1000 ರೂಪಾಯಿಗಾಗಿ ದೊಡ್ಡ ಅವಮಾನ: ಎವಿಎಂ ಸ್ಟುಡಿಯೋ ಕಹಿ ಘಟನೆ ಬಿಚ್ಚಿಟ್ಟ ರಜನಿಕಾಂತ್

ಅವಕಾಶಕ್ಕಾಗಿ ಕಾದು ಸಿನಿಮಾಗಳನ್ನು ಮಾಡುತ್ತಿದ್ದ ಸಮಯದಲ್ಲಿ ರಜನಿಕಾಂತ್‌ಗೆ ನಿರ್ಮಾಪಕರೊಬ್ಬರು ಮಾಡಿದ ಅವಮಾನದ ಕುರಿತು ಸ್ವತಃ ರಜನಿ ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ದರು. ನನ್ನ ಸಿನಿಮಾದಲ್ಲಿ ನಟಿಸು ಎಂದು ಕರೆದು ಅವಕಾಶ ಕೊಟ್ಟು, ನಂತರ ಬಣ್ಣ ಹಚ್ಚಿದ ಮೇಲೆ 'ನೀನ್ಯಾವ ದೊಡ್ಡ ಕಲಾವಿದನೋ, ಹೋಗೋ ಇಲ್ಲಿಂದ' ಎಂದು ನಿಂದಿಸಿ ಕಳುಹಿಸಿದ ಘಟನೆಯನ್ನು ತಲೈವಾ ನೆನೆಪು ಮಾಡಿಕೊಂಡಿದ್ದಾರೆ.

ಆ ನಿರ್ಮಾಪಕ ಯಾರು, ಆ ಸಿನಿಮಾ ಯಾವುದು ಎನ್ನುವುದರ ಬಗ್ಗೆ ಬಹಿರಂಗಪಡಿಸಿದ ರಜನಿಕಾಂತ್, 1000 ರೂಪಾಯಿ ಅಡ್ವಾನ್ಸ್ ಹಣಕ್ಕಾಗಿ ನಡೆದ ಆ ಅವಮಾನಕರ ಘಟನೆಯನ್ನು ವಿವರಿಸಿದ್ದಾರೆ.

ರಜನಿಕಾಂತ್ ಆಗಿನ್ನು ಸ್ಟಾರ್ ನಟ ಆಗಿರಲಿಲ್ಲ. ಪೋಷಕ ಪಾತ್ರ, ಖಳನಟ ಹಾಗೂ ಸಿಕ್ಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ಆ ಸಮಯದಲ್ಲಿ ಎವಿಎಂ ಸ್ಟುಡಿಯೋದಲ್ಲಿ ಈ ಘಟನೆ ನಡೆದಿತ್ತು. ಮುಂದೆ ಓದಿ...

