾಣಿಸಿ ಬಂದ ರಜನಿ ಶೂಟಿಂಗ್ ಮುಗಿಸಿ ವಾಪಸ್ ಹೊರಡುವಾಗ ಸಂಭಾವನೆ ವಿಚಾರವನ್ನು ನಿರ್ಮಾಪಕರು ಪ್ರಸ್ತಾಪಿಸಿದರು. ಎರಡು ದಿನ ಶೂಟಿಂಗ್ ಮಾಡಿದ್ದಲ್ಲವೇ, ಎರಡು ಸಿಗರೇಟ್ ಪ್ಯಾಕ್ ತರಿಸಿಕೊಡಿ ಸಾಕು ಎಂದರಂತೆ. ಇದು ಇಡೀ ಚಿತ್ರತಂಡವನ್ನು ಅಚ್ಚರಿಗೊಳಿಸಿತ್ತು.

    ನ್ಯಾಯಾಧೀಶನ ಪುಟ್ಟ ಪಾತ್ರ

    ನ್ಯಾಯಾಧೀಶನ ಪುಟ್ಟ ಪಾತ್ರ

    ಅಪರಂಜಿ ಚಿತ್ರದಲ್ಲಿ ರಜನಿಕಾಂತ್ ನ್ಯಾಯಾಧೀಶನ ಪಾತ್ರದಲ್ಲಿ ನಟಿಸಿದ್ದರು. ಅಷ್ಟು ದೊಡ್ಡ ನಟನಿಗೆ ಅತಿಥಿ ಪಾತ್ರವಾದರೂ ನ್ಯಾಯಾಧೀಶನ ಪಾತ್ರದಲ್ಲಿ ಕೂರಿಸುವಷ್ಟು ಗೆಳೆತನದ ಸಲುಗೆಯನ್ನು ರವೀಂದ್ರನಾಥ್ ಹೊಂದಿದ್ದರು.

    ಒಟ್ಟಿಗೆ ಕಲಿತಿದ್ದ ರಜನಿ-ರವೀಂದ್ರನಾಥ್

    ಒಟ್ಟಿಗೆ ಕಲಿತಿದ್ದ ರಜನಿ-ರವೀಂದ್ರನಾಥ್

    ರಜನಿಕಾಂತ್ ಮತ್ತು ರವೀಂದ್ರನಾಥ್ ಅವರು 70ರ ದಶಕದಲ್ಲಿ ಮದ್ರಾಸ್ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಒಟ್ಟಿಗೆ ಕಲಿತಿದ್ದರು. ಹೀಗಾಗಿ ಅವರ ನಡುವೆ ಉತ್ತಮ ಬಾಂಧವ್ಯವಿತ್ತು. ಅವರೊಂದಿಗೆ ಅಶೋಕ್, ಹೇಮಾ ಚೌಧರಿ, ರಘುನಂದನ್ ಕೂಡ ಜತೆಗಿದ್ದರು. ರವೀಂದ್ರನಾಥ್ ಅವರು 'ವೀರಪ್ಪನ್', 'ನಮ್ಮೂರ ಹುಡುಗ', 'ತಾಯಿ ಕೊಟ್ಟ ತಾಳಿ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರು.

    ಸಹಾಯ ಮಾಡಿದ್ದ ರಜನಿಕಾಂತ್

    ಸಹಾಯ ಮಾಡಿದ್ದ ರಜನಿಕಾಂತ್

    ರವೀಂದ್ರನಾಥ್ 2014ರ ಮಾರ್ಚ್ 16ರಂದು ನಿಧನರಾಗಿದ್ದರು. ಆ ಸಮಯದಲ್ಲಿಯೂ ರಜನಿಕಾಂತ್ ನೆರವಾಗಿದ್ದರು. ಹೈದರಾಬಾದ್‌ಗೆ ತೆರಳಿದ್ದ ರವೀಂದ್ರನಾಥ್, ಅಲ್ಲಿನ ರೈಲ್ವೆ ಸ್ಟೇಷನ್‌ನಲ್ಲಿ ರೈಲು ಹತ್ತುವ ಸಮಯದಲ್ಲಿ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿದ್ದರು. ಅವರ ದೇಹವನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಅವಿವಾಹಿತರಾಗಿದ್ದ ರವೀಂದ್ರನಾಥ್ ಅವರ ಸಹೋದರರು ಮುಂಬೈ ಹಾಗೂ ಬೇರೆಡೆ ನೆಲೆಸಿದ್ದರು. ಅವರ ಮೃತದೇಹವನ್ನು ಸ್ನೇಹಿತರಿಗೆ ಹಸ್ತಾಂತರಿಸಲು ಪೊಲೀಸರು ಒಪ್ಪಿರಲಿಲ್ಲ. ಇದನ್ನು ತಿಳಿದ ರಜನಿಕಾಂತ್ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ದೇಹ ಬೆಂಗಳೂರು ತಲುಪುವಂತೆ ಮಾಡಿದ್ದರು.

    English summary
    Rajinikanth took two packs of cigarette as remuneration for working two days in his friend Ravindranath's directorial Aparanji Kannada movie.
    Thursday, July 16, 2020, 17:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X