Raksha Bandhan 2024: ಇವ್ರೇ ನೋಡಿ ಕನ್ನಡ ಚಿತ್ರರಂಗದ ಜನಪ್ರಿಯ ಅಣ್ಣ-ತಂಗಿ ಜೋಡಿ

ಶ್ರಾವಣ ಮಾಸದ ಹಬ್ಬಗಳಲ್ಲಿ ರಕ್ಷಾ ಬಂಧನ ಅಥವಾ ರಾಖಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ರಕ್ಷಾಬಂಧನವು ಸಹೋದರ- ಸಹೋದರಿಯರ ನಡುವಿನ ಬಾಂಧವ್ಯವನ್ನು ಗೌರವಿಸುವ ಹಬ್ಬ. ಪ್ರೀತಿ, ಬದ್ಧತೆ ಹಾಗೂ ರಕ್ಷಣೆಯ ಪ್ರತೀಕ ಈ ಬಂಧನ. ಪುರಾಣಗಳಲ್ಲಿ ಕೂಡ ರಕ್ಷಾ ಬಂಧನದ ಉಲ್ಲೇಖಗಳಿವೆ.

ಸಹೋದರಿಯರು ರಕ್ಷಣೆಯ ಸಂಕೇತವಾಗಿ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಸಹೋದರನು ಸದಾ ಸಹೋದರಿಯ ರಕ್ಷಣೆಗೆ ನಿಲ್ಲುತ್ತೇನೆ ಎನ್ನುವ ಸಂಕಲ್ಪ ಮಾಡುವ ಹಬ್ಬವಿದು. ಅಣ್ಣ ಅಥವಾ ತಮ್ಮನ ಕೈಗೆ ರಕ್ಷಾ ಬಂಧನ(ರಾಖಿ) ಕಟ್ಟಿ, ಆರತಿ ಬೆಳಗಿ, ಸಿಹಿ ತಿನ್ನಿಸಿತ್ತಾಳೆ. ಅಣ್ಣ ತಂಗಿಯನ್ನು ಆಶೀರ್ವದಿಸುವುದು, ಉಡುಗೊರೆ ನೀಡುವುದು ಈ ಹಬ್ಬದ ವಿಶೇಷ.

Raksha Bandhan 2024 Famous Brothers and Sisters from Sandalwood

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನ ಅಣ್ಣ ತಂಗಿಯರು ಇದ್ದಾರೆ. ಸಹೋದರ- ಸಹೋದರಿಯರ ಬಾಂಧವ್ಯ ಸಾರುವ ಸಾಕಷ್ಟು ಸಿನಿಮಾಗಳು, ಹಾಡುಗಳು ಬಂದಿವೆ. ಸ್ಯಾಂಡಲ್‌ವುಡ್‌ನ ಜನಪ್ರಿಯ ಅಣ್ಣ-ತಂಗಿ ಜೋಡಿ ಯಾರು ಬನ್ನಿ ನೋಡೋಣ.

1. ಶ್ರುತಿ - ಶರಣ್

ನಟಿ ಶ್ರುತಿ ಬಹಳ ವರ್ಷಗಳ ಹಿಂದೆಯೇ ನಾಯಕಿಯಾಗಿ ಚಿತ್ರರಂಗದಲ್ಲಿ ಗಮನ ಸೆಳೆದರು. ಅದ್ಭುತ ಪಾತ್ರಗಳ ಮೂಲಕ ಮೋಡಿ ಮಾಡಿದರು. ಅಣ್ಣ ಶರಣ್ ಆರಂಭದಲ್ಲಿ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡು ಬಳಿಕ ಹೀರೊ, ನಿರ್ಮಾಪಕ ಆಗಿದ್ದಾರೆ. ಶ್ರುತಿ ಇದೀಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಶರಣ್ ಹೀರೊ ಆಗಿ ಮಿಂಚುತ್ತಿದ್ದಾರೆ.

