ಮನೆ ಕಟ್ಟುವ ವಿಚಾರಕ್ಕೆ ರಕ್ಷಿತ್, ರಶ್ಮಿಕಾ ನಡುವೆ ಕಿರಿಕ್ ಆಗಿತ್ತಾ? ಬ್ರೇಕಪ್ ಕಾರಣ ಅದೇನಾ?

By ಫಿಲ್ಮಿಬೀಟ್ ಡೆಸ್ಕ್

ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಮದುವೆಗೆ ಸಿದ್ಧತೆ ನಡೀತಿದೆ. ಇಬ್ಬರ ಮದುವೆ ಖಚಿತವಾಗಿದೆ. ಕೆಲ ದಿನಗಳ ಹಿಂದೆಯೇ ಗುಟ್ಟಾಗಿ ಎಂಗೇಜ್‌ಮೆಂಟ್ ನಡೆದಿದ್ದಾಗಿ ವರದಿಯಾಗಿತ್ತು. ರಾಜಸ್ಥಾನದ ಉದಯ್‌ಪುರದ 'ದಿ ಮೆಮೆಂಟೋಸ್ ಬೈ ಐಟಿಸಿ ಹೊಟೇಲ್ಸ್' ರೆಸಾರ್ಟ್‌ನಲ್ಲಿ ಮದುವೆ ಸಮಾರಂಭ ರಂಗೇರಲಿದೆ. ಫೆಬ್ರವರಿ 26ರಂದು ಮದುವೆ ಶಾಸ್ತ್ರಗಳು ನಡೆಯಲಿದ್ದು ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ.

ಸಾಕಷ್ಟು ಸಿನಿಮಾ ತಾರೆಯರಿಗೆ ವಿಜಯ್- ರಶ್ಮಿಕಾ ಮದುವೆ ಆಮಂತ್ರಣ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ವಿಜಯ್ ದೇವರಕೊಂಡ ಇತ್ತೀಚೆಗೆ ಭೇಟಿ ಆಗಿದ್ದರು. ಮದುವೆಗೆ ಆಮಂತ್ರಣ ನೀಡಲು ಅವರು ಹೋಗಿದ್ದರು ಎನ್ನಲಾಗಿತ್ತು. ಕೆಲವೇ ಆಪ್ತರು ಉದಯ್‌ಪುರದಲ್ಲಿ ನಡೆಯುವ ಕಲ್ಯಾಣೋತ್ಸವದಲ್ಲಿ ಭಾಗಿ ಆಗಲಿದ್ದಾರೆ. ಸಾಕಷ್ಟು ತಾರೆಯರು ರಿಸೆಪ್ಷನ್ ಪಾರ್ಟಿಗೆ ಹಾಜರಾಗಿ ನವ ವಧು-ವರರಿಗೆ ಶುಭ ಹಾರೈಸಲಿದ್ದಾರೆ. ಈ ಹಿಂದೆ ನಟ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾ ಮಂದಣ್ಣ ಮದುವೆ ನಿಶ್ಚಯವಾಗಿತ್ತು.

Rakshith Shetty and rashmika mandanna breakup Real reason behind couple s split

ಎಂಗೇಜ್‌ಮೆಂಟ್ ಬಳಿಕ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ದೂರಾಗಿದ್ದರು. 'ಕಿರಿಕ್ ಪಾರ್ಟಿ' ಸಿನಿಮಾ ಸಮಯದಲ್ಲಿ ಇಬ್ಬರ ನಡುವೆ ಶುರುವಾದ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಗೆ ಮುಂದಾಗಿದ್ದರು. 2017, ಜುಲೈ 3ರಂದು ವಿರಾಜಪೇಟೆಯ ಸೆರೆನಿಟಿ ಹಾಲ್‌ನಲ್ಲಿ ಅದ್ದೂರಿಯಾಗಿ ಎಂಗೇಜ್‌ಮೆಂಟ್ ನಡೆದಿತ್ತು. ಸ್ನೇಹಿತರು, ಆಪ್ತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದರು.

