ಸಿಮೆಂಟ್ ಮೂಟೆ ಹೊರುತ್ತಿದ್ದ ರಕ್ಷಿತ್ ಶೆಟ್ಟಿಗೆ ಅಪ್ಪ ಎಷ್ಟು ಸಂಬಳ ಕೊಡುತ್ತಿದ್ರು?

ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸೈಡ್‌ B ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ಹೇಮಂತ್ ರಾವ್ ನಿರ್ದೇಶನದ ಈ ರೊಮ್ಯಾಂಟಿಕ್ ಡ್ರಾಮಾ ಪ್ರೇಕ್ಷಕರ ಮನಗೆದ್ದಿದೆ. 2 ಭಾಗಗಳಾಗಿ ಚಿತ್ರವನ್ನು ಸ್ವತಃ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದರು. ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.

ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿದ ರಕ್ಷಿತ್ ಶೆಟ್ಟಿ ಬಳಿಕ ಹೀರೊ ಆಗಿ ಬಡ್ತಿ ಪಡೆದರು. 'ಉಳಿದವರು ಕಂಡಂತೆ' ಚಿತ್ರವನ್ನು ನಿರ್ದೇಶಿಸಿ ನಟಿಸಿದರು. ಮುಂದೆ ನಿರ್ಮಾಪಕರು ಆದರು. ಉಡುಪಿಯಲ್ಲಿ ಹುಟ್ಟಿ ಬೆಳೆದ ಬಂಟರ ಹುಡುಗ ಇಂಜಿನಿಯರ್ ಪದವಿ ಪಡೆದು ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಬಳಿಕ ಅದನ್ನು ಬಿಟ್ಟು ಚಿತ್ರರಂಗ ಪ್ರವೇಶಿಸಿದರು.

Rakshit shetty Revealed His First Salary When he Worked in IT company

'ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ' ಚಿತ್ರದಲ್ಲಿ ನಟಿಸಿ ಗೆದ್ದ ರಕ್ಷಿತ್ ಮುಂದೆ ಸಿಂಪಲ್ ಸ್ಟಾರ್ ಅಂತ್ಲೇ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದರು. ಸೋಲು ಗೆಲುವಿನ ಲೆಕ್ಕ ಇಟ್ಟುಕೊಳ್ಳದೇ ಬಹಳ ಚೂಸಿಯಾಗಿ ಸಿನಿಮಾಗಳನ್ನು ಮಾಡುತ್ತಾ ಬಂದರು. ತಮ್ಮದೇ ಒಂದು ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡರು. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿ 4 ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ. ಎಲ್ಲದಕ್ಕೂ ಕತೆ ಚಿತ್ರಕತೆ ಸಿದ್ಧಪಡಿಸುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಕುರಿತು ಅಭಿಮಾನಿಗಳಿಗೆ ಸಾಕಷ್ಟು ಪ್ರಶ್ನೆಗಳಿರುತ್ತದೆ. ಅದನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಆ ರೀತಿ ಅಭಿಮಾನಿಗಳು ರಕ್ಷಿತ್ ಶೆಟ್ಟಿ ಕುರಿತು ಹುಡುಕಿದ ವಿಚಾರಗಳ ಬಗ್ಗೆ ತೆಲುಗು ಸಂದರ್ಶನವೊಂದರಲ್ಲಿ ಪ್ರಶ್ನೆಗಳನ್ನು ಕೇಳಲಾಯಿತು. ಅದರಲ್ಲಿ ರಕ್ಷಿತ್ ಶೆಟ್ಟಿ ಪಡೆದ ಮೊದಲ ಸಂಬಳ ಎಷ್ಟು? ಎನ್ನುವ ಪ್ರಶ್ನೆಯೂ ಇತ್ತು.

"ನಾನು ಬೆಂಗಳೂರಿಗೆ ಬಂದಾಗ ನಾನು ಐಟಿ ಕಂಪೆನಿಯಲ್ಲಿ ಮೊದಲು ಕೆಲಸ ಮಾಡಲು ಆರಂಭಿಸಿದೆ. ನನ್ನ ಮೊದಲ ಸಂಬಳ 12 ಸಾವಿರ ರೂಪಾಯಿ" ಎಂದು ರಕ್ಷಿತ್ ಹೇಳಿದ್ದಾರೆ. ಮಾತು ಮುಂದುವೆರೆಸಿ ಅದಕ್ಕೂ ಮುನ್ನ ನಮ್ಮ ತಂದೆ ಕಂಟ್ರಕ್ಷನ್ ಫೀಲ್ಡ್‌ನಲ್ಲಿದ್ದರು. ಹಾಗಾಗಿ ಬಹಳ ಚಿಕ್ಕ ವಯಸ್ಸಿನಲ್ಲೇ ನಾನು ಸಿಮೆಂಟ್ ಮೂಟೆಗಳನ್ನು ಡೆಲಿವರಿ ಮಾಡುತ್ತಿದ್ದೆ."

