twitter
    For Quick Alerts
    ALLOW NOTIFICATIONS  
    For Daily Alerts

    ರಜನೀಕಾಂತ್ ಮೌಲ್ಯ ಎಷ್ಟು ಕೋಟಿ? ಸಂಭಾವನೆ ಎಷ್ಟು?

    |

    ಇನ್ನೊಂದು ದಿನ ಕಳೆದರೆ ರಜನೀಕಾಂತ್‌ ವಯಸ್ಸು 71 ವರ್ಷವಾಗುತ್ತದೆ. ಡಿಸೆಂಬರ್ 12 ಸೂಪರ್ ಸ್ಟಾರ್ ಹುಟ್ಟುಹಬ್ಬ. ಬೆಂಗಳೂರಿನ ಸಣ್ಣ ಗಲ್ಲಿಯೊಂದರಲ್ಲಿ ಜನಿಸಿ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿರುವ ರಜನೀಕಾಂತ್ ಸಾಧನೆ ಹಲವರಿಗೆ ಸ್ಪೂರ್ತಿ ತುಂಬಬಲ್ಲದು.

    ಬಡತನದಲ್ಲಿದ್ದ ಕುಟುಂಬಕ್ಕೆ ಸಹಾಯವಾಗಲೆಂದು ನಟನೆಯ ಹುಚ್ಚಿಗೆ ವಿದಾಯ ಹೇಳಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನೀಕಾಂತ್. ಸಿನಿಮಾದಲ್ಲಿ ನಟಿಸಲು ಚೆನ್ನೈಗೆ ಬರಲು ಹಣವಿಲ್ಲದೆ ಗೆಳೆಯ ರಾವ್ ಬಹದ್ದೂರ್ ಔದಾರ್ಯದಿಂದ ನೀಡಿದ ಹಣ ಪಡೆದು ಚೆನ್ನೈಗೆ ಬಂದು ಇಂದು ಕೋಟ್ಯಂತರ ಆಸ್ತಿಯ ಒಡೆಯರಾಗಿದ್ದಾರೆ. ಅದು ಮಾತ್ರವೇ ಅಲ್ಲದೆ ನೂರಾರು ಕೋಟಿ ಜನರ ಹೃದಯದಲ್ಲಿ ಸ್ಥಾನವನ್ನೂ ಸಂಪಾದಿಸಿದ್ದಾರೆ.

    ರಜನೀಕಾಂತ್ ತಮಿಳುನಾಡಿದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ರಾಜ್ಯದ ರಾಜಕೀಯವನ್ನು ಬದಲಿಸುವಷ್ಟು ಪ್ರಭಾವವನ್ನು ಅವರು ತಮಿಳುನಾಡಿನ ಜನರ ಮೇಲೆ ರಾಜಕಾರಣಿಗಳ ಮೇಲೆ ಹೊಂದಿದ್ದಾರೆ. ಪ್ರಭಾವಿ ವ್ಯಕ್ತಿ ಮಾತ್ರವೇ ಅಲ್ಲ ಸಿರಿವಂತ ವ್ಯಕ್ತಿ ಸಹ. 1975 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ರಜನೀಕಾಂತ್ ಅವರ ಈಗಿನ ಆಸ್ತಿ ಮೌಲ್ಯವೆಷ್ಟು, ಅವರ ಸಂಭಾವನೆ ಎಷ್ಟು, ಹೊಂದಿರುವ ಕಾರುಗಳು ಯಾವುವು? ಇಲ್ಲಿದೆ ಪಟ್ಟಿ.

