Rakshit Shetty: "ಅವತ್ತು ಅವಳ ನಗು ನೋಡಿ ನನ್ನ ಹೃದಯ ಅರಳಿತ್ತು.. ಇಡೀ ದಿನ ಅವ್ಳ ಹಿಂದೆ ಸುತ್ತಾಡಿದ್ದೆ": ರಕ್ಷಿತ್ ಶೆಟ್ಟಿ
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ತೆಲುಗಿಗೂ ಡಬ್ ಆಗಿ ಸಿನಿಮಾ ಸದ್ದು ಮಾಡ್ತಿದೆ. ಪ್ರಿಯಾ- ಮನು ಮುದ್ದಾದ ಪ್ರೇಮಕತೆಗೆ ಪ್ರೇಕ್ಷಕು ಫಿದಾ ಆಗಿದ್ದಾರೆ. ಸಿನಿಮಾ ಕೊಂಚ ಸ್ಲೋ ಎನ್ನುತ್ತಲೇ ಕತ್ತೆ-ಪುಟ್ಟಿ ಜೋಡಿ ಪ್ರೇಮ ಸಾಗರದಲ್ಲಿ ಮುಳುಗಿ ತೇಲುತ್ತಿದ್ದಾರೆ.
ಹೇಮಂತ್ ರಾವ್ ನಿರ್ದೇಶನ, ರಕ್ಷಿತ್ - ರುಕ್ಮಿಣಿ ಕೆಮೆಸ್ಟ್ರಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ತೆಲುಗು ಪ್ರೇಕ್ಷಕರು ಕೂಡ ಚಿತ್ರವನ್ನು ಬಿಗಿದಪ್ಪಿಕೊಂಡಿದ್ದಾರೆ. ಟಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ 'ಸಪ್ತಸಾಗರಾಲು ದಾಟಿ' ಸೀಕ್ವೆಲ್ ನೋಡೋಕೆ ಉತ್ಸುಕರಾಗಿದ್ದಾರೆ. ತಮಿಳು ಹಾಗೂ ಮಲಯಾಳಂಗೂ ಸಿನಿಮಾ ಡಬ್ ಆಗಿದೆ. ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಾ ಇಲ್ಲ ಓಟಿಟಿಗೆ ಮಾತ್ರ ಬರುತ್ತಾ ಕಾದು ನೋಡಬೇಕಿದೆ.

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಪ್ರಮೋಷನ್ ವೇಳೆ ನಟ ರಕ್ಷಿತ್ ಶೆಟ್ಟಿ ತಮ್ಮ ಫಸ್ಟ್ ಲವ್ ಬಗ್ಗೆ ಮಾತನಾಡಿದ್ದರು. 9ನೇ ಕ್ಲಾಸ್‌ನಲ್ಲಿದ್ದಾಗ ತಮ್ಮದೇ ತರಗತಿ ಹುಡುಗಿಯನ್ನು ನೋಡಿ ಫಿದಾ ಆಗಿದ್ದ ಘಟನೆ ನೆನಪಿಸಿಕೊಂಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗ್ತಿದೆ. ಸ್ಕೂಲ್ ಟ್ರಿಪ್‌ಗೆ ಹೋದಾಗ ನಡೆದ ಆ ಘಟನೆಯನ್ನು ರಕ್ಷಿತ್ ಶೆಟ್ಟಿ ವಿವರಿಸಿದ್ದರು.
"ಅದನ್ನು ಲವ್ ಅನ್ನೋಕ್ಕಾಗಲ್ಲ. ಕ್ರಶ್ ಎನ್ನಬಹುದು. ಆ ಏಜ್‌ನಲ್ಲಿ ಅದು ಲವ್ ಅಂತ್ಲೇ ಹೇಳಬಹುದು. ಅದನ್ನು ಮರೆಯೋಕೆ ಸಾಧ್ಯವಿಲ್ಲ. 9ನೇ ತರಗತಿಯಲ್ಲಿದ್ದಾಗ ಒಮ್ಮೆ ಸ್ಕೂಲ್ ಟ್ರಿಪ್‌ಗೆ ಹೋಗ್ತಿದ್ವಿ. ನಾನು ಲಾಸ್ಟ್ ಬೆಂಚ್ ಸ್ಟೂಡೆಂಟ್. ಬಸ್ ಲಾಸ್ಟ್ ಸೀಟ್ ಅಲ್ಲಿ ಕೂತಿದ್ದೆ. ಎಲ್ಲರಿಗೂ ಕಾಯ್ತಿದ್ವಿ. ಆಕೆ ನನ್ನ ಕ್ಲಾಸ್‌ಮೇಟ್. 6-7 ಕ್ಲಾಸ್ ಸಮಯದಿಂದಲೂ ನಮ್ಮ ಕ್ಲಾಸ್‌ಮೇಟ್ ಆಗಿದ್ಲು. ಅವಳನ್ನ ನಾನು ಯಾವತ್ತು ನೋಡು ಇರಲಿಲ್ಲ."