ಸಾವಿರ ರೂಪಾಯಿ ಅಡ್ವಾನ್ಸ್ ಕೇಳಿದ ರಜನಿ

ಸಾವಿರ ರೂಪಾಯಿ ಅಡ್ವಾನ್ಸ್ ಕೇಳಿದ ರಜನಿ

ಬೇರೊಬ್ಬ ನಟ ಹೀರೋ ಆಗಿ ನಟಿಸುವ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ರಜನಿಕಾಂತ್‌ಗೆ ಅವಕಾಶ ಬಂತು. ನಿರ್ಮಾಪಕರು ಖುದ್ದು ರಜನಿ ಬಳಿ ಮಾತನಾಡಿ ನೀವೇ ಈ ಪಾತ್ರ ಮಾಡಬೇಕು ಎಂದು ಹೇಳಿದರು. ಪಾತ್ರ ಚೆನ್ನಾಗಿದೆ ಎಂಬ ಕಾರಣಕ್ಕೆ ರಜನಿಕಾಂತ್ ಸಹ ಈ ಸಿನಿಮಾ ಒಪ್ಪಿದರು. ಹತ್ತು ಸಾವಿರ ರೂಪಾಯಿ ಸಂಭಾವನೆ ಎಂದು ಆರಂಭಿಸಿ ಕೊನೆಗೆ ಆರು ಸಾವಿರಕ್ಕೆ ತಲೈವಾ ಈ ಪಾತ್ರ ಒಪ್ಪಿಕೊಂಡರು. ಮಾತುಕತೆ ಓಕೆ ಆದ್ಮೇಲೆ ''ಸಾವಿರ ರೂಪಾಯಿ ಅಡ್ವಾನ್ಸ್ ಕೊಡಿ'' ಸಾರ್ ಎಂದು ರಜನಿ ಕೇಳಿದರು. ಆದರೆ, ನಿರ್ಮಾಪಕರು ''ನಾನು ಈಗ ಹಣ ತಂದಿಲ್ಲ, ನಾಳೆ ಮ್ಯಾನೇಜರ್ ಕಳುಹಿಸುತ್ತೇನೆ, ಅಡ್ವಾನ್ಸ್ ಕೊಡ್ತೇನೆ'' ಎಂದು ಹೋದರು.

ಮ್ಯಾನೇಜರ್ ಬಂದ್ರು, ಅಡ್ವಾನ್ಸ್ ಕೊಟ್ಟಿಲ್ಲ

ಮ್ಯಾನೇಜರ್ ಬಂದ್ರು, ಅಡ್ವಾನ್ಸ್ ಕೊಟ್ಟಿಲ್ಲ

ನಿರ್ಮಾಪಕರು ಹೇಳಿದಂತೆ ಮರುದಿನ ಮ್ಯಾನೇಜರ್ ಬಂದ್ರು. ಕಾಸ್ಟ್ಯೂಮ್‌ಗೆ ಅಳತೆ ತೆಗೆದುಕೊಂಡರು. ಆದರೆ, ಸಾವಿರ ರೂಪಾಯಿ ಅಡ್ವಾನ್ಸ್ ಹಣ ಕೊಟ್ಟಿಲ್ಲ. ಕೇಳಿದ್ದಕ್ಕೆ ಪ್ರೊಡ್ಯೂಸರ್ ಏನೂ ಹೇಳಿಲ್ಲ ಅಂದರು. ಫೋನ್ ಮಾಡಿ ವಿಚಾರಿಸಿದಾಗ, 'ನೀವು ನಾಳೆ ಸೆಟ್‌ಗೆ ಬನ್ನಿ, ಮೇಕಪ್ ಹಾಕೋ ಮುಂಚೆ ಅಡ್ವಾನ್ಸ್ ಕೊಡ್ತೀನಿ, ಡ್ರೈವರ್‌ ಬೆಳಗ್ಗೆ ಬರ್ತಾನೆ' ಎಂದರಂತೆ. ರಜನಿಕಾಂತ್ ಅವರು ಸಹ ಸೆಟ್‌ಗೆ ಹೋದ್ಮೇಲೆ ತೆಗೆದುಕೊಳ್ಳೋಣ ಅಂತ ಸುಮ್ಮನಾದರು.