ಅಭಿಮಾನಿಗಳಿಗೆ ಶಾಕ್

ಮುಂದಿನ ಎರಡು ವರ್ಷಗಳಲ್ಲಿ ಮದುವೆ ಆಗುತ್ತೇವೆ ಎಂದು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಹೇಳಿದ್ದರು. ಆದರೆ 2018ರಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ನಟಿಸಿದ್ದ 'ಗೀತಾಗೋವಿಂದಂ' ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಲಿಪ್‌ಲಾಕ್ ವೀಡಿಯೋ ವೈರಲ್ ಆಗಿ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಅದರ ಬೆನ್ನಲ್ಲೇ ರಕ್ಷಿತ್ ಹಾಗೂ ರಶ್ಮಿಕಾ ಬ್ರೇಕಪ್ ವದಂತಿ ಶುರುವಾಗಿತ್ತು. ಇಬ್ಬರೂ ದೂರಾಗಲು ನಿಜವಾದ ಕಾರಣ ಏನು ಎನ್ನುವುದು ಗೊತ್ತಾಗಲೇ ಇಲ್ಲ. ಅಧಿಕೃತವಾಗಿ ಈ ಬಗ್ಗೆ ಇಬ್ಬರೂ ಮಾತನಾಡಲಿಲ್ಲ. ಬ್ರೇಕಪ್ ವದಂತಿ ಹೆಚ್ಚಾಗಿ ಇಬ್ಬರೂ ಪ್ರತಿಕ್ರಿಯಿಸದೇ ಇದ್ದಾಗ ಅದೇ ನಿಜ ಎಂದು ಗೊತ್ತಾಗಿತ್ತು. ಆ ಬಳಿಕ ಇಬ್ಬರೂ ವಿಚಾರ ಖಚಿತಪಡಿಸಿದರು. ಆದರೆ ಹೆಚ್ಚಿನ ಏನನ್ನೂ ಹೇಳಿರಲಿಲ್ಲ.

Rakshith Shetty and rashmika mandanna breakup Real reason behind couple s split

ರಕ್ಷಿತ್‌- ರಶ್ಮಿಕಾ ಬ್ರೇಕಪ್ ಕಾರಣ?

ಯಾರಿಗೆ ಯಾರು ಕೈಕೊಟ್ರು? ರಶ್ಮಿಕಾಗೆ ವಿಜಯ್ ದೇವರಕೊಂಡಗೆ ಹತ್ತಿರವಾದ ಬಳಿಕ ರಕ್ಷಿತ್ ಬೇಡವಾಗಿಬಿಟ್ರಾ? ಇಬ್ಬರ ನಡುವೆ ಬಿರುಕು ಮೂಡಲು ವಿಜಯ್ ದೇವರಕೊಂಡ ಹೊಣೆನಾ? ಸ್ವತಃ ರಕ್ಷಿತ್ ಶೆಟ್ಟಿ ಮದುವೆ ಬೇಡ ಎಂದು ನಿರ್ಧರಿಸಿದ್ರಾ? 'ಗೀತಾಗೋವಿಂದಂ' ಚಿತ್ರದ ಲಿಪ್‌ ಲಾಕ್ ಸೀನ್ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿಬಿಡ್ತಾ? ಅಷ್ಟಕ್ಕೂ ರಕ್ಷಿತ್- ರಶ್ಮಿಕಾ ಲವ್ ಬ್ರೇಕಪ್‌ ಆಗಲು ನಿಜವಾದ ಕಾರಣ ಏನು? ಹೀಗೆ ಸಾಕಷ್ಟು ಪ್ರಶ್ನೆಗಳು ಮೂಡಿತ್ತು.

'ಮನೆ' ಕಟ್ಟುವ ವಿಚಾರಕ್ಕೆ ಬಿರುಕು?

ನೇಮುಫೇಮು, ವಿಜಯ್ ದೇವರಕೊಂಡ ಅಥವಾ ಆ ಲಿಪ್‌ಲಾಕ್ ಸೀನ್ ಇದ್ಯಾವುದು ಕೂಡ ರಕ್ಷಿತ್ ಹಾಗೂ ರಶ್ಮಿಕಾ ದೂರಾಗಲು ಕಾರಣವಲ್ಲ, ಅದೊಂದು ಮನೆ ಕಟ್ಟುವ ವಿಚಾರ ಬ್ರೇಕಪ್‌ಗೆ ಕಾರಣವಾಗಿಬಿಡ್ತು ಎನ್ನುವ ಗುಸುಗುಸು ಆಗ ಕೇಳಿಬಂದಿತ್ತು. ಬೆಂಗಳೂರಿನಲ್ಲಿ ನಟ ರಕ್ಷಿತ್ ಶೆಟ್ಟಿ ಒಂದು ಮನೆ ಕಟ್ಟುವ ಕನಸು ಕಂಡಿದ್ದರು. ಅದಕ್ಕಾಗಿ ರಶ್ಮಿಕಾ ಕುಟುಂಬದ ಬಳಿ ಹಣ ಕೇಳಿದ್ದರು. ಇದೇ ವಿಚಾರ ಕೊನೆಗೆ ಇಬ್ಬರ ನಡುವೆ ಬ್ರೇಕಪ್ ಆಗುವಂತೆ ಮಾಡಿಬಿಡ್ತು ಎನ್ನುವ ಊಹಾಪೋಹ ಕೇಳಿಬಂದಿತ್ತು.

