twitter
    For Quick Alerts
    ALLOW NOTIFICATIONS  
    For Daily Alerts

    'ಬೇಡರ ಕಣ್ಣಪ್ಪ' ಚಿತ್ರಕ್ಕಾಗಿ ಆಡಿಷನ್ ಕೊಟ್ಟು 15 ದಿನ ಕಾದಿದ್ದರಂತೆ ಡಾ ರಾಜ್

    |

    ವರನಟ ರಾಜ್ ಕುಮಾರ್ ಅಭಿನಯಿಸಿದ ಚೊಚ್ಚಲ ಸಿನಿಮಾ 'ಬೇಡರ ಕಣ್ಣಪ್ಪ'. ಈ ಚಿತ್ರದಲ್ಲಿ ನಟಿಸುವುದಕ್ಕೂ ಮುಂಚೆ 'ಗುಬ್ಬಿ ವೀರಣ' ನಾಟಕ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದರು. ಎಚ್ ಎಲ್‌ ಎನ್ ಸಿಂಹ 'ಬೇಡರ ಕಣ್ಣಪ್ಪ' ಸಿನಿಮಾ ಮಾಡಬೇಕು ಎಂದು ಕಲಾವಿದನನ್ನು ಹುಡುಕುತ್ತಿದ್ದರು. ನಂತರ ಗುಬ್ಬಿ ವೀರಣ್ಣರ ನಾಟಕಗಳಲ್ಲಿ ಗಮನ ಸೆಳೆದಿದ್ದ ರಾಜ್ ಕುಮಾರ್‌ರನ್ನು ನೋಡಿ ಈ ಹುಡುಗ ಬೇಡರ ಕಣ್ಣಪ್ಪ ಚಿತ್ರಕ್ಕೆ ಸೂಕ್ತವಾಗಬಹುದು ಎಂದು ನಿರ್ಧರಿಸಿದರು.

    ನಿರ್ದೇಶಕ ಸಿಂಹ, ನಿರ್ಮಾಪಕರು ಸೇರಿ ರಾಜ್ ಕುಮಾರ್‌ ಅವರನ್ನು ಆಡಿಷನ್ ಸಹ ಮಾಡಿದ್ದರು ಎಂಬ ವಿಚಾರವನ್ನು ಖುದ್ದು ಅಣ್ಣಾವ್ರು ಡಿಡಿ ಚಂದನ ವಾಹಿನಿಯಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಬೇಡರ ಕಣ್ಣಪ್ಪ ಚಿತ್ರಕ್ಕಾಗಿ ಆಡಿಷನ್ ಕೊಟ್ಟ 15 ದಿನಗಳವರೆಗೂ ಯಾವುದೇ ಉತ್ತರ ಸಿಗದೆ ಕಾದು ಕುಳಿತಿದ್ದರು ಎಂಬ ಆಸಕ್ತಿಕರ ವಿಚಾರವನ್ನು ಬಹಿರಂಗಪಡಿಸಿದ್ದರು. 'ಬೇಡರ ಕಣ್ಣಪ್ಪ' ಚಿತ್ರದ ಬಗ್ಗೆ ಅಣ್ಣಾವ್ರು ಹೇಳಿದ್ದೇನು? ಮುಂದೆ ಓದಿ...

    ಆಡಿಷನ್ ಮಾಡಿಸಿದ್ದರು

    ಆಡಿಷನ್ ಮಾಡಿಸಿದ್ದರು

    ಬೇಡರ ಕಣ್ಣಪ್ಪ ಚಿತ್ರಕ್ಕಾಗಿ ಹುಡುಕುತ್ತಿದ್ದ ಸಂದರ್ಭದಲ್ಲಿ ನನ್ನನ್ನು ಕರೆಸಿದರು. ಆಡಿಷನ್ ಮಾಡೋಣ ಅಂತ ಹೇಳಿ ಮುಖಕ್ಕೆ ಬಣ್ಣ ಹಾಕಿಸಿ ಪರೀಕ್ಷಿಸಿದರು. ಕ್ಯಾಮೆರಾ ಮುಂದೆ ನವರಸಗಳನ್ನು ನಟಿಸು ತೋರಿಸು ಎಂದು ಹೇಳಿದರು. ನಾಟಕಗಳಲ್ಲಿ ಸ್ವತಂತ್ರವಾಗಿ ವೇದಿಕೆಯಲ್ಲಿ ನಟಿಸಬಹುದು. ಆದರೆ, ಸಿನಿಮಾದಲ್ಲಿ ನಿರ್ದಿಷ್ಟವಾದ ಜಾಗದಲ್ಲಿ ನಿಂತು ಸೀಮಿತವಾಗಿ ನಟಿಸಬೇಕಿತ್ತು. ನಾನು ನಟಿಸಿ ತೋರಿಸಿದೆ. 8 ದಿನ ಬಿಟ್ಟು ಹೇಳ್ತೀನಿ, ನೀವು ಹೋಗಿ ಎಂದು ಕಳುಹಿಸಿದರು ಎಂಬ ವಿಷಯವನ್ನು ಅಣ್ಣಾವ್ರು ಸಂದರ್ಶನದಲ್ಲಿ ತಿಳಿಸಿದರು.