ಅಡ್ವಾನ್ಸ್ ಕೊಡೋವರೆಗೂ ಮೇಕಪ್ ಹಾಕಲ್ಲ

ಅಡ್ವಾನ್ಸ್ ಕೊಡೋವರೆಗೂ ಮೇಕಪ್ ಹಾಕಲ್ಲ

ಬೆಳಗ್ಗೆ 8 ಗಂಟೆಗೆ ಬರಬೇಕಿದ್ದ ಕಾರು 9.30ಕ್ಕೆ ಬಂತು. ರಜನಿಕಾಂತ್ ಸೆಟ್‌ಗೆ ಹೋದರು. ನಿರ್ಮಾಪಕರು ಇನ್ನು ಬಂದಿರಲಿಲ್ಲ. ಆಗಲೇ ಲೇಟ್ ಆಗಿತ್ತು. ''ಮೇಕಪ್ ಹಾಕ್ಕೊಳ್ಳಿ, ಹೀರೋ ಬಂದು ರೆಡಿ ಇದ್ದಾರೆ'' ಎಂದು ಮ್ಯಾನೇಜರ್ ರಜನಿಕಾಂತ್‌ಗೆ ಹೇಳಿದರು. 'ನನಗೆ ಸಾವಿರ ರೂಪಾಯಿ ಅಡ್ವಾನ್ಸ್ ಹಣ ಇನ್ನು ಕೊಟ್ಟಿಲ್ಲ, ಕೊಡುವವರೆಗೂ ನಾನು ಮೇಕಪ್ ಹಾಕಲ್ಲ' ಎಂದು ರಜನಿ ಹೇಳಿದ್ದು ಅಲ್ಲಿ ಪರಿಸ್ಥಿತಿ ಬದಲಾಗುವಂತೆ ಮಾಡಿತು.

ನೀನ್ಯಾವ ದೊಡ್ಡ ಕಲಾವಿದನೋ

ನೀನ್ಯಾವ ದೊಡ್ಡ ಕಲಾವಿದನೋ

ರಜನಿಕಾಂತ್ ಮೇಕಪ್ ಹಾಕಲ್ಲ ಎಂದು ವಿಷಯ ತಿಳಿದ ನಿರ್ಮಾಪಕ ಕೆಲವೊತ್ತಿನಲ್ಲಿ ಬಿಳಿ ಬಣ್ಣದ ಅಂಬಾಸಿಡರ್ ಕಾರಲ್ಲಿ ಬಂದರು. ಬಂದಿಳಿದ ತಕ್ಷಣ ''ಏನೋ, ನೀನೇನು ದೊಡ್ಡ ಕಲಾವಿದನಾ, ಈಗ ತಾನೆ ಬಂದಿದ್ದಿಯಾ. ನಾಲ್ಕೈದು ಸಿನಿಮಾ ಮಾಡಿದ್ದಿಯಾ. ದುಡ್ಡು ಕೊಟ್ಟಿಲ್ಲ ಅಂದ್ರೆ ಮೇಕಪ್ ಹಾಕಲ್ವಾ ನೀನು. ನೀವೆಲ್ಲಾ ರಸ್ತೆಯಲ್ಲಿ ಅಲೆಯುತ್ತೀರಾ. ನಿನಗೆ ಕ್ಯಾರೆಕ್ಟರ್ ಇಲ್ಲ, ಏನೂ ಇಲ್ಲ. ಹೋಗೋ ಇಲ್ಲಿಂದ'' ಎಂದು ನಿಂದಿಸಿದರು. ''ನೀವು ಮೊದಲೇ ಹೇಳಿದ್ರಿ, ಮೇಕಪ್ ಹಾಕೋ ಮುಂಚೆ ದುಡ್ಡು ಕೊಡ್ತೀನಿ ಅಂತ'' ಎಂದರೂ, ''ಹೇ, ಹೋಗೋ ಇಲ್ಲಿಂದ'' ಎಂದು ನಿರ್ಮಾಪಕ ರೇಗಾಡಿದರು. 'ಸರಿ, ಕಾರು ಕಳುಹಿಸಿ' ಎಂದು ರಜನಿ ಕೇಳಿದ್ದಕ್ಕೆ 'ಕಾರಿಗೆ ಬಾಡಿಗೆ ಕಟ್ಟಬೇಕು, ನೀನು ನಡೆದುಕೊಂಡು ಹೋಗು' ಎಂದು ಅವಮಾನಿಸಿದರಂತೆ.