    ರಜನೀಕಾಂತ್‌ ಅವರ ಒಟ್ಟು ಆಸ್ತಿ ಮೌಲ್ಯ 365 ಕೋಟಿ ರುಪಾಯಿ. ಹಾಗೆ ನೋಡಿದರೆ ಇದು ಬಹಳ ಏನಲ್ಲ. ಇದಕ್ಕೆ ಕಾರಣವೂ ಇದೆ. ರಜನೀಕಾಂತ್ ತಮ್ಮ ಸಾಕಷ್ಟು ಆಸ್ತಿಯನ್ನು ದಾನ ಮಾಡಿದ್ದಾರೆ. ರಾಜಕೀಯ ಪಕ್ಷ ಕಟ್ಟುವ ಉದ್ದೇಶದಿಂದ ಸ್ಥಾಪಿಸಿದ ಸಂಘಗಳಿಗೆ ದೇಣಿಗೆ ನೀಡಿದ್ದಾರೆ. ಜೊತೆಗೆ ಮಕ್ಕಳಿಗೆ ಸಹ ಸಾಕಷ್ಟು ಆಸ್ತಿಯನ್ನು ನೀಡಿದ್ದಾರೆ ಹೀಗಾಗಿ ರಜನೀಕಾಂತ್‌ರ ಒಟ್ಟು ಆಸ್ತಿ ಮೌಲ್ಯ 365 ಕೋಟಿ ರುಪಾಯಿಗಳಿವೆ.

    ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು ರಜನೀ

    ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು ರಜನೀ

    ಭಾರತದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ರಜನೀಕಾಂತ್ ಒಬ್ಬರು. ರಜನೀಕಾಂತ್ ಅವರ ಸಂಭಾವನೆ ಸಿನಿಮಾದಿಂದ ಸಿನಿಮಾಕ್ಕೆ ವ್ಯತ್ಯಾಸವಾಗುತ್ತಿರುತ್ತದೆ. ಒಮ್ಮೊಮ್ಮೆ, ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳಿಂದ ಬಂದ ಹಣವನ್ನು ಸಂಭಾವನೆಯಾಗಿ ರಜನೀಕಾಂತ್ ಪಡೆಯುತ್ತಾರೆ. ಒಮ್ಮೊಮ್ಮೆ 50 ಕೋಟಿ ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ರೋಬೊ ಸಿನಿಮಾಕ್ಕಾಗಿ 100 ಕೋಟಿ ಸಂಭಾವನೆ ಪಡೆದಿದ್ದರು ಎಂದು ಸುದ್ದಿಯಾಗಿತ್ತು. ಸಿನಿಮಾ ಸಂಭಾವನೆ ಹೊರತಾಗಿಯೂ ರಜನೀಕಾಂತ್‌ಗೆ ಬೇರೆ ಆದಾಯಗಳು ಇವೆ. ಅವುಗಳಿಂದ ತಿಂಗಳಿಗೆ ಸುಮಾರು 2 ರಿಂದ ಮೂರು ಕೋಟಿ ಆದಾಯ ಬರುತ್ತದೆ.

    ಪೋಯಸ್ ಗಾರ್ಡನ್‌ನಲ್ಲಿ ರಜನೀ ನಿವಾಸ

    ಪೋಯಸ್ ಗಾರ್ಡನ್‌ನಲ್ಲಿ ರಜನೀ ನಿವಾಸ

    ರಜನೀಕಾಂತ್ ನಿವಾಸ ಚೆನ್ನೈನ ಅತ್ಯಂತ ದುಬಾರಿ ಏರಿಯಾ ಪೋಯಸ್ ಗಾರ್ಡನ್‌ನಲ್ಲಿದೆ. 2002 ರಲ್ಲಿಯೇ ಪೋಯಸ್ ಗಾರ್ಡನ್‌ನಲ್ಲಿ ಅದ್ಧೂರಿಯಾಗಿ ರಜನೀಕಾಂತ್ ಮನೆ ನಿರ್ಮಾಣ ಮಾಡಿದ್ದರು. ಆ ಮನೆಯನ್ನು ಕಾಲಾಂತರದಲ್ಲಿ ಅಪ್‌ಗ್ರೇಡ್ ಮಾಡುತ್ತಲೇ ಬಂದಿದ್ದಾರೆ. ಪೋಯಸ್‌ ಗಾರ್ಡನ್‌ನಲ್ಲಿ ಜಮೀನಿನ ಸದ್ಯದ ಮಾರುಕಟ್ಟೆ ಬೆಲೆ ಒಂದು ಚದರ ಅಡಿಗೆ 40 ರಿಂದ 50 ಸಾವಿರ ಇದೆ. ರಜನೀಕಾಂತ್ ಅವರು ಈಗ ವಾಸವಿರುವ ಮನೆಯ ಈಗಿನ ಮಾರುಕಟ್ಟೆ ದರವೇ ಸುಮಾರು 30 ಕೋಟಿ ಇದೆ. ರಜನೀಕಾಂತ್ ಮನೆಯ ಪಕ್ಕದಲ್ಲಿಯೇ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಮನೆ ಇದೆ.