"ನಾನು 9, 10ನೇ ತರಗತಿಯಲ್ಲಿದ್ದಾಗ ಕಟ್ಟಡಗಳನ್ನು ಕಟ್ಟುತ್ತಿದ್ದ ಜಾಗಕ್ಕೆ ಸಿಮೆಂಟ್ ಮೂಟೆಗಳನ್ನು ಸಾಗಿಸುತ್ತಿದ್ದೆ. ನಾನು ಸಿಮೆಂಟ್ ಮೂಟೆಗಳನ್ನು ಲೋಡ್ ಮತ್ತು ಅನ್‌ಲೋಡ್ ಮಾಡುತ್ತಿದ್ದೆ. ಹಾಗಾಗಿ ನಮ್ಮ ಅಪ್ಪ ಪ್ರತಿ ಸಿಮೆಂಟ್‌ ಮೂಟೆಗೆ 2 ರೂಪಾಯಿ ಕೊಡುತ್ತಿದ್ದರು. 10 ರಿಂದ 15 ಮೂಟೆಗಳು. ಸಾಗಿಸುವುದಕ್ಕೆ 20 ರೂಪಾಯಿ. ಹೀಗೆ 100 ರಿಂದ 150 ರೂಪಾಯಿ ಸಿಗುತ್ತಿತ್ತು. ಅದೇ ನನ್ನ ಪಾಕೆಟ್ ಮನಿ. ಒಂದರ್ಥದಲ್ಲೇ ಅದೇ ಮೊದಲ ಸಂಬಳ" ಎಂದಿದ್ದಾರೆ.

ತೆಲುಗು ಚಿತ್ರದಲ್ಲಿ ನಟಿಸುತ್ತೀರಾ ಎನ್ನುವ ಪ್ರಶ್ನೆಗೂ ರಕ್ಷಿತ್ ಉತ್ತರಿಸಿದ್ದಾರೆ. ನಾನು ನಿರ್ದೇಶನ ಮಾಡಿ ನಟಿಸಿ ಬಹಳ ವರ್ಷಗಳಾಯಿತು. ನಾನು ಸಿದ್ಧ ಮಾಡಿಕೊಂಡಿರುವ ಸ್ಕ್ರಿಪ್ಟ್‌ಗಳನ್ನು ಸಿನಿಮಾ ಮಾಡಬೇಕು. ಅದನ್ನೆಲ್ಲಾ ಮುಗಿಸಿದ ಮೇಲೆ ಬೇರೆ ಸಿನಿಮಾಗಳ ಬಗ್ಗೆ ಆಲೋಚಿಸುತ್ತೀನಿ. ತೆಲುಗಿನಿಂದ ಬಹಳ ಆಫರ್‌ಗಳು ಬರುತ್ತಿದೆ"

"ಸದ್ಯಕ್ಕೆ ನಾನು ಸಿನಿಮಾವನ್ನು ಬಹಳ ಭಿನ್ನವಾಗಿ ನೋಡುತ್ತಿದ್ದೇನೆ. ನನ್ನ ಮುಂದಿನ ಸಿನಿಮಾಗಳು ನನಗೆ ಬಹಳ ಮುಖ್ಯ. 4 ಸಿನಿಮಾಗಳು ಮಾಡುತ್ತಿದ್ದೇನೆ. ಅವು ನನಗೆ ನಿದ್ದೆ ಮಾಡುವ ಬಿಡುತ್ತಿಲ್ಲ. ಅಷ್ಟರಮಟ್ಟಿಗೆ ಕಾಡುತ್ತಿವೆ. ಅದನ್ನೆಲ್ಲಾ ಮುಗಿಸಿದ ಮೇಲೆ ತೆಲುಗು ಚಿತ್ರದಲ್ಲಿ ನಟಿಸಬಹುದು" ಎಂದಿದ್ದಾರೆ. ರಕ್ಷಿತ್ ಶೆಟ್ಟಿ ಶೀಘ್ರದಲ್ಲೇ 'ರಿಚರ್ಡ್ ಆಂಟನಿ' ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಬಳಿಕ 'ಪುಣ್ಯಕೋಟಿ' ಭಾಗ-1, ಭಾಗ-2 ಬಳಿಕ 'ಮಿಡ್‌ನೈಟ್ ಮೋಕ್ಷ' ಚಿತ್ರಕ್ಕೆ ಕೈ ಹಾಕಲಿದ್ದಾರೆ.

More from Filmibeat

English summary
what is Rakshit shetty's first pay check
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X