ಒಂದು ರೂಪಾಯಿ ದುಡ್ಡಿಲ್ಲ

ಒಂದು ರೂಪಾಯಿ ದುಡ್ಡಿಲ್ಲ

ರಜನಿಕಾಂತ್ ಬಳಿ ಒಂದು ರೂಪಾಯಿ ದುಡ್ಡಿಲ್ಲ. ಏನೂ ತಪ್ಪು ಮಾಡದ ನನಗೆ ಏಕೆ ಹೀಗಾಯಿತು ಎಂದು ಮನಸ್ಸಿಲ್ಲಿಯೇ ಪ್ರಶ್ನಿಸಿಕೊಂಡು ಎವಿಎಂ ಸ್ಟುಡಿಯೋದಿಂದ ನಡೆದುಕೊಂಡು ಮನೆ ಕಡೆ ಸಾಗಿದರು. ರಸ್ತೆಯಲ್ಲಿ ನಡೆದು ಹೋಗುವ ವೇಳೆ ತಾನು ಎದುರಿಸಿದ ಅವಮಾನಕ್ಕೆ ತಕ್ಕ ಉತ್ತರ ಕೊಡಬೇಕು, ಇದೇ ರಸ್ತೆಯಲ್ಲಿ ನಾನು ಫಾರೀನ್ ಕಾರಿನಲ್ಲಿ ಎವಿಎಂ ಸ್ಟುಡಿಯೋಗೆ ಹೋಗ್ಬೇಕು ಅಂತ ನಿರ್ಧರಿಸಿದರು. ಈ ಘಟನೆ ಆದ ಎರಡೂವರೆ ವರ್ಷದ ನಂತರ 4.25 ಲಕ್ಷಕ್ಕೆ ಫಾರೀನ್ ಕಾರು ಖರೀದಿಸಿದರಂತೆ ರಜನಿ.

Recommended Video

ಶಂಖನಾದ ಅರವಿಂದ್ ಸಾವಿಗೆ ಭಾವುಕರಾದ ಪುನೀತ್ ರಾಜಕುಮಾರ್ | Filmibeat Kannada
ವಿದೇಶಿ ಡ್ರೈವರ್ ಬೇಕು

ವಿದೇಶಿ ಡ್ರೈವರ್ ಬೇಕು

ಫಾರೀನ್ ಕಾರು ಖರೀದಿಸಿದ ರಜನಿಕಾಂತ್ ಫಾರೀನ್ ಡ್ರೈವರ್ ಬೇಕು ಎಂದು ಹಠ ಹಿಡಿದರು. ತಿಂಗಳ ಬಳಿಕ ಆರು ಅಡಿ ಎತ್ತರದ ಆಂಗ್ಲೋ ಇಂಡಿಯನ್ ವ್ಯಕ್ತಿಯೊಬ್ಬರು ಕೆಲಸಕ್ಕೆ ಬಂದರು. ತಲೆಗೆ ಟೋಪಿ ಸಮೇತ ಯೂನಿಫಾರಂ ಹೊಲಿಸಿಕೊಟ್ಟರು. ವಿದೇಶಿ ಡ್ರೈವರ್ ಜೊತೆ ಫಾರೀನ್ ಕಾರಿನಲ್ಲಿ ಎವಿಎಂ ಸ್ಟುಡಿಯೋಗೆ ಹೋದ ರಜನಿಕಾಂತ್, ಅಂದು ಆ ನಿರ್ಮಾಪಕ ಕಾರು ನಿಲ್ಲಿಸಿದ್ದ ಸ್ಥಳದಲ್ಲಿ ನಿಲ್ಲಿಸಿ ತ್ರಿಬಲ್ ಫೈವ್ ಸಿಗರೇಟ್ ಸೇದುವ ಮೂಲಕ ತನಗೆ ಆದ ಅವಮಾನ ಮೆಟ್ಟಿ ನಿಂತರಂತೆ. ಈ ಘಟನೆಯನ್ನು ಖುದ್ದು ರಜನಿಕಾಂತ್ ದರ್ಬಾರ್ ಚಿತ್ರದ ಪ್ರಿ-ರಿಲೀಸ್ ಸಂದರ್ಭದಲ್ಲಿ ಹೇಳಿಕೊಂಡಿದ್ದರು.

More from Filmibeat

English summary
Tamil superstar Rajinikanth revealed once he was humiliated by a producer in AVM Studio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X