    ಹಲವು ಐಶಾರಾಮಿ ಕಾರುಗಳಿವೆ

    ಹಲವು ಐಶಾರಾಮಿ ಕಾರುಗಳಿವೆ

    ರಜನೀಕಾಂತ್ ಬಳಿ ಹಲವು ಐಶಾರಾಮಿ ಕಾರುಗಳಿವೆ. ಕೆಲ ದಶಕಗಳ ಹಿಂದೆ ರಜನೀಕಾಂತ್ ಬಹುದೊಡ್ಡ ಕಾರ್ ಪ್ರಿಯರಾಗಿದ್ದರು. ಆದರೆ ವಯಸ್ಸಾದಂತೆ ಆಧ್ಯಾತ್ಮದ ಕಡೆ ವಾಲಿ ಸರಳ ಜೀವನ ಸಾಗಿಸಲು ಆರಂಭಿಸಿದರು. ಆದರೂ ರಜನೀಕಾಂತ್ ಬಳಿ ದೊಡ್ಡ ಕಾರ್ ಕಲೆಕ್ಷನ್ ಇದೆ. ರಜನೀ ಮೊದಲ ಬಾರಿಗೆ ಖರೀದಿಸಿದ ಪ್ರೀಮಿಯರ್ ಪದ್ಮಿನಿ ಕಾರು ಸೇರಿದಂತೆ 22 ಕೋಟಿ ಬೆಲೆಯ ಲಿಮೋಸಿನ್, ರೋಲ್ಸ್ ರಾಯ್ಸ್ ಪ್ಯಾಂಟಮ್, ಬಿಎಂಡಬ್ಲು ಎಕ್ಸ್ 5, ರೇಂಜ್ ರೋವರ್, ಬೆಂಟ್ಲಿ ಸೇರಿದಂತೆ ಸಾಮಾನ್ಯ ಕಾರುಗಳಾದ ಟೊಯೊಟಾ ಇನ್ನೋವಾ, ಹೋಡಾ ಸಿವಿಕ್ ಕಾರುಗಳಿವೆ.

     ಮುಂದಿನ ಸಿನಿಮಾ ಯಾವುದು?

    ಮುಂದಿನ ಸಿನಿಮಾ ಯಾವುದು?

    ರಜನೀಕಾಂತ್‌ಗೆ ಇತ್ತೀಚೆಗಷ್ಟೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರ ಹೊರತಾಗಿ ಹಲವು ಫಿಲಂಫೇರ್ ಪ್ರಶಸ್ತಿಗಳು, ನಂದಿ ಪ್ರಶಸ್ತಿ, ತಮಿಳು ನಾಡು ರಾಜ್ಯ ಸರ್ಕಾರ ನೀಡುವ ಪ್ರಶಸ್ತಿ, ಜೊತೆಗೆ ಪದ್ಮ ವಿಭೂಷಣ ಗೌರವಗಳು ಸಂದಿವೆ. ರಜನೀಕಾಂತ್ ನಟನೆಯ 'ಅಣ್ಣಾತೆ' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ 200 ಕ್ಕೂ ಹೆಚ್ಚು ಕೋಟಿ ಹಣ ಸಂಪಾದಿಸಿ ದಾಖಲೆ ಬರೆದಿದೆ. ರಜನೀಕಾಂತ್ ತಮ್ಮ ಮುಂದಿನ ಸಿನಿಮಾವನ್ನು ನಿರ್ದೇಶಕ ಪೆರಿಯಸಾಮಿ ಅವರೊಟ್ಟಿಗೆ ಮಾಡಲಿದ್ದಾರೆ ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ.

    English summary
    Rajinikanth's net worth, remuneration, luxury cars and etc. Rajinikanth birthday is on December 12.
    Saturday, December 11, 2021, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X