    ಕನ್ನಡ ಚಿತ್ರರಂಗಕ್ಕೆ ಇಂದು ಬಹಳ ವಿಶೇಷ ದಿನ: ಯಾಕೆ ಗೊತ್ತೇ?ಕನ್ನಡ ಚಿತ್ರರಂಗಕ್ಕೆ ಇಂದು ಬಹಳ ವಿಶೇಷ ದಿನ: ಯಾಕೆ ಗೊತ್ತೇ?

    15 ದಿನ ಆದರೂ ಪ್ರತಿಕ್ರಿಯೆ ಬರಲಿಲ್ಲ

    15 ದಿನ ಆದರೂ ಪ್ರತಿಕ್ರಿಯೆ ಬರಲಿಲ್ಲ

    ಆಡಿಷನ್ ಕೊಟ್ಟು ಬಂದ ಮೇಲೆ 8 ದಿನ ಆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆಮೇಲೆ 15 ಆದ್ಮೇಲೆ ಒಂದು ಪತ್ರ ಬಂತು. ನಿಮ್ಮ ಆಡಿಷನ್ ವಿಡಿಯೋ ನೋಡಿದ್ಮೇಲೆ ನಮ್ಮ ನಿರ್ದೇಶಕರು, ನಿರ್ಮಾಪಕರು ಇಷ್ಟ ಪಟ್ಟಿದ್ದು, ನೀವು ಬೇಡರ ಕಣ್ಣಪ್ಪ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಅಂತ ಬರೆಯಲಾಗಿತ್ತು ಎಂದು ಅಣ್ಣಾವ್ರು ತಿಳಿಸಿದರು.

    1954ರಲ್ಲಿ ತೆರೆಕಂಡ ಚಿತ್ರ

    1954ರಲ್ಲಿ ತೆರೆಕಂಡ ಚಿತ್ರ

    ನಾಟಕಗಳಲ್ಲಿ ನಟಿಸುತ್ತಿದ್ದ ರಾಜ್ ಕುಮಾರ್ ಅಧಿಕೃತವಾಗಿ ಸಿನಿಮಾಗಳಲ್ಲಿ ಪಯಣ ಅರಂಭಿಸಿದರು. ಅದಕ್ಕೂ ಮುಂಚೆ 1942ರಲ್ಲಿ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದರು ಎಂದು ವರದಿಯಾಗಿದೆ. ಆದರೆ, ನಾಯಕನಟನಾಗಿ ಬೇಡರ ಕಣ್ಣಪ್ಪ ಚೊಚ್ಚಲ ಸಿನಿಮಾ. 1954ರ ಮೇ 7 ರಂದು ಈ ಚಿತ್ರ ರಿಲೀಸ್ ಆಗಿತ್ತು.

    3 ವರ್ಷ ನಟಿಸಿಲ್ಲ, ಅಣ್ಣಾವ್ರ ಮನೆ ಮುಂದೆ ನಡೆದಿತ್ತು ಅಭಿಮಾನದ ಪ್ರತಿಭಟನೆ3 ವರ್ಷ ನಟಿಸಿಲ್ಲ, ಅಣ್ಣಾವ್ರ ಮನೆ ಮುಂದೆ ನಡೆದಿತ್ತು ಅಭಿಮಾನದ ಪ್ರತಿಭಟನೆ

    Recommended Video

    ಚಿರು ಸಾವಿಗೆ ಒಂದು ವರ್ಷ, ಅಣ್ಣನಿಗೆ ಪತ್ರ ಬರೆದು ನೋವನ್ನು ಹಂಚಿಕೊಂಡ ಧ್ರುವ | Filmibeat Kannada
    ರಾಷ್ಟ್ರ ಪ್ರಶಸ್ತಿ ಲಭಿಸಿದೆ

    ರಾಷ್ಟ್ರ ಪ್ರಶಸ್ತಿ ಲಭಿಸಿದೆ

    ಬೇಡರ ಕಣ್ಣಪ್ಪ ಚಿತ್ರಕ್ಕೆ 1954ರಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ನಂತರ ಈ ಚಿತ್ರ ಬೇರೆ ಭಾಷೆಗಳಲ್ಲಿಯೂ ಡಬ್ ಆಗಿದೆ. ರಾಜ್ ಜೊತೆ ಪಂಡಿರಿಬಾಯಿ, ನರಸಿಂಹರಾಜು, ರಾಜಾ ಸುಲೋಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    English summary
    Kannada actor dr Rajkumar Waited for 15 days after giving audition to Bedara Kannappa movie.
    Thursday, June 3, 2021, 13:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X