ರಕ್ಷಿತ್ ಶೆಟ್ಟಿ ಐಷಾರಾಮಿ ಮನೆ ಕನಸು

ಉಡುಪಿ ಮೂಲದ ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಸಾಕಷ್ಟು ಕಷ್ಟಗಳನ್ನು ಎದುರಿಸಿ ಅಂತಿಮವಾಗಿ ಹೀರೊ ಆಗಿ ಸಕ್ಸಸ್ ಆದರು. ಬೆಂಗಳೂರಿನಲ್ಲೇ ಮನೆ ಕಟ್ಟಿ ಜೀವನ ಸಾಗಿಸುವ ಕನಸು ಕಂಡರು. ಮದುವೆ ಆಗುತ್ತಿರುವುದಕ್ಕೂ ಮುನ್ನ ಐಷಾರಾಮಿ ಮನೆ ನಿರ್ಮಿಸಬೇಕು ಎಂದು ಬಯಸಿದ್ದರು. ಅಂದಾಜು 50ರಿಂದ 60 ಕೋಟಿ ರೂ. ವೆಚ್ಚದಲ್ಲಿ ಬಂಗಲೆ ನಿರ್ಮಿಸಲು ಮುಂದಾಗಿದ್ದರು. ಮದುವೆ ಬಳಿಕ ಅದೇ ಮನೆಯಲ್ಲಿ ಇರ್ತೀವಲ್ಲ, ಮನೆ ಕಟ್ಟಲು ಜಾಸ್ತಿ ಹಣ ಬೇಕು ಎಂದುಕೊಂಡು ರಶ್ಮಿಕಾ ಪೋಷಕರಲ್ಲಿ ಹಣ ಕೇಳಿದ್ದರಂತೆ. ಇದೇ ಮುಂದೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು ಎನ್ನುವ ವದಂತಿ ಹರಿದಾಡಿತ್ತು.

ಹಣ ಕೊಡಲು ಒಪ್ಪದ ರಶ್ಮಿಕಾ ತಾಯಿ?

ಹೇಗಿದ್ರೂ ರಶ್ಮಿಕಾಳನ್ನು ಮದುವೆ ಆಗ್ತಿದ್ದೀನಿ, ಹಾಗಾಗಿ ಮನೆ ಕಟ್ಟಲು ಅವರ ಮನೆಯವರು ಸಹಾಯ ಮಾಡಲಿ ಎನ್ನುವುದು ರಕ್ಷಿತ್ ಲೆಕ್ಕಾಚಾರ ಆಗಿತ್ತು. ರಶ್ಮಿಕಾ ಪೋಷಕರು ಕೂಡ ಇಬ್ಬರ ಮದುವೆಗೆ ಒಪ್ಪಿದ್ದರು. ಎಂಗೇಜ್‌ಮೆಂಟ್ ಆಗಿತ್ತು. ಆದರೆ ಮನೆ ಕಟ್ಟಲು ರಶ್ಮಿಕಾ ತಾಯಿ ಹಣ ಕೊಡಲ್ಲ ಎಂದುಬಿಟ್ಟರಂತೆ. ನೀನು ಮನೆ ಕಟ್ಟಲು ನಾವು ಯಾಕೆ ಹಣ ಕೊಡಬೇಕು ಎನ್ನುವ ಅರ್ಥದಲ್ಲಿ ಚರ್ಚೆ ನಡೆದಿತ್ತು, ಇದೇ ಕಾರಣಕ್ಕೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನಲಾಗಿತ್ತು.

ತೆಲುಗಿನಲ್ಲಿ ರಶ್ಮಿಕಾ ಸಕ್ಸಸ್

ಹೀಗೆ ಹಣದ ವಿಚಾರದಲ್ಲಿ ವೈಮನಸ್ಸು ಮೂಡುತ್ತಿದ್ದಂತೆ ಅತ್ತ ತೆಲುಗಿನಲ್ಲಿ ರಶ್ಮಿಕಾ ಮಿಂಚಲು ಆರಂಭಿಸಿದ್ದರು. ಅದಾಗಲೇ 'ಚಲೋ' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ್ದರು. ಎಂಗೇಜ್‌ಮೆಂಟ್ ಬೆನ್ನಲ್ಲೇ 'ಗೀತಾಗೋವಿಂದಂ' ಸಿನಿಮಾ ತೆರೆಕಂಡು ಗೆದ್ದಿತ್ತು. ವಿಜಯ್ ದೇವರಕೊಂಡ- ರಶ್ಮಿಕಾ ಲಿಪ್‌ಲಾಕ್ ವೀಡಿಯೋ ವೈರಲ್ ಆಯಿತು. ಬ್ರೇಕಪ್ ಆಗಲು ಇದೇ ಕಾರಣ ಎನ್ನುವಂತೆ ಬಿಂಬಿತವಾಯಿತು. ಆದರೆ ಅದಕ್ಕೂ ಮೊದ್ಲು ರಕ್ಷಿತ್ ಮನೆಕಟ್ಟಲು ಸಹಾಯ ಕೇಳಿದ್ದು, ಅದಕ್ಕೆ ರಶ್ಮಿಕಾ ಮನೆಯವರು ಒಪ್ಪದೇ ಇದ್ದಿದ್ದು ಬ್ರೇಕಪ್ ಆಗಲು ನಿಜವಾದ ಕಾರಣ ಎಂದು ಗಾಂಧಿನಗರದಲ್ಲಿ ಗುಲ್ಲಾಗಿತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X