2. ವಿನೋದ್- ಸೌಂದರ್ಯ

ಟೈಗರ್ ಪ್ರಭಾಕರ್ ಮಕ್ಕಳಾದ ವಿನೋದ್ ಪ್ರಭಾಕರ್ ಹಾಗೂ ಸೌಂದರ್ಯ ಪ್ರಭಾಕರ್ ಇಬ್ಬರು ಸಿನಿಮಾಗಳಲ್ಲಿ ಮಿಂಚಿದವರು. ಪ್ರಭಾಕರ್ ಮೊದಲ ಪತ್ನಿ ಮೇರಿ ಅಲ್ಫಾನ್ಸೋ ಪುತ್ರ ವಿನೋದ್. ಇನ್ನು ಎರಡನೇ ಪತ್ನಿ ಜಯಮಾಲಾ ಮಗಳು ಸೌಂದರ್ಯ. ಇಬ್ಬರೂ ಬಾಲ್ಯದಲ್ಲಿ ಒಟ್ಟಿಗೆ ಆಡಿ ಬೆಳೆದವರು. ಆದರೆ ಬಳಿಕ ಬಹಳ ದಿನಗಳ ಕಾಲ ಭೇಟಿ ಆಗಿರಲಿಲ್ಲ. ಅಭಿಷೇಕ್ ಅಂಬರೀಶ್ ಮದುವೆ ಸಮಯದಲ್ಲಿ ಇಬ್ಬರು ಮುಖಾಮುಖಿ ಆಗಿದ್ದರು.

3. ಆದಿತ್ಯಾ -ರಿಷಿಕಾ

ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಕ್ಕಳಾದ ಆದಿತ್ಯಾ ಹಾಗೂ ರಿಷಿಕಾ ಸಿಂಗ್ ಕೂಡ ಸಿನಿಮಾಗಳಲ್ಲಿ ಮಿಂಚಿದವರು. ಆದಿತ್ಯಾ ಇಂದಿಗೂ ಹೀರೊ ಆಗಿ ಸದ್ದು ಮಾಡುತ್ತಿದ್ದಾರೆ. ನಾಯಕಿಯಾಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದ ರಿಷಿಕಾ ಅಪಘಾತದ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

4. ಧೀರೇನ್- ಧನ್ಯಾ

ರಾಮ್‌ಕುಮಾರ್ ಮಕ್ಕಳಾದ ಧೀರೇನ್ ಹಾಗೂ ಧನ್ಯಾ 3 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಧೀರೇನ್ 'ಶಿವ 143' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಧನ್ಯಾ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೊಸ ಹೊಸ ಸಿನಿಮಾಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ.

5. ಯಶ್- ನಂದಿನಿ

ರಾಕಿಂಗ್ ಸ್ಟಾರ್ ಯಶ್ ಸಹೋದರಿ ನಂದಿನಿ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಸಾಕಷ್ಟು ಜನರಿಗೆ ಚಿರಪರಿಚಿತರು. ಪ್ರತಿ ವರ್ಷ ಯಶ್ - ನಂದಿನಿ ರಕ್ಷಾಬಂಧನ ಫೋಟೊಗಳು ವೈರಲ್ ಆಗುತ್ತಿರುತ್ತವೆ.

6. ಶಿವಣ್ಣ- ರಾಧಿಕಾ

ನಟ ಶಿವರಾಜ್‌ಕುಮಾರ್ ಹಾಗೂ ನಟಿ ರಾಧಿಕಾ ಕುಮಾರಸ್ವಾಮಿ ಒಡಹುಟ್ಟಿದವರಲ್ಲದಿದ್ದರೂ ಸಿನಿಮಾಗಳಲ್ಲಿ ಅಣ್ಣ-ತಂಗಿಯಾಗಿ ನಟಿಸಿ ಮೋಡಿ ಮಾಡಿದ್ದರು. 'ತವರಿಗೆ ಬಾ ತಂಗಿ' ಹಾಗೂ 'ಅಣ್ಣ-ತಂಗಿ' ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ನಿಜ ಜೀವನದಲ್ಲೂ ಇಬ್ಬರೂ ಅಣ್ಣ-ತಂಗಿಯಾಗಿಯೇ ಉಳಿದುಬಿಟ್ಟಿದ್ದಾರೆ. 9 ವರ್ಷಗಳ ಹಿಂದೆ ರಾಧಿಕಾ 17 ಗ್ರಾಂ ತೂಕದ ಚಿನ್ನದ ರಾಖಿಯನ್ನು ಶಿವಣ್ಣನಿಗೆ ಕಟ್ಟಿದ್ದು ಭಾರೀ ಸುದ್ದಿ ಆಗಿತ್ತು.

ಇನ್ನುಳಿದಂತೆ ಸೃಜನ್ ಲೋಕೇಶ್- ಪೂಜಾ ಲೋಕೇಶ್, ಸಾಧುಕೋಕಿಲ - ಉಷಾ ಕೋಕಿಲ, ಪವಿತ್ರಾ ಲೋಕೇಶ್- ಆದಿ ಲೋಕೇಶ್ ಹೀಗೆ ಹಲವು ಅಣ್ಣ- ತಂಗಿ ಜೋಡಿಗಳು ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದೆ.

More from Filmibeat

English summary
Yash-Nandini to shruthi - sharan; here's is star sandalwood siblings list;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X