"ಅವತ್ತು ಟ್ರಿಕ್ ಹೋಗುವುದಕ್ಕೆ ಬಸ್ ಹತ್ತಿದ್ಲು. ಹಿಂದೆ ತಿರುಗಿ ನನ್ನ ನೋಡಿ ನಕ್ಕಳು. ನನಗೆ ಒಂದು ಕ್ಷಣ ಅದ್ಭುತ ಅನುಭವವಾಗಿತ್ತು. ಕೆಲವು ಕ್ಷಣಗಳು ನನ್ನ ಹೃದಯ ಅರಳಿದಂತ ಭಾವ. ಅಯ್ಯೋ ನಾನು ಇವಳನ್ನು ಬಹಳ ದಿನದಿಂದ ನೋಡ್ತಿದ್ದೀನಿ. ಏನು ಅನ್ನಿಸಿರಲಿಲ್ಲ. ಈಗ ಯಾಕೆ ಹೀಗೆ ಅನ್ನಿಸ್ತಿದೆ. ಅಂದುಕೊಂಡೆ. ಆ ಬಳಿಕ ಇಡೀ ಟ್ರಿಪ್ ಅವಳ ಹಿಂದೆನೇ ಸುತ್ತಾಡಿದೆ"
"ನಾನು ಟ್ರಿಪ್‌ಗೆ ಕ್ಯಾಮರಾ ತಗೊಂಡು ಹೋಗಿದ್ದೆ. ಆಗ ಎಲ್ಲರ ಬಳಿ ಕ್ಯಾಮರಾ ಇರಲಿಲ್ಲ. ನನ್ನ ಕ್ಯಾಮರಾ ತುಂಬಾ ಬರೀ ಅವಳದ್ದೆ ಫೋಟೊಗಳಿದ್ದವು. ಆದರೆ ಅದು ಆಕೆಗೆ ಗೊತ್ತಾಗಲಿಲ್ಲ" ಎಂದು ಶಾಲಾ ದಿನಗಳ ತಮ್ಮ ಫಸ್ಟ್ ಲವ್ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಅದನ್ನು ಕೇಳಿ ಪಕ್ಕದಲ್ಲೇ ಇದ್ದ ನಟಿ ರುಕ್ಮಿಣಿ ವಸಂತ್, ನಿರ್ದೇಶಕ ಹೇಮಂತ್ ರಾವ್ ಬಿದ್ದು ಬಿದ್ದು ನಕ್ಕಿದ್ದಾರೆ. ಫಿಲ್ಮ್ ಕಂಪಾನಿಯನ್ ಸೌತ್ ಯೂಟ್ಯೂಬ್‌ಗೆ ನೀಡಿದ ಆ ಸಂದರ್ಶನದ ವಿಡಿಯೋ ವೈರಲ್ ಆಗ್ತಿದೆ.
ಉಡುಪಿಯಲ್ಲಿ ಹುಟ್ಟಿ ಬೆಳದ ರಕ್ಷಿತ್ ಶೆಟ್ಟಿ ಅಲ್ಲೇ ಶಾಲಾ ದಿನಗಳನ್ನು ಕಳೆದರು. ಬಳಿಕ ಇಂಜಿನಿಯರಿಂಗ್ ಓದಿದ ರಕ್ಷಿತ್ 2 ವರ್ಷ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ಬಳಿಕ ನಟನಾಗಬೇಕು ಎಂದು ಕೆಲಸ ಬಿಟ್ಟು ಚಿತ್ರರಂಗದತ್ತ ಮುಖ ಮಾಡಿದರು. ಸದ್ಯ ರಕ್ಷಿತ್ ಶೆಟ್ಟಿ ವಯಸ್ಸು 40ರ ಗಡಿ ಸೇರಿದೆ.
ಸದ್ಯ ಮದುವೆ ಆಲೋಚನೆ ಇಲ್ಲ ಎಂದಿರುವ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟೊನಿ' ಸಿನಿಮಾ ಕಡೆ ಮುಖ ಮಾಡಿದ್ದಾರೆ. ದಸರಾ ಸಂಭ್ರಮದಲ್ಲಿ 'ಸಪ್ತ ಸಾಗರದಾಚೆ ಎಲ್ಲೋ'-2 ರಿಲೀಸ್ ಆಗಲಿದೆ. ಅದರ ಪ್ರಮೋಷನ್, ರಿಲೀಸ್ ಬಳಿಕ ಮುಂದಿನ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಈಗಾಗಲೇ 'ರಿಚರ್ಡ್ ಆಂಟೊನಿ' ಕತೆ ಸಿದ್ಧವಾಗಿದೆ. ಹೊಂಬಾಳೆ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಬಳಿಕ 'ಪುಣ್ಯಕೋಟಿ' ಚಿತ್ರವನ್ನು 2 ಭಾಗಗಳಾಗಿ ರಕ್ಷಿತ್ ತೆರೆಗೆ ತರಲಿದ್ದಾರೆ.


Click it and Unblock the Notifications











